ಮಕ್ಳು ಗೊತ್ತಲ್ಲಾ..ಆಟದಲ್ಲಿ ಫಸ್ಟ್..ಊಟದಲ್ಲಿ ಲಾಸ್ಟ್. ಪ್ಲೇಟ್ (Plate)ನಲ್ಲಿ ಏನು ಹಾಕಿಕೊಟ್ರೂ ಸುಮ್ನೆ ಕೆದಕ್ತಾನೆ ಇರ್ತಾರೆ. ಏನೂ ತಿನ್ನಲ್ಲ. ಮಕ್ಕಳಿಗೆ ತಿನ್ಸೋದೆ ಪೇರೆಂಟ್ಸ್ (Parents)ಗೆ ದೊಡ್ಡ ಟಾಸ್ಕ್. ನಿಮ್ಮ ಮಕ್ಳೂ ಹೀಗೆ ತಿನ್ನೋಕೆ ಹಠ ಮಾಡ್ತಾರಾ ? ಹಾಗಿದ್ರೆ ಮಕ್ಕಳ ಹಸಿವು (Appetite) ಹೆಚ್ಚಿಸಲು ಹೀಗೆ ಮಾಡಿ.
ಮಕ್ಕಳಿಗೆ ಆಹಾರ (Food) ನೀಡುವುದು ಅಂದ್ರೆ ಪೋಷಕರಿಗೆ ಅತ್ಯಂತ ದೊಡ್ಡ ಸವಾಲಿನ ಕೆಲಸ. ಮಕ್ಕಳು (Children) ಯಾವಾಗಲೂ ಆಹಾರದ ತಟ್ಟೆಯನ್ನು ಮುಂದಿಟ್ಟರೆ ಬೇಡವೆಂದು ನಿರಾಕರಿಸಿ ಬಿಡುತ್ತಾರೆ. ಮಕ್ಕಳಿಗೆ ತಿನ್ಸೋದು ಅಂದ್ರೆ ಸಾಕು ಎಲ್ಲರಿಗೂ ಈ ಕೆಲ್ಸ ಬೇಡಪ್ಪಾ ಅಂತ ಅನಿಸಿಬಿಡುತ್ತೆ. ಬಹಳಷ್ಟು ಒತ್ತಾಯ ಮಾಡಿ ತಿನ್ನಲು ಯತ್ನಿಸಿದರೂ ಬಾಯಿಂದ ಉಗುಳಿ ಬಿಡುತ್ತಾರೆ. ಇದ್ಯಾಕೆ ಹೀಗೆ ಮಕ್ಕಳಿಗೆ ಹಸಿವೇ ಆಗೋದಿಲ್ವಾ ? ಮಕ್ಕಳಲ್ಲಿ ಹಸಿವು (Appetite) ಹೆಚ್ಚಿಸಲು, ಆಹಾರ ತಿನ್ನುವಂತೆ ಮಾಡಲು ಏನು ಮಾಡಬೇಕು ?
ಮಕ್ಕಳಿಗೆ ವಿಶೇಷವಾಗಿ ಅವರ ಆರಂಭಿಕ ವರ್ಷಗಳಲ್ಲಿ ದೇಹಕ್ಕೆ ಸಾಕಷ್ಟು ಪೋಷಣೆಯ ಅಗತ್ಯವಿರುತ್ತದೆ. ಬೆಳೆಯುತ್ತಿರುವ ವರ್ಷಗಳಲ್ಲಿ ಆಹಾರದ ಕೊರತೆಯು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಆದರೂ ಮಕ್ಕಳು ಹೆಚ್ಚಾಗಿ ಮೆಚ್ಚದ ತಿನ್ನದಿರುವುದು ಪೋಷಕರ ಚಿಂತೆಗೆ ಕಾರಣವಾಗುವುದು ನಿಜ. ನಿಮ್ಮ ಮಕ್ಕಳ ಹಸಿವಿನ ಸಮಸ್ಯೆಯನ್ನು ಸರಿಪಡಿಸಲು ಸಹಾಯ ಮಾಡುವ ಕೆಲವು ಪಾನೀಯಗಳು ಇಲ್ಲಿವೆ.
undefined
Parenting Tips: ಮಕ್ಕಳ ಪ್ರಶ್ನೆಗೆ ‘ಬಹುಶಃ’ ಎಂಬ ಉತ್ತರ ಕೊಡ್ಬೇಬೇಡಿ !
