ನಮ್ಮ ಜೀವನದಲ್ಲಿ ಅದೇನೇ ಸಮಸ್ಯೆ ಇರಲಿ ನಮಗೆ ಮೊದಲು ಕಾಣಿಸೋದು ಇಂಟರ್ನೆಟ್. ಅಲ್ಲಿ ಎಲ್ಲ ಸರ್ಚ್ ಮಾಡ್ಬಹುದು. ಆದ್ರೆ ಅಲ್ಲಿ ಸಿಗುವ ಉತ್ತರ ಸರಿಯಾಗಿರ್ಬೇಕೆಂದೇನಿಲ್ಲ. ಅದನ್ನೇ ನಂಬಿ ಕುಳಿತ್ರೆ ನಿಮಗೆ ಅಪಾಯ.
ಜನರ ಮಾನಸಿಕ ಸ್ಥಿತಿ ಭಿನ್ನವಾಗಿರುತ್ತದೆ. ಕೆಲವರು ಎಷ್ಟೇ ಕಷ್ಟ ಬಂದ್ರೂ, ಸಮಸ್ಯೆ ಬಂದ್ರೂ ಹೆದರೋದಿಲ್ಲ. ಮತ್ತೆ ಕೆಲವರು ಯಾವುದೇ ಸಮಸ್ಯೆ ಇಲ್ಲದೆ ಹೋದ್ರೂ ಭಯಗೊಳ್ತಾರೆ. ನಮಗೆ ಆ ರೋಗ ಇರಬಹುದು, ಈ ರೋಗ ಇರಬಹುದು ಎಂಬ ಊಹೆಯಲ್ಲೇ ಆತಂಕದಿಂದ ದಿನ ದೂಡ್ತಾರೆ. ಈ ಆತಂಕ ಬಹಳ ಅಪಾಯಕಾರಿ. ನಿದ್ರೆ, ಊಟ, ನೆಮ್ಮದಿ, ಸಂತೋಷ ಎಲ್ಲವನ್ನು ಇದು ಕಸಿದುಕೊಳ್ಳುತ್ತದೆ. ಕೆಲವೊಮ್ಮೆ ಆ ಆತಂಕ ಯಾವ ಹಂತಕ್ಕೆ ಹೋಗುತ್ತೆ ಅಂದ್ರೆ ಭಯದಲ್ಲೇ ಅವರು ತಮ್ಮ ಜೀವ ತೆಗೆದುಕೊಳ್ತಾರೆ. ಈಗ ನಾವು ಹೇಳ್ತಿರುವ ಘಟನೆ ಕೂಡ ಸ್ವಲ್ಪ ಹಾಗೆ ಇದೆ. ರೋಮನ್ ನಗರದ ಬೊಟೊಸಾನಿಯ ವ್ಯಕ್ತಿಯೊಬ್ಬ ತನ್ನ ಅತಿಯಾದ ಆಲೋಚನೆಯಿಂದ ಮೂರ್ಖ ಕೆಲಸಕ್ಕೆ ಕೈ ಹಾಕಿದ್ದಾನೆ. ಅನೇಕ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲ್ತಾ ಇದ್ದ ವ್ಯಕ್ತಿ ಅದ್ರ ಬಗ್ಗೆ ಇಷ್ಟು ಆಳವಾಗಿ ಆಲೋಚನೆ ಮಾಡ್ತಾನೆ ಅಂತಾ ಯಾರೂ ಭಾವಿಸಿರಲಿಲ್ಲ. ಅವನ ತಪ್ಪಿನಿಂದಾಗಿ ಈಗ ಆಸ್ಪತ್ರೆ ಸೇರುವಂತಾಗಿದೆ.
ವ್ಯಕ್ತಿ ಒಂದು ದಿನ, ಬಾಯ್ಲರ್ (Boiler) ಗಾಗಿ ಕಟ್ಟಿಗೆ ತರಲು ಔಟ್ ಲೆಟ್ ಗೆ ಹೋಗುವುದಾಗಿ ತನ್ನ ಪತ್ನಿಗೆ ಹೇಳಿದ್ದಾನೆ. ಕೆಲ ಸಮಯದ ನಂತ್ರ ಪತ್ನಿ ಮೊಬೈಲ್ (Mobile) ಗೆ ಸಂದೇಶ ಬಂದಿದೆ. ಅದ್ರಲ್ಲಿ ಸಾರಿ. ನೀನು ತುಂಬಾ ಒಳ್ಳೆಯ ಪತ್ನಿ ಎಂದು ಬರೆಯಲಾಗಿತ್ತು. ಇದನ್ನು ನೋಡಿ ಪರಿಸ್ಥಿತಿ ಅರ್ಥ ಮಾಡಿಕೊಂಡ ಪತ್ನಿ ಔಟ್ಲೆಟ್‌ಗೆ ಓಡಿದ್ದಾಳೆ. ಅಲ್ಲಿ ಪತಿಯ ಒಂದು ಕೈನಲ್ಲಿ ಆಂಗಲ್ ಗ್ರೈಂಡರ್ ಅನ್ನು ನೋಡಿದ್ದಾಳೆ. ಅವನ ಇನ್ನೊಂದು ಕೈ ಸಂಪೂರ್ಣವಾಗಿ ಕತ್ತರಿಸಿತ್ತು. ಇದನ್ನು ನೋಡಿ ತಕ್ಷಣ ಆಂಬುಲೆನ್ಸ್ ಗೆ ಪತ್ನಿ ಫೋನ್ ಮಾಡಿದ್ದಾಳೆ. ಅಲ್ಲಿಗೆ ಬಂದ ಆಂಬುಲೆನ್ಸ್ ಹಾಗೂ ವೈದ್ಯಕೀಯ ತಂಡ ಪತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡ್ತಿದೆ. ವ್ಯಕ್ತಿಯ ಕೈಯನ್ನು ಮತ್ತೆ ಜೋಡಿಸಲಾಗಿದ್ದು, ಕೈ ಮೂಮೆಟ್ ಮಾಡುವ ಪ್ರಯತ್ನ ನಡೆದಿದೆ.
