
ಚೆನ್ನೈ: ಕೆಲಸದ ವೇಳೆ ಅಚಾನಕ್ ಆಗಿ ಕಾರ್ಮಿಕನ ತಲೆ ಹೊಕ್ಕಿದ್ದ 2 ಇಂಚು ಉದ್ದದ ಮೊಳೆಯೊಂದನ್ನು ವೈದ್ಯರು ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ಹೊರ ತೆಗೆದಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಕಾರ್ಮಿಕನಿಗೆ ಕೆಲಸ ಮಾಡುತ್ತಿದ್ದ ವೇಳೆ ಅಚಾನಕ್ ಆಗಿ ಮೊಳೆಯೊಂದು ತಲೆ ಹೊಕ್ಕಿದೆ. ಸಹ ಕಾರ್ಮಿಕನ ಮೊಳೆ ಹೊಡೆಯುವ ಗನ್ ಅಚಾನಕ್ ಆಗಿ ಆನ್ ಆದ ಪರಿಣಾಮ ಈ ಘಟನೆ ನಡೆದಿದೆ. ಜುಲೈ 4ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಳಿಕ ವೈದ್ಯರು ಕಾರ್ಮಿಕನ ತಲೆಗೆ ಡ್ರಿಲ್ ಮಾಡುವ ಮೂಲಕ ಎರಡು ದಿನದ ನಂತರ ತಲೆಗೆ ಹೊಕ್ಕಿದ್ದ ಆಣಿಯನ್ನು ಹೊರಗೆ ತೆಗೆದಿದ್ದಾರೆ. ಉತ್ತರಪ್ರದೇಶದ (Uttar Pradesh) ಮಚಲಿ ಗಾಂವ್ (Machhali Gaon) ನ ನಿವಾಸಿಯಾದ ಬ್ರಹ್ಮ (Brhma) ಎಂಬಾತನೇ ಹೀಗೆ ಅಚಾನಕ್ ಆಗಿ ತಲೆಗೆ ಮೊಳೆ ಹೊಡೆಸಿಕೊಂಡವರು. ಈತ ಕೂಲಿ ಅರಸಿ ಉತ್ತರಪ್ರದೇಶದಿಂದ ದಕ್ಷಿಣ ಭಾರತದ ರಾಜ್ಯ ತಮಿಳುನಾಡಿನ ಚೆನ್ನೈಗೆ ಕೆಲಸ ಅರಸಿ ಬಂದಿದ್ದ. ಶಸ್ತ್ರಚಿಕಿತ್ಸೆ ನಡೆಸಿದ ಮಾರನೇಯ ದಿನವೇ ಆತ ಆಸ್ಪತ್ರೆ ಬಿಟ್ಟು ನಗು ಮೊಗದಿಂದ ಮನೆಗೆ ತೆರಳಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವೈದ್ಯರು ನನ್ನ ತಲೆಯಿಂದ ಆಣಿಯನ್ನು ಹೊರ ತೆಗೆದಿದ್ದಾರೆ, ನಾನು ಈಗ ನಡೆಯಬಹುದು, ಮಾತಾಡಬಹುದು, ತಿನ್ನಬಹುದು, ನಾನು ಈಗ ಹುಷಾರಾಗಿದ್ದು, ಕೆಲಸಕ್ಕಾಗಿ ಕಾಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಹೈಟ್ ಇಲ್ದೆ ಯಾವ್ ಹುಡುಗೀನೂ ಬೀಳ್ತಿಲ್ವಂತೆ..ಉದ್ದ ಹೆಚ್ಚಿಸೋಕೆ ಬರೋಬ್ಬರಿ 66 ಲಕ್ಷ ರೂ. ಖರ್ಚು ಮಾಡ್ದ!
