ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯವಾಗಿದೆ. ಒಂದು ದಿನ ನಿದ್ರೆ ಮಾಡಿಲ್ಲಾಂದ್ರೂ ಸಾಕು ಮರುದಿನ ಸುಸ್ತು, ತಲೆನೋವು, ಅಸ್ವಸ್ಥತೆ ಕಾಡುತ್ತೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 60 ವರ್ಷಗಳಿಂದ ನಾನು ಮಲಗೇ ಇಲ್ಲ ಎಂದು ಹೇಳಿಕೊಂಡಿದ್ದಾನೆ
ವಿಯೆಟ್ನಾಂನ 80 ವರ್ಷದ ವ್ಯಕ್ತಿಯೊಬ್ಬರು ತಮ್ಮ ಬಾಲ್ಯದಲ್ಲಿ ಜ್ವರದಿಂದ ನಿದ್ದೆ ಮಾಡಲು ಅಸಮರ್ಥರಾದ ನಂತರ ಒಮ್ಮೆಯೂ ನಿದ್ದೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಥಾಯ್ ಎನ್‌ಗೊಕ್ ಎಂಬವರು 1962ರಿಂದ ನಿದ್ದೆಯ ಕೊರತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಚ್ಚರಿ ಎನಿಸಿದರೂ ಇದು ನಿಜ. ಥಾಯ್ ಎನ್‌ಗೊಕ್ ಮಲಗಿದ್ದನ್ನು ನೋಡಿಲ್ಲ ಎಂದು ಅವರ ಕುಟುಂಬ ಸದಸ್ಯರು, ಸ್ನೇಹಿತರು, ನೆರೆಮನೆಯವರು ಸಹ ತಿಳಿಸಿದ್ದಾರೆ. ಅನೇಕ ವೈದ್ಯಕೀಯ ತಜ್ಞರು ಅವರ ಅಸ್ವಸ್ಥತೆಯನ್ನು ಪರೀಕ್ಷಿಸಿದ್ದಾರೆ. ಮತ್ತು ಥಾಯ್ ಎನ್‌ಗೊಕ್ ಹಲವಾರು ವರ್ಷಗಳಿಂದ ನಿದ್ದೆ ಮಾಡಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯಲ್ಲಿ ಥಾಯ್ ಶಾಶ್ವತ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂತು. ಆದರೆ ಆಶ್ಚರ್ಯಕರವಾಗಿ, 80 ವರ್ಷದ ಈ ವ್ಯಕ್ತಿಗೆ ವಿಶ್ರಾಂತಿ ಇಲ್ಲದ ಕಾರಣದಿಂದಾಗಿ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಯೂಟ್ಯೂಬರ್ ಒಬ್ಬರು ಥಾಯ್ ನಿದ್ದೆ ಮಾಡುತ್ತಿಲ್ಲ ಎಂಬುದನ್ನು ಪರಿಶೀಲಿಸಲು ವಿಯೆಟ್ನಾಂನ ಹಳ್ಳಿಯೊಂದಕ್ಕೆ ತೆರಳಿದರು. ಇಲ್ಲಿ ಯೂಟ್ಯೂಬರ್ ಒಂದು ರಾತ್ರಿ ಥಾಯ್ ಜೊತೆಗೆ ಉಳಿದುಕೊಂಡರು. ಈ ಸಂದರ್ಭದಲ್ಲಿ ಅವರು ಸಂಪೂರ್ಣ ದಿನ ನಿದ್ದೆ ಮಾಡುವುದಿಲ್ಲ ಎಂಬುದು ತಿಳಿದುಬಂತು.
