Neem ಎಲೆ ಮಾತ್ರವಲ್ಲ, ಇದರ ಮರದ ಅಂಗ ಅಂಗದಲ್ಲೂ ಔಷಧವಿದೆ

By Suvarna NewsFirst Published Oct 17, 2022, 5:43 PM IST
Highlights

ಭಾರತೀಯರಿಗೆ ಬೇವಿನ ಮರದ ಪ್ರಯೋಜನಗಳ ಬಗ್ಗೆ ಅರಿವಿದೆ. ಹೀಗಾಗಿಯೇ ಇದನ್ನು ಸಾಕಷ್ಟು ಔಷಧಗಳಲ್ಲಿ ಬಳಕೆ ಮಾಡುವುದು ಕಂಡುಬರುತ್ತದೆ. ಬೇವಿನ ಎಲೆ, ತೊಗಟೆ, ಕೊಂಬೆ, ಎಲೆ, ಹೂವು ಎಲ್ಲವೂ ಒಂದಿಲ್ಲೊಂದು ಔಷಧೀಯ ಗುಣ ಹೊಂದಿದ್ದು, ನಿಯಮಿತವಾಗಿ ಬಳಕೆ ಮಾಡುವ ಮೂಲಕ ಚರ್ಮರೋಗ, ಹೊಟ್ಟು, ಮಧುಮೇಹ ಮುಂತಾದ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯ.
 

ಭಾರತೀಯರ ಜೀವನಶೈಲಿಯಲ್ಲಿ ಕಹಿಬೇವಿಗೆ ಪ್ರಮುಖ ಸ್ಥಾನವಿದೆ. ಕೆಲವೆಡೆ ಯುಗಾದಿ ಹಬ್ಬದ ದಿನ ಅದನ್ನು ಬೆಲ್ಲದೊಂದಿಗೆ ಸೇವಿಸುವ ಪರಿಪಾಠ ಕಂಡುಬರುತ್ತದೆ. ಕಹಿಬೇವಿನ ಹಲವಾರು ಪ್ರಯೋಜನಗಳ ಬಗ್ಗೆ ನಮ್ಮ ಹಿರಿಯರಿಂದ ತಿಳಿಸಿದ್ದೇವೆ. ಕಹಿಬೇವಿನ ಕಾಂಡ, ಬೀಜ, ಬೇರು, ತೊಗಟೆ, ಹಣ್ಣು, ಎಲೆ, ಹೂವು ಎಲ್ಲವೂ ಪ್ರಯೋಜನಕಾರಿಯೇ ಆಗಿವೆ. ಬೇವಿನ ಮರವೆಂದರೆ ಔಷಧದ ಆಗರ. ಎಲ್ಲವೂ ನಮ್ಮ ದೇಹಾರೋಗ್ಯಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಭಾರೀ ಪರಿಣಾಮ ಬೀರುವಂಥವೇ ಆಗಿವೆ. ಕಹಿಬೇವಿನ ಎಲೆಗಳನ್ನು ಹಿಂದೆಲ್ಲ ಹಲ್ಲು ನೋವಿಗೆ ಬಳಕೆ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ, ಅದರ ಎಲೆಗಳನ್ನು ಆಗಾಗ ಸೇವನೆ ಮಾಡುವ ಅಭ್ಯಾಸವೂ ಇತ್ತು. ಬೇವಿನ ಎಲೆಗಳಲ್ಲಿ ದೇಹದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಅಂಶವೂ ಇದೆ. ಹೊಟ್ಟೆಯ ಅಲ್ಸರ್ ಗೂ ಇದು ಮದ್ದಾಗಿದೆ. ಉರಿಯೂತ, ಚರ್ಮರೋಗ, ಸೋಂಕು ಜ್ವರವನ್ನು ನಿವಾರಿಸುತ್ತದೆ. ಹೀಗೆ, ಹಲವು ರೀತಿಯಲ್ಲಿ ಬೇವಿನ ಇಡೀ ಮರದ ಪ್ರತಿಯೊಂದು ಭಾಗಗಳ ನಮಗೆ ಅಗತ್ಯವಾಗಿ ಬೇಕಾಗುವಂಥವೇ ಆಗಿವೆ. ಆಯುರ್ವೇದಿಕ್ ಚಿಕಿತ್ಸೆಯಲ್ಲಿ ಬೇವಿನ ಮರದ ವಿವಿಧ ಭಾಗಗಳನ್ನು ಬಳಸಿಕೊಳ್ಳಲಾಗುತ್ತದೆ. ಮರದ ಬೇರೆ ಬೇರೆ ಭಾಗಗಳು ಹೇಗೆಲ್ಲ ಪ್ರಯೋಜನ ಎನ್ನುವುದನ್ನು ನೀವೂ ಅರಿತುಕೊಳ್ಳಿ. 

