Health Tips: ಇಯರ್‌ ಬಡ್ಸ್‌ನಿಂದ ಕಿವಿಗೆ ಶಾಶ್ವತ ಹಾನಿ, ಬಚಾವಾಗ್ಬೋದು ಹೇಗೆ?

Published : Jul 08, 2023, 07:00 AM IST
Health Tips: ಇಯರ್‌ ಬಡ್ಸ್‌ನಿಂದ ಕಿವಿಗೆ ಶಾಶ್ವತ ಹಾನಿ, ಬಚಾವಾಗ್ಬೋದು ಹೇಗೆ?

ಸಾರಾಂಶ

ಮ್ಯೂಸಿಕ್‌ ಕೇಳಲು, ಸಿನಿಮಾ ನೋಡಲು ಎಲ್ಲದಕ್ಕೂ ಇಂದು ಮೊಬೈಲ್‌, ಲ್ಯಾಪ್‌ ಟಾಪ್‌, ಟ್ಯಾಬ್‌ ಬಳಕೆ ಮಾಡುವವರೇ ಹೆಚ್ಚು. ಮತ್ತೊಬ್ಬರಿಗೆ ತೊಂದರೆಯಾಗಬಾರದು ಎಂದೋ ಅಥವಾ ಕೇಳಲು ಸುಲಭವಾಗುತ್ತದೆ ಎಂದೋ ಕಿವಿಗಳಿಗೆ ಇಯರ್‌ ಬಡ್ಸ್‌ ಅಥವಾ ಹೆಡ್‌ ಫೋನ್‌ ಮೂಲಕ ಕೇಳುವ ಟ್ರೆಂಡ್‌ ಎಲ್ಲೆಡೆ ಇದೆ. ಆದರೆ, ಹುಷಾರು, ಈ ಪದ್ಧತಿಯಿಂದ ಕಿವಿಗಳಿಗೆ ಶಾಶ್ವತ ಹಾನಿ ಆಗಬಹುದು. ಅದಕ್ಕಾಗಿ ಎಚ್ಚರಿಕೆ ಇರಲಿ.   

ದಿನದಲ್ಲಿ ವಿರಾಮದ ಸಮಯವನ್ನು ಕಳೆಯುವ ಮಾರ್ಗವೇ ಇಂದು ಸ್ಕ್ರೀನ್ ಗಳಾಗಿವೆ. ಹಿರಿಯರಿಂದ ಹಿಡಿದು ಯುವ ಮಂದಿ, ಮಕ್ಕಳವರೆಗೆ ಎಲ್ಲರೂ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ ಗಳನ್ನು ವೀಕ್ಷಿಸುವುದು ಸಾಮಾನ್ಯವಾಗಿದೆ. ಮಕ್ಕಳಿಗೆ ಕೆಲವು ಹೋಂ ವರ್ಕನ್ನೂ ಸಹ ಟ್ಯಾಬ್ ಗಳಲ್ಲಿ ಮಾಡುವ ಅವಕಾಶ ಇರುವುದರಿಂದ ಅವರ ಸ್ಕ್ರೀನ್ ಸಮಯ ಇನ್ನಷ್ಟು ಹೆಚ್ಚಾಗಿದೆ. ಬೆಳಗ್ಗೆ, ಸಂಜೆಯ ವಾಕ್ ಗೆಂದು ಪಾರ್ಕ್ ಗಳಿಗೆ ಬರುವ ಹಿರಿಯರು ಕೂಡ ತಮ್ಮ ತಮ್ಮ ಮೊಬೈಲ್ ಗಳಲ್ಲಿ ಹಾಡು ಕೇಳುವುದು ಸಾಮಾನ್ಯ. ಈ ಸಮಯದಲ್ಲೆಲ್ಲ ಮತ್ತೊಬ್ಬರಿಗೆ ತೊಂದರೆಯಾಗಬಾರದೆಂದು ಕಿವಿಗಳಿಗೆ ಇಯರ್ ಬಡ್ಸ್ ಬಳಕೆ ಮಾಡುವುದು ಎಲ್ಲೆಡೆ ಕಂಡುಬರುತ್ತದೆ. ಆದರೆ, ಈ ಅಭ್ಯಾಸದಿಂದ ನಿಧಾನವಾಗಿ ಕಿವಿಗಳು ತಮ್ಮ ಶ್ರವಣ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಅನುಕೂಲವೆಂದು ನಾವು ಬಳಕೆ ಮಾಡುವ ಇಯರ್ ಫೋನ್ ಗಳು ಕಿವಿಗಳಿಗೆ ಶಬ್ದ ಮಾಲಿನ್ಯವಾಗಿವೆ. ಕೇಳುವ ಸಾಮರ್ಥ್ಯದ ಮೇಲೆ ಶಬ್ದ ಮಾಲಿನ್ಯ ಅತ್ಯಂತ ಪರಿಣಾಮ ಬೀರುತ್ತದೆ. ವಾಹನಗಳ ಹಾರ್ನ್ ನಿಂದ ಹಿಡಿದು ಇತರ ಜೋರಾದ ಎಲ್ಲ ರೀತಿಯ ಸದ್ದುಗಳಂತೆಯೇ ಇಯರ್ ಫೋನ್ ಕೂಡ ನಮ್ಮ ಕಿವಿಗಳ ಮೇಲೆ ಪರಿಣಾಮ ಬೀರುತ್ತವೆ.

