ಕುಡಿತೀರಾ? ಏನೂ ತಲೆಯೇ ಓಡ್ತಿಲ್ಲವೆಂದ್ರೆ ಆಲ್ಕೋಹಾಲ್ ನಿಲ್ಲಿಸಿ ನೋಡಿ!

By Suvarna News  |  First Published Nov 11, 2023, 2:27 PM IST

ಆಲ್ಕೋಹಾಲ್ ಸೇವನೆ ಒಂದು ಗಂಭೀರ ಚಟ. ಅದನ್ನು ಬಿಡೋದು ಬಹಳ ಕಷ್ಟ. ಗಟ್ಟಿ ಮನಸ್ಸಿನಿಂದ ಮದ್ಯಸೇವನೆಯನ್ನು ನೀವು ಬಿಟ್ಟರೆ ಅದ್ರಿಂದಾಗುವ ಲಾಭ ಅಷ್ಟಿಷ್ಟಲ್ಲ. ಹೊಸ ಅಧ್ಯಯನವೊಂದು ಇದ್ರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ.


ಪಾರ್ಟಿ ಹೆಸರಿನಲ್ಲಿ ಶುರುವಾಗುವ ಮದ್ಯ ಸೇವನೆ ವರ್ಷಕ್ಕೊಮ್ಮೆ, ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಅಂತಾ ಮುಂದುವರೆದು ಕೊನೆಯಲ್ಲಿ ದಿನಕ್ಕೊಂದು, ದಿನಕ್ಕೆರಡು ಬಾರಿಗೆ ಬಂದು ನಿಲ್ಲುತ್ತದೆ. ಮದ್ಯದ ಚಟ ಶುರುವಾಗೋದು ಗೊತ್ತಾಗೋದಿಲ್ಲ. ಆದ್ರೆ ಮದ್ಯಸೇವನೆ ಬಿಡೋದು ಮಾತ್ರ ಸುಲಭವಲ್ಲ. ಮದ್ಯವ್ಯಸನಿಗಳು ಸಮಯಕ್ಕೆ ಸರಿಯಾಗಿ ಮದ್ಯ ಸಿಗದೆ ಹೋದ್ರೆ ಚಡಪಡಿಸ್ತಾರೆ. ಮಾನಸಿಕ ಗೊಂದಲಕ್ಕೆ ಒಳಗಾಗ್ತಾರೆ. ಆಲ್ಕೋಹಾಲ್ ನಿಂದಲೇ ಸಾವು ಹತ್ತಿರ ಬರ್ತಿದೆ ಎಂಬುದು ಗೊತ್ತಿದ್ದರೂ ಕೊನೆ ಗಳಿಗೆಯವರೆಗೆ ಮದ್ಯ ಸೇವನೆ ಮಾಡಿದ ಜನರಿದ್ದಾರೆ. ಮದ್ಯಸೇವನೆ ಚಟವಾದ್ರೆ ಬಹಳ ಕಷ್ಟ. ಈಗಾಗಲೇ ಆಲ್ಕೋಹಾಲ್ ಗೆ ಅಡಿಕ್ಟ್ ಆಗಿರುವ ಜನರಿಗೆ ಒಂದು ಒಳ್ಳೆ ಸುದ್ದಿ ಇದೆ.

ಮದ್ಯವ್ಯಸನಿಗಳಿಗೆ  ಇಲ್ಲಿದೆ ಖುಷಿ ಸುದ್ದಿ : ಮದ್ಯ (Alcohol) ಸೇವನೆಯಿಂದ ಅನಾರೋಗ್ಯ (Illness) ಕ್ಕೆ ಒಳಗಾಗಿದ್ದು, ಅದನ್ನು ಬಿಡಲೇಬೇಕು ಎಂಬ ನಿರ್ಣಯ ಮಾಡಿಕೊಂಡವರಿಗೆ ಒಳ್ಳೆಯ ಸುದ್ದಿಯೊಂದಿದೆ. ಒಬ್ಬ ವ್ಯಕ್ತಿಯು 7.3 ತಿಂಗಳ ಕಾಲ ಮದ್ಯವನ್ನು ಬಿಟ್ಟರೆ ಅವನ ಮೆದುಳಿ (brain) ನ ಹಾನಿಗೊಳಗಾದ ಜೀವಕೋಶಗಳು ಸುಧಾರಿಸಲು ಪ್ರಾರಂಭಿಸುತ್ತವೆ. ಜೀವಕೋಶಗಳ ಸ್ಥಿತಿ ಉತ್ತಮಗೊಳ್ಳಲು ಪ್ರಾರಂಭಿಸುತ್ತದೆ ಎಂದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಅತಿಯಾದ ಮದ್ಯಪಾನ ಮಾಡುವ ಜನರಿಗೆ ಆಲ್ಕೋಹಾಲ್ ಯೂಸ್ ಡಿಸಾರ್ಡರ್ (AUD) ಕಾಣಿಸಿಕೊಳ್ಳುತ್ತದೆ. ನೀವು 7.3  ತಿಂಗಳುಗಳ ಕಾಲ ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಿದರೆ ನಿಮ್ಮ ಮೆದುಳಿನ ಕಾರ್ಟೆಕ್ಸ್ನ ಹೊರ ಪದರವು ಗುಣವಾಗಲು ಪ್ರಾರಂಭಿಸುತ್ತದೆ. ಇದರ ಪ್ರಯೋಜನಗಳು ಮೊದಲ ತಿಂಗಳಿಂದಲೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

Tap to resize

Latest Videos

ದೀಪಾವಳಿ ಬಂತು, ಇವನ್ನೆಲ್ಲ ಬೇಕಾಬಿಟ್ಟಿ ತಿಂದ್ರೆ ಮೂಳೆ ಟೊಳ್ಳಾಗೋದು ಗ್ಯಾರಂಟಿ!

