
ಹೀಗೆ ಸ್ನಾನ ಮಾಡಿದರೆ ಪ್ರೀತಿ, ಹಣ ಎರಡೂ ಆಕರ್ಷಿಸಬಹುದು ಎಂಬ ನಂಬಿಕೆಯಿದೆ!
ಜೀವನದಲ್ಲಿ ನೆಮ್ಮದಿ, ಆರೋಗ್ಯ, ಪ್ರೀತಿ ಮತ್ತು ಐಶ್ವರ್ಯವನ್ನು ಯಾರು ತಾನೇ ಬಯಸುವುದಿಲ್ಲ ಹೇಳಿ? ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಗಳಿಸಬೇಕು, ಆರ್ಥಿಕವಾಗಿ ಸದೃಢರಾಗಬೇಕು, ಕುಟುಂಬದಲ್ಲಿ ಸಂತೋಷದಿಂದ ಇರಬೇಕು ಹಾಗೂ ಸಮಾಜದಲ್ಲಿ ಗೌರವ ಸಂಪಾದಿಸಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಕೆಲವರು ಕಠಿಣ ಪರಿಶ್ರಮ ಪಡುತ್ತಾರೆ. ಇನ್ನು ಕೆಲವರು ಆಧುನಿಕ ಜೀವನಶೈಲಿಯ ಜೊತೆಗೆ ಸಾಂಪ್ರದಾಯಿಕ ಆಚರಣೆ, ಯೋಗ ಮತ್ತು ಆಯುರ್ವೇದ ಪದ್ಧತಿಗಳ ಮೊರೆ ಹೋಗುತ್ತಾರೆ.
ನಮ್ಮ ಸನಾತನ ಸಂಪ್ರದಾಯದಲ್ಲಿ ಸ್ನಾನಕ್ಕೂ ವಿಶೇಷ ಮಹತ್ವ ನೀಡಲಾಗಿದೆ. ಸ್ನಾನವೆಂದರೆ ಕೇವಲ ದೇಹದ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲ. ಅದು ದೇಹ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುವ ದೈನಂದಿನ ಆಚರಣೆ ಎಂದೂ ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಹಿಂದಿನ ಕಾಲದಿಂದಲೂ ಸ್ನಾನದ ನೀರಿಗೆ ಕೆಲವು ನೈಸರ್ಗಿಕ ಪದಾರ್ಥಗಳನ್ನು ಸೇರಿಸುವ ಪದ್ಧತಿ ರೂಢಿಯಲ್ಲಿದೆ. ಕೆಲವು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಇಂತಹ ಸ್ನಾನವು ನಕಾರಾತ್ಮಕತೆಯನ್ನು ದೂರ ಮಾಡಿ ಪ್ರೀತಿ, ಸಂಪತ್ತು ಮತ್ತು ಯಶಸ್ಸನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಹಾಗಾದರೆ ಸ್ನಾನದ ನೀರಿಗೆ ಯಾವ ಐದು ಪದಾರ್ಥಗಳನ್ನು ಸೇರಿಸಬಹುದು ನೋಡೋಣ.
ಸ್ನಾನದ ನೀರಿಗೆ ಸ್ವಲ್ಪ ಕಲ್ಲುಪ್ಪು ಸೇರಿಸುವುದು ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾಗಿದೆ. ಕಲ್ಲುಪ್ಪಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸಿನಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ದಿನವಿಡೀ ಕೆಲಸದ ಒತ್ತಡ, ಮಾನಸಿಕ ಆಯಾಸ ಮತ್ತು ದಣಿವಿನಿಂದ ಬಳಲುವವರಿಗೆ ಇಂತಹ ಸ್ನಾನವು ವಿಶ್ರಾಂತಿಯ ಅನುಭವ ನೀಡಬಹುದು. ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಕಲ್ಲುಪ್ಪು ಬೆರೆಸಿ ಸ್ನಾನ ಮಾಡುವುದರಿಂದ ದೇಹ ಹಗುರವಾದಂತೆ ಅನಿಸಬಹುದು. ಆದರೆ ನಕಾರಾತ್ಮಕ ಶಕ್ತಿ ಅಥವಾ ಔರಾ ಶುದ್ಧವಾಗುತ್ತದೆ ಎಂಬುದು ಯೋಗವಿಜ್ಞಾನ ಹಾಗೂ ಆಯುರ್ವೇದದ ನಂಬಿಕೆ.
