25 ಕೆಜಿ ತೂಕ ಇಳಿಸಿಕೊಂಡ ರಹಸ್ಯ ತಿಳಿಸಿದ ಫಿಟ್ನೆಸ್ ತರಬೇತುದಾರೆ...ಬೆಳಗ್ಗೆನೇ ಇಷ್ಟು ಮಾಡಿದ್ರೆ ಸಾಕಂತೆ

Published : May 03, 2025, 02:26 PM ISTUpdated : May 05, 2025, 12:21 PM IST
25 ಕೆಜಿ ತೂಕ ಇಳಿಸಿಕೊಂಡ ರಹಸ್ಯ ತಿಳಿಸಿದ ಫಿಟ್ನೆಸ್ ತರಬೇತುದಾರೆ...ಬೆಳಗ್ಗೆನೇ ಇಷ್ಟು ಮಾಡಿದ್ರೆ ಸಾಕಂತೆ

ಸಾರಾಂಶ

ತೂಕ ಇಳಿಕೆಗೆ ಫಿಟ್ನೆಸ್ ತರಬೇತುದಾರೆ ಅಮಕಾ ಐದು ಬೆಳಗಿನ ಅಭ್ಯಾಸಗಳನ್ನು ಸೂಚಿಸಿದ್ದಾರೆ. ಡಿಟಾಕ್ಸ್ ಪಾನೀಯ ಸೇವನೆ, ವ್ಯಾಯಾಮ, ಪ್ರೋಟೀನ್ ಭರಿತ ಉಪಹಾರ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ಧ್ಯಾನ ಇವು ಚಯಾಪಚಯ ವೃದ್ಧಿಸಿ, ಒತ್ತಡ ಕಡಿಮೆ ಮಾಡಿ, ತೂಕ ಇಳಿಕೆಗೆ ಸಹಾಯ ಮಾಡುತ್ತವೆ. 

ತೂಕ ಇಳಿಸಿಕೊಳ್ಳುವಿಕೆ ಬಹಳ ಸುಲಭದ ಕೆಲಸವಲ್ಲ, ನಾವು ಬಯಸಿದ ಶೇಪ್ ಬೇಕೆಂದರೆ ಕಷ್ಟಪಡಲೇಬೇಕು. ಇದಕ್ಕೂ ಬದ್ಧತೆ ಬೇಕು. ಸಾಕಷ್ಟು ಕಷ್ಟಪಡಬೇಕು. ವ್ಯಾಯಾಮ ಮತ್ತು ಆಹಾರ ಮುಖ್ಯವಾಗಿ ತೂಕ ಇಳಿಸುವ ಜರ್ನಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆಯಾದರೂ ನಾವು ಎದ್ದ ತಕ್ಷಣ ಕಾರ್ಯನಿರ್ವಹಿಸುವ ರೀತಿ ಮತ್ತು ಕೆಲವು ಆಯ್ಕೆಗಳು ನಾವು ತೂಕ ಇಳಿಸುವ ಪ್ರಯಾಣಕ್ಕೆ ಸಹಾಯ ಮಾಡುತ್ತವೆ. ಹೌದು, ಫಿಟ್ನೆಸ್ ತರಬೇತುದಾರೆ ಅಮಕಾ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡಿದ್ದು, ತಮ್ಮ ತೂಕ ಇಳಿಸಿದ ಪ್ರಯಾಣವನ್ನು ಇನ್ಸ್ಟಾಗ್ರಾಂನಲ್ಲಿ ನಿರಂತರವಾಗಿ ಶೇರ್ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅಮಕಾ ವೇಗವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ 5 ಬೆಳಗಿನ ಅಭ್ಯಾಸಗಳನ್ನು ತಮ್ಮ ಫಾಲೋವರ್ಸ್ ಜೊತೆ ಹಂಚಿಕೊಂಡಿದ್ದು, ಆ ಅಭ್ಯಾಸಗಳನ್ನು ನೀವು ಅಳವಡಿಸಿಕೊಂಡರೆ ಬಳಕುವ ಬಳ್ಳಿಯಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ.  