ಮಕ್ಕಳಿಗೆ ಹಸಿವು ಕಡಿಮೆ ಯಾಕೆ ?
ಸಾಮಾನ್ಯವಾಗಿ ಮಕ್ಕಳು ಸಿಹಿ, ಹುಳಿ ಹೀಗೆ ಉತ್ತಮ ರುಚಿಯಿರುವ ಆಹಾರವನ್ನಷ್ಟೇ ತಿನ್ನುತ್ತಾರೆ. ಸಪ್ಪೆಯಿರುವ ಗಂಜಿ, ರಾಗಿ ಮಣ್ಣಿ ಮೊದಲಾದವುಗಳನ್ನು ಇಷ್ಟಪಡುವುದಿಲ್ಲ. ಹೀಗಾಗಿಯೇ ಹೆಚ್ಚಿನ ಮಕ್ಕಳು ಆರೋಗ್ಯಕರ ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತಾರೆ. ಇದಲ್ಲದೆ ಮಲಬದ್ಧತೆ, ಹೊಟ್ಟೆ ಉಬ್ಬುವುದು, ಶೀತ ಮತ್ತು ಜ್ವರ, ಎಣ್ಣೆಯುಕ್ತ ಅಥವಾ ಸಕ್ಕರೆ ತುಂಬಿದ ಆಹಾರವನ್ನು ಅತಿಯಾಗಿ ತಿನ್ನಿಸುವುದು ಮೊದಲಾದವು ಮಕ್ಕಳ ಹಸಿವಿನ ಮೇಲೆ ಪರಿಣಾಮ ಬೀರುವ ಇತರ ಕಾರಣಗಳೂ ಇರಬಹುದು. ನಿಮ್ಮ ಮಕ್ಕಳ ಕಡಿಮೆ ಹಸಿವನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಪಾನೀಯಗಳು ಇಲ್ಲಿವೆ.
ಶುಂಠಿ ಟೀ
ಉತ್ತಮ ಔಷಧೀಯ ಗುಣಗಳನ್ನು ಹೊಂದಿರುವ ಶುಂಠಿ (Ginger) ಟೀ ಮಕ್ಕಳಿಗೆ ಕೊಡಬಹುದಾಗಿದೆ. ಇದು ವಾಯುವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹಸಿವನ್ನು ಹೆಚ್ಚಿಸುವ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಈ ಸರಳವಾದ ಚಹಾವನ್ನು ತಯಾರಿಸಲು, 1 ಇಂಚಿನ ತಾಜಾ ಶುಂಠಿಯನ್ನು ತೆಗೆದುಕೊಂಡು ಅದನ್ನು ಸ್ಮ್ಯಾಶ್ ಮಾಡಿ ಮತ್ತು 1 ½ ಕಪ್ ನೀರಿನಲ್ಲಿ ಕುದಿಸಿಕೊಳ್ಳಿ. ಚಹಾ (Tea)ವನ್ನು ಇಳಿಸಿದ ನಂತರ ಇದಕ್ಕೆ 1 ಟೀ ಚಮಚ ಜೇನುತುಪ್ಪವನ್ನು ಸೇರಿಸಿ. ಈ ಸಿಹಿ ಮತ್ತು ರಿಫ್ರೆಶ್ ಚಹಾವು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Kids Food: ಮಕ್ಳು ಏನ್ ಕೊಟ್ರೂ ತಿನ್ತಾನೆ ಇಲ್ವಾ ? ಈ ಟ್ರಿಕ್ಸ್ ಯೂಸ್ ಮಾಡಿ
ಸೋಂಪು ಪಾನೀಯ