ಮದ್ಯವ್ಯಸನಿಗಳಿಗೆ ಕಾಡುವ ಆಲ್ಕೋಹಾಲ್ ಯೂಸ್ ಡಿಸಾರ್ಡರ್ ನಿಂದಾಗಿ ಹೊರ ಪದರದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನರ ಶಕ್ತಿ ಕಡಿಮೆಯಾಗುತ್ತದೆ. ಅಮೆರಿಕದಲ್ಲಿ ಇದಕ್ಕೆ ಸಂಬಂಧಿಸಿ ಅಧ್ಯಯನವೊಂದು ನಡೆದಿದೆ. ಈ ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಯು ನಿರಂತರವಾಗಿ 7.3 ತಿಂಗಳ ಕಾಲ ಮದ್ಯಪಾನವನ್ನು ನಿಲ್ಲಿಸಿದರೆ, ಅವನ ಮೆದುಳಿನ ಕಾರ್ಟೆಕ್ಸ್ನ ಹೊರ ಪದರವು ಗುಣವಾಗಲು ಪ್ರಾರಂಭಿಸುತ್ತದೆ ಎಂಬುದು ಪತ್ತೆಯಾಗಿದೆ. 

ವಾಯು ಮಾಲಿನ್ಯ: ಬರೀ ಹಾರ್ಟ್, ಲಂಗ್ಸ್ ಹಾಳಾಗೋದಲ್ಲ, ಲೈಂಗಿಕ ಜೀವನವೂ ಹದಗೆಡುತ್ತೆ!

ಆಲ್ಕೋಹಾಲ್ ತ್ಯಜಿಸಿದ ಮೊದಲ ತಿಂಗಳಲ್ಲಿ  ಮೆದುಳಿನ ಕಾರ್ಟೆಕ್ಸ್ನ ದಪ್ಪವು ಕ್ರಮೇಣ ಚೇತರಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರ ನಂತರ ಮುಂದಿನ ಆರು ತಿಂಗಳಲ್ಲಿ ಸಂಪೂರ್ಣವಾಗಿ ಸುಧಾರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅಮೆರಿಕದಲ್ಲಿ ಸುಮಾರು 1.60 ಕೋಟಿ ಜನರು ಆಲ್ಕೋಹಾಲ್ ಯೂಸ್ ಡಿಸಾರ್ಡರ್ ನಿಂದ ಬಳಲುತ್ತಿದ್ದಾರೆ. ಇದು ಅಲ್ಲಿನ ಮುಖ್ಯ ಆರೋಗ್ಯ ಸಮಸ್ಯೆಯಾಗಿದೆ. ಅದ್ರಿಂದ ಹೇಗೆ ಹೊರಬರಬೇಕೆಂಬುದು ಅವರಿಗೆ ಸರಿಯಾಗಿ ತಿಳಿಯುತ್ತಿಲ್ಲ.

ಮದ್ಯಸೇವನೆಯಿಂದ ಬದಲಾಗುತ್ತೆ ಮೆದುಳಿನ ರಚನೆ : ಮದ್ಯಪಾನ ಆರೋಗ್ಯ ಹಾಳು ಮಾಡ್ತಿದೆ ಎಂಬುದು ಗೊತ್ತಿದ್ದು, ಅದನ್ನು ಬಿಡಲು ಪ್ರಯತ್ನಿಸಿದ್ರೂ ಅನೇಕರಿಗೆ ಬಿಡಲು ಸಾಧ್ಯವಾಗ್ತಿಲ್ಲ. ಮೆದುಳಿನ   ಕಾರ್ಟೆಕ್ಸ್, ಯೋಜನೆ ರೂಪಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ರೆ ಆಲ್ಕೋಹಾಲ್ ಯೂಸ್ ಡಿಸಾರ್ಡರ್ ನಿಂದ ಬಳಲುವ ಜನರಲ್ಲಿ ಕಾರ್ಟೆಕ್ಸ್ ಸಾಮರ್ಥ್ಯ ಕಡಿಮೆ ಇರುತ್ತದೆ. ಅವರು ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ  ವಿಜ್ಞಾನಿ ತಿಮೋತಿ ಡುರಾಝೊ, ಆಲ್ಕೋಹಾಲ್ ಯೂಸ್ ಡಿಸಾರ್ಡರ್ ನಿಂದ ಬಳಲುತ್ತಿದ್ದ 88 ಮಂದಿ ಅಧ್ಯಯನ ನಡೆಸಿದ್ದಾರೆ. ಮದ್ಯಬಿಡಲು ಅವರಿಗೆ ಸಹಾಯ ಮಾಡಲಾಯ್ತು. ಒಂದು ವಾರ, ತಿಂಗಳು ಹಾಗೂ 7.3 ತಿಂಗಳು ಅವರ ಸ್ಕ್ಯಾನಿಂಗ್ ನಡೆಯಿತು. ಇದರಲ್ಲಿ 40 ಮಂದಿ ಮಾತ್ರ ಸಂಪೂರ್ಣ 7.3 ತಿಂಗಳು ಮದ್ಯ ತ್ಯಜಿಸಲು ಯಶಸ್ವಿಯಾಗಿದ್ದರು. ಇದಲ್ಲದೆ  ಆಲ್ಕೋಹಾಲ್ ಯೂಸ್ ಡಿಸಾರ್ಡರ್ ರೋಗಕ್ಕೆ ಒಳಗಾಗದ ಸಾಮಾನ್ಯ ಜನರನ್ನೂ ಅಧ್ಯಯನ ನಡೆಸಿ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.
 

click me!