ಖಿನ್ನತೆಯೇ? ನಿಯಮಿತವಾಗಿ Bhramari Pranayama ಮಾಡಿ, ಪರಿಣಾಮ ನೋಡಿ

By Suvarna NewsFirst Published Feb 26, 2022, 3:42 PM IST
Highlights

ಆರೋಗ್ಯವೇ ಭಾಗ್ಯ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೊಳಗಾಗುವವರ ಸಂಖ್ಯೆ ಹೆಚ್ಚಾಗಿದೆ. ದೈಹಿಕ ಮಾತ್ರವಲ್ಲ ಮಾನಸಿಕ ಸಮಸ್ಯೆಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಇವೆಲ್ಲಕ್ಕೆ ಮದ್ದು ಯೋಗದಲ್ಲಿದೆ.
 

ಯೋಗ (Yoga )-ಪ್ರಾಣಾಯಾಮ (Pranayama)ದ ನಿಯಮಿತ ಅಭ್ಯಾಸ (Practice)ವು ದೇಹ ಮತ್ತು ಮನಸ್ಸಿನ ಮಧ್ಯೆ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿ (Useful) ಎಂದು ಪರಿಗಣಿಸಲಾಗಿದೆ. ಪ್ರಾಣಾಯಾಮವು ನಿಮ್ಮ ಮಾನಸಿಕ ಆರೋಗ್ಯ ಮತ್ತು ದಕ್ಷತೆ ಮತ್ತು ಉತ್ಸಾಹ,ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರಾಣಾಯಾಮದಲ್ಲಿ ಅನೇಕ ವಿಧಗಳಿವೆ. ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದು ಹೆಚ್ಚು ಪ್ರಯೋಜನಕಾರಿ, ಹಾಗೆಯೇ ಪ್ರಾಣಾಯಾಮವನ್ನು ಪದ್ಧತಿಯಂತೆ ಮಾಡಬೇಕಾಗುತ್ತದೆ. ಪ್ರಾಣಾಯಾಮದಲ್ಲಿ ಉಸಿರು ಮಹತ್ವದ ಸ್ಥಾನ ಪಡೆಯುತ್ತದೆ. ಅನೇಕ ಬಾರಿ ತಪ್ಪು ಉಸಿರಾಟದಿಂದ ಸಮಸ್ಯೆಯಾಗಬಹುದು. ಇಲ್ಲವೆ ಯಾವುದೇ ಉತ್ತಮ ಫಲಿತಾಂಶ ನಿಮಗೆ ಸಿಗದೆ ಹೋಗಬಹುದು. ಹಾಗಾಗಿ ಸರಿಯಾದ ಮಾಹಿತಿ ಪಡೆದು ಅಥವಾ ತಜ್ಞರಿಂದ ತರಬೇತಿ ಪಡೆದು ಪ್ರಾಣಾಯಾಮವನ್ನು ಮಾಡಿದ್ರೆ ಪ್ರಯೋಜನ ಹೆಚ್ಚು.

ಪ್ರಾಣಾಯಾಮಗಳಲ್ಲಿ ಭ್ರಮರಿ ಪ್ರಾಣಾಯಾಮವೂ ಒಂದು. ಇದು ದೇಹಕ್ಕೆ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಭ್ರಮರಿ ಪ್ರಾಣಾಯಾಮ ಎಂಬ ಹೆಸರು ಜೇನುನೊಣದಿಂದ ಬಂದಿದೆ. ವಾಸ್ತವವಾಗಿ ಈ ಅಭ್ಯಾಸದ ಸಮಯದಲ್ಲಿ ಜೇನುನೊಣದಂತೆ ಗುನುಗುವ ಶಬ್ದವು ಕೇಳಿಸುತ್ತದೆ. ಆತಂಕ ಮತ್ತು ಕೋಪವನ್ನು ಶಮನಗೊಳಿಸಲು, ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡಲು, ಭ್ರಮರಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಿದೆ.
ಯೋಗ ತಜ್ಞರ ಪ್ರಕಾರ, ಪ್ರಾಣಾಯಾಮವು ಉಸಿರಾಟದ ವ್ಯಾಯಾಮಗಳನ್ನು ಸೂಚಿಸುತ್ತದೆ. ಅದು ದೇಹ ಮತ್ತು ಮನಸ್ಸು ಎರಡಕ್ಕೂ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಭ್ರಮರಿ ಪ್ರಾಣಾಯಾಮವು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು 15 ಪಟ್ಟು ಹೆಚ್ಚಿಸುತ್ತದೆ ಎಂದು ಸಾಬೀತಾಗಿದೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಭ್ರಮರಿ ಪ್ರಾಣಾಯಾಮದ ಅಭ್ಯಾಸ ಹಾಗೂ ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಇಂದು ಹೇಳ್ತೇವೆ.

