ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಜನ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಿದ್ದರೆ, 20 ಲಕ್ಷ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ರೋಗ ಬಂದ ತಕ್ಷಣ ಚಿಕಿತ್ಸೆ ಪಡೆದುಕೊಂಡರೆ ಸಾವು ಕೂಡ ದೂರ ಹೋಗುತ್ತದೆ. ದೇವರ ಆಶೀರ್ವಾದ ಎಲ್ಲರಿಗೂ ಅಗತ್ಯ ಎಂದು ಖ್ಯಾತ ಕ್ಯಾನ್ಸರ್ ತಜ್ಞ ಡಾ. ಮಾಜಿದ್ ಅಹ್ಮದ್ ತಾಳಿಕೋಟಿ ತಿಳಿಸಿದರು.
ಸುರಪುರ (ಜು.1): ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಜನ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಿದ್ದರೆ, 20 ಲಕ್ಷ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ರೋಗ ಬಂದ ತಕ್ಷಣ ಚಿಕಿತ್ಸೆ ಪಡೆದುಕೊಂಡರೆ ಸಾವು ಕೂಡ ದೂರ ಹೋಗುತ್ತದೆ. ದೇವರ ಆಶೀರ್ವಾದ ಎಲ್ಲರಿಗೂ ಅಗತ್ಯ ಎಂದು ಖ್ಯಾತ ಕ್ಯಾನ್ಸರ್ ತಜ್ಞ ಡಾ. ಮಾಜಿದ್ ಅಹ್ಮದ್ ತಾಳಿಕೋಟಿ(Dr. Majid Ahmed Talikoti) ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಕ್ಕೆ ನಿರ್ದಿಷ್ಟತೆ ಎಂಬುದಿಲ್ಲ. ದೇಹದ ಯಾವುದೇ ಭಾಗದಲ್ಲಾದರೂ ಕಾಣಿಸಿಕೊಳ್ಳಬಹುದು. ಸೂಕ್ತ ಚಿಕಿತ್ಸೆ ಮುಖ್ಯ. ಆರಂಭಿಕ ಹಂತದಲ್ಲಿ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆಗ ಶೇ.90ರಷ್ಟುಜೀವ ಉಳಿಯುತ್ತದೆ. ಸ್ಟೇಜ್-2ನಲ್ಲಿ ಶೇ. 80, ಸ್ಟೇಜ್-3 ಶೇ. 50, ಸ್ಟೇಜ್-4 ತಲುಪಿದರೆ ಕಷ್ಟವಾಗುತ್ತದೆ. ಆಗ ಚಿಕಿತ್ಸೆ ಹಾಗೂ ದೇವರ ಆಶೀರ್ವಾದ ದಿಂದ ಮಾತ್ರ ಉಳಿಯಲು ಸಾಧ್ಯ ಎಂದರು.
undefined
ಡಯಟ್ ಕೋಕ್, ಚ್ಯೂಯಿಂಗ್ ಗಮ್‌ಗಳಲ್ಲಿರುವ ಆಸ್ಪರ್‌ಟೇಮ್ ಸ್ವೀಟ್ನರ್‌ನಿಂದ ಬರುತ್ತೆ ಕ್ಯಾನ್ಸರ್
ಬಾಯಿ, ನಾಲಿಗೆ ಮೇಲೆ ಗಾಯ ಹುಣ್ಣು, ಅರ್ಜೀರ್ಣ, ಹೊಟ್ಟೆನೋವು, ರಕ್ತ ಕೆಮ್ಮು, ಸ್ತನಗಳ ಬಣ್ಣ, ಗಾತ್ರ ಬದಲಾವಣೆ, ಮೊಲೆ ತೊಟ್ಟಿನಲ್ಲಿ ತದ್ದುಗಾಯ, ಮುಟ್ಟಿನಲಿ ತೊಂದರೆ, ರಕ್ತಸ್ರಾವ, ಮೂತ್ರದಲ್ಲಿ ಉರಿ, ಲೈಂಗಿತೆಯಲ್ಲಿ ನೋವು, ದೇಹದಲ್ಲಿ ಗಂಟು, ತೂಕ ಇಳಿಕೆ, ವಾಂತಿ, ನಿದ್ರಾ ಹೀನತೆ ಇವೆಲ್ಲ ರೋಗದ ಲಕ್ಷಣಗಳು. ತಕ್ಷಣ ವೈದ್ಯರ ಸಲಹೆ ಪಡೆಯಬೇಕು 20 ದಿನಗಳಲ್ಲಿ ವಾಸಿಯಾಗದಿದ್ದರೆ. ಕ್ಯಾನ್ಸರ್ ಪರೀಕ್ಷೆ ಮಾಡಿಸಬೇಕು. ವೈದ್ಯರ ಮಾತನ್ನು ಕೇಳಿ, ಪಾಲಿಸಿದರೆ ಅದರಂತೆ ನಡೆದುಕೊಂಡರೆ ಆಗ ಆತ ಕ್ಯಾನ್ಸರ್‌ನಿಂದ ಬಚಾವಾಗುತ್ತಾನೆ. ಕೊನೆ ಹಂತದಲ್ಲಿದ್ದಾಗ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮನುಷ್ಯನ ಜೀವನ ಅಮೂಲ್ಯ. ಜೀವನ ಶೈಲಿ ಬದಲಾಗಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆರೋಗ್ಯದ ವಿಷಯದಲ್ಲಿ ಸ್ವಾರ್ಥತೆ ಇರಬೇಕು. ನೂರು ವರ್ಷ ಬಾಳಬೇಕು. ತಂಬಾಕು ವ್ಯಾಪಾರದಿಂದ 100 ಕೋಟಿ ಗಳಿಸುತ್ತಾರೆ. ಜೀವ ರೋಗಕ್ಕೆ ತುತ್ತಾಗುತ್ತದೆ. ಆದ್ದರಿಂದ ತುಂಬಾಕು ಮುಕ್ತ ದೇಶ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು. ಚಿಕಿತ್ಸೆಗೆ ಸಾಕಷ್ಟುವೆಚ್ಚವಾಗುತ್ತಿದೆ. ಸರಕಾರವೇ ಇದರ ವೆಚ್ಚ ಬರಿಸಿದರೆ ಕ್ಯಾನ್ಸರ್‌ನಿಂದ ದೇಶ ಮುಕ್ತವಾಗುತ್ತದೆ ಎಂದು ತಿಳಿಸಿದರು.
Healthy Food : ತೂಕ ಇಳಿಸಿಕೊಳ್ಳಬೇಕಾ, ಮತ್ತೊಂದಿಷ್ಟು ಸಮಸ್ಯೆಗೆ ಪರಿಹಾರ ಈ ಸಣ್ಣ ಏಲಕ್ಕಿ