ಹಿಂದಿನ ಕಾಲದಲ್ಲೆಲ್ಲಾ ಮಕ್ಕಳು ಮೋಜಿಗಾಗಿ ಖುಷಿ ನೀಡುವ ಆಟಗಳನ್ನು ಆಡ್ತಾ ಇದ್ರು. ಆದ್ರೆ ಇವತ್ತಿನ ಕಾಲದ ಮಕ್ಕಳೋ ಬರೀ ಡೇಂಜರಸ್ ಗೇಮ್‌ಗಳಲ್ಲೇ ಮುಳುಗಿರ್ತಾರೆ, ಅಷ್ಟೂ ಸಾಲ್ದು ಅಂತ ಚಾಲೆಂಜ್ ಬೇರೆ ಹಾಕ್ಕೊಂಡು ಗೇಮ್ ಆಡ್ತಾರೆ. ಹಾಗೆಯೇ ಇಲ್ಲೊಬ್ಬ ಬಾಲಕ ಚಾಲೆಂಜ್ ಹಾಕಿ ಆಟವಾಡಲು ಹೋಗಿ ಸಾವನ್ನಪ್ಪಿದ್ದಾನೆ.
ಅಮೇರಿಕಾ: ಹಿಂದಿನ ಕಾಲದಲ್ಲೆಲ್ಲಾ ಮಕ್ಕಳ ಆಟದಲ್ಲಿ ಮೋಜಿರುತ್ತಿತ್ತು. ಅಷ್ಟೇ ಅಲ್ಲ ಶಿಸ್ತು ಸಹ ಇರುತ್ತಿತ್ತು. ಆಟವನ್ನು ಆಟದಂತೆ ನೋಡಿ ಖುಷಿಯಿಂದ ಕಾಲ ಕಳೆಯುತ್ತಿದ್ರು. ಆದ್ರೆ ಇವತ್ತಿನ ಕಾಲದ ಮಕ್ಕಳೋ ಆಟವನ್ನು ಸಹ ಚಾಲೆಂಜಿಂಗ್ ಆಗಿ ನೋಡ್ತಾರೆ. ಡೇಂಜರಸ್ ಆಟಗಳನ್ನು ನೋಡ್ತಾರೆ. ಸವಾಲ್‌ಗಳನ್ನು ಹಾಕಿ ಗದ್ದೇ ಗೆಲ್ಲಬೇಕು ಅನ್ನೋ ಷರತ್ತನ್ನೊಡ್ಡಿ ಆಟವಾಡ್ತಾರೆ. ಹೀಗೆ ಟಿಕ್ ಟಾಕ್ ಸವಾಲು ಸ್ವೀಕರಿಸಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿರುವುದು ವರದಿಯಾಗಿದೆ.
ಸೋಷಿಯಲ್ ಮೀಡಿಯಾ ಬಂದ್ಮೇಲೆ ಎಲ್ಲವೂ ಬದಲಾಗಿದೆ. ಜನರು ತಮಗರಿವಿಲ್ಲದೆಯೇ ಹಲವು ಅಪಾಯಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ವೀಡಿಯೋ ವೈರಲ್ ಮಾಡುವುದು, ಟ್ರೆಂಡ್ ಮಾಡುವುದು, ಚಾಲೆಂಜ್ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಒಬ್ಬರು ಚಾಲೆಂಜ್ ಹಾಕಿದರೆ, ಇನ್ನೊಬ್ಬರು ಆ ಚಾಲೆಂಜ್‌ನ್ನು ಸ್ವೀಕರಿಸಿ ಗೆಲ್ಲಲು ಸೂಚಿಸಲಾಗುತ್ತದೆ. ಹಾಗೆಯೇ ಟಿಕ್‌ಟಾಕ್‌ನ ಸವಾಲ್ ಸ್ವೀಕರಿಸಲು ಹೋದ ಬಾಲಕ (Boy) ಮೃತಪಟ್ಟಿದ್ದಾನೆ. ಜಾಕೋಬ್ ಸ್ಟೀವನ್ಸ್ (13) ಎನ್ನುವ ಬಾಲಕ ಹೀಗೆ ಸವಾಲನ್ನು (Challenge) ಸ್ವೀಕರಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಬೆಟ್‌ನಲ್ಲಿ ಗೆಲ್ಲಬೇಕೆಂದು ಬೇಕಾಬಿಟ್ಟಿ ಐರನ್ ಟ್ಯಾಬ್ಲೆಟ್ ತಿಂದ ಬಾಲಕಿ ಸಾವು
