
ನವದೆಹಲಿ (ಮಾರ್ಚ್ 12, 2023): ‘ದೇಶದಲ್ಲಿ ಮೊದಲ ಬಾರಿ 2 ಸಾವಿಗೆ ಕಾರಣವಾಗಿರವ ಎಚ್3ಎನ್2 ಇನ್‌ಫ್ಲುಯೆಂಜಾ, ಗಮನಾರ್ಹ ವೈದ್ಯಕೀಯ ಸಮಸ್ಯೆ ಉಂಟು ಮಾಡುತ್ತಿದೆ. ವಿಶೇಷವಾಗಿ ಶ್ವಾಸಕೋಶದ ಸೋಂಕು ಉಂಟು ಮಾಡುತ್ತಿದೆ. ಕಳೆದ 6 ತಿಂಗಳಲ್ಲಿ ತನ್ನ ಮಾದರಿಯನ್ನು ಅದು ಅನಿರೀಕ್ಷಿತವಾಗಿ ಹಾಗೂ ಗಮನಾರ್ಹವಾಗಿ ಬದಲಾಯಿಸಿದೆ. ಇದಲ್ಲದೆ ಕೋವಿಡ್ ಲಾಕ್‌ಡೌನ್ ಕಾರಣ ಜನರ ರೋಗನಿರೋಧಕ ಶಕ್ತಿಯೂ ಕುಸಿದಿದೆ. ಇದು ಎಚ್3ಎನ್2 ಹಾವಳಿ ದಿಢೀರ್ ಏರಿಕೆಗೆ ಕಾರಣ ಇರಬಹುದು’ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕರ್ನಾಟಕ (Karnataka) ಹಾಗೂ ಹಾಸನದಲ್ಲಿ (Haasan) ಈ ಎಚ್3ಎನ್2 ವೈರಸ್ (H3N2 Virus) ಸಾವಿಗೆ ನಾಂದಿ ಹಾಡಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ತಜ್ಞ ಡಾ. ಧೀರೇನ್ ಗುಪ್ತಾ, ‘ಕಳೆದ 6 ತಿಂಗಳ ಅವಧಿಯಲ್ಲಿ ವೈರಸ್‌ನ ಮಾದರಿಯು ಗಮನಾರ್ಹವಾಗಿ ಮತ್ತು ಅನಿರೀಕ್ಷಿತವಾಗಿ ಬದಲಾಗಿದೆ. ಸಾಮಾನ್ಯವಾಗಿ, ಇನ್‌ಫ್ಲುಯೆಂಜಾವನ್ನು (Influenza) ಆಸ್ಪತ್ರೆಗೆ ಕಾರಣವಾಗುವ ನಂ.1 ವೈರಸ್ ಎಂದು ನಾವು ನಿರೀಕ್ಷಿಸುತ್ತೇವೆ. ಈ ಬಾರಿ ಎಚ್3ಎನ್2 ಎಂಬ ವೈರಸ್ ಉಪತಳಿಯು ಬಹಳಷ್ಟು ಉಸಿರಾಟದ ಸೋಂಕುಗಳಿಗೆ ಕಾರಣವಾಗಿದೆ’ ಎಂದರು.
ಇದನ್ನು ಓದಿ: ಎಚ್3ಎನ್2 ಕೂಡ ಕೋವಿಡ್ ರೀತಿಯಲ್ಲೇ ಹಬ್ಬುತ್ತೆ: ತಜ್ಞರ ಎಚ್ಚರಿಕೆ
ಎಚ್3ಎನ್2 ವೈರಸ್ ಸಾಮಾನ್ಯವಾಗಿ ಹಂದಿಗಳಲ್ಲಿ (Pigs) ಕಾಣಿಸಿಕೊಳ್ಳುತ್ತದೆ. ಈಗ ಮಾನವರಿಗೂ ಇದು ವ್ಯಾಪಿಸಿದೆ. ಈ ವೈರಸ್‌ಗಳು ಜನರಿಗೆ ಸೋಂಕು ತಗುಲಿಸಿದಾಗ ಅವುಗಳನ್ನು ವೇರಿಯಂಟ್ ವೈರಸ್‌ಗಳು ಎಂದು ಕರೆಯಲಾಗುತ್ತದೆ. ‘ಆದರೆ ಇದು ಕೋವಿಡ್‌ನಷ್ಟು (COVID) ಅಪಾಯಕಾರಿ ಆಗಲಾದರು ಎಂಬುದು ನಮ್ಮ ಭಾವನೆ. ಏಕೆಂದರೆ ಒಟ್ಟಾರೆ ಎಚ್3ಎನ್2 ಸೋಂಕಿತರಲ್ಲಿ ಆಸ್ಪತ್ರೆಗೆ ಒಟ್ಟು ದಾಖಲಾದವರು ಕೇವಲ ಶೇ. 5 ರಷ್ಟು ಮಾತ್ರ. ಆದರೂ ವೃದ್ಧರು, ಪೂರ್ವರೋಗಪೀಡಿತರಿಗೆ ಈ ಸೋಂಕಿನ ಬಗ್ಗೆ ಎಚ್ಚರದಿಂದ ಇರಬೇಕು, ಕೋವಿಡ್ ಕಾಲದಲ್ಲಿ ಯಾವ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತೋ ಆ ಕ್ರಮ ಜರಿಗಿಸಬೇಕು’ ಎಂದು ತಜ್ಞರು ಅಭಯ ನೀಡಿದರು.
ಹಿಂದೆ ಲಾಕ್‌ಡೌನ್ ಹಾಕಿದ್ದು ಹಾಗೂ ನಿರಂತರ ಮಾಸ್ಕ್ ಧರಿಸಿದ್ದು- ಈ ಎರಡೂ ಮುನ್ನೆಚ್ಚರಿಕೆಗಳ ಕಾರಣ ವೈರಸ್‌ಗಳು ಆಗ ಮುನುಷ್ಯರಿಗೆ ತಗುಲಿರಲಿಲ್ಲ. ಮನೆಯಿಂದ ಹೊರಬೀಳದೇ ವೈರಸ್‌ಗಳಿಗೆ ಎಕ್ಸ್‌ಪೋಸ್ ಆಗದ ಕಾರಣ ಮನುಷ್ಯನ ರೋಗನಿರೋಧಕ ಶಕ್ತಿ ಕೂಡ ಕುಂದಿದೆ. ಇದೂ ಕೂಡ ಈಗ ಎಚ್3ಎನ್2 ಹಾವಳಿ ದಿಢೀರ್ ಹೆಚ್ಚಾಗಲು ಕಾರಣ ಇರಬಹುದು ಎಂದರು.
ಇದನ್ನೂ ಓದಿ: H3N2 ವೃದ್ಧರು, ಮಕ್ಕಳಿಗೆ ಹೆಚ್ಚು ಅಪಾಯಕಾರಿ, ಸಾವಿನ ಪ್ರಮಾಣ ಕಡಿಮೆ, ಆದರೆ ನಿರ್ಲಕ್ಷ್ಯ ಬೇಡ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.