ಎದುರಿಗಿದ್ದವರ ಬಾಯಿ ವಾಸನೆ ಬರ್ತಿದ್ದರೆ ಸಹಿಸಿಕೊಳ್ಳೋದು ಕಷ್ಟ. ಹಾಗೆ ನಮ್ಮ ಬಾಯಿಂದ ವಾಸನೆ ಬರ್ತಿದ್ದರೆ ಮಾತಾಡೋಕೆ ಮುಜಗರ. ಈ ಬಾಯಿ ವಾಸನೆ ಯಾವುದೇ ಕಾರಣಕ್ಕೆ ಬಂದಿರಲಿ, ಅದನ್ನು ಅಡಗಿಸಿ, ಎಲ್ಲರ ಮುಂದೆ ಮಿಂಚೋದು ಮುಖ್ಯ. ಅದಕ್ಕೆ ಕೆಲ ಸ್ಪ್ರೇ ಬಳಕೆ ಒಳ್ಳಯದು.
ನೀವೆಷ್ಟೇ ಸುಂದರವಾಗಿರಿ, ನೀವು ಎಷ್ಟೇ ಶ್ರೀಮಂತರಾಗಿರಿ, ದುಬಾರಿ ಬೆಲೆಯ ಬಟ್ಟೆ ಧರಿಸಿರಿ, ನಿಮ್ಮ ಕಾನ್ಫಿಡೆನ್ಸ್ ಹಾಳು ಮಾಡುವ ವಿಷ್ಯವೊಂದಿದೆ. ಅದೇ ನಿಮ್ಮ ಬಾಯಿಯಿಂದ ಬರುವ ವಾಸನೆ. ಯಸ್. ನಿಮ್ಮ ಬಾಯಿ ವಾಸನೆ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಿಮ್ಮಿಂದ ಜನರು ದೂರ ಸರಿಯಲು ಇದೇ ಕಾರಣವಾಗುತ್ತದೆ. ನೀವು ಚೆಂದದ ಬಟ್ಟೆ ಧರಿಸಿದ್ರೆ ಮಾತ್ರ ಸಾಲದು, ನಿಮ್ಮ ಬಾಯಿ ಬಗ್ಗೆಯೂ ಗಮನ ನೀಡಬೇಕು. ಬಾಯಿ ವಾಸನೆ ಅನೇಕ ಕಾರಣಕ್ಕೆ ಬರುತ್ತದೆ. ಇದಕ್ಕೆ ನೀವು ಕೆಲ ಮನೆ ಮದ್ದುಗಳನ್ನು ಪ್ರಯೋಗಿಸಬಹುದು. ಆದ್ರೆ ಇನ್ನೇನು ಕಾಲು ಗಂಟೆಯಲ್ಲಿ ಮೀಟಿಂಗ್ ಇಟ್ಕೊಂಡು ಈಗ ಬಾಯಿ ವಾಸನೆ ಹೋಗಲಾಡಿಸಲು ಮನೆ ಮದ್ದು ಸೇವನೆ ಮಾಡಿದ್ರೆ ವಾಸನೆ ಹೋಗೋದು ಕಷ್ಟ. ಅಂಥ ಸಂದರ್ಭದಲ್ಲಿ ನೀವು ಮಾರುಕಟ್ಟೆಯಲ್ಲಿ ಸಿಗುವ ಕೆಲ ಮೌತ್ ಸ್ಪ್ರೇಗಳನ್ನು ಬಳಸಬಹುದು. ಈ ಮೌತ್ ಸ್ಪ್ರೇಗಳು ಮೀಟಿಂಗ್ ಸೇರಿದಂತೆ ಎಲ್ಲ ಸಂದರ್ಭದಲ್ಲಿ ನಿಮ್ಮ ಬಾಯಿ ವಾಸನೆ ತಡೆಯುವ ಜೊತೆಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ನಾವಿಂದು ಮಾರುಕಟ್ಟೆಯಲ್ಲಿ ಸಿಗುವ ಕೆಲ ಮೌತ್ ವಾಶ್ ಬಗ್ಗೆ ಮಾಹಿತಿ ನೀಡ್ತೇವೆ.
Geofresh ಆಯುರ್ವೇದಿಕ್ (Ayurvedic) ಇನ್ಸ್ಟಂಟ್ ಮೌತ್ (Mouth) ಫ್ರೆಶನರ್ (Fresheners) ಸ್ಪ್ರೇ (Spray): ಈ ಮೌತ್ ಫ್ರೆಶನರ್ ಐದು ರೀತಿಯ ಪರಿಮಳದಲ್ಲಿ ಲಭ್ಯವಿದೆ. ಪುದೀನ, ಏಲಕ್ಕಿ ಸೇರಿದಂತೆ ಐದು ಪರಿಮಳ ಲಭ್ಯವಿದ್ದು, ನಿಮಗಿಷ್ಟವಾದ ಫ್ಲೇವರ್ ಬಳಕೆ ಮಾಡಬಹುದು. ಇದನ್ನು ಬಾಯಿಗೆ ಸ್ಪ್ರೇ ಮಾಡಿಕೊಳ್ಳಬೇಕು. ಇದು ಬಾಯಿಯಿಂದ ಬರುವ ವಾಸನೆಯನ್ನು ತಡೆಯುತ್ತದೆ. ನೈಸರ್ಗಿಕ ವಸ್ತುಗಳನ್ನು ಬಳಸಿ ಇದನ್ನು ತಯಾರಿಸಲಾಗಿದ್ದು, ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲವೆಂದು ಕಂಪನಿ ಹೇಳಿದೆ. ಮೀಟಿಂಗ್ ಅಥವಾ ಡೇಟಿಂಗ್ ಗೆ ಹೋಗ್ತಿದ್ದರೆ ಇದನ್ನು ನಿಮ್ಮ ಬಳಿ ಇಟ್ಕೊಳ್ಳಿ. ನಿಮ್ಮ ಮೂಡ್ ತಾಜಾ ಮಾಡುವ ಶಕ್ತಿ ಇದಕ್ಕಿದೆ.
