ಕ್ಲಾಸ್‌ರೂಮಿನಲ್ಲೇ ಗರ್ಭಪಾತ, ತೀವ್ರ ರಕ್ತಸ್ರಾವದಿಂದ ವಿದ್ಯಾರ್ಥಿನಿ ಸಾವು

By Vinutha Perla  |  First Published Apr 15, 2023, 4:28 PM IST

ನೆಲ್ಲೂರಿನಲ್ಲಿ ವಿದ್ಯಾರ್ಥಿನಿಗೆ ತರಗತಿಯಲ್ಲೇ ಗರ್ಭಪಾತವಾಗಿದ್ದು, ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ. ಆಕೆಗೆ ನಿಜಕ್ಕೂ ಗರ್ಭಪಾತವಾಗಿತ್ತಾ? ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಯತ್ನಿಸಿದ್ದಳಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ನೆಲ್ಲೂರು: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಕೊಠಡಿಯಲ್ಲಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿದ್ದ  ವಿದ್ಯಾರ್ಥಿನಿ ಗರ್ಭಪಾತ ಮಾಡಿ ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿಷಯ ಬೆಳಕಿಗೆ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಹೇಳಿರುವ ಪ್ರಕಾರ, ನೆಲ್ಲೂರು ಜಿಲ್ಲೆಯ ಮರ್ರಿಪಾಡು ಮಂಡಲದ 19 ವರ್ಷದ ಯುವತಿಯೊಬ್ಬಳು ನೆಲ್ಲೂರು ಖಾಸಗಿ ಕಾಲೇಜಿನಲ್ಲಿ ಬಿಟೆಕ್ ಸೆಕೆಂಡರಿ ಓದುತ್ತಿದ್ದಳು. ಈ ತಿಂಗಳ 11 ರಂದು ಎಲ್ಲಾ ವಿದ್ಯಾರ್ಥಿಗಳು (Students) ಕಾಲೇಜು ಆವರಣದಲ್ಲಿ ತರಗತಿಯಿಂದ ಹೊರಗಿದ್ದರು. ತರಗತಿಯಲ್ಲಿ (Classroom) ಯಾರೂ ಇಲ್ಲ. ಆ ವೇಳೆ ವಿದ್ಯಾರ್ಥಿನಿ ತರಗತಿಯಲ್ಲಿ ಒಬ್ಬಳೇ ಇದ್ದಳು. ಬಾಗಿಲು ಒಳಗೆ ಲಾಕ್ ಆಗಿತ್ತು. ಬಹಳ ಹೊತ್ತಾದರೂ ಹೊರಗೆ ಬರಲಿಲ್ಲ. ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಹುಡುಕಾಡಿ ಕ್ಲಾಸ್‌ ರೂಂನಲ್ಲಿ ಇರುವುದನ್ನು ತಿಳಿದುಕೊಂಡಿದ್ದಾರೆ. ಆದರೆ ಆಕೆ ಎಷ್ಟು ಹೊತ್ತಾದರೂ ಬಾಗಿಲು ತೆಗೆಯಲ್ಲಿಲ್ಲ. ನಂತರ ವಿದ್ಯಾರ್ಥಿಗಳು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಕ್ಲಾಸ್ ರೂಮಿನಲ್ಲಿ ಯುವತಿ ಭಾರೀ ರಕ್ತಸ್ರಾವದ (Bleeding) ನಡುವಲ್ಲಿ ಬಿದ್ದಿದ್ದಳು.

Latest Videos

undefined

ಗರ್ಭಪಾತದ ಬಗ್ಗೆ ಬಹುತೇಕ ಮಹಿಳೆಯರು ತಿಳ್ಕೊಂಡಿರೋ ತಪ್ಪು ವಿಚಾರಗಳಿವು

ಆಕೆ ಪಕ್ಕದಲ್ಲೇ ಭ್ರೂಣವನ್ನು ಕಂಡು ವಿದ್ಯಾರ್ಥಿಗಳು ಆಕೆಯ ತಾಯಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ನೆಲ್ಲೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ವಿವರಗಳನ್ನು ಸಂಗ್ರಹಿಸಲಾಗಿದೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆಕೆಗೆ ನಿಜಕ್ಕೂ ಗರ್ಭಪಾತವಾಗಿತ್ತಾ, ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಯತ್ನಿಸಿದ್ದಳಾ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಓದಿ ಉತ್ತಮ ನೌಕರಿ ಹಿಡಿದು ಮಗಳು ನಮ್ಮನ್ನು ಸಾಕುತ್ತಾಳೆ ಎಂದುಕೊಂಡಿದ್ದ ಪೋಷಕರಿಗೆ ಈ ಸಾವು ಬರಸಿಡಿಲಿನಂತೆ ಅಪ್ಪಳಿಸಿದೆ.