ಜಾಕೋಬ್ ಸ್ಟೀವನ್ಸ್ ಇತ್ತೀಚೆಗೆ ತನ್ನ ಸ್ನೇಹಿತರ ಜೊತೆ ಚಾಲೆಂಜ್ ಸ್ವೀಕರಿಸುವ ಟ್ರೆಂಡ್ ನಲ್ಲಿ ಭಾಗಿಯಾಗಿದ್ದಾನೆ. ಸ್ನೇಹೀತರು ಸವಾಲು ಹಾಕಿದ್ದರೆಂದು ಜಾಕೋಬ್ ಸ್ಟೀವನ್ಸ್ 12 -14 ಬೆನಾಡ್ರಿಲ್ ಮಾತ್ರೆ ( ನಿದ್ರೆಬರಿಸುವ ಮಾತ್ರೆ) ಯನ್ನು ಸೇವಿಸಿದ್ದಾನೆ. ಇದು ಓವರ್ ಡೋಸ್ ಆಗಿ ಬಾಲಕ ಮೃತಪಟ್ಟಿದ್ದಾನೆ. ಕೂಡಲೇ ಆತನನ್ನು ಪೋಷಕರು ಆಸ್ಪತ್ರೆಗೆ (Hospital) ದಾಖಲಿಸಿದ್ದಾರೆ. ವೈದ್ಯರು ಸುಮಾರು ಒಂದು ವಾರದ ವರೆಗೆ ಚಿಕಿತ್ಸೆ (Treatment) ನೀಡಿದ್ದಾರೆ. ಆರು ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದ ಬಾಲಕ ಕೊನೆಗೂ ಮೃತಪಟ್ಟಿದ್ದಾನೆ.
ಈ ರೀತಿಯ ಘಟನೆ ಯಾರ ಜೀವನದಲ್ಲೂ ಆಗಬಾರದೆಂದು ಬಾಲಕನ ತಂದೆ ಜಸ್ಟಿನ್ ಸ್ಟೀವನ್ಸ್ ಹೇಳುತ್ತಾರೆ. ನನ್ನ ಮೊಮ್ಮಗನಿಗಾದ ಸ್ಥಿತಿ ಬೇರೆ ಯಾವುದೇ ಮಗುವಿಗೆ ಆಗುವುದು ಬೇಡ ಎಂದು ಬಾಲಕನ ಅಜ್ಜಿ ಹೇಳುತ್ತಾರೆ.
ನಿದ್ದೆ ಮಾತ್ರೆ ಸೇವಿಸೋ ಅಭ್ಯಾಸದಿಂದ ಅಪಾಯನೇ ಹೆಚ್ಚು
ಬದಲಾಗುತ್ತಿರುವ ಜೀವನಶೈಲಿ, ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ನಿದ್ರಾಹೀನತೆಯ ಸಮಸ್ಯೆ (sleeping problem) ಕಾಡುತ್ತಿದೆ. ಹೆಚ್ಚಿನ ಜನರು ಈ ಸಮಸ್ಯೆಗೆ ಪರಿಹಾರವಾಗಿ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನಿಯಮಿತವಾಗಿ ನಿದ್ರೆ ಮಾತ್ರೆಗಳನ್ನು ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹಾಗಿದ್ರೆ ನಿದ್ದೆ ಮಾತ್ರೆ ಸೇವಿಸುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
ಸೆಕ್ಸ್‌ನಲ್ಲಿ ಖುಷಿ ಹೆಚ್ಚಾಗಲು ವಯಾಗ್ರ ಸೇವನೆ, ರಕ್ತ ಹೆಪ್ಪುಗಟ್ಟಿ ವ್ಯಕ್ತಿ ಸಾವು!
