
ಗೊರಕೆಯು ನಿದ್ರೆಗೆ ಅಡ್ಡಿಪಡಿಸುವುದಲ್ಲದೆ, ನಿಮ್ಮ ಸಂಗಾತಿ ಅಥವಾ ಕುಟುಂಬಕ್ಕೂ ಸಮಸ್ಯೆ ಉಂಟು ಮಾಡುತ್ತದೆ. ಕೆಲವೊಮ್ಮೆ, ಗೊರಕೆಯು ಸ್ಲೀಪ್ ಅಪ್ನಿಯಾ (Sleep apnea)ದಂತಹ ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ಆದರೆ ಗುಡ್ ನ್ಯೂಸ್ ಎಂದರೆ ಕೆಲವು ಸರಳ ವ್ಯಾಯಾಮ ಮತ್ತು ಅಭ್ಯಾಸಗಳಲ್ಲಿನ ಬದಲಾವಣೆಗಳೊಂದಿಗೆ ಇದನ್ನು ನಿಯಂತ್ರಿಸಬಹುದು. ನ್ಯಾಚುರೊಪಥಿ ವೈದ್ಯೆ ಮತ್ತು ಸಂಶೋಧಕಿ ಜನೈನ್ ಬೌರಿಂಗ್ (Dr. Janine Bowring) ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಗೊರಕೆಯನ್ನು ಕಡಿಮೆ ಮಾಡಲು ಸಹಾಯಕವಾಗುವ ಐದು ಸರಳ ವ್ಯಾಯಾಮ ವಿವರಿಸಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳೋಣ.
ನಿಮ್ಮ ನಾಲಿಗೆಯನ್ನು ಬಾಯಿಯ ಮೇಲ್ಭಾಗಕ್ಕೆ ಅಂಟಿಸಿ ವಿಡಿಯೋದಲ್ಲಿ ತೋರಿಸಿರುವ ಹಾಗೆ ಕ್ಲಿಕ್ಕಿಂಗ್ ಶಬ್ದ ಮಾಡಿ. ಇದನ್ನು 10 ಬಾರಿ ಪುನರಾವರ್ತಿಸಿ. ಈ ವ್ಯಾಯಾಮವು ನಾಲಿಗೆ ಮತ್ತು ಬಾಯಿಯ ಸ್ನಾಯುಗಳನ್ನು ಬಲಪಡಿಸುತ್ತದೆ. ನಿದ್ರಿಸುವಾಗ ನಿಮ್ಮ ಬಾಯಿ ತೆರೆದಿರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಗೊರಕೆಯನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
A, E, I, O ಮತ್ತು U ಸ್ವರಗಳನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಿ. ಡಾ. ಜನೈನ್ ಅವರ ಪ್ರಕಾರ, ಈ ಶಬ್ದಗಳನ್ನು ಪದೇ ಪದೇ ಪುನರಾವರ್ತಿಸುವುದರಿಂದ ನಿಮ್ಮ ಗಂಟಲು ಮತ್ತು ಬಾಯಿಯಲ್ಲಿರುವ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ, ಇದು ನಿಮ್ಮ ವಾಯುಮಾರ್ಗಗಳನ್ನು ತೆರೆದಿಡಲು ಸಹಾಯ ಮಾಡುತ್ತದೆ ಮತ್ತು ಗೊರಕೆಯನ್ನು ಕಡಿಮೆ ಮಾಡುತ್ತದೆ.
ಹಾಡನ್ನು ಹಾಡುವುದು
ಇದೆಲ್ಲದರ ಹೊರತಾಗಿ ವೈದ್ಯರು ನೀವು ಹಾಡುವುದನ್ನು ಆನಂದಿಸುತ್ತಿದ್ದರೆ ಇದು ನಿಮಗೆ ಉತ್ತಮ ಸಲಹೆ ಎಂದು ಹೇಳುತ್ತಾರೆ. ಹಾಡುವುದರಿಂದ ನಿಮ್ಮ ಬಾಯಿ ಮತ್ತು ಗಂಟಲಿನ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಅವುಗಳ ನಮ್ಯತೆ ಹೆಚ್ಚಾಗುತ್ತದೆ. ಇದು ವಾಯುಮಾರ್ಗಗಳನ್ನು ತೆರೆದಿಡುತ್ತದೆ ಮತ್ತು ಗೊರಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಮ್ಯೂಯಿಂಗ್
ಮ್ಯೂಯಿಂಗ್ ಒಂದು ವಿಶೇಷ ಟೆಕ್ನಿಕ್ ಆಗಿದ್ದು, ಇದರಲ್ಲಿ ನಾಲಿಗೆಯಿಂದ ಅಂಗುಳಕ್ಕೆ ನಿಧಾನವಾಗಿ ಒತ್ತಡ ಹೇರಲಾಗುತ್ತದೆ. 10 ಸೆಕೆಂಡುಗಳ ಕಾಲ ಹಿಡಿದು 5 ಬಾರಿ ಪುನರಾವರ್ತಿಸಿ. ಇದು ಗೊರಕೆಯನ್ನು ನಿಯಂತ್ರಿಸಲು ಸಹಾಯ ಮಾಡುವುದಲ್ಲದೆ, ಮುಖದ ಆಕಾರ ಮತ್ತು ದವಡೆಯ ರೇಖೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಈ ರೀತಿ ಐದು ಬಾರಿ ಪುನರಾವರ್ತಿಸಿ
ಮೊದಲು ನಿಮ್ಮ ನಾಲಿಗೆಯ ತುದಿಯನ್ನು ಮೇಲಿನ ಹಲ್ಲುಗಳ ಹಿಂದೆ ಇರಿಸಿ. ನಿಧಾನವಾಗಿ ಅದನ್ನು ಬಾಯಿಯ ಮೇಲ್ಭಾಗದ ಉದ್ದಕ್ಕೂ ಹಿಂದಕ್ಕೆ ಜಾರಿಸಿ. ಇದನ್ನು ಐದು ಬಾರಿ ಪುನರಾವರ್ತಿಸಿ. ಇದು ನಾಲಿಗೆ ಮತ್ತು ಅಂಗುಳಿನ ಸ್ನಾಯು(Palatine muscle)ಗಳನ್ನು ಬಲಪಡಿಸುತ್ತದೆ ಮತ್ತು ನಿದ್ರೆಯ ಸಮಯದಲ್ಲಿ ನಿಮ್ಮ ನಾಲಿಗೆಯನ್ನು ಸರಿಯಾದ ಸ್ಥಾನದಲ್ಲಿಡಲು ಸಹಾಯ ಮಾಡುತ್ತದೆ.
ವೈದ್ಯರ ಪ್ರಕಾರ, ಪ್ರತಿದಿನ ಕೆಲವು ನಿಮಿಷಗಳ ಕಾಲ ಈ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ಗೊರಕೆ ಹೊಡೆಯುವುದು ಗಮನಾರ್ಹವಾಗಿ ಸುಧಾರಿಸುತ್ತದೆ. ಉತ್ತಮ ವಿಷಯವೆಂದರೆ ಇವುಗಳಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ ಮತ್ತು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಆದರೆ ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ ಅಥವಾ ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ.
Disclaimer: ಈ ಮೇಲ್ಕಂಡ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.