
ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕನೊಬ್ಬ ಅಪರೂಪದ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾನೆ. 'ಮೆದುಳು ತಿನ್ನುವ ಅಮೀಬಾ' ಈತನ ಸಾವಿಗೆ ಕಾರಣವಾಗಿದೆ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ. ಕೇರಳದ ಅಲ್ಲಪ್ಪುಝಾದ ಪೂಚಕ್ಕಲ್ ಎಂಬಲ್ಲಿನ ಗುರುದತ್ (15) ಸಾವಿಗೀಡಾದ ವಿದ್ಯಾರ್ಥಿ. ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂದು ಕರೆಯಲ್ಪಡುವ ಈ ಸೋಂಕು ನೈಗ್ಲೇರಿಯಾ ಫೌಲೆರಿಯಿಂದ ಉಂಟಾಗುತ್ತದೆ. ಪನವಳ್ಳಿ ಗ್ರಾಮದವನಾದ ಬಾಲಕ ಅಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ನೇಗ್ಲೆರಿಯಾ ಫೌಲೆರಿ (Naegleria fowleri) ಈ ಏಕಕೋಶ ಜೀವಿಯನ್ನು ಸಾಮಾನ್ಯವಾಗಿ 'ಮೆದುಳು ತಿನ್ನುವ ಅಮೀಬಾ' ಎಂದು ಕರೆಯಲಾಗುತ್ತದೆ. ಈ ಅಮೀಬಾದಿಂದಾಗಿ ಕಳೆದ ಭಾನುವಾರ ಬಾಲಕ ಅಸ್ವಸ್ಥಗೊಂಡಿದ್ದ. ಬಾಲಕನಿಗೆ (Boy) ತೀವ್ರ ಜ್ವರ ಕಾಣಿಸಿಕೊಂಡಿದ್ದ ಕಾರಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ (Treatment) ನೀಡಲಾಗಿತ್ತು. ನಂತರದ ದಿನಗಳಲ್ಲಿ ಅವರ ಪರಿಸ್ಥಿತಿ ಹದಗೆಟ್ಟಿತು ಮತ್ತು ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರಿಗೆ ಸೋಂಕು ಇರುವುದು ಪತ್ತೆಯಾಯಿತು.
ವ್ಯಾಕ್ ವ್ಯಾಕ್ ಅಂತ ದಿನಪೂರ್ತಿ ವಾಂತಿ ಮಾಡ್ತಿದ್ದ, ಗಂಟಲು ಟೆಸ್ಟ್ ಮಾಡಿದ ವೈದ್ಯರೇ ಬೆಚ್ಚಿಬಿದ್ರು!
ಈಜಲು ಹೋಗಿದ್ದಾಗ ದೇಹದೊಳಗೆ ಸೇರಿದ್ದ ಅಮೀಬಾ
ಬಾಲಕ ನದಿಯಲ್ಲಿ ಈಜಲು ಹೋಗಿದ್ದಾಗ ಈ ಅಮೀಬಾ ದೇಹಕ್ಕೆ (Body) ಪ್ರವೇಶ ಮಾಡಿತ್ತು ಎನ್ನಲಾಗಿದೆ. ಕೆರೆ, ನದಿ ಮುಂತಾದ ಸ್ಥಳದಲ್ಲಿ ಕಂಡು ಬರುವ ಈ ಏಕಕೋಶ ಜೀವಿ ಮನುಷ್ಯನ ದೇಹವನ್ನು ಪ್ರವೇಶಿಸಿದ ಬಳಿಕ ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಉಂಟು ಮಾಡುವುದರಿಂದ ಸಾವಿಗೂ ಕಾರಣವಾಗುತ್ತದೆ.
