ಕೇರಳದಲ್ಲಿ ಅಪಾಯಕಾರಿ ವೈರಸ್ ನಿಫಾ ಮತ್ತೆ ಹರಡುತ್ತಿದೆ. , ನಿನ್ನೆ ಮತ್ತೊಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಕೇರಳದಲ್ಲಿ ನಿಫಾ ವೈರಸ್ ಹಾವಳಿ ಮುಂದುವರಿದಿದ್ದು, ನಿನ್ನೆ ಮತ್ತೊಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿದ ಇಬ್ಬರು ಸೋಂಕಿತರು ಸೇರಿ ಈವರೆಗೆ ಕೇರಳದಲ್ಲಿ 6 ಜನರಿಗೆ ಸೋಂಕು ತಗುಲಿದಂತಾಗಿದೆ. ಈ ನಡುವೆ, ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ನಿಫಾ ಸೋಂಕಿಗೆ ತುತ್ತಾಗಿ ಆ.30ರಂದು ಸಾವನ್ನಪ್ಪಿದ್ದ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ 39 ವರ್ಷದ ವ್ಯಕ್ತಿಗೆ ಸೋಂಕು (Virus) ತಗುಲಿದೆ ಎಂದು ಆರೋಗ್ಯ ಸಚಿವೆ (Health Minister) ವೀಣಾ ಜಾರ್ಜ್ ತಿಳಿಸಿದ್ದಾರೆ. ಹೀಗಾಗಿ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರಹಾಗೂ ಸೋಂಕು ಸುಲಭವಾಗಿ ತಗಲುವ ಅಪಾಯದಲ್ಲಿರುವ ಪೂರ್ವರೋಗಪೀಡಿತರು ಹಾಗೂ ವೃದ್ಧರ ಪರೀಕ್ಷೆಗೆ (Test) ನಿರ್ಧರಿಸಲಾಗಿದೆ. ಇನ್ನು ಸೋಂಕಿಗೆ ತುತ್ತಾಗಿರುವ 9 ವರ್ಷದ ಬಾಲಕನ ಆರೋಗ್ಯ ಸದ್ಯ ಸುಧಾರಿಸಿದ್ದು, ಎಲ್ಲ ಸೋಂಕಿತರು ವೆಂಟಿಕೇಟರ್ ಸಹಾಯದಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ ಎಂದು ವೀಣಾ ತಿಳಿಸಿದ್ದಾರೆ.
undefined
ಕೇರಳಕ್ಕೆ ಮತ್ತೆ ಕಾಲಿಟ್ಟ ನಿಫಾ ವೈರಸ್, ಇಬ್ಬರು ಸಾವು ಕಂಡ ಬೆನ್ನಲ್ಲಿಯೇ ಆರೋಗ್ಯ ಇಲಾಖೆ ಅಲರ್ಟ್!
ಶಿಕ್ಷಣ ಸಂಸ್ಥೆಗಳಿಗೆ ರಜೆ
ಇನ್ನು ಸೆ.17ರ ವರೆಗೂ ಕೋಝಿಕ್ಕೋಡ್ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ. ಅಲ್ಲದೆ, ಜನಸಂದಣಿ ಸೇರಬಾರದು ಎಂಬ ಕಾರಣಕ್ಕೆ ಮಸೀದಿಗಳಲ್ಲಿನ ಶುಕ್ರವಾರದ ಪ್ರಾರ್ಥನೆ ರದ್ದುಗೊಳಿಸಲಾಯಿತು.ಈಗಾಗಲೇ ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯು ಸೋಂಕು ಪ ತ್ತೆ ಮಾಡುವ ತನ್ನ ಮೊಬೈಲ್ ಪ್ರಯೋಗ ಲ್ಯಾಬ್ ಅನ್ನು ಕಲ್ಲಿಕೋಟೆಗೆ ಕಳುಹಿಸಿದೆ. ಅಲ್ಲದೇ ಹಲವಾರು ಕೇಂದ್ರೀಯ ವೈದ್ಯರ ತಂಡಗಳು ಕೂಡ ರಾಜ್ಯಕ್ಕೆ ಆಗಮಿಸಿವೆ.