ಗುಲಾಬಿ ಹೂವಿಗೆ ಪ್ರೀತಿ, ಸೌಂದರ್ಯ ಮತ್ತು ಮೃದುತ್ವದ ಸಂಕೇತ ಎಂಬ ಸ್ಥಾನವಿದೆ. ಇದೇ ಕಾರಣಕ್ಕೆ ರೋಸ್ ವಾಟರ್ ಅನ್ನು ಸೌಂದರ್ಯ ಆರೈಕೆಯಲ್ಲಿ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಸ್ನಾನದ ನೀರಿಗೆ ಸ್ವಲ್ಪ ಗುಲಾಬಿ ನೀರನ್ನು ಸೇರಿಸುವುದರಿಂದ ಸುಗಂಧಮಯ ಅನುಭವ ಸಿಗುತ್ತದೆ. ಇದು ಮನಸ್ಸಿಗೆ ಆಹ್ಲಾದಕರ ಭಾವನೆ ಮೂಡಿಸಲು ಸಹಾಯ ಮಾಡಬಹುದು. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಗುಲಾಬಿ ನೀರಿನ ಸ್ನಾನವು ವ್ಯಕ್ತಿತ್ವದಲ್ಲಿ ಮೃದುತ್ವ ಮತ್ತು ಆಕರ್ಷಣೆಯನ್ನು ಹೆಚ್ಚಿಸಿ ಪ್ರೀತಿಯ ಸಂಬಂಧಗಳನ್ನು ಬೆಳೆಸಲು ಪೂರಕವಾಗುತ್ತದೆ ಎನ್ನಲಾಗುತ್ತದೆ. ಆದರೆ ಪ್ರೀತಿಯನ್ನು ಆಕರ್ಷಿಸಲು ಸಾಧ್ಯ ಎನ್ನಲಾಗುತ್ತದೆ.
ಬಿಸಿಲು ಕಂಡ್ರೆ ಸಾಕು, ಕಪ್ಪಾಗೋಗ್ತೀನಿ ಅಂತ ಓಡಿಹೋಗ್ತೀರಾ? ಅದೇ ನೀವು ಮಾಡುವ ದೊಡ್ಡ ತಪ್ಪು!
3. ಅರಿಶಿನ: ಸ್ವಚ್ಛತೆ ಮತ್ತು ಆರೋಗ್ಯದ ಕಾಳಜಿ!
ಭಾರತೀಯ ಮನೆಗಳಲ್ಲಿ ಅರಿಶಿನಕ್ಕೆ ವಿಶೇಷ ಸ್ಥಾನವಿದೆ. ಅಡುಗೆಯಿಂದ ಹಿಡಿದು ಸೌಂದರ್ಯ ಆರೈಕೆಯವರೆಗೆ ಹಲವು ಉದ್ದೇಶಗಳಿಗೆ ಇದನ್ನು ಬಳಸಲಾಗುತ್ತದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಸಕ್ರಿಯ ಸಂಯುಕ್ತವಿದ್ದು, ಇದನ್ನು ಅದರ ಉರಿಯೂತ ನಿರೋಧಕ ಗುಣಗಳಿಗಾಗಿ ಅಧ್ಯಯನ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಅರಿಶಿನ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದನ್ನು ಶುಭಕರವೆಂದು ಪರಿಗಣಿಸಲಾಗುತ್ತದೆ. ಇದು ದೇಹ ಮತ್ತು ಮನಸ್ಸಿಗೆ ಹೊಸ ಉಲ್ಲಾಸ ನೀಡುತ್ತದೆ ಎಂಬ ನಂಬಿಕೆಯೂ ಇದೆ. ಅರಿಶಿನದ ನೀರಿನಲ್ಲಿ ಸ್ನಾನ ಮಾಡುವುದರಿಂದ ಜೀವನದ ಎಲ್ಲ ಸಮಸ್ಯೆಗಳು ಪರಿಹಾರವಾಗುವ ದಿಕ್ಕಿನಲ್ಲಿ ಪ್ರಾಣಶಕ್ತಿ ಜಾಗೃತವಾಗುತ್ತದೆ ಎನ್ನಲಾಗುತ್ತದೆ.
4. ಲವಂಗ: ದೃಷ್ಟಿ ದೋಷ ನಿವಾರಣೆಗೆ ಸಾಂಪ್ರದಾಯಿಕ ಆಚರಣೆ!
ಅಡುಗೆ ಮನೆಯಲ್ಲಿ ಸುಗಂಧಕ್ಕಾಗಿ ಬಳಸುವ ಲವಂಗಕ್ಕೆ ಸಾಂಪ್ರದಾಯಿಕ ಆಚರಣೆಗಳಲ್ಲಿಯೂ ಮಹತ್ವವಿದೆ. ಕೆಲವು ನಂಬಿಕೆಗಳ ಪ್ರಕಾರ, ಲವಂಗವನ್ನು ಸ್ನಾನದ ನೀರಿಗೆ ಸೇರಿಸುವುದರಿಂದ ದೃಷ್ಟಿ ದೋಷ ಮತ್ತು ನಕಾರಾತ್ಮಕ ಪ್ರಭಾವಗಳು ದೂರವಾಗುತ್ತವೆ. ಇದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳು ಕಡಿಮೆಯಾಗಿ ಏಳಿಗೆ ಸಾಧ್ಯವಾಗುತ್ತದೆ ಎಂದು ನಂಬಲಾಗುತ್ತದೆ. ಲವಂಗದ ವಿಶಿಷ್ಟ ಪರಿಮಳವು ಸ್ನಾನದ ಅನುಭವಕ್ಕೆ ಹೊಸತನ ನೀಡುತ್ತದೆ. ದೃಷ್ಟಿ ದೋಷ, ವಾಮಾಚಾರ ಅಥವಾ ಅದೃಷ್ಟದ ಮೇಲೆ ಲವಂಗ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ.
