ಬ್ರೈನ್ ಟ್ಯೂಮರ್ ಚಿಕಿತ್ಸೆಗೆ ನೆರವಾಗಬಲ್ಲದು ಈ ಥೆರಪಿ.. ವೈದ್ಯಕೀಯ ಕ್ಷೇತ್ರದ ಭರವಸೆ

By Suvarna News  |  First Published Sep 2, 2023, 2:23 PM IST

ದೇಹದ ಯಾವ ಭಾಗದಲ್ಲಿ ಗಡ್ಡೆಯಾದ್ರೂ ಅಪಾಯ. ಟ್ಯೂಮರ್ ಕೊನೆ ಹಂತದಲ್ಲಿ ಪತ್ತೆಯಾಗೋದ್ರಿಂದ ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಚಿಕಿತ್ಸೆಗೆ ಹೊಸ ಹೊಸ ವಿಧಾನಗಳನ್ನು ಕಂಡು ಹಿಡಿಯುತ್ತಿರುವ ವಿಜ್ಞಾನಿಗಳು ಈಗ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.
 


ಬ್ರೈನ್ ಟ್ಯೂಮರ್ ಪ್ರಾಣವನ್ನೇ ತೆಗೆಯುವ ರೋಗ. ಆರಂಭದಲ್ಲಿಯೇ ಇದು ಪತ್ತೆಯಾದ್ರೆ ಕೆಲ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮೂಲಕ ಇದನ್ನು ಗುಣಪಡಿಸುವ ಪ್ರಯತ್ನ ನಡೆಯುತ್ತದೆ. ಆದ್ರೆ ಗಡ್ಡೆ ಮತ್ತೆ ಬೆಳೆಯಲು ಶುರುವಾದ್ರೆ ಅಥವಾ ಅದು ಬೇರೆ ಕಡೆ ಕಂಡು ಬಂದಲ್ಲಿ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಬ್ರೈನ್ ಟ್ಯೂಮರ್ ಗೆ ಸಂಬಂಧಿಸಿದ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಹೊಸ ವಿಧಾನವನ್ನು ಕಂಡು ಹಿಡಿದಿದ್ದಾರೆ. 

ಈಗ ವಿಜ್ಞಾನಿಗಳು ಕಂಡು ಹಿಡಿದಿರುವುದು ಜೀನ್ (Gene) ಥೆರಪಿಯಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಬ್ರೈನ್ ಟ್ಯೂಮರ್ (Brain tumor) ಗೆ ಒಳಗಾದ ರೋಗಿಗೆ ಕೀಮೋಥೆರಪಿ ಮತ್ತು ವಿಕಿರಣದಂತಹ ಚಿಕಿತ್ಸೆ ನೀಡಲಾಗುತ್ತದೆ. ಬ್ರೈನ್ ಟ್ಯೂಮರ್ ಗೆ  ಚಿಕಿತ್ಸಾ ವಿಧಾನ ಸೀಮಿತವಾಗಿದೆ. ಇದನ್ನು ಗಮನಿಸಿದ ವಿಜ್ಞಾನಿಗಳ  ತಂಡ ಅಡೆನೊವೈರಲ್ ಜೀನ್ ಚಿಕಿತ್ಸೆಯನ್ನು ಪರೀಕ್ಷಿಸಿ ಯಶಸ್ಸು ಕಂಡಿದೆ. 

Latest Videos

undefined

ಎರಡೇ ಎರಡು ದೊಡ್ಡಪತ್ರೆ- ಹತ್ತಾರು ಮಾತ್ರೆಗಳು ಮನೆಯಿಂದ ​ಔಟ್​: ನಟಿ ಅದಿತಿ ಅಮ್ಮನ ಟಿಪ್ಸ್​

ದಿ ಲ್ಯಾನ್ಸೆಟ್ ಆಂಕೊಲಾಜಿ  ಜರ್ನಲ್‌ನಲ್ಲಿ ಈ ಅಧ್ಯಯಬನದ ವರದಿಯನ್ನು ಪ್ರಕಟಿಸಲಾಗಿದೆ. ಈ ಚಿಕಿತ್ಸಾ ವಿಧಾನದ ನಂತ್ರ ರೋಗಿಯಲ್ಲಿ ಕಂಡ ಚೇತರಿಕೆ ರೋಮಾಂಚನಕಾರಿಯಾಗಿದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ನರಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕ ಓರೆನ್ ಸಾಗರ್ ಹೇಳಿದ್ದಾರೆ. 