ರಕ್ತ ಹೆಪ್ಪುಗಟ್ಟುವ ಸಮಸ್ಯೆ: ನಿದ್ರೆ ಮಾತ್ರೆಗಳ ನಿರಂತರ ಸೇವನೆಯು ನರಮಂಡಲದ ಮೇಲೆ ಪರಿಣಾಮ ಬೀರಬಹುದು. ನಿಯಮಿತವಾಗಿ ನಿದ್ರೆ ಮಾತ್ರೆಗಳನ್ನು ಸೇವಿಸುತ್ತಿದ್ದರೆ, ಅದು ನಿಮ್ಮ ನರಮಂಡಲವನ್ನು ದುರ್ಬಲಗೊಳಿಸುತ್ತದೆ, ಇದು ನರವ್ಯೂಹಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಇದಲ್ಲದೆ, ಈ ಕಾರಣದಿಂದಾಗಿ, ರಕ್ತನಾಳಗಳಲ್ಲಿ (ರಕ್ತನಾಳಗಳು) ರಕ್ತ ಹೆಪ್ಪುಗಟ್ಟುವಿಕೆ ಸಹ ರೂಪುಗೊಳ್ಳುತ್ತದೆ.
ಹೃದಯಾಘಾತದ ಅಪಾಯ: ನಿದ್ರೆಯ ಔಷಧಿಗಳನ್ನು ಆಗಾಗ್ಗೆ ಸೇವಿಸುವುದರಿಂದ, ಹೃದಯಾಘಾತದ ಅಪಾಯವೂ ಗಮನಾರ್ಹವಾಗಿ ಹೆಚ್ಚಾಗುತ್ತದೆ. ನಿದ್ರೆ ಮಾತ್ರೆಗಳಲ್ಲಿರುವ ಜೋಪಿಡೆಮ್ ಎಂಬ ಅಂಶವು ಹೃದ್ರೋಗಗಳಿಗೆ ಕಾರಣವಾಗಬಹುದು. ಅಲ್ಲದೆ, ಈ ಔಷಧಿಗಳಿಂದಾಗಿ, ಹೃದಯದ ಕಾರ್ಯನಿರ್ವಹಣೆಯ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ.
ನೆನಪಿನ ಶಕ್ತಿ ಕಡಿಮೆಯಾಗುತ್ತದೆ: ದೀರ್ಘಕಾಲದವರೆಗೆ ನಿದ್ರೆ ಮಾತ್ರೆಗಳನ್ನು ತಿನ್ನುವುದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಅನೇಕ ಹಾನಿಯನ್ನುಂಟು ಮಾಡುತ್ತದೆ. ಪ್ರತಿದಿನ ನಿದ್ರೆ ಮಾತ್ರೆ ತಿನ್ನುವುದು ನಿಮ್ಮ ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದರಿಂದಾಗಿ ನಿಮ್ಮ ಜ್ಞಾಪಕ ಶಕ್ತಿ ದುರ್ಬಲವಾಗಬಹುದು.
ಕೋಮಾ ಸ್ಥಿತಿಗೆ ಹೋಗುವ ಅಪಾಯ: ಪ್ರತಿದಿನ ಹೆಚ್ಚು ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದು ನಿಮ್ಮನ್ನು ಕೋಮಾಗೆ (coma stage) ಹೋಗಬಹುದು. ವಾಸ್ತವವಾಗಿ, ಹೆಚ್ಚು ಮಾತ್ರೆ ನಿರಂತರವಾಗಿ ತಿನ್ನುವುದು ಕೋಮಾಗೆ ಹೋಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದುದರಿಂದ ಇದನ್ನು ಅವಾಯ್ಡ್ ಮಾಡೋದು ಉತ್ತಮ.