undefined
ಬೇಕರಿಯಿಂದ ತಂದ ಸಮೋಸಾದಲ್ಲಿತ್ತು ಸತ್ತ ಹಲ್ಲಿ, ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಗೆ ದಾಖಲು
ಆತ್ಮಹತ್ಯೆ (Suicide) ಯತ್ನಕ್ಕೆ ಕಾರಣವಾಗಿದ್ದೇನು? : ಅಷ್ಟಕ್ಕೂ ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳೋಕೆ ಕಾರಣವಾಗಿದ್ದೇನು ಎಂಬುದನ್ನು ಪತ್ತೆ ಹಚ್ಚಿದಾಗ ಜನರು ದಂಗಾಗಿದ್ದಾರೆ. ಇದು ಇಂಟರ್ನೆಟ್ ಯುಗ. ಈಗ ಜನರು ತಮ್ಮ ಅನಾರೋಗ್ಯವನ್ನು ತಾವೇ ಗುಣಪಡಿಸಿಕೊಳ್ಳುವ ಪ್ರಯತ್ನ ನಡೆಸ್ತಾರೆ. ಅದಕ್ಕಾಗಿ ಗೂಗಲ್ (Google) ಸರ್ಚ್ ಮಾಡ್ತಾರೆ. ಸಣ್ಣ ಗಾಯ ಇರಲಿ ಇಲ್ಲ ದೊಡ್ಡ ರೋಗವಿರಲಿ. ಎಲ್ಲದಕ್ಕೂ ಗೂಗಲ್ ನಲ್ಲಿ ಉತ್ತರವಿರುತ್ತದೆ. ಆದ್ರೆ ಎಲ್ಲ ರೋಗ ಲಕ್ಷಣ ಗೂಗಲ್ ನಲ್ಲಿ ಹೇಳಿದಂತೆ ಇರಬೇಕು ಎಂದೇನಿಲ್ಲ.
ಈ ವ್ಯಕ್ತಿ ಗೂಗಲ್ ಸಂಪೂರ್ಣ ನಂಬಿದ್ದಲ್ಲದೆ ಅದೇ ಕಾರಣಕ್ಕೆ ಖಿನ್ನತೆಗೆ (Depression) ಒಳಗಾಗಿದ್ದಾನೆ. ಅನೇಕ ದಿನಗಳಿಂದ ವ್ಯಕ್ತಿಗೆ ಹೊಟ್ಟೆ ನೋವು ಬರ್ತಾ ಇತ್ತು. ಆಸ್ಪತ್ರೆಗೆ ಹೋಗುವ ಬದಲು ಗೂಗಲ್ ನಲ್ಲಿ ಲಕ್ಷಣಗಳನ್ನು ಸರ್ಚ್ ಮಾಡಿದ್ದಾನೆ. ಅದರಲ್ಲಿ ಹೊಟ್ಟೆ ಕ್ಯಾನ್ಸರ್ ನಲ್ಲಿ ಈ ಎಲ್ಲ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂದಿತ್ತು. ಇದನ್ನು ಓದಿದ ವ್ಯಕ್ತಿ ಭಯಗೊಂಡಿದ್ದಾನೆ. ಕ್ಯಾನ್ಸರ್ ನಿಂದ ನಾನು ಸಾಯ್ತೇನೆಂದು ನಿಶ್ಚಯಿಸಿಕೊಂಡಿದ್ದಾರೆ. ಅದೇ ಚಿಂತೆಯಲ್ಲಿ ಡಿಪ್ರೆಶನ್ ಗೆ ಹೋಗಿದ್ದಾನೆ.
ಮನೆಯಲ್ಲೇ ಘಮ ಘಮ ತುಪ್ಪ ಮಾಡೋದು ಹೇಗೆ? ತಿಂದ್ರೆ ಏನೆಲ್ಲಾ ಆಗತ್ತೆ? ನಟಿ ಹರಿಪ್ರಿಯಾ ಮಾವನ ಟಿಪ್ಸ್ ಕೇಳಿ...
ಹೊಟ್ಟೆ ನೋವಿಗೆ ಕಾರಣವೇನು ಎನ್ನುವ ಸತ್ಯವನ್ನು ತಿಳಿಯುವ ಪ್ರಯತ್ನವನ್ನೇ ಈತ ಮಾಡಿಲ್ಲ. ಆತ್ಮಹತ್ಯೆಗೆ ಮಾಡಿಕೊಳ್ಳುವ ದಾರಿ ಹುಡುಕಿದ್ದಾನೆ. ವ್ಯಕ್ತಿ ಸದ್ಯ ಸುಧಾರಿಸಿಕೊಳ್ತಿದ್ದಾನೆ. ಆತನ ಹೊಟ್ಟೆ ನೋವಿಗೆ ಕಾರಣವೇನು ಎಂಬ ಬಗ್ಗೆಯೂ ಪರೀಕ್ಷೆ ನಡೆಯುತ್ತಿದೆ. ಕಾರಣ ತಿಳಿಯದೆ ಭಯಗೊಂಡ ವ್ಯಕ್ತಿ ಆತ್ಮಹತ್ಯೆಗೆ ಮುಂದಾಗಿದ್ದು ಅಚ್ಚರಿ ಮೂಡಿಸಿದೆ.