
ಚಳಿಗಾಲ ನಿಧಾನವಾಗಿ ಸರಿಯುತ್ತಿದೆ. ಬೇಸಿಗೆ ಅಂಬೆಗಾಲಿಡಲು ಆರಂಭಿಸಿದೆ. ಅಂದರೆ, ಇದು ಆರೋಗ್ಯಪೂರ್ಣ (Healthy) ಪಾನೀಯ (Drinks)ಗಳತ್ತ ಮುಖ ಮಾಡುವ ಸಮಯ. ಚಳಿಗಾಲದಲ್ಲಿ (Winter) ದಿನಕ್ಕೆ ನಾಲ್ಕು ಬಾರಿ ಬಿಸಿ ಬಿಸಿ ಕಾಫಿ ಸವಿಯುವವರು ಇದೀಗ ಕಾಫಿಗೆ ವಿದಾಯ ಹೇಳಲೇಬೇಕಾಗಿದೆ. ದೇಹಕ್ಕೆ ಹಿತ ನೀಡುವ ಪಾನೀಯಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಪಾನೀಯ ಮಜ್ಜಿಗೆ (Butter Milk).
ನೀರು ಮಜ್ಜಿಗೆಯಷ್ಟು ಬೇಸಿಗೆಯ ದಾಹವನ್ನು ತಣಿಸುವ ಪದಾರ್ಥ ಯಾವುದೂ ಇಲ್ಲ. ನಮ್ಮ ಹಿರಿಯರಂತೂ ಮಜ್ಜಿಗೆಗೆ ಬಹಳ ಆದ್ಯತೆ ನೀಡುತ್ತಾರೆ. ಚಳಿಗಾಲ, ಮಳೆಗಾಲವೆಂದಲ್ಲ, ಮಜ್ಜಿಗೆಯನ್ನು ಬಳಕೆ ಮಾಡುವವರಿದ್ದಾರೆ. ಇನ್ನು, ಬೇಸಿಗೆ ಅಂದರಂತೂ ಮುಗಿಯಿತು, ಮಜ್ಜಿಗೆಯೇ ಲೀಡರ್.
ಆಯುರ್ವೇದವಂತೂ (Ayurveda) ಮಜ್ಜಿಗೆಯನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಮಾನ್ಯ ಮಾಡುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ದೇವತೆಗಳಿಗೆ ಅಮೃತವಿದ್ದಂತೆ ಮನುಷ್ಯರಿಗೆ ಲಭ್ಯವಾಗಿದ್ದು ಮಜ್ಜಿಗೆ. ಅಂದರೆ, ಮಜ್ಜಿಗೆಯಲ್ಲಿ ಅಷ್ಟೊಂದು ಅದ್ಭುತವಿದೆ.
ಮಜ್ಜಿಗೆ ಕೇವಲ ಆರೋಗ್ಯಕ್ಕೆ ಪೂರಕವಾದ ಪಾನೀಯ ಮಾತ್ರವಲ್ಲ. ಅದರಿಂದ ಬಹಳಷ್ಟು ರೋಗಗಳೂ ಶಮನವಾಗುತ್ತವೆ. ಮಜ್ಜಿಗೆಯಲ್ಲೂ ವಿಧಗಳಿವೆ. ಆಕಳು ಅಥವಾ ಹಸುವಿನ ಮಜ್ಜಿಗೆ ತುಸು ಉಷ್ಣಕಾರಕ ಹಾಗೂ ಪಿತ್ತಕಾರಕ. ಎಮ್ಮೆಯ ಮಜ್ಜಿಗೆ ತಂಪು. ಆದರೆ, ಯಾವುದೇ ಮಜ್ಜಿಗೆಯಾದರೂ ಕೆಲವು ಗುಣಗಳನ್ನು ಸಾಮಾನ್ಯವಾಗಿ ಹೊಂದಿರುತ್ತವೆ.
• ಮಜ್ಜಿಗೆ ಜೀರ್ಣಕಾರಿಯಾಗಿದ್ದು, ಕಫ (Kapha) ಮತ್ತು ವಾತದ ನಿವಾರಣೆಗೆ ಸಹಕಾರಿ.
• ಉರಿಯೂತದ ಚಿಕಿತ್ಸೆಗೆ ಮಜ್ಜಿಗೆಯನ್ನೇ ಬಳಕೆ ಮಾಡಲು ಸೂಚಿಸಲಾಗುತ್ತದೆ.
• ಜೀರ್ಣಾಂಗಕ್ಕೆ (Digestive) ಸಂಬಂಧಿಸಿದ ಯಾವುದೇ ಸಮಸ್ಯೆ, ಗ್ಯಾಸ್ಟ್ರೊಇಂಟೆಸ್ಟೈನಲ್ ಸಮಸ್ಯೆಗಳು, ಹಸಿವಾಗದಿರುವುದು, ಗುಲ್ಮದ ಕೊರತೆಗಳು ಹಾಗೂ ಅನೀಮಿಯಾ ತಡೆಗಟ್ಟಲು ಮಜ್ಜಿಗೆ ಉಪಯುಕ್ತ.
• ವಾತದ ಸಮತೋಲನ ತಪ್ಪಿದಾಗ ಅದರಿಂದ ಉಂಟಾಗುವ ಸಮಸ್ಯೆಗಳ ನಿವಾರಣೆಗೆ ಮಜ್ಜಿಗೆ ಬಹಳ ಸಹಕಾರಿ.
