ಹೇಳಿಕೊಳ್ಳಲೂ ಆಗದ, ಅನುಭವಿಸಲೂ ಆಗದ ಕೆಲ ಸಮಸ್ಯೆಗಳಲ್ಲಿ ಬಟ್ ಮೊಡವೆ ಕೂಡ ಸೇರಿದೆ. ಆಗಬಾರದ ಜಾಗದಲ್ಲಿ ಏಳುವ ಈ ಮೊಡವೆ ಹಿಂಸೆ ನೀಡುತ್ತವೆ. ಅದಕ್ಕೆ ನೀವೇನು ಮಾಡ್ಬೇಕು ಎಂಬ ಮಾಹಿತಿ ಇಲ್ಲಿದೆ.
ದೇಹದ ಹಿಂಭಾಗದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದನ್ನು ಬಟ್ ಮೊಡವೆ ಎಂದು ಕರೆಯಲಾಗುತ್ತದೆ. ಇವು ಹಿಂಭಾಗದಲ್ಲಿ ಮೊಡವೆಗಳಂತೆ ಕಂಡು ಬರುತ್ತವೆ. ಇವುಗಳನ್ನು ಬ್ರೇಕ್ಔಟ್ ಎಂದೂ ಕರೆಯುತ್ತಾರೆ. ಮುಖದ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳಿಗಿಂತ ಇವು ಸ್ವಲ್ಪ ಭಿನ್ನವಾಗಿರುತ್ತವೆ.
ಒಂದ್ವೇಳೆ ನಿಮಗೂ ಈ ಸಮಸ್ಯೆ ಕಾಡ್ತಿದ್ದರೆ ತಕ್ಷಣವೇ ಬಿಗಿಯಾದ ಬಟ್ಟೆ ಧರಿಸುವುದನ್ನು ಬಿಡಿ. ವ್ಯಾಯಾಮದ ನಂತರ ಬೆವರಿನಲ್ಲೇ ದಿನ ಕಳೆಯಬೇಡಿ. ತಕ್ಷಣ ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಚರ್ಮಕ್ಕೆ ತೊಂದರೆಯುಂಟು ಮಾಡುವ, ಅಲರ್ಜಿ (Allergy) ಯುಂಟು ಮಾಡುವ ವಸ್ತುಗಳಿಂದ ದೂರವಿರಿ. ಇದರ ಹೊರತಾಗಿ ಇನ್ನೂ ಕೆಲ ಉಪಾಯಗಳನ್ನು ಮಾಡುವ ಮೂಲಕ ನೀವು ಬಟ್ (Butt) ಮೊಡವೆಯನ್ನು ಕಡಿಮೆ ಮಾಡಬಹುದು. ನಾವಿಂದು ಬಟ್ ಮೊಡವೆ (Acne) ಗೆ ಸಂಬಂಧಿಸಿದ ಕೆಲ ಮಾಹಿತಿ ನೀಡ್ತೇವೆ.
Health Tips: ಕಿಡ್ನಿ ಸಮಸ್ಯೆ ಬಾರದಿರಲು… ಆಯುರ್ವೇದದ ಈ ಸಲಹೆ ಪಾಲಿಸಲೇಬೇಕು…
ಬಟ್ ಮೊಡವೆ ಕಾಣಿಸಿಕೊಳ್ಳಲು ಕಾರಣವೇನು? : ಬಟ್ ಮೊಡವೆಗಳು ಸಾಮಾನ್ಯ ಚರ್ಮದ ಸಮಸ್ಯೆಗಳಿಂದ ಉಂಟಾಗುತ್ತವೆ.
• ಫೋಲಿಕ್ಯುಲೈಟಿಸ್ ಚರ್ಮದ ಮೇಲೆ ವಾಸಿಸುವ ಬ್ಯಾಕ್ಟೀರಿಯಾ ಆಗಿದ್ದು, ಇದು ಉರಿಯೂತವನ್ನು ಉಂಟುಮಾಡುತ್ತದೆ. ಇದು ಬಟ್ ಮೊಡವೆಗೆ ಕಾರಣವಾಗುತ್ತದೆ.
• ಅಲರ್ಜಿಯಿಂದಲೂ ಈ ಬಟ್ ಮೊಡವೆ ಸಂಭವಿಸುತ್ತದೆ.
• ಯೀಸ್ಟ್ ಅಥವಾ ಶಿಲೀಂಧ್ರದಿಂದಲೂ ಇದು ಕಾರಣಿಸಿಕೊಳ್ಳುತ್ತದೆ.
ವಿರಾಟ್ ಕೊಹ್ಲಿ ಯಾವಾಗ್ಲೂ ಎನರ್ಜಿಟಿಕ್ ಆಗಿರಲು ಕುಡಿಯೋದು ಬ್ಲ್ಯಾಕ್ ವಾಟರ್, ಏನಿದರ ಸ್ಪೆಷಾಲಿಟಿ?
ಬಟ್ ಮೊಡವೆ ತೊಡೆದುಹಾಕೋದು ಹೇಗೆ? : ಕೆಲ ಉಪಾಯಗಳ ಮೂಲಕ ನೀವು ಈ ಸಮಸ್ಯೆಯಿಂದ ಸುಲಭವಾಗಿ ಹೊರ ಬರಬಹುದು.
