ಜಪಾನೀಯರ ಸುದೀರ್ಘ ಬದುಕಿನ ಸೂತ್ರ, ನೀವೂ ಆಯುಷ್ಯ ಹೆಚ್ಚಿಸಿಕೊಳ್ಳಿ!

By Suvarna News  |  First Published Sep 16, 2023, 10:30 AM IST

ಜಪಾನೀಯರು ಅತಿ ಹೆಚ್ಚು ಕಾಲ ಬದುಕುವವರು ಎಂಬುದು ಪ್ರೂವ್ ಆಗಿರುವ ವಿಚಾರ. ಅಲ್ಲಿ ಅತಿ ಹೆಚ್ಚು ದೀರ್ಘಾಯುಷಿಗಳಿದ್ದಾರೆ. ಹಾಗಿದ್ದರೆ ಇದು ಹೇಗೆ ಸಾಧ್ಯ? ಜಪಾನೀಯರ ಬದುಕಿನ ಸೂತ್ರಗಳನ್ನು ನಾವೂ ಅನುಸರಿಸಿದರೆ ನಾವೂ ದೀರ್ಘ ಕಾಲ ಬದುಕಲು ಸಾಧ್ಯವೇ?


ಜಪಾನೀಯರು ಅತಿ ಹೆಚ್ಚು ಕಾಲ ಬದುಕುವವರು ಎಂಬುದು ಪ್ರೂವ್ ಆಗಿರುವ ವಿಚಾರ. ಅಲ್ಲಿ ಅತಿ ಹೆಚ್ಚು ದೀರ್ಘಾಯುಷಿಗಳಿದ್ದಾರೆ. ಹಾಗಿದ್ದರೆ ಇದು ಹೇಗೆ ಸಾಧ್ಯ? ಜಪಾನೀಯರ ಬದುಕಿನ ಸೂತ್ರಗಳನ್ನು ನಾವೂ ಅನುಸರಿಸಿದರೆ ನಾವೂ ದೀರ್ಘ ಕಾಲ ಬದುಕಲು ಸಾಧ್ಯವೇ?  

ಹೌದು. ಇದನ್ನು 'ಇಕಿಗಾಯ್' ಎನ್ನುತ್ತಾರೆ. ದೀರ್ಘಾಯುಷ್ಯದ ಬಗ್ಗೆ ಅತ್ಯಂತ ಜನಪ್ರಿಯ ಪುಸ್ತಕಗಳಲ್ಲಿ ಒಂದಾದ "ಇಕಿಗಾಯ್: ದಿ ಜಪಾನೀಸ್ ಸೀಕ್ರೆಟ್ ಟು ಎ ಲಾಂಗ್ ಅಂಡ್ ಹ್ಯಾಪಿ ಲೈಫ್" ಇದನ್ನು ವಿವರಿಸುತ್ತದೆ. ಇದನ್ನು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾನ್ಸೆಸ್ಕ್ ಮಿರಾಲ್ಲೆಸ್ ಬರೆದಿದ್ದಾರೆ. ಇಕಿಗಾಯ್ ಅಂದರೆ (Ikigai) "ಯಾವಾಗಲೂ ಕಾರ್ಯನಿರತ, ಸಂತೋಷಭರಿತ" ಎಂದರ್ಥ. ಇದು ಜೀವನದಲ್ಲಿ ವ್ಯಕ್ತಿಯ ನಿಜವಾದ ಉದ್ದೇಶದ ಸುತ್ತ ಕೇಂದ್ರೀಕೃತವಾಗಿದೆ. ನಿಮ್ಮ ಇಕಿಗಾಯ್ ಅನ್ನು ಹುಡುಕುವುದು ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ ಎಂದು ಹೇಳಲಾಗುತ್ತದೆ.