ಭ್ರಮರಿ ಪ್ರಾಣಾಯಾಮವನ್ನು ಮಾಡುವುದು ಹೇಗೆ? 
ಯೋಗ ತಜ್ಞರ ಪ್ರಕಾರ, ಭ್ರಮರಿ ಪ್ರಾಣಾಯಾಮವು ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಅದರ ಅಭ್ಯಾಸವು ತುಂಬಾ ಸುಲಭವಾಗಿದೆ. ಈ ಉಸಿರಾಟದ ವ್ಯಾಯಾಮಕ್ಕಾಗಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ಶಾಂತ ಸ್ಥಳದಲ್ಲಿ ಕುಳಿತುಕೊಳ್ಳಿ. ನಂತರ ನಿಮ್ಮ ತೋರುಬೆರಳುಗಳನ್ನು ಎರಡೂ ಕಿವಿಗಳ ಮೇಲೆ ಇರಿಸಿ ಮತ್ತು ಬಾಯಿಯನ್ನು ಮುಚ್ಚಿ, ಮೂಗಿನ ಮೂಲಕ ಉಸಿರಾಡಿ ಮತ್ತು ಹೊರಗೆ ಬಿಡಿ. ಉಸಿರನ್ನು ಬಿಡುವಾಗ ಊ ಎಂದೂ ಹೇಳಬೇಕು. ಈ ಪ್ರಕ್ರಿಯೆಯನ್ನು 5 ರಿಂದ 7 ಬಾರಿ ಪುನರಾವರ್ತಿಸಿ. ಆರಂಭದಲ್ಲಿ ಸ್ವಲ್ಪ ಸಮಸ್ಯೆಯಿನಿಸಬಹುದು. ಆದ್ರೆ ನಿರಂತರ ಅಭ್ಯಾಸ ಹೆಚ್ಚು ಅನುಭವ ನೀಡುತ್ತದೆ. ಆರಂಭದಲ್ಲಿ 5-7 ಬಾರಿ ಮಾಡುವ ನೀವು ಕಾಲಾನಂತರದಲ್ಲಿ, ಈ ಸಮಯವನ್ನು ಹೆಚ್ಚಿಸಬಹುದು.

Be Happy: ಯಾವಾಗ್ಲೂ ಖುಷಿಯಾಗಿರ್ಬೇಕಾ ? ಹೀಗೆ ಮಾಡಿ ಸಾಕು

ಭ್ರಮರಿ ಪ್ರಾಣಾಯಾಮದ ಪ್ರಯೋಜನಗಳು :  

ಮಾನಸಿಕ ಆರೋಗ್ಯ ವೃದ್ಧಿ : ಯೋಗ ತಜ್ಞರ ಪ್ರಕಾರ, ಮಾನಸಿಕ ಆರೋಗ್ಯ ಬಯಸುವವರು, ಭ್ರಮರಿ ಪ್ರಾಣಾಯಾಮ ಮಾಡಬೇಕು. ಭ್ರಮರಿ ಪ್ರಾಣಾಯಾಮದ  ನಿಯಮಿತ ಅಭ್ಯಾಸವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಒತ್ತಡಕ್ಕೆ ಬ್ರೇಕ್ : ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒತ್ತಡದ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಭಮ್ರರಿ ಪ್ರಾಣಾಯಾಮ ಮದ್ದು. ಒತ್ತಡವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಪರಿಹಾರವಾಗಿದೆ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ರಕ್ತದೊತ್ತಡ ನಿಯಂತ್ರಣ : ಭ್ರಮರಿ ಪ್ರಾಣಾಯಾಮವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. 

Yoga and Fitness: ಶಿಲ್ಪಾ ಶೆಟ್ಟಿಯ ನಟರಾಜಾಸನದ ಮೋಡಿ ನೋಡಿ

ಉತ್ತಮ ನಿದ್ರೆ : ಇದು ನರವೈಜ್ಞಾನಿಕ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ. ಇದು ಉತ್ತಮ ನಿದ್ರೆಗೆ ಸಹಕಾರಿ. ಇದು ನರಗಳನ್ನು ಶಾಂತವಾಗಿಡುತ್ತದೆ.

ಕೋಪ ಶಮನ : ಭ್ರಮರಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದು ಕೋಪವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಸಮಸ್ಯೆಗೂ ಪರಿಹಾರ ನೀಡುತ್ತದೆ . 

click me!