ಜುಲೈ 4 ರಂದು ಚೆನ್ನೈನ (Chennai) ನವಲೂರಿನಲ್ಲಿರುವ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದ್ದು, ಬ್ರಹ್ಮನ ಸಹೋದ್ಯೋಗಿ ಮರದ ಬಾಕ್ಸೊಂದನ್ನು ಮೊಳೆ ಹೊಡೆಯುವ ಗನ್‌ನಿಂದ ಸೀಲ್ ಮಾಡುತ್ತಿದ್ದು, ಈ ವೇಳೆ ಅದೇ ಸ್ಥಳದಲ್ಲಿ ಬ್ರಹ್ಮ ನೆಲಹಾಸನ್ನು ಗುಡಿಸುತ್ತಿದ್ದ, ಈ ವೇಳೆ ಬ್ರಹ್ಮನಿಗೆ ತಲೆಯ ಹಿಂಭಾಗದಲ್ಲಿ ತಡೆದುಕೊಳ್ಳಲಾಗದಷ್ಟು ನೋವಾಗಲಾರಂಭಿಸಿದೆ. ಜೊತೆಗೆ ರಕ್ತಸ್ರಾವವಾಗಲು ಶುರುವಾಗಿದೆ. ಆ ಮಹಡಿಯಲ್ಲಿದ್ದ ಸಿಬ್ಬಂದಿ ಆತನನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆತನ ಕುತ್ತಿಗೆ ಹಾಗೂ ತಲೆಯನ್ನು ಸಂಪರ್ಕಿಸುವ ನಡುವಿನ ಜಾಗದಲ್ಲಿ ಸಣ್ಣ ಬ್ಯಾಟರಿಯಷ್ಟು ಉದ್ದ ಗಾತ್ರದ ಮೊಳೆಯೊಂದು ಸೇರಿಕೊಂಡಿತ್ತು. ಆದರೆ ಈ ನೋವಿನಲ್ಲೂ ಆತನಿಗೆ ಪ್ರಜ್ಞೆ ತಲುಪಿರಲಿಲ್ಲ.
ಕೂಡಲೇ ಫ್ಯಾಕ್ಟರಿ ಸಿಬ್ಬಂದಿ ಆತನನ್ನು ಚೆನ್ನೈನ ರೇಲಾ ಆಸ್ಪತ್ರೆಗೆ ಕರೆದೊಯ್ದರು. ಪ್ರಜ್ಞಾವಸ್ಥೆಯಲ್ಲೇ ಆತನನ್ನು ಆಸ್ಪತ್ರೆಯ ಆಪರೇಷನ್ ಥಿಯೇಟರ್‌ಗೆ ಸಾಗಿಸಲಾಯಿತು. ರಕ್ತದೊತ್ತಡ, ಹೃದಯಬಡಿತ ಎಲ್ಲವೂ ಸಾಮಾನ್ಯವಾಗಿದ್ದವು, ಅದಕ್ಕಿಂತ ಹೆಚ್ಚು ಆತನ ಎಳೆ ವಯಸ್ಸು ನಮ್ಮ ಪಾಲಿಗೆ ಅಪರೇಷನ್ ಮಾಡುವುದಕ್ಕೆ ದೊಡ್ಡ ಅನುಕೂಲಕರವಾಗಿತ್ತು ಎಂದು ಆಸ್ಪತ್ರೆಯ ವೈದ್ಯ ಅಂಬುಸೆಲ್ವಂ ಹೇಳಿದ್ದಾರೆ.
