ಒಂದು ಚಟ ಬಿಡೋಕೆ ನಾವು ಇನ್ನೊಂದನ್ನು ಪ್ರಾರಂಭಿಸ್ತೇವೆ. ಸಿಗರೇಟ್ ಹಾನಿಕಾರಕ ಅಂತ ವ್ಯಾಪಿಂಗ್ ಶುರು ಮಾಡಿದವರಿದ್ದಾರೆ. ಆದ್ರೆ ಈ ವ್ಯಾಪಿಂಗ್ ನೀವಂದುಕೊಂಡಷ್ಟು ಒಳ್ಳೆಯದಲ್ಲ. ಇದು ನಿಮ್ಮ ದೇಹವನ್ನು ಆಪತ್ತಿಗೆ ತಳ್ಳುತ್ತೆ ಹುಷಾರ್..
ನಮ್ಮ ದೇಹಕ್ಕೆ ಹಾನಿಕರ ಎಂಬುದು ತಿಳಿದ್ರೂ ನಾವು ಕೆಲ ಆಹಾರ, ಚಟವನ್ನು ಬಿಡೋದಿಲ್ಲ. ಅದ್ರಲ್ಲಿ ಮದ್ಯಪಾನ, ಧೂಮಪಾನ ಕೂಡ ಸೇರಿದೆ. ಸಿಗರೇಟ್ ನಮ್ಮ ಆರೋಗ್ಯವನ್ನು ನಿಧಾನವಾಗಿ ಹಿಂಡುತ್ತದೆ. ಒಮ್ಮೆ ಅಂಟಿಕೊಂಡ ಈ ಚಟ ಬಿಡೋದು ಕಷ್ಟ. ಸಿಗರೇಟ್ ಆರೋಗ್ಯಕ್ಕೆ ಅಪಾಯಕಾರಿ ಎಂಬ ಕಾರಣಕ್ಕೆ ಕೆಲವರು ಸಿಗರೇಟ್ ಬದಲು ವ್ಯಾಪಿಂಗ್ ಶುರು ಮಾಡಿದ್ದಾರೆ. ವ್ಯಾಪಿಂಗ್ ಅಂದ್ರೆ ಆವಿಯ ಸೇವನೆಯಾಗಿದೆ.
ಇ – ಸಿಗರೇಟ್ (E Cigarette) ಮಾರುಕಟ್ಟೆಗೆ ಪ್ರವೇಶ ಮಾಡ್ತಿದ್ದಂತೆ ಇದು ಸಿಗರೇಟ್ ಜಾಗವನ್ನು ಪಡೆಯಲಿದೆ ಎಂದು ಎಲ್ಲರೂ ಭಾವಿಸಿದ್ದರು. ಸಿಗರೇಟ್ ಬದಲು ಇ – ಸಿಗರೇಟ್ ಬಳಕೆ ಮಾಡುವುದು ಉತ್ತಮವೆಂದು ಅನೇಕರು ನಂಬುತ್ತಾರೆ. ವ್ಯಾಪಿಂಗ (Vaping) ನ್ನು ಇಷ್ಟಪಡ್ತಾರೆ. ಆದ್ರೆ ಇದು ಕೂಡ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಸಂಗತಿ ತಿಳಿದುಬಂದಿದೆ. ಅನೇಕ ಆರೋಗ್ಯ (Health) ಸಂಸ್ಥೆಗಳ ಸಂಶೋಧನೆಯು ವ್ಯಾಪಿಂಗ್ ಸುರಕ್ಷಿತವೆಂದು ತೋರುತ್ತದೆಯಾದ್ರೂ ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಹೇಳಿವೆ. ಈಗಿನ ದಿನಗಳಲ್ಲಿ ವ್ಯಾಪ್ ಹೆಚ್ಚಾಗ್ತಿದೆ. ಯುವಜನತೆಯಲ್ಲಿ ಇದನ್ನು ನಾವು ಹೆಚ್ಚಾಗಿ ಕಾಣ್ತಿದ್ದೇವೆ. ನಾವಿಂದು ವ್ಯಾಪಿಂಗ್ ನಿಂದ ಏನೆಲ್ಲ ನಷ್ಟವಿದೆ ಎಂಬುದನ್ನು ನಿಮಗೆ ಹೇಳ್ತೇವೆ.
Health Tips: ಕಿಡ್ನಿ ಸ್ಟೋನ್ ನಿವಾರಿಸಲು ಡಯಟ್ ನಲ್ಲಿ ಈ ಆಹಾರ ಸೇವಿಸಿ
ಮಕ್ಕಳಲ್ಲಿ ಹೆಚ್ಚಾಗಿದೆ ವ್ಯಾಪಿಂಗ್ : ಈಗಿನ ಮಕ್ಕಳು ವ್ಯಾಪಿಂಗ್ ಮೊರೆ ಹೋಗ್ತಿದ್ದಾರೆ. ಇ – ಸಿಗರೇಟ್ ಖರೀದಿ ಹೆಚ್ಚಾಗಿದೆ. ಮಕ್ಕಳು ಅಂಗಡಿಗೆ ಹೋಗಿ ತಾವೇ ಖರೀದಿ ಮಾಡ್ತಿಲ್ಲ. ಆನ್ಲೈನ್ ಮೂಲಕ ಇಲ್ಲವೆ ಮನೆ ಕೆಲಸದವರ ಸಹಾಯ ಪಡೆದು ಇದನ್ನು ಖರೀದಿ ಮಾಡ್ತಿವೆ ಎಂದು ಕೆಲ ವರದಿ ಹೇಳಿದೆ. 3 ಸಾವಿರಕ್ಕಿಂತ ಕಡಿಮೆ ಬೆಲೆಗೆ ಇದು ಸಿಗ್ತಿರುವ ಕಾರಣ ಇದನ್ನು ಸಾಮಾನ್ಯರು ಆರಾಮವಾಗಿ ಖರೀದಿ ಮಾಡ್ತಿದ್ದಾರೆ.