ನಿಫಾ ವೈರಸ್ ಕೋವಿಡ್-19ಗಿಂತ ಅಪಾಯಕಾರಿ: ಐಸಿಎಂಆರ್ ಎಚ್ಚರಿಕೆ
ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ನಿಫಾ ವೈರಸ್ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್ ಶುಕ್ರವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಹ್ಲ್, ಕೋವಿಡ್ ಸಾವಿನ ಪ್ರಮಾಣವನ್ನು ಎರಡರಿಂದ ಮೂರು ಪ್ರತಿಶತ ಹೊಂದಿದ್ದರೆ, ನಿಫಾ ಸಾವಿನ ಪ್ರಮಾಣ 40 ರಿಂದ 70 ಪ್ರತಿಶತದವರೆಗೆ ಇದೆ. ಕೇರಳ ರಾಜ್ಯದಲ್ಲಿ ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಅವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ
ಐಸಿಎಂಆರ್ ಡಿಜಿ, “ಕೇಸ್‌ಗಳು ಇಷ್ಟು ವೇಗವಾಗಿ ಏಕೆ ಹರಡುತ್ತಿದೆ ಎನ್ನುವುದು ನಮಗೆ ತಿಳಿದಿಲ್ಲ. 2018ರಲ್ಲಿ ಬಾವಲಿಗಳಿಂದ ಏಕಾಏಕಿಯಾಗಗಿ ಕೇರಳದಲ್ಲಿ ಈ ವೈರಸ್ ಹಬ್ಬಿತು ಎನ್ನುವುದನ್ನು ತಿಳಿದುಕೊಂಡಿದ್ದೇವೆ. ಬಾವಲಿಗಳಿಂದ ಮನುಷ್ಯರಿಗೆ ಸೋಂಕು ಹೇಗೆ ಹರಡಿತು ಎಂಬುದು ನಮಗೆ ಖಚಿತವಿಲ್ಲ. ಇದರ ಲಿಂಕ್‌ಅನ್ನು ನಾವು ಇನ್ನೂ ಪಡೆದುಕೊಂಡಿಲ್ಲ. ಈ ಬಾರಿ ಮತ್ತೊಮ್ಮೆ ಅದರ ಲಿಂಕ್ ಹುಡುಕಲು ಪ್ರಯತ್ನಿಸಲಿದ್ದೇವೆ. ಸಾಮಾನ್ಯವಾಗಿ ಮಳೆಗಾಲದಲ್ಲಿಯೇ ಈ ವೈರಸ್ ಪ್ರಕರಣ ಹೆಚ್ಚಾಗುತ್ತದೆ' ಎಂದಿದ್ದಾರೆ.
ಹಣ್ಣುಗಳನ್ನು ತಿನ್ನೋ ಮುನ್ನ ಹುಷಾರ್, ಮತ್ತೆ ಹರಡುತ್ತಿದೆ ಮಾರಣಾಂತಿಕ ನಿಫಾ !
ನಿಫಾ ವೈರಸ್‌ಗೆ ತುತ್ತಾದವರ ರೋಗ ಲಕ್ಷಣಗಳು
-ನಿಪಾಹ್ ವೈರಸ್ ಹಣ್ಣಿನ ಬಾವಲಿಗಳಿಂದ ಉಂಟಾಗುತ್ತದೆ
- ಇದು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಮಾರಕವಾಗಿದೆ
- ಕಲುಷಿತ ಆಹಾರದಿಂದ ಹರಡುತ್ತದೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ.
- ಸೋಂಕು ಕಾಣಿಸಿಕೊಂಡವರಲ್ಲಿ ಉಸಿರಾಟ ಸಮಸ್ಯೆ
- ಜ್ವರ, ಸ್ನಾಯು ನೋವು, ತಲೆನೋವು, ಜ್ವರ, ತಲೆತಿರುಗುವಿಕೆ ಮತ್ತು ವಾಕರಿಕೆ
ರೋಗ ತಡೆಗೆ ಏನು ಮಾಡಬೇಕು?
- ಮಾಸ್ಕ್ ಧರಿಸಬೇಕು
- ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು
- ಬಾವಲಿಗಳ ವಾಸಸ್ಥಾನ ಮತ್ತು ಹಂದಿಗಳಿಂದ ದೂರವಿರಬೇಕು
- ವೈರಸ್ ಹೊಂದಿರುವ ವ್ಯಕ್ತಿಯ ಲಾಲಾರಸ ಅಥವಾ ಯಾವುದೇ ದೈಹಿಕ ದ್ರವ ಹರಡದಂತೆ ನಿಗಾ