ಡಿಟಾಕ್ಸ್ ಡ್ರಿಂಕ್ಸ್ ಸೇವಿಸಿ 
ಮೊಟ್ಟ ಮೊದಲಿಗೆ ಬೇಗ ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಬೇಗ ಎದ್ದೇಳುವವರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಮತ್ತು ದಿನವಿಡೀ ಆರೋಗ್ಯಕರ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎದ್ದ ತಕ್ಷಣ, ಒಂದು ಲೋಟ ನೀರು ಕುಡಿಯಿರಿ. ಕೆಲವು ಪಾನೀಯಗಳನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಅಂದರೆ ನಿಮ್ಮ ದಿನವನ್ನು ಯಾವಾಗಲೂ ಬೆಳಗ್ಗೆ ಸ್ವಲ್ಪ ಶುಂಠಿ ತುರಿ, ನಿಂಬೆ ರಸ ಮತ್ತು ಚಿಟಿಕೆ ಮೆಣಸಿನ ಪುಡಿ (cayenne pepper)ಯಿಂದ ಕೂಡಿರುವ ಪಾನೀಯ ಅಥವಾ ನಿಂಬೆ/ಶುಂಠಿ ಚಹಾದೊಂದಿಗೆ ಪ್ರಾರಂಭಿಸಿ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು, ಟಾಕ್ಸಿನ್ ಹೊರಹಾಕಲು ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ. 

ತಪ್ಪದೇ ಮಾಡಿ ವ್ಯಾಯಾಮ 
ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ಬಹಳ ಬೇಗ ತೂಕ ಇಳಿಸಿಕೊಳ್ಳಬಹುದು. ಇದಕ್ಕಾಗಿ ಭಾರೀ ಕಷ್ಟಪಡಬೇಕಿಲ್ಲ. 20-30 ನಿಮಿಷಗಳ ಕಾಲ ಚುರುಕಾದ ನಡಿಗೆ, ಲಘು ಜಾಗಿಂಗ್ ಅಥವಾ ಸ್ಕಿಪ್ಪಿಂಗ್ ಮಾಡಬಹುದು. ನಿರಂತರವಾಗಿ ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹವು ಕೊಬ್ಬನ್ನು ಹೆಚ್ಚು ಪರಿಣಾಮಕಾರಿಯಾಗಿ ತೆಗೆಯಲು ಸಹಾಯ ಮಾಡುತ್ತದೆ ಮತ್ತು ರಕ್ತದ ಹರಿವು ಹೆಚ್ಚಾಗುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯು ಸಹ ಹೆಚ್ಚಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ಪ್ರತಿದಿನ ನೀವು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. 

ಅಧಿಕ ಪ್ರೋಟೀನ್ ಇರುವ ಉಪಹಾರ 
ಸಕ್ಕರೆ ಧಾನ್ಯಗಳ ಬದಲಿಗೆ ಹೆಚ್ಚಿನ ಪ್ರೋಟೀನ್ ಉಪಹಾರವನ್ನು ಸೇವಿಸಿ. ಸಕ್ಕರೆ ಧಾನ್ಯಗಳು ನಿಮ್ಮ ದೇಹದಲ್ಲಿ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗಬಹುದು, ಇದು ದಿನವಿಡೀ ಅತಿಯಾಗಿ ತಿಂಡಿ ತಿನ್ನಲು ಕಾರಣವಾಗಬಹುದು. ಆದ್ದರಿಂದ ದಿನದ ಮೊದಲ ಆಹಾರವಾಗಿ ಹೆಚ್ಚಿನ ಪ್ರೋಟೀನ್ ತಿಂಡಿ ಸೇವಿಸುವುದರಿಂದ ಹೆಚ್ಚು ಗಂಟೆಗಳ ಕಾಲ ಹೊಟ್ಟೆ ತುಂಬಿದ ಭಾವನೆ ಇರುತ್ತದೆ. ಹಸಿವಾಗುವ ಹಂಬಲ ನಿವಾರಿಸುತ್ತದೆ ಮತ್ತು ಒಳ್ಳೆಯ ಮಸಲ್ಸ್  ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ 
ಯಾವಾಗಲೂ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ. ಏಕೆಂದರೆ ಇದು ನಿಮ್ಮ ವಿಟಮಿನ್ ಡಿ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ. ಆದ್ದರಿಂದ ನೈಸರ್ಗಿಕ ಸೂರ್ಯನ ಬೆಳಕಿನಲ್ಲಿ 10-15 ನಿಮಿಷಗಳನ್ನು ಕಳೆಯಿರಿ.

ಧ್ಯಾನ ಮಾಡಿ 
ಇದು ದೇಹದಲ್ಲಿನ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ನಿದ್ರೆಯ ಚಕ್ರ ಮತ್ತು ದೇಹದ ಸಿರ್ಕಾಡಿಯನ್ ಲಯವನ್ನು ಮತ್ತಷ್ಟು ಸಾಮಾನ್ಯಗೊಳಿಸುತ್ತದೆ. ಕಡಿಮೆ ಒತ್ತಡದ ಮಟ್ಟ ವೇಗವಾಗಿ ಕೊಬ್ಬು ನಷ್ಟಕ್ಕೆ ಮತ್ತು ಹೆಚ್ಚು ಮೊಟಿವೇಟ್ ಆಗಲು ಸಹಾಯ ಮಾಡುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ
ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?