ಟ್ಯಾಟೂ ಇತ್ತೀಚೆಗೆ ಹೆಚ್ಚು ಟ್ರೆಂಡ್ ಆಗುತ್ತಿದೆ. ಯುವ ಸಮೂಹ ಹೆಚ್ಚಾಗಿ ಟ್ಯಾಟೂ ಹಿಂದೆ ಬಿದ್ದಿದೆ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಅತೀವ ಎಚ್ಚರಿಕೆ ವಹಿಸಬೇಕು. ಇದೀಗ ಕಡಿಮೆ ಬೆಲೆಯಲ್ಲಿ ಟ್ಯಾಟೂ ಹಾಕಿಸಿದ 32 ವರ್ಷದ ವ್ಯಕ್ತಿಯೊಬ್ಬರು ಸೆಪ್ಸಿಸ್ ಸಮಸ್ಯೆಗೆ ಸಿಲುಕಿ ಮೃತಪಟ್ಟಿದ್ದಾರೆ.
ಲಂಡನ್(ಜ.14) ಯುವ ಸಮೂಹಕ್ಕೆ ಟ್ಯಾಟೂ ಕ್ರೇಜ್ ಹೆಚ್ಚು. ಹಲವರು ಆಸಕ್ತಿ ಹಾಗೂ ಆತ್ಮವಿಶ್ವಾಸದ ಸಂಕೇತವಾಗಿ ಟ್ಯಾಟೂ ಬದಲಾಗಿದೆ. ಕ್ರೀಡಾಪಟುಗಳು, ಸೆಲೆಬ್ರೆಟಿಗಳು, ರೋಲ್ ಮಾಡೆಲ್‌ಗಳ ಟ್ಯಾಟೂ ನೋಡಿ ಪ್ರೇರಿತಗೊಂಡು ಹಲವರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಎಚ್ಚರಿಕೆ ಅಗತ್ಯ. ಹೆಚ್ಚಿನ ವಿಚಾರಗಳನ್ನು ಪರಿಶೀಲಿಸದೆ ಟ್ಯಾಟೂ ಹಾಕಿಸಿಕೊಂಡ 32 ವರ್ಷದ ವ್ಯಕ್ತಿ ನಿಧನರಾಗಿದ್ದಾರೆ. ಟ್ಯಾಟೂವಿನಿಂದ ಸೆಪ್ಸಿಸ್ ಸಮಸ್ಸೆ ಕಾಣಿಸಿಕೊಂಡಿದೆ. ಆರಂಭದಲ್ಲೇ ನಿರ್ಲಕ್ಷ್ಯವಹಿಸಿದ್ದ ಈತ ಬಳಿಕ ಚಿಕಿತ್ಸೆ ಪಡೆದುಕೊಂಡರೂ ಫಲಕಾರಿಯಾಗಲಿಲ್ಲ. ಪರಿಣಾಮ ಇಬ್ಬರು ಮಕ್ಕಳ ತಂದೆ ನಿಧನರಾಗಿದ್ದಾರೆ. ಈ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ.
32 ವರ್ಷದ ಬೆನ್ ಲ್ಯಾರಿಗೆ ಟ್ಯಾಟಾ ಹಾಕಿಸಿಕೊಳ್ಳಬೇಕೆಂಬ ಬಯಕೆಯಾಗಿದೆ. ಹೀಗಾಗಿ ಆನ್‌ಲೈನ್ ಮೂಲಕ ಕೆಲ ಟ್ಯಾಟೂ ಕೇಂದ್ರಗಳನ್ನು ಸಂಪರ್ಕಿಸಿದ್ದಾನೆ. ಬೆಲೆ, ಆಫರ್ ಎಲ್ಲವನ್ನೂ ಲೆಕ್ಕಾಚಾರ ಮಾಡಿ ಮಿಡಲ್ಸ್‌ಬರ್ಗ್‌ನ ಮೇಕ್‌ಶಿಫ್ಟ್ ಸ್ಟುಡಿಯೋದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ನಿರ್ಧರಿಸಿದ್ದ. ಕಾರಣ ಕಡಿಮೆ ಬೆಲೆ ಹಾಗೂ ಕೆಲ ಆಫರ್ ಕಾರಣ ಇಲ್ಲಿ ಬುಕಿಂಗ್ ಮಾಡಿದ್ದಾನೆ.
undefined
ವಿನಯ್ ಬಲಗೈಯಲ್ಲಿ ಇರುವುದು ಕುಂಭಮೇಳದ ಟ್ಯಾಟೂ; ಶಿವ, ನಂದಿ, ಅಘೋರಿ ನೋಡಿದ್ರಾ?
