
ಅನೇಕರು ಆಶ್ಚರ್ಯ ಪಡಬಹುದು- 'ನಾನು ಸಿಗರೇಟ್ ಸೇದುವಾಗ ಏಕೆ ಕಾಮೋದ್ರೇಕವಾಗುತ್ತದೆ?' ಅಂತ. ಆದರೆ ಇದನ್ನು ವೈದ್ಯರ ಮುಂದೆ ಕೇಳಲು ಮುಜುಗರಪಟ್ಟುಕೊಳ್ಳಬಹುದು. ಇದು ನಿಜ ಹಾಗೂ ಇದಕ್ಕೆ ವೈಜ್ಞಾನಿಕ ಕಾರಣ ಇದೆ. ಧೂಮಪಾನ ಮತ್ತು ಲೈಂಗಿಕ ಪ್ರಚೋದನೆಯ ನಡುವಿನ ಸಂಪರ್ಕವನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದರಿಂದ ಸ್ಮೋಕಿಂಗ್ ನಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಲು ನಮಗೆ ಸಹಾಯ ಮಾಡುತ್ತದೆ.
ನೀವು ಸಿಗರೇಟ್ ಸೇದುವಾಗ, ನಿಕೋಟಿನ್ ನಿಮ್ಮ ರಕ್ತಪ್ರವಾಹಕ್ಕೆ ಪ್ರವೇಶಿಸುತ್ತದೆ ಮತ್ತು ವಿವಿಧ ಪರಿಣಾಮಗಳನ್ನು ಉಂಟುಮಾಡುತ್ತದೆ. ನಿಕೋಟಿನ್ ಮೆದುಳಿನಲ್ಲಿರುವ ಡೋಪಮೈನ್ ಎಂಬ ರಾಸಾಯನಿಕ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಡೋಪಮೈನ್ ನಿಮಗೆ ಸಂತೋಷವನ್ನು ನೀಡುವ ಹಾರ್ಮೋನ್. ಸಂಗಾತಿಯ ಜೊತೆಗೆ ಮಿಲನದ ಸುಖ ಅನುಭವಿಸಲು ಮುಂದಾದಾಗ ನಿಮ್ಮಲ್ಲಿ ಸ್ರವಿಸುವ ಹಾರ್ಮೋನು ಕೂಡ ಇದೇ ಆಗಿದೆ. ಇದು ನಿಮ್ಮ ಮನಸ್ಥಿತಿಯನ್ನು ರಿಲ್ಯಾಕ್ಸ್ ಮಾಡುತ್ತದೆ ಮತ್ತು ಉದ್ರೇಕವನ್ನು ಹೆಚ್ಚಿಸುತ್ತದೆ. ಇದು ಶಿಶ್ನದ ನಿಮಿರುವಿಕೆಗೆ ಕಾರಣವಾಗುತ್ತದೆ.
ಇಲ್ಲಿ ಸಿಗರೇಟಿನ ನಿಕೋಟಿನ್ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ಅದು ನಿಮ್ಮ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಜನನಾಂಗದ ಪ್ರದೇಶವನ್ನು ಒಳಗೊಂಡಂತೆ ನಿಮ್ಮ ದೇಹದ ವಿವಿಧ ಭಾಗಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಶಿಶ್ನದ ನಿಮಿರುವಿಕೆ ಉಂಟಾಗುತ್ತದೆ.
ಇನ್ನೊಂದು ಕಾರಣವೆಂದರೆ ಧೂಮಪಾನದ ಮಾನಸಿಕ ಪರಿಣಾಮ. ಹಲವರು ರಿಲ್ಯಾಕ್ಸ್‌ಗಾಗಿ ಮತ್ತು ಒತ್ತಡವನ್ನು ಕಡಿಮೆ ಮಾಡಲು ಧೂಮಪಾನ ಮಾಡುತ್ತಾರೆ. ಈ ವಿಶ್ರಾಂತಿ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಲೈಂಗಿಕ ಆಲೋಚನೆಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಧೂಮಪಾನ ನಿಮ್ಮ ಮನಸ್ಸನ್ನು ವಿಶ್ರಾಂತಿ ಮತ್ತು ಆನಂದಕ್ಕಾಗಿ ಸಿದ್ಧಪಡಿಸುತ್ತದೆ.
ಆದರೆ ಇದರಿಂದ ಆಗುವ ದೀರ್ಘಾವಧಿ ಪರಿಣಾಮಗಳನ್ನೂ ನೋಡಬೇಕು. ಧೂಮಪಾನದಿಂದ ಆಗುವ ನಿಮಿರುವಿಕೆ ನಿರುಪದ್ರವವೆಂದು ಮೊದಲಿಗೆ ತೋರುತ್ತದೆ. ಆದರೆ ದೀರ್ಘಾವಧಿಯ ಧೂಮಪಾನ ನಿಮ್ಮ ಒಟ್ಟಾರೆ ಲೈಂಗಿಕ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಕಾಲಾನಂತರದಲ್ಲಿ ಧೂಮಪಾನ ನಿಮ್ಮ ರಕ್ತನಾಳಗಳಿಗೆ ಹಾನಿ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಶಿಶ್ನದ ನಿಮಿರುವಿಕೆಗೇ ಹಾನಿಯಾಗಬಹುದು. ಶಿಶ್ನ ನಿಮಿರದೇ ಹೋಗಬಹುದು. ಹೀಗೆ ನಿರಂತರ ಧೂಮಪಾನ ದೀರ್ಘಾವಧಿಯಲ್ಲಿ ನಿಮ್ಮ ಲೈಂಗಿಕ ಆರೋಗ್ಯವನ್ನು ಹಾನಿಗೊಳಿಸುತ್ತದೆ.