ಸುಧಾರಿಸಿಕೊಳ್ಳಲು ಸಮಯವಿಲ್ಲದಿದ್ದರೆ...

ಗದ್ದಲದಿಂದ ಶ್ರವಣ ಸಾಮರ್ಥ್ಯ ಕುಗ್ಗಬಹುದು ಅಥವಾ ಶಾಶ್ವತವಾಗಿ ಕಿವಿ ಕೇಳದಿರಬಹುದು. ಒಳಗಿವಿಯಲ್ಲಿರುವ ಸೂಕ್ಷ್ಮವಾದ, ಅತ್ಯಂತ ಸಣ್ಣದಾದ ಕೂದಲ ಕೋಶಗಳು ಕಿವಿಗಳಿಗೆ ಕೇಳುವ ಸಾಮರ್ಥ್ಯ ನೀಡುತ್ತವೆ. ಅವುಗಳನ್ನು ಪದೇ ಪದೆ ಅತಿಯಾಗಿ ಬಾಗಿಸುವುದರಿಂದ, ಜೋರಾದ ಗದ್ದಲಕ್ಕೆ ತೆರೆದುಕೊಳ್ಳುವುದರಿಂದ ಅವುಗಳ ಮೇಲೆ ಭಾರೀ ಪರಿಣಾಮ ಉಂಟಾಗುತ್ತದೆ. ಇಯರ್ ಬಡ್ಸ್, ಹೆಡ್ ಫೋನ್ ಯಾವುದನ್ನೇ ಬಳಕೆ ಮಾಡಿದರೂ ಇವುಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಪಟಾಕಿಯಂತಹ ಸದ್ದುಗಳಿಗೆ ಎದುರಾದ ಬಳಿಕ ಸುಧಾರಿಸಿಕೊಳ್ಳಲು ಇವುಗಳಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಅಷ್ಟು ಸಮಯ ದೊರೆಯದೇ ಮತ್ತೆ ಮತ್ತೆ ಒತ್ತಡಕ್ಕೆ ತುತ್ತಾಗುತ್ತಲೇ ಇದ್ದಾಗ ಇವು ಹಾನಿಗೆ ಒಳಗಾಗಿ ಕಾಯಮ್ಮಾಗಿ ಕೇಳುವ ಸಾಮರ್ಥ್ಯ ನಷ್ಟವಾಗಬಹುದು.

Healthy Food : ಮನೆಯಲ್ಲೇ ಬೋರ್ನ್ ವಿಟಾ ಮಾಡಬುಹದು, ಹೇಗೆ ಇಲ್ಲಿದೆ ನೋಡಿ

ಕಿವಿಗಳಲ್ಲಿರುವ ಸೂಕ್ಷ್ಮ ಕೂದಲುಗಳು ಹಾನಿಗೆ ಒಳಗಾಗಲು ಹೆಡ್ ಫೋನ್ ಅಥವಾ ಇಯರ್ ಬಡ್ ಗಳ ವಾಲ್ಯೂಮ್ ತೀರ ಹೆಚ್ಚಾಗಿರಬೇಕು ಎಂದೇನೂ ಇಲ್ಲ. ಹಲವಾರು ಪ್ರಕರಣಗಳಲ್ಲಿ, ನಿರಂತರವಾಗಿ ಮಧ್ಯಮ ಮಟ್ಟದ ಶಬ್ದದ ತರಂಗಗಳಿಗೆ ತೆರೆದುಕೊಂಡಾಗಲೂ ಅವು ಶಾಶ್ವತವಾಗಿ ಹಾನಿಗೆ ತುತ್ತಾಗಿರುವುದು ಕಂಡುಬಂದಿದೆ ಎನ್ನುತ್ತಾರೆ ಹಲವಾರು ತಜ್ಞರು.