ಮೇಕ್‌ಶಿಫ್ಟ್ ಸ್ಟುಡಿಯೋಗೆ ತೆರಳಿತನಗೆ ಇಷ್ಟವಾದ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ದುರಂತ ಅಂದರೆ ಈ ಟ್ಯಾಟೂ ಆರ್ಟಿಸ್ಟ್‌ಗೆ ಪರವಾನಗೇ ಇರಲಿಲ್ಲ. ಈತ ಬಳಸು ನೀಡಲ್ಸ್ ಹಾಗೂ ಇತರ ಸಲಕರೆಗಳಿಂದ ಬೆನ್ ಲ್ಯಾರಿಗೆ ಸ್ಕಿನ್ ಸೋಂಕು ಕಾಣಿಸಿಕೊಂಡಿದೆ. ಆರಂಭದಲ್ಲಿ ನಿರ್ಲಕ್ಷ್ಯವಹಿಸಿದ್ದ ಬೆನ್ ಲ್ಯಾರಿ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಚಿಕಿತ್ಸೆ ಪಡೆಯಲು ಮುಂದಾಗಿದ್ದಾನೆ. ವೈದ್ಯರು ತಪಾಸಣೆ ನಡೆಸಿದಾಗ ಸೆಪ್ಸಿಸ್(ತೀವ್ರವಾದ ಸೋಂಕು) ಪತ್ತೆಯಾಗಿದೆ.
ರಕ್ತ ಹಾಗೂ ಚರ್ಮದಲ್ಲಿ ಸೋಂಕು(ಇನ್‌ಫೆಕ್ಷನ್) ಕಾಣಿಸಿಕೊಳ್ಳುವ ಮೂಲಕ ನಿಗದಿತ ಭಾಗ ಕೊಳೆಯಲು ಆರಂಭಿಸುತ್ತಿದೆ. ಇಷ್ಟೇ ಇಲ್ಲ ಬಹು ಅಂಗಾಗಗಳಿಗೆ ಈ ಸೋಂಕು ಹರಡಲಿದೆ. ಇದು ಅತ್ಯಂತ ಅಪಾಯಾಕಾರಿ. ರಕ್ತಕ್ಕೆ ಸೋಂಕು ಹರಡುವ ಕಾರಣ ಬದುಕಿ ಉಳಿಯುವ ಸಾಧ್ಯತೆಗಳು ವಿರಳ. ಇತ್ತ ಆಸ್ಪತ್ರೆ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಪರಿಣಾಮ ಬೆನ್ ಲ್ಯಾರಿ ನಿಧನರಾಗಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡ ಯುಕೆ ಪೊಲೀಸರು ಟ್ಯಾಟೂ ಕಲಾವಿದನ ಬಂಧಿಸಿದ್ದಾರೆ.
ಸಮಂತಾ ಸೊಂಟದ ಮೇಲಿದ್ದ ನಾಗಚೈತನ್ಯ 'ಟ್ಯಾಟೂ' ಮಾಯ!
ಏನಿದು ಸೆಪ್ಸಿಸ್?
ಸೆಪ್ಸಿಸ್ ಆರೋಗ್ಯ ಸಮಸ್ಯೆಯನ್ನು ಸುಲಭದಲ್ಲಿ ಹೇಳಬೇಕು ಎಂದರೆ ಸೆಪ್ಟಿಕ್. ಸೆಪ್ಸಿಸ್ ಗಂಭೀರ ಆರೋಗ್ಯ ಸಮಸ್ಯೆ. ದೇಹದಲ್ಲಿ ಸೆಪ್ಸಿಸ್ ಬ್ಯಾಕ್ಟಿರಿಯಾವೂ ದೇಹದ ಬಹು ಅಂಗಾಗಳನ್ನು ವೈಫಲ್ಯಗೊಳಿಸುತ್ತದೆ. ತೀವ್ರವಾದ ಉರಿಯೂತದಿಂದ ಆರಂಭಗೊಳ್ಳುವ ಈ ಕಾಯಿಲೆ, ಜೀವಕ್ಕೆ ಸಂಚಕಾರ ತರಲಿದೆ. ಸೆಪ್ಟಿಸಿಮಿಯಾ, ಸೆಪ್ಸಿಸ್ ಸಿಂಡ್ರೋಮ್ ಸೇರಿದಂತೆ ಕೆಲ ವೈದ್ಯಕೀಯ ಹೆಸರುಗಳು ಈ ಕಾಯಿಲಿಗಿದೆ.
ಬ್ಯಾಕ್ಟಿಯಾ ರಕ್ತದಲ್ಲಿ ಸೇರಿಕೊಳ್ಳುವ ಮೂಲಕ ಅಪಾಯದ ಪ್ರಮಾಣವನ್ನು ಹೆಚ್ಚಿಸಲಿದೆ. ಮಕ್ಕಳಲ್ಲಿ ಮೂಳೆಗಳಲ್ಲಿ ಬಹುಬೇಗನೆ ಕಾಣಿಸಿಕೊಳ್ಳಲಿದೆ. ಕರಳು, ಮೂತ್ರಪಿಂಡ, ಮೆದಳುನ ಒಳಪದರ, ಯಕೃತ್, ಶ್ವಾಸಕೋಶ, ಚರ್ಮಗಳನ್ನು ಬಹುಬೇಗನೆ ಈ ಬ್ಯಾಕ್ಟಿರಿಯಾ ಘಾಸಿಗೊಳಿಸುತ್ತದೆ.ಬಳಿಕ ಸಂಪೂರ್ಣ ದೇಹಕ್ಕೆ ಆವರಿಸಿಕೊಳ್ಳುತ್ತದೆ.