ಸಿಗರೇಟ್ ವ್ಯಾಪಿಂಗ್ ನಿಂದ ಇದೆ ಇಷ್ಟೆಲ್ಲ ನಷ್ಟ :
ಶ್ವಾಸಕೋಶದ ಸಮಸ್ಯೆ : ವ್ಯಾಪಿಂಗ್ ಶ್ವಾಸಕೋಶದಲ್ಲಿ ಉರಿಯೂತವನ್ನು ಉಂಟುಮಾಡುವ ಸಾಧ್ಯತೆಯಿದೆ. ಇದು ದೀರ್ಘ ಸಮಯದ ನಂತ್ರ ನಮ್ಮ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ. ವಾಪಿಂಗ್ ಅನ್ನು ಆನಂದಿಸುವ ಜನರು ಬ್ರಾಂಕೈಟಿಸ್, ಅಸ್ತಮಾದಂತಹ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚು ಎಂದು ತಜ್ಞರು ಹೇಳ್ತಾರೆ.
ನಿಕೋಟಿನ್ ಚಟ : ಬಹುತೇಕ ಎಲ್ಲಾ ವೇಪ್ ದ್ರವಗಳು ನಿಕೋಟಿನ್ ಅನ್ನು ಹೊಂದಿರುತ್ತವೆ. ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ವ್ಯಸನಕಾರಿ ವಸ್ತುವಾಗಿದೆ. ಪ್ರತಿದಿನ ನಿರಂತರವಾಗಿ ವ್ಯಾಪಿಂಗ್ ಮಾಡುವುದರಿಂದ ನಿಕೋಟಿನ್ ಚಟ ನಿಮಗೆ ಅಂಟಿಕೊಳ್ಳುತ್ತದೆ. ನಿಕೋಟಿನ್ ಇಲ್ಲದೆ ಇರೋದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ.
ಮಕ್ಕಳ ಸಾವಿಗೆ ಕಾರಣವಾಗುತ್ತಿರೋ ಅಡೆನೊವೈರಸ್… ಬಗ್ಗೆ ಒಂದಿಷ್ಟು ಇನ್ಫೋ
ಈ ಖಾಯಿಲೆಗೆ ತುತ್ತಾಗ್ತೀರಿ : ಕೆಲವು ವೇಪ್ ನಲ್ಲಿರುವ ಡಯಾಸೆಟೈಲ್ ಪದಾರ್ಥವು ಬ್ರಾಂಕಿಯೋಲೈಟಿಸ್ ಆಬ್ಲಿಟೆರನ್ಸ್ ಎಂದು ಕರೆಯಲ್ಪಡುವ ಶ್ವಾಸಕೋಶದ ಖಾಯಿಲೆಗೆ ಕಾರಣವಾಗುತ್ತದೆ. ಇದ್ರಲ್ಲಿ ನಿಮಗೆ ಉಸಿರಾಟದ ತೊಂದರೆ, ಉಬ್ಬಸ ಮತ್ತು ಎದೆಯ ಬಿಗಿತ ಕಾಣಿಸಿಕೊಳ್ಳುತ್ತದೆ. ಕಾಲಾಂತರದಲ್ಲಿ ಈ ರೋಗ ಹೆಚ್ಚಾಗುತ್ತದೆ.
ಹೃದಯ ರೋಗ ಸಮಸ್ಯೆ : ವ್ಯಾಪಿಂಗ್‌ಗೆ ನಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ವ್ಯಾಪಿಂಗ್ ದೇಹದಲ್ಲಿ ನಿಕೋಟಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ರಕ್ತದೊತ್ತಡದ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ವ್ಯಾಪಿಂಗ್ ನಿಂದ ರಕ್ತನಾಳಗಳು ಹಾನಿಗೊಳಗಾಗುತ್ತವೆ.
ಕ್ಯಾನ್ಸರ್ ಅಪಾಯವೂ ಇದ್ರಲ್ಲಿದೆ : ನಿಮ್ಮ ಆಹಾರ ಮತ್ತು ಜೀವನಶೈಲಿ ಮತ್ತು ನಿಮ್ಮ ಪ್ರದೇಶದಲ್ಲಿನ ಮಾಲಿನ್ಯದ ಮಟ್ಟವನ್ನು ಅವಲಂಬಿಸಿ ವ್ಯಾಪಿಂಗ್ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ನಿಮ್ಮ ದೇಹಕ್ಕೆ ಹೆಚ್ಚು ವಿಷಕಾರಿ ಮತ್ತು ರಾಸಾಯನಿಕ ಹೋದಾಗ ಇದು ಆರೋಗ್ಯವನ್ನು ಹದಗೆಡಿಸುತ್ತದೆ. ವ್ಯಾಪಿಂಗ್ ಅಭ್ಯಾಸವು ಬಾಯಿಯ ಕ್ಯಾನ್ಸರ್, ನಾಲಿಗೆಯ ಕ್ಯಾನ್ಸರ್ ಅಥವಾ ಗಂಟಲಿನ ಕ್ಯಾನ್ಸರ್ ಸೇರಿದಂತೆ ಕೆಲ ಕ್ಯಾನ್ಸರ್ ಗೆ ದಾರಿಯಾಗುತ್ತದೆ.