Tap to resize

Latest Videos

ಜಪಾನ್‌ನ ಓಕಿನಾವಾದಲ್ಲಿ, ವಿಶ್ವದ ಅತಿ ಹೆಚ್ಚು ಶತಾಯುಷಿಗಳಿದ್ದಾರೆ. ಇಲ್ಲಿ ಇಕಿಗಾಯ್ ಎಂಬುದು ಒಂದು ಸಾಮಾನ್ಯ ವಿಷಯ. ಜಪಾನಿನ ಒಂದು ಗಾದೆ ಹೇಳುತ್ತದೆ- "ಚಟುವಟಿಕೆಯಿಂದ ಮಾತ್ರ ನೀವು ನೂರು ವರ್ಷ ಬದುಕಬಹುದು." ಇಕಿಗಾಯ್ ಬಗ್ಗೆ ಈ ಪುಸ್ತಕದ ಲೇಖಕರು ಕಂಡುಕೊಂಡ ವಿಷಯಗಳು ಈ ಕೆಳಗಿನಂತಿವೆ. ಇವುಗಳನ್ನು ಅನುಸರಿಸಿದರೆ ನೀವೂ ದೀರ್ಘಾಯುಷಿಗಳಾಗಬಹುದಂತೆ.

1. ಯಾವತ್ತೂ ಸಕ್ರಿಯವಾಗಿರಿ (Be Active); ನಿವೃತ್ತಿಯಾಗಬೇಡಿ. ವಿಶ್ವದ ದೀರ್ಘಾಯುಷಿ ಜನರು ತಮ್ಮ 80 ಮತ್ತು 90ರ ದಶಕದಲ್ಲಿಯೂ ಚೆನ್ನಾಗಿ ಕೆಲಸ ಮಾಡುತ್ತಾರೆ ಅಥವಾ ನಿವೃತ್ತರಾಗುವುದಿಲ್ಲ. ಉದಾಹರಣೆಗೆ ಜೇನ್ ಬರ್ನ್ಸ್, ಓಹಿಯೋದಲ್ಲಿನ ಕ್ರಾಫ್ಟ್ ಸ್ಟೋರ್‌ನಲ್ಲಿ ಕೆಲಸ ಮಾಡುವ 100 ವರ್ಷ ವಯಸ್ಸಿನ ಮಹಿಳೆ; 100ನೇ ವರ್ಷಕ್ಕೆ ಕಾಲಿಟ್ಟ ನಂತರ ಬರ್ನ್ಸ್ ತನ್ನ ಹುಟ್ಟುಹಬ್ಬದ ಮಾತಿನಲ್ಲಿ "ಕೆಲಸ ಮಾಡುವುದನ್ನು ಮುಂದುವರಿಸುವೆ" ಎಂದರು.

2. ನಿಧಾನವಾಗಿರಿ. ಗಾರ್ಸಿಯಾ ಮತ್ತು ಮಿರಾಲ್ಲೆಸ್ ಪ್ರಕಾರ, ಆತುರಪಡುವುದು ನಿಮ್ಮ ಜೀವನದ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಬದಲಾಗಿ, ಯಾವುದಕ್ಕೇ ಆದರೂ ಸಾಕಷ್ಟು ಸಮಯ ತೆಗೆದುಕೊಳ್ಳಿ. ಸಮಯಮದಿಂದ ಯೋಚಿಸಿ, ಮುನ್ನಡೆಯಿರಿ. ಅದು ನಿಮ್ಮ ಜೀವನಕ್ಕೆ ಹೆಚ್ಚು ಅರ್ಥವನ್ನು ಹೇಗೆ ಸೇರಿಸುತ್ತದೆ ಎಂಬುದನ್ನು ನೋಡಿ.

3. ನಿಮ್ಮ ಹೊಟ್ಟೆಯನ್ನು ಪೂರ್ತಿ ತುಂಬಬೇಡಿ. ಸಾಮಾನ್ಯವಾಗಿ, ದೀರ್ಘಾಯುಷಿಗಳು ನಿಮ್ಮ ಪ್ಲೇಟ್‌ನಲ್ಲಿರುವ 80% ಅನ್ನು ಮಾತ್ರ ತಿನ್ನಲು ಸಲಹೆ ನೀಡುತ್ತಾರೆ. "ಹೆಚ್ಚುವರಿ ಭಕ್ಷ್ಯಗಳು, ನಮ್ಮ ಹೃದಯದಲ್ಲಿ ನಮಗೆ ನಿಜವಾಗಿಯೂ ಅಗತ್ಯವಿಲ್ಲ ಎಂದು ತಿಳಿದಾಗ ನಾವು ತಿನ್ನುವ ತಿಂಡಿ, ಊಟದ ನಂತರ ಸ್ವೀಟ್ (Sweet)- ಇವೆಲ್ಲವೂ ಅಲ್ಪಾವಧಿಯಲ್ಲಿ ನಮಗೆ ಸಂತೋಷವನ್ನು ನೀಡುತ್ತದೆ, ಆದರೆ ಅವುಗಳನ್ನು ಸೇವಿಸದಿರುವುದು ನಮಗೆ ದೀರ್ಘಾವಧಿ ಸಂತೋಷವನ್ನು ನೀಡುತ್ತದೆ" ಎನ್ನುತ್ತಾರೆ.
 
