ತಲೆಗೂದಲು ಸೋಂಪಾಗಿ, ಹೊಟ್ಟಿಲ್ಲದೇ ಬೆಳೆಯಲು ಸಿಂಪಲ್ ಟಿಪ್ಸ್ ತಿಳಿಸಿದ ನಟಿ ಅದಿತಿ ಪ್ರಭುದೇವ
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಅವರು ತಲೆಗೂದಲು ಸೋಂಪಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ. ಮನೆಯಲ್ಲಿಯೇ ಮಾಡಿಕೊಳ್ಳುವ ಸಿಂಪಲ್ ಎಣ್ಣೆ ಹಾಗೂ ಅದನ್ನು ಬಳಸುವ ಬಗೆಯನ್ನು ಅವರು ಹೇಳಿಕೊಟ್ಟಿದ್ದಾರೆ. ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಬದಾಮಿ ಎಣ್ಣೆಯನ್ನು ಸೇರಿಸಬೇಕು. ಅದಕ್ಕೆ ಕಡಿಮೆ ಪ್ರಮಾಣದಲ್ಲಿ ಹರಳೆಣ್ಣೆ ಮಿಕ್ಸ್ ಮಾಡಬೇಕು. ಇದು ಜಿಡ್ಡುಜಿಡ್ಡಾಗಿ ಇರುವ ಕಾರಣ, ಸ್ವಲ್ಪವೇ ಬಳಸಬೇಕು. ಸ್ವಲ್ಪ ಮೆಂತೆ ಕಾಳು ಹಾಕಿ ಕಾಯಿಸಬೇಕು. ಅದಕ್ಕೆ ಬೇಕಿದ್ದರೆ ದಾಸವಾಳದ ಎಲೆ ಅಥವಾ ಕರಿಬೇವಿನ ಎಲೆ ಹಾಕಬಹುದು. ನಂತರ ನಾಲ್ಕೈದು ಹನಿ ನಿಂಬೆ ರಸವನ್ನು ಮಿಕ್ಸ್ ಮಾಡಬೇಕು.
ಚಿಕ್ಕ ಬಾಲ್ಕನಿಯಲ್ಲೇ ಬ್ಯೂಟಿಫುಲ್ಲಾಗಿ ಗಿಡ ಬೆಳೆಸುವುದು ತೋರಿಸಿದ ನಟಿ ಅದಿತಿ ಪ್ರಭುದೇವ
ಈಗ ಇದನ್ನು ಚೆನ್ನಾಗಿ ತಲೆಯ ಬುಡದವರೆಗೆ ಮಸಾಜ್ ಮಾಡಬೇಕು. ತಲೆಯ ಜಿಡ್ಡು, ಹೊಟ್ಟು ಹೋಗುತ್ತದೆ. ಸ್ಕಾಪ್ ಫ್ರೆಷ್ ಆಗಿರುತ್ತದೆ. ಎಣ್ಣೆ ಹಚ್ಚಿಕೊಳ್ಳುವುದು ಮಾತ್ರವಲ್ಲದೇ ಮಸಾಜ್ ಸರಿಯಾಗಿ ಮಾಡಿದರೆ ಕೂದಲು ಬೆಳೆಯಲು ಸಹಾಯವಾಗುತ್ತದೆ.
ಕೆಲ ದಿನಗಳ ಹಿಂದೆ ನಟಿ, ಬೆಲ್ಲದ ಟೀ ಮಾಡುವುದನ್ನು ಹೇಳಿದ್ದರು. ಸಾಮಾನ್ಯವಾಗಿ ಬೆಲ್ಲ ಹಾಕಿದರೆ ಹಾಲು ಒಡೆದು ಹೋಗುತ್ತದೆ. ಆದ್ದರಿಂದ ಹಾಲು ಒಡೆಯದೇ ಟೀ ಮಾಡುವುದು ಹೇಗೆ ಎಂದು ನಟಿ ಹೇಳಿಕೊಟ್ಟಿದ್ದಾರೆ. ಅವರು ಹೇಳಿರುವ ಪ್ರಕಾರ, ಮೊದಲು ಸ್ಟವ್ ಆನ್ ಮಾಡಿ ನೀರು ಹಾಕಿಕೊಳ್ಳಬೇಕು. ನೀರು ಚೆನ್ನಾಗಿ ಕುದಿಯಲು ಬಿಡಬೇಕು. ಜಜ್ಜಿರುವ ಶುಂಠಿ ಸ್ವಲ್ಪ ಜಾಸ್ತಿನೇ ಹಾಕಬೇಕು. ನಂತರ ಹಾಲನ್ನು ಹಾಕಿಕೊಳ್ಳಬೇಕು. ಅದಕ್ಕೆ ಎಷ್ಟು ಬೇಕು ಅಷ್ಟು ಬೆಲ್ಲ ಹಾಕಬೇಕು. ಹಾಲಿಗೆ ಬೆಲ್ಲ ಹಾಕಿದ ಬಳಿಕ ಒಡೆಯುವ ಚಾನ್ಸಸ್ ಇರುತ್ತೆ. ಇದೇ ಕಾರಣಕ್ಕೆ ಕಲಕುತ್ತಲೇ ಇರಬೇಕು. ಚೆನ್ನಾಗಿ ಕಲುಕಿದ ಮೇಲೆ ಟೀ ಪೌಡರ್ ಹಾಕಬೇಕು. ನಂತರ ಸೋಸಿದರೆ ಮುಗಿಯಿತು. ಇದಕ್ಕೆ ಬ್ರೆಡ್ ಸಕತ್ ಕಾಂಬೀನೇಷನ್ ಎಂದು ನಟಿ ಹೇಳಿದ್ದಾರೆ.
ಸಿಂಪಲ್ ಅವಲಕ್ಕಿಗೆ ಟೇಸ್ಟಿ ಬೆಂಡೇಕಾಯಿ ಫ್ರೈ: ನಟಿ ಅದಿತಿ ಪ್ರಭುದೇವ ರೆಸಿಪಿ ನೋಡಿದ್ರೆ ಬಾಯಲ್ಲಿ ನೀರೂರತ್ತೆ!