ಮಲಗಿ ಏಳುವಷ್ಟರಲ್ಲಿ ಈಕೆಯ ಬದುಕೇ ಬರ್ಬರವಾಯ್ತು, ಇದ್ಯಾವ ರೀತಿ ಖಾಯಿಲೆ?

Published : Jan 05, 2024, 02:45 PM IST
ಮಲಗಿ ಏಳುವಷ್ಟರಲ್ಲಿ ಈಕೆಯ ಬದುಕೇ ಬರ್ಬರವಾಯ್ತು, ಇದ್ಯಾವ ರೀತಿ ಖಾಯಿಲೆ?

ಸಾರಾಂಶ

ವಿಶ್ವದಲ್ಲಿ ಜನರು ವಿಚಿತ್ರ ಖಾಯಿಲೆಗಳನ್ನು ಎದುರಿಸುತ್ತಿದ್ದಾರೆ. ರಾತ್ರಿ ಮಲಗಿ ಬೆಳಿಗ್ಗೆ ಏಳೋದ್ರಲ್ಲಿ ಏನೇನೋ ಆಗಿರುತ್ತೆ. ಇದಕ್ಕೆ ಈ ಮಹಿಳೆ ಉತ್ತಮ ನಿದರ್ಶನ. ಈಕೆ ಕಥೆ ಕೇಳಿ ವೈದ್ಯರೇ ದಂಗಾಗಿದ್ದಾರೆ.   

ಮನುಷ್ಯನ ಆಹಾರ ಕ್ರಮದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಆತ ದಿನೇ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾನೆ. ಚಿಕ್ಕ ಮಕ್ಕಳು, ಯುವಕರು, ವೃದ್ಧರು ಎನ್ನುವ ಭೇದವಿಲ್ಲದೇ ಎಲ್ಲರೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವಿಜ್ಞಾನ (Science), ತಂತ್ರಜ್ಞಾನ ಮುಂದುವರೆದಂತೆ ಹೊಸ ಹೊಸ ಖಾಯಿಲೆಗಳನ್ನು ಪತ್ತೆ ಮಾಡಲಾಗ್ತಿದೆ. ವೈದ್ಯಲೋಕಕ್ಕೂ ಸವಾಲೆನಿಸುವಂತಹ ಎಷ್ಟೋ ಹೊಸ ಹೊಸ ಖಾಯಿಲೆ (Diseases) ಗಳು ಹುಟ್ಟಿಕೊಳ್ಳುತ್ತಿವೆ. ಚಿಕ್ಕ ಮಕ್ಕಳು ಕೂಡ ಇಂತಹ ರೋಗಗಳಿಗೆ ಬಲಿಯಾಗುತ್ತಿರುವುದನ್ನು ನಾವು ನೋಡಿದ್ದೇವೆ. ರಾತ್ರಿ ಮಲಗಿದವರು ಬೆಳಗಾಗುವಷ್ಟರಲ್ಲಿ ಬದಲಾಗಿರುತ್ತಾರೆ. ಮನುಷ್ಯ ನಿದ್ದೆ (Sleep) ಗೆ ಜಾರಿದಾಗಲೇ ಅದೆಷ್ಟೋ ಅವಘಡಗಳು ಸಂಭವಿಸಿವೆ.

ಒಂದೇ ವಾರದಲ್ಲಿ ತೂಕ ಕಡಿಮೆ ಮಾಡ್ಕೊಳ್ಳೋಕೆ ಈ ಐದು ಎಕ್ಸರ್‌ಸೈಸ್ ಮಾಡಿ ಸಾಕು

ಆ ರಾತ್ರಿ ಅವಳ ಜೀವನವನ್ನೇ ಬದಲಾಯಿಸಿತು :  ಇಂಗ್ಲೆಂಡಿನ ಸ್ಟಾಫರ್ಡ್ ಶೈರ್ ನ 26 ವರ್ಷದ ಯುವತಿ ವೆರಿಟಿ ವೆಂಟೆ ಎನ್ನುವವಳ ಜೀವನ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಹೀಗೆ ಅವಳ ಜೀವನ ಬದಲಾಗಲು ಆ ರಾತ್ರಿ ಅವಳ ಜೀವನದಲ್ಲಿ ನಡೆದ ಘಟನೆಯೇ ಪ್ರಮುಖ ಕಾರಣವಾಗಿದೆ. ವೆರಿಟಿ ವೆಂಟೆ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದಳು. ಮೈಗ್ರೇನ್ ನಿಂದಾಗಿ ಆಕೆ ರಾತ್ರಿ ಬೇಗ ಮಲಗಿದಳು. ಆದರೆ ಬೆಳಿಗ್ಗೆ ಎಚ್ಚರವಾದಾಗ ಆಕೆಯ ಮಾತು, ಭಾಷೆ ಸಂಪೂರ್ಣವಾಗಿ ಬದಲಾಗಿತ್ತು. ನಿದ್ದೆಯಿಂದ ಎದ್ದ ವೆರಿಟಿ ವೆಂಟೆ ತನಗೆ ತಿಳಿಯದೇ ಇರುವ ಭಾಷೆಯನ್ನು ಮಾತನಾಡಲಾರಂಭಿಸಿದ್ದಳು. ಬಾಲ್ಯದಿಂದಲೂ ಮಿಡ್ ಲ್ಯಾಂಡ್ಸ್ ಉಚ್ಚಾರಣೆಯಲ್ಲಿ ಮಾತನಾಡುವ ವೆಂಟೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಈಶಾನ್ಯ ಇಂಗ್ಲೆಂಡಿನಲ್ಲಿ ಮಾತನಾಡುವ ಜೊರ್ಡಿ ಉಚ್ಛಾರಣೆಯನ್ನು ಮಾಡುತ್ತಿದ್ದಳು.