ಆದರೆ ಮೊಳೆ ಆತ ಚರ್ಮದ ಹಂತಕ್ಕಿಂತ ಅರ್ಧ ಇಂಚು ಒಳಗೆ ಕ್ರಾನಿಯೋವರ್ಟೆಬ್ರಲ್ ಜಂಕ್ಷನ್ ಎಂಬ ಸಂಕೀರ್ಣ ಪರಿವರ್ತನೆಯ ವಲಯವನ್ನು (ಕಪಾಲ ಮತ್ತು ಬೆನ್ನುಮೂಳೆಯ ಕೀಲಿನ ನಡುವೆ) ಹೊಕ್ಕಿತ್ತು. ಈ ಸ್ಥಳ ವಿಭಿನ್ನ ಅಂಶಗಳ ಸಂಕೀರ್ಣ ಸಮತೋಲನವನ್ನು ಒಳಗೊಂಡಿದೆ ಮತ್ತು ಎಡ ಕಶೇರುಕ ಅಪಧಮನಿಯ ಹತ್ತಿರದಲ್ಲಿದೆ. ಹೀಗಾಗಿ ಯಾವುದೇ ಅಹಿತಕರ ಸ್ಥಿತಿಗೆ ಇದು ಕಾರಣವಾಗುತ್ತಿತ್ತು. ಒಂದು ಮಾತನಾಡುವುದಕ್ಕೆ ಕಷ್ಟವಾಗುವಂತಹ ಸ್ಥಿತಿ ಉಂಟಾಗುತ್ತಿತ್ತು. ಅಥವಾ ಸಾವಿಗೂ ಕಾರಣವಾಗುತ್ತಿತ್ತು. ಸ್ಕ್ಯಾನಿಂಗ್ ಚಿತ್ರಗಳು ಇದು ಸರಳವಾದ ಮೊಳೆಯಲ್ಲ ಎಂಬುದನ್ನು ತೋರಿಸುತ್ತಿತ್ತು. ಸುಲಭವಾಗಿ ಹೊರಬರಲು ಸಾಧ್ಯವಾಗದಂತ, ಅಥವಾ ಒಮ್ಮೆ ಮರಕ್ಕೆ ಇದನ್ನು ಹೊಡೆದರೆ ಸುಲಭವಾಗಿ ತೆಗೆಯಲಾಗದಂತೆ ಡಿಸೈನ್ ಅನ್ನು ಈ ಮೊಳೆ ಹೊಂದಿತ್ತು ಎಂದು ವೈದ್ಯರಾದ ಅಂಬುಸೆಲ್ವಂ ಹೇಳಿದರು.
Wildlife: ಸುಣ್ಣದ ಡಬ್ಬಿ ನುಂಗಿ ನರಳಾಡಿದ ನಾಗರಹಾವಿಗೆ ಡಾಕ್ಟರ್ ಯಶಸ್ವಿ ಶಸ್ತ್ರ ಚಿಕಿತ್ಸೆ!
ನಂತರ ರೋಗಿಯನ್ನು ಮುಖ ಕೆಳಗೆ ಮಾಡಿ (ಅಂಗಾತ) ಮಲಗಿಸಿ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಯ್ತು. ಇದಕ್ಕಾಗಿ ವಿಶೇಷವಾದ ಡೈಮಂಡ್ ಬುರ್ ಎಂಬ ನ್ಯೂರೋಸರ್ಜರಿ ಉಪಕರಣ ವನ್ನು ಬಳಸಿ ಮೊಳೆ ಇರುವ ಜಾಗದ ಸುತ್ತ ಡ್ರಿಲ್ (ಕೊರೆಯುವುದು) ಮಾಡಲಾಯಿತು. ನಂತರ ಮೊಳೆಯ ಹಿಡಿತಲೆ ಕಾಣಿಸಿತ್ತು. ನಂತರ ಮತ್ತೆ ಸೂಕ್ಷ್ಮವಾಗಿ ಡ್ರಿಲ್ ಮಾಡಿ ಮೊಳೆಯನ್ನು ಹೊರಗೆಳೆಯಲಾಯಿತು.
ಶಸ್ತ್ರಚಿಕಿತ್ಸೆಯ ಬಳಿಕ ಬ್ರಹ್ಮನಿಗೆ ಪ್ರಜ್ಞೆ ಮರುಕಳಿಸಿದ್ದು, ಯಾವುದೇ ಕಷ್ಟವಿಲ್ಲದೇ ಕೈಕಾಲುಗಳನ್ನು ಅಲುಗಾಡಿಸಲು ಸಾಧ್ಯವಾಯ್ತು. ಹೀಗಾಗಿ ಮಾರನೇ ದಿನವೇ ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯ್ತು. ಈಗ ಆತ ಮತ್ತೆ ಕೆಲಸ ಮಾಡಲು ಸಮರ್ಥ ಎಂದು ಘೋಷಿಸಿದ್ದಾರೆ ರೇಲಾ ಆಸ್ಪತ್ರೆಯ ಸಿಇಒ ಡಾ. ಇಲನ್‌ಕುಮಾರನ್ ಕಲಿಯಮೂರ್ತಿ ಹೇಳಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.