women sleeping with dog: ಮಹಿಳೆಯರಿಗೆ ತಮ್ಮ ಗಂಡ ಅಥವಾ ಸಂಗಾತಿ, ಪ್ರೇಮಿಯ ಜೊತೆಗಿಂತ ಸಾಕು ನಾಯಿಯ ಜೊತೆ ಮಲಗಿದಾಗ ಹೆಚ್ಚು ಪ್ರಶಾಂತ ಹಾಗೂ ನೆಮ್ಮದಿಯ ನಿದ್ರೆ ಸಿಗುತ್ತದೆ ಎಂದು ಕ್ಯಾನ್ಸಿಯಸ್ ಕಾಲೇಜ್ ಸಂಶೋಧನೆ ತಿಳಿಸಿದೆ. ಗಂಡನ ಜೊತೆ ಯಾಕೆ ನೆಮ್ಮದಿಯ ನಿದ್ರೆ ಬರಲ್ಲ…ಈ ಅಧ್ಯಯನದ ವಿವರ ಇಲ್ಲಿದೆ.
ಮಾನ್ಯವಾಗಿ ದಾಂಪತ್ಯ ಜೀವನದಲ್ಲಿ ಅಥವಾ ಪ್ರೀತಿಯಲ್ಲಿದ್ದಾಗ ಸಂಗಾತಿಯ ಜೊತೆ ಅಥವಾ ಪ್ರೇಮಿ ಜೊತೆ ಮಲಗುವುದು ನೆಮ್ಮದಿ ನೀಡುತ್ತದೆ ಎನ್ನುವ ನಂಬಿಕೆ ಇದೆ. ಆದರೆ, ಅಮೆರಿಕದ ಕ್ಯಾನಿಸಿಯಸ್ ಯೂನಿವರ್ಸಿಟಿ ನಡೆಸಿದ ಸ್ವಾರಸ್ಯಕರ ಅಧ್ಯಯನವೊಂದು ಇದಕ್ಕೆ ತದ್ವಿರುದ್ಧವಾದ ಸಂಗತಿಯನ್ನು ಹೊರಹಾಕಿದೆ. ಮಹಿಳೆಯರು ತಮ್ಮ ಪತಿ ಅಥವಾ ಸಂಗಾತಿಗಿಂತ ಹೆಚ್ಚಾಗಿ ತಮ್ಮ ಸಾಕು ನಾಯಿಯ ಜೊತೆ ಮಲಗಿದಾಗ ಹೆಚ್ಚು ಪ್ರಶಾಂತ ಹಾಗೂ ನೆಮ್ಮದಿಯ ನಿದ್ರೆ ಪಡೆಯುತ್ತಾರೆ ಎಂದು ಈ ಸಂಶೋಧನೆ ತಿಳಿಸಿದೆ!.
26
ಅಧ್ಯಯನದಲ್ಲೇನಿದೆ?
ಅಮೆರಿಕದ ಕ್ಯಾನ್ಸಿಯಸ್ ಕಾಲೇಜಿನ ಪ್ರೊಫೆಸರ್ ಡಾ. ಕ್ರಿಸ್ಟಿ ಎಲ್. ಹಾಫ್‌ಮನ್ ನೇತೃತ್ವದ ತಂಡ ಸುಮಾರು 962 ಮಹಿಳೆಯರನ್ನು ಒಳಗೊಂಡು ಈ ಸಮೀಕ್ಷೆ ನಡೆಸಿದೆ.ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರ ನಿದ್ರೆಯ ಮಾದರಿ ಮತ್ತು ಮಾನಸಿಕ ಭಾವನೆಗಳನ್ನು ಅಧ್ಯಯನ ಮಾಡಿದಾಗ ಕಂಡುಬಂದ ಪ್ರಮುಖ ಅಂಶಗಳು ಇಲ್ಲಿವೆ.
36
ಹೆಚ್ಚು ಸುರಕ್ಷಿತ ಮತ್ತು ನೆಮ್ಮದಿ:
ಮಹಿಳೆಯರು ತಮ್ಮ ಗಂಡ ಅಥವಾ ಪ್ರಿಯಕರನ ಜೊತೆ ಮಲಗುವುದಕ್ಕಿಂತ ನಾಯಿಯ ಜೊತೆ ಮಲಗಿದಾಗ ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕ ಅನುಭವ ಪಡೆಯುತ್ತಾರೆ. ಜೊತೆಗೆ ನಾಯಿ ಜೊತೆ ಮಲಗಿದಾಗ ಕಿರಿಕಿರಿ ಕಡಿಮೆ ಎನ್ನುವುದನ್ನು ಈ ಅಧ್ಯಯನದಲ್ಲಿ ಕಂಡು ಹಿಡಿದ್ದಾರೆ.
