ತಂಬಾಕಿನ ಜೊತೆಗೆ ಮದ್ಯಪಾನ, ಬೊಜ್ಜು ಮತ್ತು ಗರ್ಭಕೋಶದ ಕ್ಯಾನ್ಸರ್‌ನಿಂದಾಗಿ ಒಟ್ಟಾರೆ 20 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ನವದೆಹಲಿ (ನವೆಂಬರ್ 18, 2023): ತಂಬಾಕು ಸೇವನೆಯಿಂದಾಗಿ ಉಂಟಾಗುತ್ತಿರುವ ಕ್ಯಾನ್ಸರ್‌ನಿಂದಾಗಿ ಭಾರತ ಸೇರಿದಂತೆ 7 ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲಗಳಲ್ಲಿ ಪ್ರತಿ ವರ್ಷ 13 ಲಕ್ಷ ಜನರು ಮೃತಪಡುತ್ತಿದ್ದಾರೆ ಎಂದು ಲ್ಯಾನ್ಸೆಟ್ ಸಂಶೋಧನಾ ವರದಿ ಹೇಳಿದೆ. ಹೀಗೆ ಹೆಚ್ಚು ಸಾವು ಸಂಭವಿಸುತ್ತಿರುವ ದೇಶಗಳೆಂದರೆ ಭಾರತ, ಚೀನಾ, ಬ್ರಿಟನ್, ಬ್ರೆಜಿಲ್, ರಷ್ಯಾ, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ.
ಇವು ಇಡೀ ವಿಶ್ವದಲ್ಲಿ ಸಂಭವಿಸುವ ಒಟ್ಟು ಕ್ಯಾನ್ಸರ್ ಸಾವಿನ ಪೈಕಿ ಶೇ. 50ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ. ಅಲ್ಲದೆ, ತಂಬಾಕಿನ ಜೊತೆಗೆ ಮದ್ಯಪಾನ, ಬೊಜ್ಜು ಮತ್ತು ಗರ್ಭಕೋಶದ ಕ್ಯಾನ್ಸರ್‌ನಿಂದಾಗಿ ಒಟ್ಟಾರೆ 20 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಮತ್ತೆ ಭಯ ಬೀಳಿಸುತ್ತಿದ್ದಾನೆ ಕೊರೊನಾ ರಾಕ್ಷಸ: ಅನಿರೀಕ್ಷಿತ ಸಾವುಗಳ ಹಿಂದಿದೆ ಕೋವಿಡ್ ಕೈವಾಡ?
ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC), ಕ್ವೀನ್ ಮೇರಿ ಯೂನಿವರ್ಸಿಟಿ ಆಫ್ ಲಂಡನ್ (QMUL) ಮತ್ತು ಕಿಂಗ್ಸ್ ಕಾಲೇಜ್ ಲಂಡನ್, ಯುಕೆ ಸಂಶೋಧಕರು ನಡೆಸಿದ ಅಧ್ಯಯನವು ಕ್ಯಾನ್ಸರ್‌ನಿಂದ ನಷ್ಟವಾದ ಜೀವನದ ವರ್ಷಗಳನ್ನು ವಿಶ್ಲೇಷಿಸಿದೆ. ಈ ರೀತಿಯ ಕ್ಯಾನ್ಸರ್ ಸಾವುಗಳಿಂದ ಜಾಗತಿಕ ಮಟ್ಟದಲ್ಲಿ ವಾರ್ಷಿಕವಾಗಿ 3 ಕೋಟಿ ವರ್ಷಗಳ ಜೀವಿತಾವಧಿ ನಷ್ಟವಾಗುತ್ತಿದೆ. ಇದರಲ್ಲಿ ತಂಬಾಕು ಸೇನೆಯ ಪ್ರಮಾಣವೇ 2 ಕೋಟಿ ವರ್ಷದಷ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ.
ಭಾರತದಲ್ಲಿ ಹೆಚ್ಚಿನ ಪುರುಷರು ಕರುಳಿನ ಕ್ಯಾನ್ಸರ್‌ನಿಂದಾಗಿ ಬಲಿಯಾಗುತ್ತಿದ್ದು ಮಹಿಳೆಯರು ಹೆಚ್ಚಾಗಿ ಗರ್ಭಕೋಶದ ಕ್ಯಾನ್ಸರ್‌ನಿಂದಾಗಿ ಮೃತಪಡುತ್ತಿದ್ದಾರೆ. ಹಾಗಾಗಿ ಮಹಿಳೆಯರಿಗೆ ಹೆಚ್‌ಪಿವಿ ಲಸಿಕೆ ನೀಡುವುದರ ಮೂಲಕ ಗರ್ಭಕೋಶದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾಗಿದೆ ಎಂದು ಸಂಶೋಧನಾ ವರದಿಯಲ್ಲಿ ಮಂಡಿಸಿದ್ದಾರೆ.
ಇದನ್ನೂ ಓದಿ: ಅವರು ವಾರಕ್ಕೆ 80 - 90 ಗಂಟೆ ವರ್ಕ್ ಮಾಡ್ತಾರೆ: 70 ಗಂಟೆ ಕೆಲಸ ಸೂತ್ರದ ಬಗ್ಗೆ ಪತಿ ಹೇಳಿಕೆಗೆ ಸುಧಾಮೂರ್ತಿ ಪ್ರತಿಕ್ರಿಯೆ
ತಡೆಗಟ್ಟಬಹುದಾದ ಅಪಾಯಕಾರಿ ಅಂಶಗಳು ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಕ್ಯಾನ್ಸರ್ ಪ್ರಕಾರಗಳಿಗೆ ಸಂಬಂಧಿಸಿವೆ ಎಂದೂ ಅವರು ಹೇಳಿದರು. ಯುಕೆ ಮತ್ತು ಯುಎಸ್‌ನಂತಹ ಇತರ ದೇಶಗಳಿಗಿಂತ ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸರ್ವೈಕಲ್ ಸ್ಕ್ರೀನಿಂಗ್ ಕಡಿಮೆ ಸಮಗ್ರವಾಗಿದೆ. ಈ ಹಿನ್ನೆಲೆ ಎರಡು ದೇಶಗಳಲ್ಲಿ ಎಚ್‌ಪಿವಿ ಸೋಂಕಿನಿಂದ ಗರ್ಭಕೋಶದ ಕ್ಯಾನ್ಸರ್‌ನಿಂದ ಹೆಚ್ಚು ಅಕಾಲಿಕ ಮರಣಗಳು ಏಕೆ ಸಂಭವಿಸುತ್ತವೆ ಎಂಬುದನ್ನು ವಿವರಿಸುತ್ತದೆ ಎಂದೂ ಸಂಶೋಧಕರು ಹೇಳಿದರು.