4. ಉತ್ತಮ ಸ್ನೇಹಿತರೊಂದಿಗೆ ಸುತ್ತ ಇರಲಿ. 85 ವರ್ಷಗಳ ಹಾರ್ವರ್ಡ್ ಅಧ್ಯಯನದ ಪ್ರಕಾರ, ನಿಮ್ಮ ಜೀವನದಲ್ಲಿ ಉತ್ತಮ ಸಂಬಂಧಗಳನ್ನು (Good Relationship) ಹೊಂದಿರುವುದು ಸಂತೋಷ ಮತ್ತು ದೀರ್ಘಾಯುಷ್ಯಕ್ಕೆ ಅನುಕೂಲ. ಗಾರ್ಸಿಯಾ ಮತ್ತು ಮಿರಾಲ್ಲೆಸ್ ಅವರು ಸಂದರ್ಶಿಸಿದ ಓಕಿನಾವಾದ ಶತಾಯುಷಿಗಳು, ತಮ್ಮ ಹಳ್ಳಿಯ ಸಮುದಾಯ ಕೇಂದ್ರಗಳಲ್ಲಿ ಒಟ್ಟಿಗೆ ಸಮಯ ಕಳೆಯಲು ಆದ್ಯತೆ ನೀಡುವವರಂತೆ. ಮತ್ತು ಆಗಾಗ್ಗೆ ಸ್ನೇಹಪರ ಕ್ರೀಡಾ ಆಟಗಳಲ್ಲಿ ಸ್ಪರ್ಧಿಸುವವರು.

5. ನಿಮ್ಮ ಮುಂದಿನ ಜನ್ಮದಿನದ ಹೊತ್ತಿಗೆ ಫಿಟ್ ಆಗಿರಿ. ವ್ಯಾಯಾಮವು ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುವ ಒಂದು ದೊಡ್ಡ ಅಂಶವಾಗಿದೆ. ಶ್ರಮದಾಯಕ ವ್ಯಾಯಾಮಗಳು ನಿಮಗೆ ಸಾಧ್ಯವಿಲ್ಲದಿದ್ದರೂ ದಿನಕ್ಕೆ ಅರ್ಧ- ಒಂದು ಗಂಟೆ ವಾಕಿಂಗ್ (Walkin) ಅಗತ್ಯ. ಓಕಿನಾವಾದ ಶತಾಯುಷಿಗಳು ಪ್ರತಿದಿನ ಮಾಡುವ ರೇಡಿಯೊ ಟೈಸೊದಂತಹ ಐದು ನಿಮಿಷಗಳ ಚಲನೆಗಳಿವೆ.

6. ಸದಾ ನಗುತ್ತಿರಿ: "ಕಿರಿಕಿರಿಗೆ ಕಾರಣಗಳಿರಬಹುದು. ಆದರೆ ಇಲ್ಲಿ ಮತ್ತು ಈಗ ತುಂಬಾ ಸಾಧ್ಯತೆಗಳಿಂದ ತುಂಬಿರುವ ಜಗತ್ತಿದು. ಇಲ್ಲಿರುವುದೇ ಒಂದು ಭಾಗ್ಯ ಎಂಬುದನ್ನು ನಾವು ಎಂದಿಗೂ ಮರೆಯಬಾರದು" ಎಂದು ಗಾರ್ಸಿಯಾ ಮತ್ತು ಮಿರಾಲ್ಲೆಸ್ ಬರೆದಿದ್ದಾರೆ.

7. ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರಿ (Connect with Nature). ನೀವು ನಗರದಲ್ಲಿ ವಾಸಿಸುತ್ತಿದ್ದರೂ ಸ್ವಲ್ಪ ತಾಜಾ ಗಾಳಿಯಲ್ಲಿ ಉಸಿರಾಡಲು ಮತ್ತು ನಡೆಯಲು ಸಮಯವನ್ನು ಕಂಡುಕೊಳ್ಳಿ. ಪ್ರಕೃತಿಯಲ್ಲಿ ಸಮಯವನ್ನು ಕಳೆಯುವುದು ಸಮಯ ವ್ಯರ್ಥವಲ್ಲ. ಅದು ನಿಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ನಿಮ್ಮ ಮನಸ್ಥಿತಿಯನ್ನು ಆನಂದದಲ್ಲಿಡುತ್ತದೆ. ಮತ್ತು ನಿಮ್ಮ ಸ್ಮರಣೆಯನ್ನು ಸುಧಾರಿಸುತ್ತದೆ.

ನೂರು ವರ್ಷ ಬದುಕಬೇಕಾ? ಹಾಗೆ ಬದುಕಿದವರು ಏನು ತಿಂತಾರೆ ಗೊತ್ತು ಮಾಡ್ಕೊಳ್ಳಿ!

8. ಧನ್ಯವಾದಗಳನ್ನು ಅರ್ಪಿಸಿ (Thankfull to all). ಕೃತಜ್ಞತೆಯು ನಿಮ್ಮ ಜೀವನದ ಎಲ್ಲಾ ಅತ್ಯುತ್ತಮ ವಿಷಯಗಳನ್ನು ನೆನಪಿಸಿಕೊಳ್ಳುವ ಉತ್ತಮ ಮಾರ್ಗವಾಗಿದೆ. ನಿಮ್ಮ ಪ್ರೀತಿಯ ಕುಟುಂಬ, ಅದ್ಭುತ ಸ್ನೇಹಿತರು ಅಥವಾ ನಿಮಗಾಗಿ ಕಾಯುವವರು, ಇವರಿಗೆಲ್ಲ ನಿಮ್ಮ ಮೆಚ್ಚುಗೆಯನ್ನು ಹಂಚಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ.

9. ಪ್ರತಿಕ್ಷಣದಲ್ಲಿಯೂ ಜೀವಿಸಿ (Live Every Moment). "ಹಿಂದಿನ ಬಗ್ಗೆ ವಿಷಾದಿಸುವುದನ್ನು ನಿಲ್ಲಿಸಿ ಮತ್ತು ಭವಿಷ್ಯದ ಬಗ್ಗೆ ಭಯಪಡುವುದನ್ನು ನಿಲ್ಲಿಸಿ. ನಿಮ್ಮ ಬಳಿ ಇರುವುದು ಇಂದು, ಈ ಕ್ಷಣ ಅಷ್ಟೆ. ಅದರ ಸದುಪಯೋಗ ಮಾಡಿಕೊಳ್ಳಿ. ಇದನ್ನು ನೆನಪಿನಲ್ಲಿಟ್ಟುಕೊಳ್ಳಲು ಯೋಗ್ಯವಾಗಿರುವಂತೆ ಮಾಡಿ” ಎಂದು ಗಾರ್ಸಿಯಾ ಮತ್ತು ಮಿರಾಲ್ಲೆಸ್ ಬರೆದಿದ್ದಾರೆ.

10. ನಿಮ್ಮ ಇಕಿಗೈಯನ್ನು ಅನುಸರಿಸಿ. ನಿಮ್ಮ ಉತ್ಸಾಹದ ಮೂಲ ಏನೆಂದು ಅನ್ವೇಷಿಸಿ ಮತ್ತು ಅದು ನಿಮ್ಮನ್ನು ಆನಂದವಾಗಿರಿಸುವಂತೆ ನೊಡಿಕೊಳ್ಳಿ. ಇಕಿಗೈ ಹೊಂದುವುದು ನಿಮ್ಮ ಜೀವನಕ್ಕೆ ಉದ್ದೇಶವನ್ನು ಸೇರಿಸುತ್ತದೆ ಮತ್ತು ಹೆಚ್ಚಿನ ಸಂತೋಷಕ್ಕೆ ಕಾರಣವಾಗುತ್ತದೆ.

ವಿಷವನ್ನೇ ಬಿತ್ತುವಂಥ ಇಂಥವರೊಂದಿಗೆ ಒಡನಾಟವಿದ್ದರೆ ನಿಲ್ಲಿಸಿದರೆ ನಿಮಗೇ ಒಳ್ಳೇದು!

click me!