100 ಕೋಟಿ ಜನ ಅಪಾಯದಲ್ಲಿ
ಹೊಸ ಅಧ್ಯಯನದ ಪ್ರಕಾರ, ಪ್ರಪಂಚದ ನೂರು ಕೋಟಿಗೂ ಅಧಿಕ ಯುವ ಜನ ಇಂದು ಶ್ರವಣ ಸಾಮರ್ಥ್ಯವನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಪ್ರತಿನಿತ್ಯ ಹೆಡ್ ಫೋನ್ ಅಥವಾ ಇಯರ್ ಬಡ್ ಗಳನ್ನು ದೀರ್ಘಕಾಲ ಬಳಕೆ ಮಾಡುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಸಮಯವೂ ಪ್ರಮುಖ
ಇಯರ್ ಬಡ್ ಅಥವಾ ಹೆಡ್ ಫೋನ್ ಗಳನ್ನು ಎಷ್ಟು ಸಮಯ ಕಿವಿಯಲ್ಲಿರಿಸಿಕೊಳ್ಳುತ್ತೇವೆ ಎನ್ನುವುದೂ ಮುಖ್ಯ. ಅವುಗಳನ್ನು ಕಿವಿಗೆ ಸಿಕ್ಕಿಸಿಕೊಂಡು, ಕಡಿಮೆ ವಾಲ್ಯೂಮ್ ಇಟ್ಟುಕೊಂಡರೆ ಸುರಕ್ಷಿತ ಎಂದು ಭಾವಿಸಬೇಕಿಲ್ಲ, ಇರಿಸಿಕೊಳ್ಳುವ ಸಮಯವೆಷ್ಟು ಎನ್ನುವುದು ಸಹ ಮುಖ್ಯವಾಗುತ್ತದೆ. ಉದಾಹರಣೆಗೆ, ದೀರ್ಘಕಾಲ ಜೋರಾದ ಮ್ಯೂಸಿಕ್ ಇರುವ ಸ್ಥಳದಲ್ಲಿರುವುದು ಕಿವಿಯ ಬಳಿ ಪಟಾಕಿ ಸ್ಫೋಟಿಸುವುದಷ್ಟೇ ಅಪಾಯಕಾರಿಯಾಗಿದೆ.

ಲಕ್ಷಣಗಳೇನು?

·        ಕಿವಿಯಲ್ಲಿ ರಿಂಗ್, ಭೋರ್ಗರೆದ, ಹಿಸ್ ಎನ್ನುವ ಶಬ್ದ ಕೇಳಿ ಬರುವುದು.
·        ಗಲಾಟೆ ಇರುವ ಸ್ಥಳದಲ್ಲಿ ಕೇಳಿಸಿಕೊಳ್ಳಲು ಕಷ್ಟವಾಗುವುದು.
·        ಕಿವಿ ಕಟ್ಟಿಕೊಂಡಿರುವ ಭಾವನೆ.
·        ಹಿಂದಿಗಿಂತ ಹೆಚ್ಚು ವಾಲ್ಯೂಮ್ ಅಗತ್ಯವಾಗುವುದು.

ಅಕ್ಕಿ ತೊಳೆದ ನೀರು ಎಸಿಬೇಡಿ, ಹಚ್ಚಿದ್ರೆ ಮುಖ ಹೇಗ್ ಹೊಳೆಯುತ್ತೆ ನೋಡಿ

ಹೇಗೆ ತಡೆಗಟ್ಟೋದು?
ಏನೇ ಸಮಸ್ಯೆ ಕಂಡುಬಂದರೂ ಪರೀಕ್ಷೆ ಮಾಡಿಸಬೇಕು. ಹಾನಿಯ ಪ್ರಮಾಣವನ್ನು ಅರಿಯಬೇಕು. ಹೆಚ್ಚು ವಾಲ್ಯೂಮ್ ಇರಿಸಿಕೊಳ್ಳದೇ, ಕೆಲವೇ ಸಮಯ ಕೇಳಿಸಿಕೊಳ್ಳುವುದು ಉತ್ತಮ ಮಾರ್ಗ.  ತಜ್ಞರ ಪ್ರಕಾರ, ೬೦ ನಿಮಿಷಗಳ ನಿಯಮ ಅನುಸರಿಸಬೇಕು. ಅಂದರೆ, ಶೇ.೬೦ಕ್ಕಿಂತ ಹೆಚ್ಚು ವಾಲ್ಯೂಮ್‌ ಹಾಗೂ ೬೦ ನಿಮಿಷಕ್ಕಿಂತ ಹೆಚ್ಚು ಸಮಯ ಇಯರ್‌ ಬಡ್ಸ್‌ ಇರಿಸಿಕೊಳ್ಳಬಾರದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಟ್ಟ, ನೀಳ ಕೂದಲು ನಿಮ್ಮದಾಗಲು ಖರ್ಜೂರದ ಜೊತೆ ತುಪ್ಪ ಬೆರೆಸಿ….. ನೋಡಿ
BP control tips: ಪ್ರತಿದಿನ ಈ ರೀತಿ ಮಾಡಿದ್ರೆ ನಿಮ್ಮ ಬಿಪಿ ಕಂಟ್ರೋಲ್‌ನಲ್ಲಿರುತ್ತೆ