ಈ ಪ್ರಕರಣದ ತನಿಖೆ ಮುಂದುವರೆದಿದೆ. ತರಗತಿ ಕೋಣೆಯಲ್ಲಿ ಗರ್ಭಪಾತ? ಯೂಟ್ಯೂಬ್‌ನಲ್ಲಿ ನೋಡಿದ ನಂತರ ಅವಳಿಗೆ ತಾನೇ ಗರ್ಭಪಾತವಾಗಿದೆಯೇ? ಅವಳು ತರಗತಿಯಲ್ಲಿ ಯಾಕೆ ಹೀಗೆ ಮಾಡಿದಳು? ಆಕೆಯ ಗರ್ಭಧಾರಣೆಯ ಬಗ್ಗೆ ಪೋಷಕರಿಗೆ ತಿಳಿದಿದೆಯೇ? ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯ ಸೆಲ್ ಫೋನ್ ಆಧರಿಸಿ ತನಿಖೆ ಮುಂದುವರಿದಿದೆ. ಇದರಲ್ಲಿ ಆಕೆಗೆ ಅನಂತಸಾಗರದ ಕಾರು ಚಾಲಕನ ಪರಿಚಯವಿರುವುದು ಬೆಳಕಿಗೆ ಬಂದಿದೆ. ಜಿಲ್ಲಾ ಮಟ್ಟದಲ್ಲಿ ತನಿಖೆ ಮುಂದುವರಿದಿದೆ ಎಂದು ನೆಲ್ಲೂರು ಗ್ರಾಮಾಂತರ ಸಿಐ ಶ್ರೀನಿವಾಸುಲು ರೆಡ್ಡಿ ತಿಳಿಸಿದ್ದಾರೆ.

ಪದೇ ಪದೇ ಗರ್ಭಪಾತವಾಗೋದರಿಂದ ಮಹಿಳೆ ಮೇಲೆ ಏನು ಪರಿಣಾಮ ಬೀರುತ್ತೆ?

ಮಹಿಳೆ ಪ್ರಾಣಕ್ಕೆ ಕುತ್ತು ತಂದ ಗರ್ಭಪಾತದ ಮಾತ್ರೆ: ಬ್ಲೀಡಿಂಗ್ ಹೆಚ್ಚಾಗಿ ಗೃಹಿಣಿ ಸಾವು
ಅಬಾರ್ಶನ್  ಮಾತ್ರೆಯಿಂದ ಬ್ಲಿಡಿಂಗ್ ಹೆಚ್ಚಾಗಿ ಗೃಹಿಣಿ  ಮೃತಪಟ್ಟ  ಆಘಾತಕಾರಿ ಘಟನೆ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದಿದೆ.  ಪ್ರೀತಿ ಕುಶ್ವಾಸ್  ಮೃತ ಮಹಿಳೆ. ಗಂಡನಿಗೆ ತಿಳಿಸದೇ ಪ್ರೀತಿ ಅಬಾರ್ಷನ್ ಮಾತ್ರೆ ತೆಗೆದುಕೊಂಡಿದ್ದು, ಮಾತ್ರೆ ತೆಗೆದುಕೊಂಡ ನಂತರ ಮಹಿಳೆಗೆ ರಕ್ತಸ್ರಾವ ಹೆಚ್ಚಾಗಿದೆ. ನಂತರ ಮಹಿಳೆ ತನ್ನ ಪತಿಗೆ ಈ ವಿಚಾರ ತಿಳಿಸಿದ್ದು, ನಂತರ ಪತಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪ್ರೀತಿ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. 

ಮೃತ ಮಹಿಳೆ ಪ್ರೀತಿಗೆ ಈಗಾಗಲೇ 11 ತಿಂಗಳ ಗಂಡು ಮಗುವಿದ್ದು, ಇತ್ತೀಚೆಗೆ ಮತ್ತೆ ಗರ್ಭ ನಿಂತಿರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಪ್ರೀತಿಗೆ ತಾನು ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ಈ ವಿಚಾರವನ್ನು ಮಹಿಳೆ ಪತಿಗೆ ತಿಳಿಸಿದ್ದರು. ಈ ವೇಳೆ ಪತಿ ವೈದ್ಯರಲ್ಲಿಗೆ ತೆರಳುವ ಬಗ್ಗೆ ಪತ್ನಿಗೆ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಪತ್ನಿ ಪ್ರೀತಿ ಗಂಡನಿಗೆ ತಿಳಿಸದೇ ಅಬಾರ್ಶನ್ ಮಾತ್ರ ತೆಗೆದುಕೊಂಡಿದ್ದು, ಬ್ಲೀಡಿಂಗ್ ಹೆಚ್ಚಾಗುತ್ತಿದ್ದಂತೆ ಪತಿಗೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಪತಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಸಹೋದರ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

click me!