• ಪೈಲ್ಸ್ (Piles) ಅಥವಾ ಮೂಲವ್ಯಾಧಿ ಸಮಸ್ಯೆ ಹೊಂದಿರುವವರು ದಿನವೂ ಒಂದು ಲೋಟ ಮಜ್ಜಿಗೆ ಕುಡಿಯುವುದು ಉತ್ತಮ. ಇದರಿಂದ ಜೀರ್ಣ ಚೆನ್ನಾಗಿ ಆಗಿ ಮಲಬದ್ಧತೆ ಉಂಟಾಗುವುದಿಲ್ಲ.
Royal Beauty Secrets: ರಾಣಿಯರು ಹೇಗೆಲ್ಲ ಸೌಂದರ್ಯ ಹೆಚ್ಚಿಸಿಕೊಳ್ತಿದ್ರು ಗೊತ್ತಾ? ನೀವೂ ಟ್ರೈ ಮಾಡಿ..
• ಮಜ್ಜಿಗೆಯಲ್ಲಿ ಕಡಿಮೆ ಕ್ಯಾಲರಿ (Calorie) ಇರುತ್ತದೆ. ಹೀಗಾಗಿ, ಇದು ತೂಕ ಇಳಿಸಿಕೊಳ್ಳುವವರ ಫೇವರಿಟ್ ಆಗಿದೆ.
• ನಿಮಗೆ ಗೊತ್ತೇ? ಸಮತೋಲನದ ಆಹಾರಕ್ರಮಕ್ಕೆ ಬೇಕಾಗಿರುವ ಎಲ್ಲ ಪೋಷಕಾಂಶಗಳು ಮಜ್ಜಿಗೆಯಲ್ಲಿರುತ್ತದೆ ಎನ್ನಲಾಗಿದೆ. ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಎ,ಬಿ,ಡಿ ಮತ್ತು ಇ ಇರುತ್ತದೆ. ವಿಟಮಿನ್ (Vitamin) ಕೊರತೆ ಇರುವವರು ನಿಯಮಿತವಾಗಿ ಮಜ್ಜಿಗೆ ಸೇವನೆ ಮಾಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ನಿಶ್ಯಕ್ತಿ, ರಕ್ತಹೀನತೆ ಇಲ್ಲವಾಗುತ್ತದೆ.
• ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
• ಭೇದಿ, ರಕ್ತಭೇದಿ, ಕರುಳಿನ ಸಮಸ್ಯೆ ನಿವಾರಣೆ ಮಾಡುತ್ತದೆ. ಜಠರದ ಒಳಪದರಕ್ಕೆ ಮಜ್ಜಿಗೆ ಭಾರೀ ಹಿತಕಾರಿಯಾಗಿದೆ.
• ಮಜ್ಜಿಗೆ ಮುಪ್ಪನ್ನು (Aging) ತಡೆಗಟ್ಟಬಲ್ಲದು. ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾ ಸಂಖ್ಯೆ ವೃದ್ಧಿಸಲು ನೆರವಾಗುವ ಜತೆಗೆ, ಮುಪ್ಪಿಗೆ ಕಾರಣವಾಗುವ ಅಂಶಗಳಿಗೆ ಉತ್ತೇಜನ ನೀಡುತ್ತದೆ.
Kids Food: ಮಕ್ಳು ತಿನ್ತಿಲ್ಲಾಂತ ದೂರೋದನ್ನು ಬಿಟ್ಚಿಡಿ, ಹೆಲ್ದೀ ಪಾನೀಯ ಕೊಟ್ಟು ನೋಡಿ
• ಮಜ್ಜಿಗೆಯಲ್ಲಿರುವ ಪ್ರೊಬಯಾಟಿಕ್ ಗಳಿಂದ ಹೊಟ್ಟೆಯ ಸೋಂಕು (Infection) ಉಂಟಾಗುವುದಿಲ್ಲ.
• ಮಜ್ಜಿಗೆಯಿಂದ ತೆರೆದ ಗಾಯ, ಬಾಯಿಹುಣ್ಣು ಕಡಿಮೆಯಾಗುತ್ತದೆ.
• ಅಜೀರ್ಣವಾದಾಗ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು, ಇನ್ನಷ್ಟು ನೀರು ಬೆರೆಸಿ ಕುಡಿದರೆ ಬಹುಬೇಗ ಸರಿಯಾಗುತ್ತದೆ.
• ಕ್ಷಾರ ಹಾಗೂ ಕಷಾಯ ಗುಣಗಳಿಂದಾಗಿ ಮೂಲವ್ಯಾಧಿ ನಿಯಂತ್ರಣಕ್ಕೆ ಅನುಕೂಲ.
• ಊಟದ ಕೊನೆಯಲ್ಲಿ ದಿನವೂ ಮಜ್ಜಿಗೆ ಕುಡಿದರೆ, ಯಾವುದೇ ರೀತಿಯ ಅಜೀರ್ಣದ ಸಮಸ್ಯೆ ಕಾಡುವುದಿಲ್ಲ.
• ಹುಳಿಮಜ್ಜಿಗೆಯನ್ನು ತಲೆಗೆ ಹಚ್ಚಿಕೊಂಡರೆ ಹೊಟ್ಟು (Dandruff) ಇಲ್ಲವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.