5 ವರ್ಷದ ಬಾಲಕಿಗೆ ಪ್ರಜ್ಞೆ ತಪ್ಪಿಸದೆ ಬ್ರೇನ್ ಟ್ಯೂಮರ್ ಸರ್ಜರಿ ಮಾಡಿ ಏಮ್ಸ್ ವೈದ್ಯರ ದಾಖಲೆ

By Suvarna News  |  First Published Jan 7, 2024, 4:38 PM IST

ಬಾಲಕಿಯೊಬ್ಬಳಿಗೆ ಪ್ರಜ್ಞೆ ತಪ್ಪಿಸದೆ ಮೆದುಳಿನಿಂದ ಗಡ್ಡೆ ತೆಗೆದ ಅಪರೂಪದ ಶಸ್ತ್ರಚಿಕಿತ್ಸೆಯನ್ನು ದೆಹಲಿ ಏಮ್ಸ್ ವೈದ್ಯರು ಮಾಡಿದ್ದಾರೆ. 


ವೈದ್ಯಕೀಯ ಇತಿಹಾಸದಲ್ಲೇ ಮೊದಲ ಪವಾಡ ಸದೃಶ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯರು ಇತಿಹಾಸ ಸೃಷ್ಟಿಸಿದ್ದಾರೆ. ಮೊದಲ ಬಾರಿಗೆ AIIMS ನಲ್ಲಿ, ಅರಿವಳಿಕೆ ಇಲ್ಲದೆ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಮತ್ತು 5 ವರ್ಷದ ಬಾಲಕಿಯ ಮೆದುಳಿನಿಂದ ಗೆಡ್ಡೆಯನ್ನು ತೆಗೆದು ಹಾಕಲಾಗಿದೆ. 
4 ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆ ಸಮಯದಲ್ಲಿ ಬಾಲಕಿಗೆ ಅರಿವಳಿಕೆ ನೀಡಲಾಗಿಲ್ಲ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಏಮ್ಸ್ ವೈದ್ಯರು ದಾಖಲೆ ಸೃಷ್ಟಿಸಿದ್ದಾರೆ. 

ಬಾಲಕಿಯು ಎಡ ಪೆರಿಸಿಲ್ವಿಯನ್ ಇಂಟ್ರಾ ಆಕ್ಸಿಯಲ್ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಳು. ನ್ಯೂರೋ-ಅನಸ್ತೇಷಿಯಾ ಮತ್ತು ನ್ಯೂರೋ-ರೇಡಿಯಾಲಜಿ ತಂಡವು ಅಧ್ಯಯನ ನಡೆಸಿದ ನಂತರ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಅರಿವಳಿಕೆ ಇಲ್ಲದೆ ನಡೆಸುವ ಶಸ್ತ್ರಚಿಕಿತ್ಸೆಯನ್ನು ಅವೇಕ್ ಕ್ರಾನಿಯೊಟಮಿ ಅಥವಾ ಜಾಗೃತ ನಿದ್ರಾಜನಕ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. 

Latest Videos

undefined

ಬಾಲಕಿಯ ಧೈರ್ಯ
ದೆಹಲಿ ಏಮ್ಸ್‌ನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ದೀಪಕ್ ಗುಪ್ತಾ, ಅನಸ್ತೇಷಿಯಾ ವಿಭಾಗದ ಡಾ.ಮಿಹಿರ್ ಪಾಂಡ್ಯ ಮತ್ತು ಅವರ 5 ಸಹೋದ್ಯೋಗಿಗಳು ಸೇರಿ ಸುಮಾರು 4 ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆಸಿದರು. ಈ ವೇಳೆ ಬಾಲಕಿಯೂ ಸಾಕಷ್ಟು ಧೈರ್ಯ ತೋರಿದ್ದಾಳೆ. ಅವಳು ವೈದ್ಯರೊಂದಿಗೆ ಸಹಕರಿಸುವುದನ್ನು ಮುಂದುವರೆಸಿದಳು. ಶಸ್ತ್ರಚಿಕಿತ್ಸೆಯ ನಂತರವೂ ಅವಳು ಸಾಕಷ್ಟು ಸಕ್ರಿಯಳಾಗಿದ್ದಳು, ಆದರೆ ಅವಳ ಮನಸ್ಸನ್ನು ಶಾಂತಗೊಳಿಸಲು ಕಡೆಗೆ ನಿದ್ರೆಗೆ ಒಳಪಡಿಸಲಾಯಿತು. ಹುಡುಗಿ ಕೆಲವೊಮ್ಮೆ ನಗುತ್ತಾಳೆ ಮತ್ತು ಕೆಲವೊಮ್ಮೆ ಆಡುತ್ತಾಳೆ. ಮೊಬೈಲ್‌ನಲ್ಲಿ ಫೋಟೋ, ವಿಡಿಯೋಗಳನ್ನೂ ತೋರಿಸಿದ್ದಾರೆ. 5 ವರ್ಷ 10 ತಿಂಗಳ ಬಾಲಕಿಯ ಧೈರ್ಯ ನೋಡಿ ತಂಡಕ್ಕೂ ಧೈರ್ಯ ಬಂತು. 