ಮದ್ವೆಯಾಗಿನ್ನೂ ಆರು ತಿಂಗಳಾಗಿಲ್ಲ, ಗಂಡಸರಿಗೇಕೆ ಲೈಂಗಿಕ ನಿರಾಸಕ್ತಿ?
ಸಾರಾಂಶದಲ್ಲಿ, ನಿಕೋಟಿನ್ ನಿಮ್ಮ ದೇಹ ಮತ್ತು ಮನಸ್ಸು ಎರಡರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಈ ಸಂಗತಿಯ ರಹಸ್ಯ ಅಡಗಿದೆ. ನಿಕೋಟಿನ್ ತಾತ್ಕಾಲಿಕವಾಗಿ ಸೆಕ್ಸ್‌ನ ಪ್ರಚೋದನೆಯನ್ನು ಹೆಚ್ಚಿಸಬಹುದು ಮತ್ತು ನಿಮಿರುವಿಕೆಗೆ ಕಾರಣವಾಗಬಹುದು. ಕಾಲಾನಂತರದಲ್ಲಿ ಅದು ನಿಮ್ಮ ಲೈಂಗಿಕ ಆರೋಗ್ಯಕ್ಕೆ ಹಾನಿಯೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಧೂಮಪಾನವನ್ನು ತ್ಯಜಿಸುವುದು ಮತ್ತು ಲೈಂಗಿಕವಾಗಿ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಲು ಪರ್ಯಾಯಗಳನ್ನು ಹುಡುಕುವುದು ಒಳ್ಳೆಯದು.
ಕೆಲವರು ಮಹಿಳೆಯರೂ ಕೂಡ ಸಿಗರೇಟ್ ಪರಿಮಳಕ್ಕಾಗಿ ಹಾತೊರೆಯಬಹುದು. ಅಂದರೆ ಪುರುಷನ ಮೂಗು ಬಾಯಿಯಿಂದ ಬರುವ ಸಿಗರೇಟ್‌ನ ಪರಿಮಳ ಅವರನ್ನು ಉದ್ರೇಕಗೊಳಿಸಬಹುದು. ತನ್ನ ಸಂಗಾತಿ ಸಿಗರೇಟ್ ಸೇವಿಸಿದ ಪರಿಮಳ ನನ್ನನ್ನು ಉದ್ರೇಕಗೊಳಿಸುತ್ತದೆ ಎಂದು ಕೆಲವರು ಹೇಳುವುದುಂಟು, ಇದೂ ನಿಜವೇ. ಯಾಕೆಂದರೆ ನಿಕೊಟಿನ್ ಇವರಲ್ಲೂ ಸುಖದ ಹಾರ್ಮೋನ್‌ಗಳನ್ನು ಪ್ರಚೋದಿಸುತ್ತದೆ. ಸಿಗರೇಟ್ ಸೇದಿ ಬರುವ ಪುರುಷ ತನಗೆ ಹೆಚ್ಚಿನ ಸುಖ ನೀಡುತ್ತಾನೆ ಎಂದು ಈ ಮಹಿಳೆಯರು ಅರ್ಥ ಮಾಡಿಕೊಳ್ಳಬಹುದು. ಇದು ಸ್ವಲ್ಪ ನಿಜ ಯಾಕೆಂದರೆ ಆರಂಭದಲ್ಲಿ ನಿಕೋಟಿನ್ ಸೇವನೆಯಿಂದ ಪ್ರಚೋದನೆ ಪಡೆಯುವ ಗಂಡಸು ನಿಮಿರುವಿಕೆಯನ್ನು ಕಾಪಾಡಿಕೊಳ್ಳಬಲ್ಲವನಾಗಿರುತ್ತಾನೆ. ಆದರೆ ಇದು ಶಾಶ್ವತ ಅಲ್ಲ. ಸಿಗರೇಟ್ ಸೇವನೆ ಮುಂದುವರಿದಂತೆ ಶಿಶ್ನದ ನಿಗುರುವಿಕೆಯ ಪ್ರಮಾಣ ಇಳಿಯುತ್ತದೆ. ಆದ್ದರಿಂದ ಸ್ತ್ರೀಯರು ತಮ್ಮ ಸಂಗಾತಿಗಳು ಸಿಗರೇಟ್ ಸೇದಿ ಮಿಲನಕ್ಕೆ ಬರಲಿ ಎಂದು ಹಾತೊರೆಯಬಾರದು. ಇದು ದೀರ್ಘಕಾಲಿಕವಾಗಿ ಇಬ್ಬರಿಗೂ ಹಾಳು.
ಕನ್ಯಾಪೊರೆ ಕಾಂಕ್ರಿಟ್‌ನಿಂದ ಮಾಡಿದ್ದಲ್ಲ, ನಿಮಿರುವಿಕೆ ಅಪಸಾಮಾನ್ಯ ರೋಗವೇ ಅಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.