ನೈಗ್ಲೇರಿಯಾ ಒಂದು ಅಮೀಬಾ, ಏಕಕೋಶೀಯ ಜೀವಿ, ಮತ್ತು ಅದರ ಜಾತಿಗಳಲ್ಲಿ ಒಂದಾದ ನೇಗ್ಲೇರಿಯಾ ಫೌಲೆರಿ ಮಾತ್ರ ಮಾನವರಿಗೆ ಸೋಂಕು ತಗುಲಿಸಬಹುದು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತಿಳಿಸಿದೆ. ಇದನ್ನು ಮೊದಲು 1965 ರಲ್ಲಿ ಆಸ್ಟ್ರೇಲಿಯಾದಲ್ಲಿ ಕಂಡುಹಿಡಿಯಲಾಯಿತು ಮತ್ತು ಬಿಸಿನೀರಿನ ಬುಗ್ಗೆಗಳು, ನದಿಗಳು ಮತ್ತು ಸರೋವರಗಳಂತಹ ಬೆಚ್ಚಗಿನ ಸಿಹಿನೀರಿನ ದೇಹಗಳಲ್ಲಿ ಸಾಮಾನ್ಯವಾಗಿ ಈ ಅಮೀಬಾ ಕಂಡುಬರುತ್ತದೆ. ಈ ಅಮೀಬಾ ಮೂಗಿನ ಮೂಲಕ ದೇಹಕ್ಕೆ ಪ್ರವೇಶ ಮಾಡಿದ ಬಳಿಕ ಮೆದುಳಿನ ಅಂಗಾಂಶಗಳಿಗೆ ಹಾನಿ ಮಾಡುವ ಮೂಲಕ ಅಸ್ವಸ್ಥಗೊಳಿಸುತ್ತದೆ. ಹೀಗಾದಾಗ ಸಾಮಾನ್ಯವಾಗಿ ಐದು ದಿನಗಳಲ್ಲಿ ಸಾಯುತ್ತಾರೆ. ಕೆಲವರು 18 ದಿನಗಳ ವರೆಗಷ್ಟೇ ಬದುಕಿರುತ್ತಾರೆ ಎನ್ನಲಾಗಿದೆ.
ಜೀವಂತ ಅಕ್ಟೋಪಸ್ ತಿನ್ನಲು ಮುಂದಾದ ಮಹಿಳೆ.. ಮುಂದೇನಾಯ್ತು? ವಿಡಿಯೋ
ಮೂಗಿನಿಂದ ಮೆದುಳಿಗೆ ಚಲಿಸಿ ಊತಕ್ಕೆ ಕಾರಣವಾದ ಅಮೀಬಾ, ಬಾಲಕ ಸಾವು
ಅಮೀಬಾವು ಮೂಗಿನಿಂದ ಮೆದುಳಿಗೆ ಚಲಿಸುತ್ತದೆ, ಅಲ್ಲಿ ಅದು ಮೆದುಳಿನ ಅಂಗಾಂಶವನ್ನು ನಾಶಪಡಿಸುತ್ತದೆ ಮತ್ತು ಮೆದುಳಿನ ಊತವನ್ನು ಉಂಟುಮಾಡುತ್ತದೆ. ಆರಂಭಿಕ ಲಕ್ಷಣಗಳು ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ. ನಂತರದ ಹಂತದ ಲಕ್ಷಣಗಳು ಗಟ್ಟಿಯಾದ ಕುತ್ತಿಗೆ, ಬದಲಾದ ಮಾನಸಿಕ ಸ್ಥಿತಿ , ಜನರು ಮತ್ತು ಸುತ್ತಮುತ್ತಲಿನ ಕಡೆಗೆ ಗಮನ ಕೊರತೆ, ರೋಗಗ್ರಸ್ತವಾಗುವಿಕೆಗಳು, ಭ್ರಮೆಗಳು ಮತ್ತು ಕೋಮಾ ಉಂಟಾಗುತ್ತದೆ.
ಕೆಲವು ಸಂದರ್ಭಗಳಲ್ಲಿ, ಜನರು ತಮ್ಮ ಮೂಗಿನ ಹೊಳ್ಳೆಗಳನ್ನು ಕಲುಷಿತ ನೀರಿನಿಂದ ಸ್ವಚ್ಛಗೊಳಿಸಿದಾಗ ಸೋಂಕು ತಗುಲಿರುವುದು ಕಂಡುಬಂದಿದೆ. ನೀಗ್ಲೇರಿಯಾ ಫೌಲೆರಿ ನೀರಿನ ಆವಿ ಅಥವಾ ಏರೋಸಾಲ್ ಹನಿಗಳ ಮೂಲಕ ಹರಡುವ ಯಾವುದೇ ಪುರಾವೆಗಳನ್ನು ವಿಜ್ಞಾನಿಗಳು ಕಂಡುಕೊಂಡಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.