ಈ ಸಿಹಿ ಮತ್ತು ಆರೋಗ್ಯಕರ ಪಾನೀಯವನ್ನು ತಯಾರಿಸಲು, ಒಂದು ಟೀ ಚಮಚ ಸೋಂಪು (Fennel) ಅನ್ನು ಅನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ನೀರನ್ನು ಸೋಸಿಕೊಳ್ಳಿ. ಅದನ್ನು ನಿಮ್ಮ ಮಗುವಿಗೆ ಬೆಳಗ್ಗೆ ಮೊದಲ ಪಾನೀಯವಾಗಿ ನೀಡಿ. ಇದು ಚಯಾಪಚಯ ದರವನ್ನು ಹೆಚ್ಚಿಸುವ ಮೂಲಕ ಹಸಿವನ್ನು ಸುಧಾರಿಸುತ್ತದೆ. ಫೆನ್ನೆಲ್‌ನಲ್ಲಿರುವ ಕಿಣ್ವಗಳು ಮತ್ತು ಫೈಬರ್‌ನ ಉಪಸ್ಥಿತಿಯು ಹೊಟ್ಟೆ ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಫೈಬರ್ ಮಲಬದ್ಧತೆಯನ್ನು ನಿವಾರಿಸುತ್ತದೆ. ಇದು ಹಸಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ ಮತ್ತು ತುಳಸಿ ಪಾನೀಯ
ಈ ಆರೋಗ್ಯಕರ ಪಾನೀಯವನ್ನು ತಯಾರಿಸಲು, 5-7 ತುಳಸಿ (Tulsi) ಎಲೆಗಳ ಜೊತೆಗೆ 1 ಇಂಚಿನ ದಾಲ್ಚಿನ್ನಿ ಕಡ್ಡಿಯನ್ನು ತೆಗೆದುಕೊಂಡು ಅದನ್ನು 1 ½ ಕಪ್ ನೀರಿನಲ್ಲಿ ಕುದಿಸಿ. ಮಿಶ್ರಣವನ್ನು ಚೆನ್ನಾಗಿ ಕುದಿಸಿ. 1 ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಕರಿಮೆಣಸು ಸೇರಿಸಿ ಇದನ್ನು ನಿಮ್ಮ ಮಗುವಿಗೆ ನೀಡಿ. ಈ ಆರೋಗ್ಯಕರ ಪಾನೀಯವು ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಸಿವಿನ ಸಮಸ್ಯೆಯನ್ನು ಸುಧಾರಿಸುತ್ತದೆ.
ವಿನೇಗರ್ ಮತ್ತು ಜೇನು ತುಪ್ಪ
ಈ ತ್ವರಿತ ಮಿಶ್ರಣವನ್ನು ಮಾಡಲು, ದೊಡ್ಡ ಗಾಜಿನ ಬಾಟಲಿಯನ್ನು ತೆಗೆದುಕೊಳ್ಳಿ, ½ ಟೀ ಚಮಚ ಬಿಳಿ ವಿನೇಗರ್, 2 ಟೇಬಲ್ ಸ್ಪೂನ ಜೇನುತುಪ್ಪ (Honey), ½ ಲೀಟರ್ ಬೆಚ್ಚಗಿನ ನೀರನ್ನು ½ ಲೀಟರ್ ನಿಂಬೆ ರಸಕ್ಕೆ ಸೇರಿಸಿ. ಇದನ್ನು ಚೆನ್ನಾಗಿ ಬೆರೆಸಿ ಮತ್ತು ಈ ಮಿಶ್ರಣವನ್ನು ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಇರಿಸಿ. ಈ ಸಿರಪ್‌ನ 2-3 ಟೇಬಲ್ ಸ್ಪೂನ್ಗಳನ್ನು ನಿಮ್ಮ ಮಗುವಿಗೆ ಪ್ರತಿದಿನ ನೀಡಿ ಮತ್ತು ಅವರ ಹಸಿವಿನಲ್ಲಿ ನೀವು ಗಮನಾರ್ಹ ವ್ಯತ್ಯಾಸವನ್ನು ನೋಡಬಹುದು.