undefined
ಕೋಲ್ಗೆಟ್ ವೇದಶಕ್ತಿ (Colgate Vedshakti) ಮೌತ್ ಪ್ರೊಟೆಕ್ಟ್ ಸ್ಪ್ರೇ : ಈರುಳ್ಳಿ (Onion) ಸೇವನೆ ನಂತ್ರ ಬಾಯಿ ವಾಸನೆ ಬರುತ್ತದೆ. ಇದೇ ಕಾರಣಕ್ಕೆ ಅನೇಕರು ಹಸಿ ಈರುಳ್ಳಿ ಸೇವನೆ ಮಾಡೋದಿಲ್ಲ. ಈರುಳ್ಳಿ ಇಷ್ಟ, ವಾಸನೆ ಕಷ್ಟ ಎನ್ನುವವರು ಕೋಲ್ಗೇಟ್ ವೇದಶಕ್ತಿ ಮೌತ್ ಪ್ರೊಟೆಕ್ಟ್ ಸ್ಪ್ರೇ ಬಳಸಬಹುದು. ಇದು ಬಾಯಿಯಿಂದ ಬರುವ ಎಲ್ಲ ರೀತಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಉಸಿರನ್ನು ತಾಜಾಗೊಳಿಸುತ್ತದೆ. ಇದಕ್ಕೆ ಸೋಂಪು,ತುಳಸಿ, ಲವಂಗ ಬಳಸಲಾಗಿದ್ದು, ಹಲ್ಲಿನ ಆರೋಗ್ಯಕ್ಕೂ ಇದು ಒಳ್ಳಯದು. ನಿಮ್ಮ ಬಾಯಿಂದ ವಾಸನೆ ಬರ್ತಿದೆ ಎಂದಾದ್ರೆ ಇದನ್ನು ಬಳಸಿ.
ಗಂಟೆಗೆ ಎಷ್ಟು ನೀರು ಕುಡಿದರೆ ಆರೋಗ್ಯ ಚೆನ್ನಾಗಿರುತ್ತೆ?
ಕ್ವೆಲಿಕಾ (Qelica ) ಇನ್ಸ್ಟಂಟ್ ರಿಫ್ರೆಶ್ ಮೌತ್ ಸ್ಪ್ರೇ : ಸ್ಮೋಕಿಂಗ್ ಮಾಡಿದ ನಂತ್ರ ಅದ್ರ ವಾಸನೆ ಕಿರಿಕಿರಿ ಎನ್ನಿಸುತ್ತದೆ. ನೀವು ಧೂಮಪಾನ (Smoking) ಮಾಡ್ತಿದ್ದರೆ ಅಥವಾ ನಿಮ್ಮ ಫ್ರೆಂಡ್ ಸ್ಮೋಕಿಂಗ್ ಮಾಡಿದ ನಂತ್ರ ಅವರ ಬಾಯಿಂದ ಬರುವ ಸ್ಮೆಲ್ ನಿಮಗೆ ಕಿರಿಕಿರಿ ಎನ್ನಿಸಿದ್ರೆ ನೀವು ಕ್ವೆಲಿಕಾ ಇನ್ಸ್ಟಂಟ್ ರಿಫ್ರೆಶ್ ಮೌತ್ ಸ್ಪ್ರೇ ಬಳಕೆ ಮಾಡಬಹುದು. ಇದು ಎರಡು ಫ್ಲೇವರ್‌ಗಳಲ್ಲಿ ಲಭ್ಯವಿರುತ್ತದೆ. ಒಂದು ಪಾನ್ ಮತ್ತು ಇನ್ನೊಂದು ಸ್ಟ್ರಾಬೆರಿ ಫ್ಲೇವರ್ ಆಗಿದೆ. ಇದನ್ನು ಏಲಕ್ಕಿ, ಪುದೀನಾ ಎಣ್ಣೆ, ಮೆಂತೆ ಎಣ್ಣೆ, ಲವಂಗ ಎಣ್ಣೆ ಮುಂತಾದ ಪದಾರ್ಥಗಳನ್ನು ಬೆರೆಸಿ ತಯಾರಿಸಲಾಗುತ್ತದೆ.
ಟ್ಯಾಬ್ಲೆಟ್ ತಗೊಂಡ್ರೂ ಜ್ವರ ಕಡಿಮೆಯಾಗಿಲ್ವಾ ? ಹಾಗಾದ್ರೆ ತಿನ್ನೋ ಆಹಾರ ಬದಲಾಯಿಸಿ
ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್ (Great India Sale) ನಲ್ಲೂ ನಿಮಗೆ ಈ ಮೌತ್ ವಾಶ್ ಗಳು ಲಭ್ಯವಿದೆ. ಇದಕ್ಕೆ ಕೆಲ ರಿಯಾಯಿತಿ ಕೂಡ ನೀಡಲಾಗಿದೆ. ನಿಮ್ಮ ಸಂಗಾತಿ ಜೊತೆ ಹೊರಗೆ ಹೋಗುವಾಗ ಮೌತ್ ವಾಶ್ ಒಳ್ಳೆಯ ಕೆಲಸಕ್ಕೆ ಬರುತ್ತದೆ. ಹಾಗಾಗಿ ಸದಾ ಜೇಬಿನಲ್ಲಿ ಈ ಸ್ಪ್ರೇ ಇದ್ರೆ ಒಳ್ಳೆಯದು.