ಮೊಸಳೆ ಕಣ್ಣೀರು ಬೇಡ 'ಸಿಗಲ್ಲ' ಅಂತ.. ಸಿಕ್ಕಷ್ಟು ಮೊಸರು ತಿನ್ನೋದನ್ನ ಅಭ್ಯಾಸ ಮಾಡ್ಕೊಳ್ಳಿ, ಚೆನ್ನಾಗಿರ್ತೀರಾ!
5. ದಾಲ್ಚಿನ್ನಿ: ಯಶಸ್ಸಿನ ಸಂಕಲ್ಪಕ್ಕೆ ಸಕಾರಾತ್ಮಕ ಆರಂಭ!
ದಾಲ್ಚಿನ್ನಿ ತನ್ನ ವಿಶಿಷ್ಟ ಪರಿಮಳ ಮತ್ತು ರುಚಿಯಿಂದ ಪ್ರಸಿದ್ಧವಾಗಿದೆ. ಅಡುಗೆಯಲ್ಲಿ ಬಳಸುವ ಈ ಮಸಾಲೆಗೆ ಕೆಲವು ಸಂಪ್ರದಾಯಗಳಲ್ಲಿ ಸಮೃದ್ಧಿ ಮತ್ತು ಶುಭದ ಸಂಕೇತ ಎಂಬ ಸ್ಥಾನವಿದೆ. ಸ್ನಾನದ ನೀರಿಗೆ ದಾಲ್ಚಿನ್ನಿ ಸೇರಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ದೂರವಾಗಿ ಯಶಸ್ಸು ಮತ್ತು ಸಂಪತ್ತು ಆಕರ್ಷಿತವಾಗುತ್ತವೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಹೊಸ ಕೆಲಸ ಆರಂಭಿಸುವಾಗ ಅಥವಾ ಜೀವನದಲ್ಲಿ ಹೊಸ ಗುರಿಗಳನ್ನು ಇಟ್ಟುಕೊಳ್ಳುವಾಗ ಇಂತಹ ಆಚರಣೆಗಳನ್ನು ಕೆಲವರು ಅನುಸರಿಸುತ್ತಾರೆ. ದಾಲ್ಚಿನ್ನಿಯ ಪರಿಮಳವು ಮನಸ್ಸಿಗೆ ಆಹ್ಲಾದಕರ ಅನುಭವ ನೀಡಬಹುದು. ಇದರಿಂದ ಹಣ ಅಥವಾ ಯಶಸ್ಸು ನೇರವಾಗಿ ದೊರೆಯುತ್ತದೆ ಎಂದಲ್ಲ, ಬದಲಿಗೆ ಅದನ್ನು ಗಳಿಸುವ ಆಂತರಿಕ ಶಕ್ಷಿ ಜಾಗೃತವಾಗುತ್ತದೆ ಎನ್ನಲಾಗುತ್ತದೆ.
ಸೂಚನೆ: ಆಧುನಿಕ, ವೈಜ್ಞಾನಿಕ ಮನೋಭಾವದವರು, ಪ್ರತಿಯೊಂದಕ್ಕೂ ಆಧಾರ, ಸಾಕ್ಷಿ ಹಾಗೂ ಲಾಜಿಕ್ ಬಯಸುವವರು ಇಂಥ ನಂಬಿಕೆಗಳಿಂದ ದೂರವಿದ್ದು, ತಮ್ಮದೇ ಸ್ವತಂತ್ರ ನಿರ್ಧಾರ ಕೈಗೊಳ್ಳಬಹುದು. ಸನಾತನ, ಆಯುರ್ವೇದ ಹಾಗೂ ಯೋಗ ಪರಂಪರೆಯಲ್ಲಿ ಮನೆಯಲ್ಲೇ ಸಿಗುವ ಇಂತಹ ಕೆಲವು ನೈಸರ್ಗಿಕ ಪದಾರ್ಥಗಳು ಹಾಗೂ ಅವುಗಳ ಉಪಯೋಗಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇವುಗಳನ್ನು ಅನುಸರಿಸುವುದರ ಜೊತೆಗೆ, ಅಲ್ಲಿ ಹೇಳಲಾದ ಶಿಸ್ತುಬದ್ಧ ಜೀವನಕ್ರಮವನ್ನೂ ಅನುಸರಿಸವುದನ್ನು ಮರೆಯಬಾರದು. ಆಧುನಿಕ ಲೈಫ್ಸ್ಟೈಲ್ ಇಟ್ಟುಕೊಂಡು ಸಾಂಪ್ರದಾಯಿಕ ಪದ್ಧತಿ ಅನುಸರಿಸಿದರೆ ಅವು ಕೆಲಸ ಮಾಡಲಿಕ್ಕಿಲ್ಲ ಎಂಬುದೂ ಗಮನದಲ್ಲಿ ಇರಲಿ!
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.