ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ರಾಯಚೂರು ಮೂಲದ ಗರ್ಭಿಣಿಯೊಬ್ಬರು 108 ಆಂಬ್ಯುಲೆನ್ಸ್ ವಾಹನದಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಚಳ್ಳಕೆರೆ ತಾಲೂಕಿನ ತಳಕು ಸಮೀಪದಲ್ಲಿ ಶನಿವಾರ ಬೆಳಗಿನ ಜಾವ ಜರುಗಿದೆ.
ಮೊಳಕಾಲ್ಮೂರು (ಮಾ.12) : ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ರಾಯಚೂರು ಮೂಲದ ಗರ್ಭಿಣಿಯೊಬ್ಬರು 108 ಆಂಬ್ಯುಲೆನ್ಸ್ ವಾಹನದಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಚಳ್ಳಕೆರೆ ತಾಲೂಕಿನ ತಳಕು ಸಮೀಪದಲ್ಲಿ ಶನಿವಾರ ಬೆಳಗಿನ ಜಾವ ಜರುಗಿದೆ.
ಬೆಂಗಳೂರಿನಲ್ಲಿ ಕೆಲಸಕ್ಕೆ ತೆರಳಿದ್ದ ರಾಯಚೂರಿನ ಮಸ್ಕಿ ತಾಲೂಕಿನ ಸಂಗೀತ(Sangeeta) ಎನ್ನುವ 7 ತಿಂಗಳ ಗರ್ಭಿಣಿ, ತನ್ನ ಪತಿ ಹಾಗೂ ಸಂಬಂಧಿಕರೊಡನೆ ಮಸ್ಕಿಗೆ ತೆರಳುತ್ತಿರುವಾಗ ಚಳ್ಳಕೆರೆ ತಾಲೂ ಕಿನ ಹಿರೇಹಳ್ಳಿ ಸಮೀಪದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಹತ್ತಿರದಲ್ಲಿ ಆಸ್ಪತ್ರೆಗಳು ಇರುವುದು ಮಾಹಿತಿ ಇಲ್ಲದೆ ನಾಗಪ್ಪ 108 ಆಂಬ್ಯುಲೆನ್ಸ್(108 Ambulance) ಗೆ ಕರೆ ಮಾಡಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆಯ ಬಳಿಗೆ 108 ವಾಹನ ಆಗಮಿಸಿ ಗರ್ಭಿಣಿಯನ್ನು ಚಳ್ಳಕೆರೆ ಆಸ್ಪತ್ರೆಗೆ ಕರೆದೊಯ್ಯವ ಮಾರ್ಗಮಧ್ಯೆ ತಳಕು ಸಮೀಪದಲ್ಲಿ ಹೆರಿಗೆ ನೋವು ತೀವ್ರಗೊಂಡು ಆಂಬ್ಯುಲೆನ್ಸ್ ನಲ್ಲಿಯೇ ಗರ್ಭಿಣಿ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿದ್ದ ಆರೋಗ್ಯ ಸಿಬ್ಬಂದಿ ಶಿಶುಗಳನ್ನು ಆರೈಕೆ ಮಾಡಿದ್ದಾರೆ. ತಾಯಿ ಮತ್ತು ಇಬ್ಬರು ನವಜಾತ ಶಿಶುಗಳು ಆರೋಗ್ಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು 108 ಸಿಬ್ಬಂದಿ ಹೊನ್ನೂರು ಸ್ವಾಮಿ, ಹಾಗೂ ಚಾಲಕ ನಾಗರಾಜ ತಿಳಿಸಿದ್ದಾರೆ.
Raichur: ಮನೆಯಲ್ಲಿನ ಎಸಿ ಶಾರ್ಟ್ ಸಕ್ಯೂಟ್ ನಿಂದ ಸ್ಫೋಟ, ಮಂಡ್ಯದ ಮೂವರು ಸಜೀವ ದಹನ
ಮಹಿಳೆ ಅಬಲೆಯಲ್ಲ ಸಬಲೆ: ಅಕ್ಕಮಹಾದೇವಿ
ಗಂಗಾವತಿ : ಇಂದಿನ ಮಹಿಳೆಯರು ಎಲ್ಲ ರಂಗಗಳಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸುವ ಮೂಲಕ ಪುರುಷರಿಗೆ ಸರಿ ಸಮಾನರಾಗಿದ್ದಾರೆ ಎಂದು ನ್ಯಾಯವಾದಿ ಅಕ್ಕಮಹಾದೇವಿ ಹೇಳಿದರು. ಹಿರೇಜಂತಕಲ್ 29ನೇ ವಾರ್ಡ್ ಬಸವ ಭವನದಲ್ಲಿ ಶ್ರೀನಿಮಿಷಾಂಭ ಮತ್ತು ಶ್ರೀವರಮಹಾಲಕ್ಷ್ಮೇ ಮಹಿಳಾ ಸ್ವ ಸಹಾಯ ಸಂಘದಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈಗಿನ ಕಾಲದಲ್ಲಿ ಮಹಿಳೆಯರು ಉನ್ನತ ಅಧಿಕಾರಿ, ರಾಜಕಾರಣ ಸೇರಿದಂತೆ ಎಲ್ಲ ರಂಗದಲ್ಲೂ ಅಪ್ರತಿಮ ಸಾಧನೆ ಮಾಡಿ, ಪುರುಷ ಜತೆಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಆಶಾ ಕಾರ್ಯಕರ್ತೆ ಕೆ.ಲಲಿತಾ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿ ಮೇಲುಗೈ ಸಾಧಿಸಿದ್ದಾರೆ. ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ದೊಡ್ಡ ದೊಡ್ಡ ಹುದ್ದೆಯಲ್ಲಿ ಒಳ್ಳೆಯ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಆದಕಾರಣ ಹೆಣ್ಣಿನು ಭೂಮಿತಾಯಿಗೆ ಹೋಲಿಸಿದ್ದಾರೆ ಎಂದರು.
ಗರ್ಭಿಣಿಯರಿಗೆ ಗರ್ಭಸಂಸ್ಕಾರ ನೀಡಲು ವೈದ್ಯರಿಗೆ ಆರ್‌ಎಸ್‌ಎಸ್ ತರಬೇತಿ
ಈ ಸಂದರ್ಭದಲ್ಲಿ ನ್ಯಾಯವಾದಿ ವಿಜಯಲಕ್ಷ್ಮೇ, ಪದಾಧಿಕಾರಿ ದ್ರಾಕ್ಷಿಯಣಿ ಉಪ್ಪಾರ,ರೇಣುಕಾ ಸೊಕೇರ, ಶಾಂತಮ್ಮ ಸೊಕೇರ, ಲಕ್ಷ್ಮೀ,ಶ್ರೀದೇವಿ, ರೂಪಾ, ಅಯ್ಯಮ್ಮ, ರೇಖಾ, ಬೇಗಂ, ನೀಲಮ್ಮ ಸೇರಿದಂತೆ ಇತರರು ಇದ್ದರು.