undefined
Mental Health : ರಾತ್ರಿ ನಿದ್ರೆ ಸೊಂಪಾಗಿ ಆಗ್ಬೇಕು ಅಂದ್ರೆ ಈ ವಸ್ತು ಬಳಸಿ ನೋಡಿ
ವಿಯೆಟ್ನಾಂ ಯುದ್ಧದ ಸಮಯದಲ್ಲಿ ಎನ್‌ಗೊಕ್ ಈ ಸಮಸ್ಯೆಯನ್ನು ಅನುಭವಿಸಲು ಶುರು ಮಾಡಿದರು. ಅವರೊಂದಿಗಿನ ಸಂಭಾಷಣೆಯಲ್ಲಿ, ಎನ್‌ಗೊಕ್ ಅವರು 'ಗ್ರೀನ್ ಟೀ ಮತ್ತು ರೈಸ್ ವೈನ್' ನಿಂದ ಮೂಲಭೂತ ಮಾನವ ಕಾರ್ಯಚಟುವಟಿಕೆಗೆ ಅಗತ್ಯವಾದ ಶಕ್ತಿಯನ್ನು ಪಡೆಯುತ್ತಾರೆ ಎಂದು ಬಹಿರಂಗಪಡಿಸಿದರು. ಆದರೆ ಅವರು ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಹತಾಶೆಯನ್ನು ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಕೆಲವು ಊಹಾಪೋಹಗಳ ಆಧಾರದ ಮೇಲೆ, 1955 ರಿಂದ 1975 ರ ನಡುವೆ ಉಂಟಾದ ಯುದ್ಧ ಎನ್‌ಗೊಕ್‌ನ ನಿದ್ರೆಯ ಕೊರತೆಯ ಹಿಂದಿನ ಪ್ರಮುಖ ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಂತರ್ಜಾಲದಲ್ಲಿ ಜನರು ಎನ್‌ಗೊಕ್‌ನ ಕಥೆಯನ್ನು ದುರಂತ ಮತ್ತು ಅದ್ಭುತವೆಂದು ಕಂಡುಕೊಂಡರು.
Health Tips: ಮಧ್ಯರಾತ್ರಿಯಾದ್ರೂ ನಿದ್ರೆ ಮಾಡ್ತಿಲ್ವಾ? ಸಾವು ಸಮೀಪಿಸುತ್ತಿದ್ಯಾ?
ಕಳೆದ 30 ವರ್ಷಗಳಿಂದ ನಿದ್ದೆಯೇ ಮಾಡಿಲ್ಲ ಸೌದಿಯ ಈ ಮೊಹಮ್ಮದ್..!
ಈ ರೀತಿ ನಿದ್ದೆ ಮಾಡದಿರೋ ವ್ಯಕ್ತಿಯ ಬಗ್ಗೆ ಸುದ್ದಿಯಾಗಿರೋದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ ಸೌದಿಯ 70 ವರ್ಷದ ವೃದ್ಧರೊಬ್ಬರಿಗೆ ಕಳೆದ 70 ವರ್ಷಗಳಿಂದ ನಿದ್ರೆ ಎಂದರೆ ಏನು ಎಂಬುದೇ ತಿಳಿಯದಾಗಿದೆ. ಈತನ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈದ್ಯರು ಕೂಡ ಈತನ ನಿದ್ರಾ ಹೀನತೆಗೆ ಕಾರಣ ಹುಡುಕಲು ಪರದಾಡುತ್ತಿದ್ದಾರೆ. ಸೌದ್ ಬಿನ್ ಮುಹಮ್ಮದ್ ಅಲ್-ಘಮ್ದಿ (Saud Bin Muhammad Al-Ghamdi) ಎಂಬ 70 ರ ಇಳಿ ವಯಸ್ಸಿನ ವೃದ್ಧನಿಗೆ ನಿದ್ರೆ ಬರುವಂತೆ ಮಾಡಲು ವೈದ್ಯರು ತಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ಯಾವುದೇ ಫಲ ಸಿಕ್ಕಿಲ್ಲ. ಈತನ ವಿಚಾರವೂ ಅನೇಕರಲ್ಲಿ ಧಿಗ್ಬ್ರಮೆ ಹುಟ್ಟಿಸಿದೆ.
ಅನೇಕರು ಆತನನ್ನು ಅಚ್ಚರಿಯಿಂದ ಕುತೂಹಲದಿಂದ ನೋಡಲು ಶುರು ಮಾಡಿದ್ದಾರೆ ಎಂದು ಸ್ವತಃ ಮೊಹಮ್ಮದ್ ಅಲ್ ಘಮ್ಡಿ ಹೇಳಿಕೊಂಡಿದ್ದಾರೆ. ಮೊಹಮ್ಮದ್ ಕೂಡ ನಿದ್ದೆ ಬಾರದ ತನ್ನ ಸ್ಥಿತಿಗೆ ಕಾರಣ ಏನಿರಬಹುದು ಎಂದು ತಿಳಿದುಕೊಳ್ಳಲು ಹಲವು ಪ್ರಯತ್ನ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ನಿದ್ರೆ ಬಾರದ ಸ್ಥಿತಿ ಆತನಿಗೆ ಕೆಲವೊಮ್ಮೆ ಬಹಳ ಕಿರಿಕಿರಿ ಉಂಟು ಮಾಡುತ್ತಿದೆಯಂತೆ.