ವೆರಿಟಿ ವೆಂಟೆ ಫಂಕ್ಷನಲ್ ನ್ಯೂರೋಲಾಜಿಕ್ ಡಿಸಾರ್ಡರ್ (ಎಫ್ ಎನ್ ಡಿ)ಯ ಕಾರಣದಿಂದ ಉಂಟಾಗುವ ಸಮಸ್ಯೆಯಿಂದ ಬಳಲುತ್ತಿದ್ದಳು. ತನಗೆ ಈ ಸಮಸ್ಯೆ ಇರುವುದು ಆಕೆಗೆ 2022 ರಲ್ಲಿ ತಿಳಿಯಿತು. ದೇಹದಲ್ಲಿನ ನರಮಂಡಲದ ಸಮಸ್ಯೆಯಿಂದ ಎಫ್ ಎನ್ ಡಿ ಉಂಟಾಗುತ್ತದೆ. ತಮ್ಮ ಖಾಯಿಲೆಯ ಬಗ್ಗೆ ಹೇಳಿಕೊಳ್ಳುವ ವಿಂಟೆ ಅವರು, “ಎಫ್ ಡನ್ ಡಿ ಸಮಸ್ಯೆಯಿರುವ ಕಾರಣ ನನಗೆ ಆಗಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಬೆಳಿಗ್ಗೆ ಎದ್ದ ತಕ್ಷಣ ನನ್ನ ಉಚ್ಛಾರಣೆ ಅಸ್ಪಷ್ಟವಾಗಿರುತ್ತಿತ್ತು. ಆದರೆ 5 ನಿಮಿಷದ ನಂತರ ಸಹಜ ಸ್ಥಿತಿಗೆ ಬರುತ್ತಿತ್ತು. ಆದರೆ ಈ ಬಾರಿ ಹಾಗಾಗಲೇ ಇಲ್ಲ” ಎಂದು ಹೇಳಿದ್ದಾರೆ.

ಇದು ಫಾರೆನ್ ಎಕ್ಸೆಂಟ್ ಸಿಂಡ್ರೋಮ್ ಎಂದ ವೈದ್ಯರು : ವಿಂಟೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದಿರುವ ವೈದ್ಯರು ಅವರನ್ನು ಪರೀಕ್ಷಿಸಿದಾಗ  ಅಚ್ಚರಿ ಕಾದಿತ್ತು. ವೆರಿಟಿ ವಿಂಟೆ ಅವರ ಈ ಹೊಸ ಖಾಯಿಲೆಯ ಬಗ್ಗೆ ವೈದ್ಯರು ತಿಳಿದಿದ್ದರು. ಆದರೆ ಯಾರಿಗೂ ಈ ರೀತಿ ಆಗಿರುವುದನ್ನು ಅವರು ನೋಡಿರಲಿಲ್ಲ. ವೆರಿಟಿಯನ್ನು ಸಂಪೂರ್ಣವಾಗಿ ಪರೀಕ್ಷಿಸಿದ ವೈದ್ಯರು ಇದು ಫಾರೆನ್ ಎಕ್ಸೆಂಟ್ ಸಿಂಡ್ರೋಮ್ ಎಂದಿದ್ದಾರೆ. ಈ ಖಾಯಿಲೆಗೆ ಬಲಿಯಾದವರ ಮಾತಿನ ಶೈಲಿ ಸಂಪೂರ್ಣವಾಗಿ ಬದಲಾಗುತ್ತದೆ ಎಂದಿದ್ದಾರೆ.

ಪಾಲಕ್‌ಗಿಂತ ಹೆಚ್ಚು ಪೌಷ್ಟಿಕಾಂಶ ನೀಡುತ್ತೆ ಈ ತರಕಾರಿ, ಕ್ಯಾನ್ಸರ್- ಶುಗರ್ ಗುಣಪಡಿಸಲೂ ಸಹಕಾರಿ

ವೆರಿಟಿ ವಿಂಟೆ ತಮಗಿರುವ ವಿಚಿತ್ರ ಖಾಯಿಲೆಯ ಬಗ್ಗೆ ಟಿಕ್ ಟಾಕ್ ನಲ್ಲಿ ಹೇಳಿಕೊಂಡಿದ್ದಾರೆ. ಅವರ ಪೋಸ್ಟ್ ಗೆ ಈಗಾಗಲೇ 2,00,000 ವ್ಯೂ ಪಡೆದುಕೊಂಡಿದೆ. ಅವರು ತಮ್ಮ ಪೋಸ್ಟ್ ನಲ್ಲಿ ಮೊದಲು ಮಾತನಾಡುತ್ತಿದ್ದ ರೀತಿ ಹಾಗೂ ಈಗ ಮಾತನಾಡುತ್ತಿರುವ ರೀತಿಗೂ ಇರುವ ವ್ಯತ್ಯಾಸವನ್ನು ತೋರಿಸಿದ್ದಾರೆ. ಅವರ ಈ ಪೋಸ್ಟ್ ಗೆ ಪ್ರತಿಶತ 90 ರಷ್ಟು ಮಂದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