ಟೀ ಟ್ರೀ ಎಣ್ಣೆ : ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಟೀ ಟ್ರೀ ಆಯಿಲನ್ನು ನೇರವಾಗಿ ತ್ವಚೆಯ ಮೇಲೂ ಹಚ್ಚಬಹುದು. ಸಾರಭೂತ ತೈಲದ ಕೆಲವು ಹನಿಗಳನ್ನು ಬಾಡಿ ವಾಶ್ ಅಥವಾ ಎಣ್ಣೆ ಮುಕ್ತ ಮಾಯಿಶ್ಚರೈಸರ್‌ಗೆ ಸೇರಿಸುವ ಮೂಲಕ ಕೂಡ ನೀವು ಬಳಸಬಹುದು.
ಸ್ಯಾಲಿಸಿಲಿಕ್ ಆಮ್ಲ: ಸ್ಯಾಲಿಸಿಲಿಕ್ ಆಮ್ಲವು ಬೀಟಾ ಹೈಡ್ರಾಕ್ಸಿ ಆಮ್ಲವಾಗಿದೆ. ಇದು ಚರ್ಮದ ಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮೊಡವೆ ಜಾಗಕ್ಕೆ ನೀವು ಸ್ಯಾಲಿಸಿಲಿಕ್ ಆಸಿಡ್ ಪ್ಯಾಡ್ ಹಾಕಬಹುದು. ಆದ್ರೆ ಖಾಸಗಿ ಅಂಗಕ್ಕೆ ಟಚ್ ಆಗದಂತೆ ನೀವು ಎಚ್ಚರಿಕೆವಹಿಸುವುದು ಮುಖ್ಯ.
ಲ್ಯಾಕ್ಟಿಕ್ ಆಸಿಡ್ ಲೋಷನ್ (Lactic Acid Lotion) : ಲ್ಯಾಕ್ಟಿಕ್ ಆಮ್ಲವು ಆಲ್ಫಾ ಹೈಡ್ರಾಕ್ಸಿ ಆಮ್ಲವಾಗಿದೆ. ಸ್ಯಾಲಿಸಿಲಿಕ್ ಆಮ್ಲದಂತೆ ಇದು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಲು ಮತ್ತು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ಪ್ರತಿದಿನ ಹಚ್ಚಬೇಕು. ಒರಟಾದ ಚರ್ಮವನ್ನು ಮೃದುಗೊಳಿಸಲು ಇದು ನೆರವಾಗುತ್ತದೆ.
ಹೀಟಿಂಗ್ ಪ್ಯಾಡ್ : ಅತ್ಯಂತ ಸುಲಭ ವಿಧಾನವೆಂದ್ರೆ ಹೀಟಿಂಗ್ ಪ್ಯಾಡ್. ಬೆಚ್ಚಗಿನ ತೇವಾಂಶ ಕಿರಿಕಿರಿ ಕಡಿಮೆ ಮಾಡುತ್ತದೆ. ಕೀವುಗಳನ್ನು ತೆಗೆದುಹಾಕುವುದು ಸುಲಭ.
ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ಸ್ನಾನ ಅಥವಾ ಆಪಲ್ ವಿನೆಗರ್ ಅನ್ನು ಬಟ್ಟೆಗೆ ಹಾಕಿ ಅದನ್ನು ಪೀಡಿದ ಪ್ರದೇಶದಲ್ಲಿ ಇಡುವುದು ಕೂಡ ಪ್ರಯೋಜನ ನೀಡುತ್ತದೆ. ಅಲ್ಲದೆ ನೀವು ಬಿಸಿ ನೀರನ್ನು ಬಟ್ಟೆಯಲ್ಲಿ ಅದ್ದಿ ಆ ಬಟ್ಟೆಯನ್ನು ಪೀಡಿತ ಜಾಗದ ಮೇಲೆ ೧೫ ನಿಮಿಷ ಇಡಬೇಕು. ಬೆನ್ಝಾಯ್ಲ್ ಪೆರಾಕ್ಸೈಡ್ ವಾಶ್ : ಬಟ್ ಮೊಡವೆಗಳನ್ನು ಬೆನ್ಝಾಯ್ಲ್ ಪೆರಾಕ್ಸೈಡ್ ನಿಂದಲೂ ಕಡಿಮೆ ಮಾಡಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಉರಿ, ಊತವನ್ನು ಕಡಿಮೆ ಮಾಡುತ್ತದೆ. ಬೆನ್ಝಾಯ್ಲ್ ಪೆರಾಕ್ಸೈಡ್ ಹೊಂದಿರುವ ಬಾಡಿ ವಾಶ್, ಬಾರ್ ಸೋಪ್, ಕ್ರೀಮ್ ಅಥವಾ ಶೇಕಡಾ 5 ರಿಂದ 10 ರಷ್ಟು ಬೆನ್ಝಾಯ್ಲ್ ಪೆರಾಕ್ಸೈಡ್ ಹೊಂದಿರುವ ಜೆಲ್ ಸಹ ನಿಮ್ಮ ಬಟ್ ಮೊಡವೆ ಕಡಿಮೆ ಮಾಡಲು ನೆರವಾಗುತ್ತದೆ.