•    ತೊಗಟೆ (Bark)
ಬೇವಿನ ಮರದ (Neem Tree) ತೊಗಟೆಯಲ್ಲಿ ಬ್ಯಾಕ್ಟೀರಿಯಾ ನಿರೋಧಕ (Anti Bacterial) ಗುಣವಿದೆ. ಹೀಗಾಗಿ, ಇದನ್ನು ಗಾಯ (Wound) ಗುಣಪಡಿಸಲು ಬಳಕೆ ಮಾಡಲಾಗುತ್ತದೆ. ಹಿಂದೆ, ಕಹಿಬೇವಿನ ರೆಂಬೆಯನ್ನು ಬಳಸಿ ಹಲ್ಲುಜ್ಜಲಾಗುತ್ತಿತ್ತು. ಇದರಿಂದ ಯಾವುದೇ ರೀತಿಯ ಬಾಯಿ ಮತ್ತು ಹಲ್ಲಿಗೆ (Teeth) ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತಿರಲಿಲ್ಲ. ಬಾಯಿ ವಾಸನೆಗೂ (Bad Breath) ಇದು ರಾಮಬಾಣ. ಆಂಟಿಆಕ್ಸಿಡೆಂಟ್ (Antioxidant) ಅಂಶವೂ ಇರುತ್ತದೆ. ಜ್ವರದ (Fever) ಚಿಕಿತ್ಸೆಗೂ ಬಳಸಲಾಗುತ್ತದೆ. ಸುಸ್ತನ್ನು ನಿವಾರಿಸುವ ಗುಣ ಹೊಂದಿದೆ. 

Health Benefits: ಖಾಲಿ ಹೊಟ್ಟೆಯಲ್ಲಿ ಈ ಎರಡರ ಎಲೆ ತಿಂದ್ನೋಡಿ

•    ಬೇವಿನ ಪುಡಿ (Powder)
ಮರದ ಎಲ್ಲ ಭಾಗಗಳನ್ನು ಒಳಗೊಂಡ ಬೇವಿನ ಪುಡಿಯನ್ನು ಮೌತ್ ವಾಶ್ (Mouth Wash) ನಿಂದ ಹಿಡಿದು ಹಲವು ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತದೆ. ಹೊಟ್ಟೆನೋವಿನ (Stomach Pain) ನಿವಾರಣೆ ಔಷಧಿಗಳಲ್ಲೂ ಇದು ಇರುತ್ತದೆ.