ಎರಡು ವಿಧಾನದಲ್ಲಿ ಚಿಕಿತ್ಸೆ : ವಿಜ್ಞಾನಿಗಳ ತಂಡ ಎರಡು ವಿಧದ ಜೆನೆಟಿಕ್ ಥೆರಪಿಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಮೊದಲನೆಯದು ಹೆಚ್ ಎಸ್ ವಿ ಒನ್ ಲಸಿಕೆ.  ಪ್ರೋಟೀನ್  ಮತ್ತು ವಾಲ್ಟ್ರೆಕ್ಸ್ ಸಂಯೋಜನೆಯಾಗಿದೆ. ಇದನ್ನು ಶೀತ, ಜ್ವರ ಮತ್ತು ಸರ್ಪಸುತ್ತುಗಳ ಚಿಕಿತ್ಸೆ ಬಳಸಲಾಗುವ ಔಷಧಿ. HSV-1 ಲಸಿಕೆ ಸಕ್ರಿಯವಾಗಿ ವಿಭಜಿಸುವ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ. ಎರಡನೆಯದು Flt3L. ಮೆದುಳಿಗೆ ಅಗತ್ಯವಾದ ಪ್ರತಿರಕ್ಷಣಾ ಕೋಶಗಳನ್ನು ನೇಮಿಸುವ ಪ್ರೋಟೀನ್. ಈ ಎರಡು ಸಂಯೋಜನೆಯ ಫಲಿತಾಂಶ ಉತ್ತಮವಾಗಿತ್ತು. ರೋಗಿ ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು.  ಈ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ 18 ಜನರಲ್ಲಿ ಆರು ಮಂದಿ, ಎರಡು ವರ್ಷಕ್ಕಿಂತ ಹೆಚ್ಚು ವರ್ಷ ಬದುಕಿದ್ರು. ಮೂರು ಮಂದಿ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಜೀವಂತವಾಗಿದ್ದರು. ಒಬ್ಬ ವ್ಯಕ್ತಿ ಐದು ವರ್ಷಗಳ ಕಾಲ ಬದುಕುಳಿದಿದ್ದ. 

ಸಿಕ್ಕಾಪಟ್ಟೆ ಕೋಪ ಬರುತ್ತಾ? ಮೈಮೇಲೆ ನಿಯಂತ್ರಣ ಇಲ್ಲದಂಗಾಗುತ್ತಾ?

HSV1-ಲಸಿಕೆಯನ್ನು ವ್ಯಕ್ತಪಡಿಸುವ ಅಡೆನೊವೈರಲ್ ವೆಕ್ಟರ್‌ನ ಚಟುವಟಿಕೆಯು 17 ತಿಂಗಳವರೆಗೆ ಸಕ್ರಿಯವಾಗಿದೆ ಎಂದು ತಂಡವು ಕಂಡುಹಿಡಿದಿದೆ. ಈ ಆವಿಷ್ಕಾರ ಹೆಚ್ಚಿನ ಭರವಸೆ ನೀಡಿದೆ. ಗೆಡ್ಡೆಯ ಮರುಕಳಿಸುವಿಕೆ ಅವಧಿಯನ್ನು ಇದು ವಿಸ್ತರಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಹಲವು ವರ್ಷಗಳವರೆಗೆ ವಿಜ್ಞಾನಿಗಳು ಇದ್ರ ಮೇಲೆ ಪ್ರಯೋಗ ಮಾಡಿದ್ದಾರೆ. ಸದ್ಯ ಬಂದ ಫಲಿತಾಂಶ ರೋಮಾಂಚನವಾಗಿದೆ. ಬ್ರೈನ್ ಟ್ಯೂಮರ್ ಹೊಂದಿರುವ ರೋಗಿಗಳ ಚಿಕಿತ್ಸೆಗೆ ಇದು ಒಳ್ಳೆ ಮಾರ್ಗವೆಂದು ಸಾಭೀತಾಗಿದೆ. ಅವರಿಗೆ ಒಂದು ಭರವಸೆಯನ್ನು ನೀಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಔಷಧಿ ಬಗ್ಗೆ ಇನ್ನಷ್ಟು ಪ್ರಯೋಗದ ಅಗತ್ಯವಿದ್ದರೂ, ಈ ಅಧ್ಯಯನದ ಫಲಿತಾಂಶಗಳು ಭವಿಷ್ಯದಲ್ಲಿ ಕ್ಲಿನಿಕಲ್ ಪ್ರಯೋಗಗಳ ವಿನ್ಯಾಸವನ್ನು ಬೆಂಬಲಿಸುತ್ತವೆ.

ಬ್ರೈನ್ ಟ್ಯೂಮರ್ ಅಂದ್ರೇನು? : ಬ್ರೈನ್ ಟ್ಯೂಮರ್ ಎನ್ನುವುದು ಮೆದುಳಿನಲ್ಲಿ ಅಥವಾ ಅದರ ಸುತ್ತಲಿನ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಾಗಿದೆ. ಪ್ರತಿಯೊಂದು ಮಿದುಳಿನ ಗಡ್ಡೆಯು ಕ್ಯಾನ್ಸರ್ ಆಗಿರಬೇಕೆಂದೇನಿಲ್ಲ. ಮೆದುಳಿನಲ್ಲಿ ಗೆಡ್ಡೆ ಬೆಳೆಯಲು ಪ್ರಾರಂಭಿಸಿದಾಗ, ಅದು ನಿಮ್ಮ ತಲೆಬುರುಡೆಯೊಳಗೆ ಒತ್ತಡವನ್ನು ಹೆಚ್ಚಿಸುತ್ತದೆ. ಮೆದುಳು ಹಾನಿಯಾಗುವ ಅಪಾಯವಿದೆ.  ಇದರಿಂದಾಗಿ ಪ್ರಪಂಚದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಾರೆ. ಜಾಗತಿಕವಾಗಿ 2020 ರಲ್ಲಿ, ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಯಿತು.  2025 ರ ವೇಳೆಗೆ ಯುನೈಟೆಡ್ ಸ್ಟೇಟ್ಸ್ ಒಂದರಲ್ಲೇ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರು ಸಾವಿರ ಮಕ್ಕಳಿಗೆ ಈ ರೋಗ ಕಾಣಿಸಿಕೊಳ್ಳಬಹುದು ಎಂದು ಸಂಶೋಧಕರು ಹೇಳುತ್ತಾರೆ.

click me!