ಇದೆಂಥಾ ಹುಚ್ಚಾಟ? ಈ ಚಳಿಗಾಲದಲ್ಲಿ ಐಸ್ ತುಂಡುಗಳ ಬಾಕ್ಸೊಳಗೆ 3 ಗಂಟೆ ನ ...

ಬಾಲಕಿಗೆ ಅರಿವಳಿಕೆ ನೀಡುವುದಿಲ್ಲ ಎಂದು ಹೇಳಿದ್ದರೂ, ವೈದ್ಯರಿಗೆ ಈ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಸವಾಲಾಗಿತ್ತು, ಏಕೆಂದರೆ ಒಂದು ತಪ್ಪೂ ಹುಡುಗಿಯ ಜೀವವನ್ನು ತೆಗೆದುಕೊಳ್ಳುತ್ತದೆ ಎಂಬ ಎಚ್ಚರ ಇದ್ದೇ ಇತ್ತು.

ಕಾಫಿ ಜೊತೆ ಸವಿಯಲು ಮಾಡಿ ನೋಡಿ ನೇಪಾಳಿ ತಿನಿಸು ಸೆಲ್ ರೋಟಿ

ಜನವರಿ 4 ರಂದು ಶಸ್ತ್ರಚಿಕಿತ್ಸೆ, ನೀಡಿದ್ದು 16 ಚುಚ್ಚುಮದ್ದು !
ಬ್ರೈನ್ ಟ್ಯೂಮರ್ ರೋಗಿಯಾಗಿರುವ ಬಾಲಕಿ ಉತ್ತರ ಪ್ರದೇಶದ ಪ್ರಯಾಗರಾಜ್ ನಿವಾಸಿ ಎಂದು ಡಾ.ಮಿಹಿರ್ ಪಾಂಡ್ಯ ತಿಳಿಸಿದ್ದಾರೆ. ಆಸ್ಪತ್ರೆಗೆ ಬಂದಾಗ ತಲೆ ನೋವು ಕಾಣಿಸಿಕೊಂಡು ವಾಂತಿ ಮಾಡಿಕೊಳ್ಳುತ್ತಿದ್ದಳು. ಅವಳಿಗೆ ಮೂರ್ಛೆ ರೋಗ ಕೂಡ ಇತ್ತು. ಕಡೆಗೆ ಪರೀಕ್ಷೆಗಳನ್ನು ನಡೆಸಿದಾಗ ಆಕೆಗೆ ಬ್ರೈನ್ ಟ್ಯೂಮರ್ ಇರುವುದು ತಿಳಿದುಬಂದಿದೆ. ಆಕೆಗೆ ಎಡ ಪೆರಿಸಿಲ್ವಿಯನ್ ಇಂಟ್ರಾಕ್ಸಿಯಲ್ ಬ್ರೈನ್ ಟ್ಯೂಮರ್ ಇತ್ತು. ಎರಡು ವರ್ಷಗಳ ಹಿಂದೆ ಬಾಲಕಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಗಡ್ಡೆಯ ಕೆಲವು ಭಾಗವು ಮೆದುಳಿನಲ್ಲಿ ಉಳಿದು ಮತ್ತೆ ಬೆಳೆದಿತ್ತು. ಬಾಲಕಿಯ ಸ್ಥಿತಿ ನೋಡಿದ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ್ದಾರೆ. ಜನವರಿ 4 ರಂದು ಬೆಳಿಗ್ಗೆ ವೈದ್ಯರು ಬಾಲಕಿಯ ತಲೆಬುರುಡೆಗೆ 16 ಚುಚ್ಚುಮದ್ದು ನೀಡಿದ್ದಾರೆ. ನಂತರ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. 

click me!