•    ಬೇವಿನ ಎಲೆಗಳು (Leaves)
ಆಂಟಿಬ್ಯಾಕ್ಟೀರಿಯಲ್, ಆಂಟಿ ಇನ್ ಫ್ಲಮೇಟರಿ, ಆಂಟಿಫಂಗಲ್ (Anti Fungal) ಅಂಶಗಳನ್ನು ಹೊಂದಿರುವ ಎಲೆಗಳ ಪ್ರಯೋಜನ ಅಪಾರ. ಮೊಡವೆ (Acne), ರಿಂಗ್ ವರ್ಮ್ (Ring Worm), ಎಸ್ಜಿಮಾದಂತಹ ಚರ್ಮದ ಸಮಸ್ಯೆಗೆ ಬಳಕೆ ಮಾಡಲಾಗುತ್ತದೆ. ರಕ್ತದ ಶುದ್ಧಿಗೆ (Blood Purification) ಇದು ಹೆಸರುವಾಸಿ. ಕೀಟಗಳಿಂದ ಮುಕ್ತಿ ಪಡೆಯಲು ರೈತರೂ ಇದನ್ನು ಬಳಕೆ ಮಾಡುವುದನ್ನು ಕೇಳಿರಬಹುದು. ಬೇವಿನ ಎಲೆ ಕೂದಲಿನ (Hair) ಆರೋಗ್ಯಕ್ಕೆ ಅತ್ಯುತ್ತಮ. ಕೂದಲಿನ ಬುಡವನ್ನು ಬ್ಯಾಕ್ಟೀರಿಯಾಮುಕ್ತ ಗೊಳಿಸುವ ಜತೆಗೆ ಹೊಟ್ಟಿನ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ದಿನವೂ ಒಂದೆರಡು ಬೇವಿನ ಎಲೆಗಳನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟ (Blood Sugar Level) ನಿಯಂತ್ರಣದಲ್ಲಿ ಇರುತ್ತದೆ. 

Vastu Tips: ಮೂರು ರೀತಿಯ ದೋಷ ನಿವಾರಿಸುತ್ತೆ ಈ ಮರ!

•    ಬೇವಿನ ಹೂವುಗಳು (Flowers) 
ಆಯುರ್ವೇದಲ್ಲಿ ಬೇವಿನ ಎಲೆಗಳ ಜತೆಗೆ ಹೂವಿಗೂ ಪ್ರಾಧಾನ್ಯತೆ ಇದೆ. ಹೂವು ಅತ್ಯುತ್ತಮ ನಂಜುನಿರೋಧಕ ಗುಣ ಹೊಂದಿದೆ. ಹೀಗಾಗಿ, ಇದನ್ನು ಸೋರಿಯಾಸಿಸ್ ಸಮಸ್ಯೆಗೆ ಬಳಕೆ ಮಾಡಲಾಗುತ್ತದೆ. ಜತೆಗೆ, ಪಿತ್ತವನ್ನು (Acidity) ಕಡಿಮೆ ಮಾಡುತ್ತದೆ. ಆಸಿಡಿಟಿ ಸಮಸ್ಯೆ ಉಂಟಾದಾಗ ಬೇವಿನ ಎಲೆಗಳ ಕಷಾಯ ಮಾಡಿಕೊಂಡು ಸೇವನೆ ಮಾಡುವುದು ಸಹಕಾರಿ. ಜತೆಗೆ, ಹೂವಿನಲ್ಲೂ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುವ ಗುಣವಿದೆ. ಹೀಗಾಗಿ, ಯುಗಾದಿ (Ugadi) ಸಮಯದಲ್ಲಿ ಮಾಡುವ ಪಚಡಿಗೆ ಬೇವಿನ ಹೂವನ್ನು ಸೇರಿಸಲಾಗುತ್ತದೆ. ಕಫ ನಿಯಂತ್ರಿಸಲು ಸಹ ಇದು ಸಹಕಾರಿಯಾಗಿದೆ. ಚರ್ಮದ ಉರಿಯೂತ (Inflammation) ನಿಯಂತ್ರಿಸುತ್ತದೆ. ಚರ್ಮದಲ್ಲಿ ತುರಿಕೆಯಾದಾಗ ಇದರ ಪುಡಿಯನ್ನು ಸ್ವಲ್ಪ ಅನ್ನದೊಂದಿಗೆ ಸೇರಿಸಿ ಸೇವಿಸುವ ಪದ್ಧತಿಯೂ ಇದೆ. 

click me!