ಅಂದರೆ ತಮ್ಮ ಸಂಗಾತಿ ಜೊತೆ ಮಲಗಿದಾಗ ರಾತ್ರಿ ಹೊತ್ತು ಅವರು ಹೊರಳಾಡುವುದು ಅಥವಾ ಗೊರಕೆ ಹೊಡೆಯುವುದರಿಂದ ಮಹಿಳೆಯರ ನಿದ್ರೆಗೆ ಭಂಗ ಉಂಟಾಗುತ್ತದೆ. ಆದರೆ ನಾಯಿಗಳು ಯಾವುದೇ ರೀತಿಯಲ್ಲಿ ಡಿಸ್ಟರ್ಬ್ ಮಾಡದೇ ನಿದ್ರೆ ಮಾಡುತ್ತವೆ. ಇದರಿಂದ ಮಹಿಳೆಯರಿಗೆ ಅದರ ಜೊತೆ ಮಲಗಿದ್ದಾಗ, ಯಾವುದೇ ಸಮಸ್ಯೆ ಇಲ್ಲದೇ ನಿದ್ರೆ ಬರುತ್ತದೆ. ಇನ್ನು ನಾಯಿಗಳನ್ನು ಸಾಕುವ ಮಹಿಳೆಯರು ಸಮಯಕ್ಕೆ ಸರಿಯಾಗಿ ಮಲಗುವುದು ಮತ್ತು ಬೆಳಿಗ್ಗೆ ಬೇಗ ಏಳುವ ಉತ್ತಮ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ
56
ನಾಯಿ vs ಬೆಕ್ಕು vs ಗಂಡ
ಈ ಅಧ್ಯಯನದಲ್ಲಿ ಸಾಕು ಬೆಕ್ಕುಗಳ ಬಗ್ಗೆಯೂ ಗಮನಹರಿಸಲಾಗಿತ್ತು. ಬೆಕ್ಕುಗಳು ಮತ್ತು ಪತಿ ಅಥವಾ ಪ್ರೇಮಿ(ಪುರುಷರು) ಇಬ್ಬರೂ ಸಹ ಮಹಿಳೆಯರ ನಿದ್ರೆಗೆ ಒಂದೇ ರೀತಿಯ ಭಂಗ ತರುತ್ತಾರೆ ಎಂಬುದು ತಿಳಿದುಬಂದಿದೆ. ಬೆಕ್ಕುಗಳು ರಾತ್ರಿಯ ವೇಳೆ ಹೆಚ್ಚು ಚಟುವಟಿಕೆಯಿಂದ ಇರುವುದರಿಂದ ಅವುಗಳ ಸಾಮೀಪ್ಯ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬೆಕ್ಕುಗಳ ಜೊತೆಯೂ ಚೆನ್ನಾಗಿ ನಿದ್ರೆ ಬರೋದಿಲ್ಲ.
66
ನಾಯಿಯ ಜೊತೆಗಿದ್ದರೆ ಗಾಢ ನಿದ್ರೆ
ನಾಯಿಗಳು ತಮಗೆ ಅಥವಾ ಮನೆಗೆ ಅಪಾಯ ಬಂದಾಗ ತಕ್ಷಣ ಎಚ್ಚರಿಸುತ್ತವೆ ಎಂಬ ನಂಬಿಕೆ ಮಹಿಳೆಯರಲ್ಲಿ ಇರುತ್ತದೆ. ಈ ಸುರಕ್ಷತಾ ಭಾವನೆಯೇ ಅವರಿಗೆ ಗಾಢ ನಿದ್ರೆ ಬರಲು ಪ್ರಮುಖ ಕಾರಣ. ಒಟ್ಟಾರೆಯಾಗಿ, ಸಾಕು ನಾಯಿಗಳು ಕೇವಲ ನಿಷ್ಠಾವಂತ ಪ್ರಾಣಿಗಳಾಗಿರದೆ, ಮಾನಸಿಕ ಒತ್ತಡ ಕಡಿಮೆ ಮಾಡಿ ಉತ್ತಮ ನಿದ್ರೆ ಪಡೆಯಲು ಸಹಕಾರಿಯಾಗಿವೆ ಎಂದು ಈ ಅಧ್ಯಯನ ಸ್ಪಷ್ಟಪಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.