ಉಳಿತಾಯ ಮಾಡೋ ಆಸೆಯೇ? ಹಾಗಿದ್ರೆ ಇವತ್ತಿಂದಲ್ಲೇ ಈ ಮಹಿಳೆ ಮಾಡಿದಂತೆ ನೀವೂ ಮಾಡಿ

First Published Mar 14, 2024, 6:23 PM IST

ಈ ಮಹಿಳೆಗೆ ಥೈಲ್ಯಾಂಡ್ ಟ್ರಾವೆಲ್ (Thailand Travel) ಮಾಡೋ ಸಮಯದಲ್ಲಿ ತಾನು ತನ್ನ ಲೈಫ್ ಸ್ಟೈಲ್ (Lifestyle)ಗಾಗಿ ವಿಪರೀತ ಖರ್ಚು ಮಾಡೋ ಬಗ್ಗೆ ಅರಿವು ಮೂಡಿತು. ಮುಂದೇನು, ಆಯ್ತು ಅಂದ್ರೆ ಅಲ್ಲಿಂದ ಹಿಂದಿರುಗಿದ ನಂತರ, ಆಕೆ ಒಂದು ವರ್ಷದವರೆಗೂ ಶಾಪಿಂಗ್ (Shopping), ಪಾರ್ಟಿ (Party) ಮಾಡದೇ ಲಕ್ಷಾಂತರ ರೂಪಾಯಿ ಉಳಿಸಿದ್ದಾಳೆ.
 

ನಾವು ಸ್ವಲ್ಪ ಹಣವನ್ನು ಸಂಪಾದಿಸಿದಾಗಲೆಲ್ಲಾ, ಅದರಿಂದ ಸಾಧ್ಯವಾದಷ್ಟು ಉಳಿಸಬೇಕು (saving money)ಎಂದು  ಬಾಲ್ಯದಿಂದಲೂ ಹಿರಿಯರಿಂದ ಕೇಳಿರಬಹುದು. ಈ ಉಳಿತಾಯ ಪಾಠಕ್ಕೆ ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳುವವರು, ತಮ್ಮ ಜೀವನವನ್ನು ಸಂಘಟಿತ ಮತ್ತು ಆರಾಮದಾಯಕವಾಗಿಸುತ್ತಾರೆ. ನೀವು ಸುಮ್ ಸುಮ್ಮನೆ ಖರ್ಚು ಮಾಡ್ತಿದೆ, ಅದರಿಂದ ಹಣ ಖಾಲಿಯಾಗಿ ನೆಮ್ಮದಿಯೇ ಇಲ್ಲದಂತಾಗುತ್ತೆ.
 

ಬ್ರಿಟಿಷ್ ಮಹಿಳೆಯೊಬ್ಬಳು ಅದನ್ನೇ ಮಾಡಿದಳು ಮತ್ತು ಜೀವನದಲ್ಲಿ ಸಣ್ಣ ಬದಲಾವಣೆ ಮಾಡುವ ಮೂಲಕ ಆಕೆ ಲಕ್ಷಾಂತರ ರೂಪಾಯಿಗಳನ್ನು ಉಳಿಸಲು ಸಾಧ್ಯವಾಯಿತು. ಅಷ್ಟಕ್ಕೂ ಆಕೆ ಮಾಡಿದ್ದೇನು? ಇದನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡ್ರೆ ವೃಥಾ ಖರ್ಚಾಗೋದು ತಪ್ಪುತ್ತೆ. 
 

ಕ್ರಿಸ್ಸಿ ಮಿಲನ್ (Krissy Milan) ತನ್ನ ಜೀವನದಲ್ಲಿ ಸ್ವಲ್ಪ ಕಂಜ್ಯೂಸಿ ಮಾಡುವ ಮೂಲಕ  ಸಾಕಷ್ಟು ಲಾಭ ಗಳಿಸಿದ್ದಾಳೆ. ಥೈಲ್ಯಾಂಡ್‌ಗೆ ಪ್ರಯಾಣಿಸುವಾಗ, ಮಹಿಳೆಗೆ ತನ್ನ ಜೀವನಶೈಲಿಯಲ್ಲಿ (Lifestyle) ತಾನು ಹೆಚ್ಚು ಖರ್ಚು ಮಾಡುವ ಬಗ್ಗೆ ಅರಿವು ಮೂಡಿತು. ಅಲ್ಲಿಂದ, ಹಿಂದಿರುಗಿದ ನಂತರ, ಆಕೆ ತನ್ನ ಪರ್ಸ್ ಅನ್ನು ಬಿಚ್ಚಲೇ ಇಲ್ಲ, ಒಂದು ವರ್ಷದವರೆಗೆ ಯಾವುದೇ ಶಾಪಿಂಗ್ ಮಾಡಲಿಲ್ಲ, ಪಾರ್ಟಿ ಮಾಡಲಿಲ್ಲ, ಸುಮ್ಮನೆ ಖರ್ಚು ಮಾಡಲಿಲ್ಲ, ಇದರಿಂದ ವರ್ಷದಲ್ಲಿ ಆಕೆ ಉಳಿಸಿದ್ದು ಲಕ್ಷಾಂತರ ರೂಪಾಯಿ.
 

ಒಂದು ವರ್ಷದಲ್ಲಿ ವ್ಯರ್ಥ ವೆಚ್ಚವಿಲ್ಲ
ದಿ ಸನ್ ವರದಿಯ ಪ್ರಕಾರ, ಕ್ರಿಸ್ಸಿ ಮಿಲನ್ ಥೈಲ್ಯಾಂಡ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಜೀವನಶೈಲಿಯಲ್ಲಿನ (Lifestyle) ವ್ಯತ್ಯಾಸವನ್ನು ಗಮನಿಸಿದ್ದಾರೆ. ಈ ಸಮಯದಲ್ಲಿ ಕ್ರಿಸ್ಸಿ ತನ್ನ ಪ್ರಮುಖ ವೆಚ್ಚಗಳನ್ನು ಹೊರತುಪಡಿಸಿ ಒಂದು ಪೈಸೆಯನ್ನೂ ಖರ್ಚು ಮಾಡದಿರಲು ನಿರ್ಧರಿಸಿದಳು. ಅವಳು ತನ್ನ ಬಾಡಿಗೆ (Rent) ಮತ್ತು ಆಹಾರಕ್ಕಾಗಿ (Food) ಮಾತ್ರ ಖರ್ಚು ಮಾಡುತ್ತಾಳೆ. ಸ್ನೇಹಿತರೊಂದಿಗೆ ಊಟ ಮಾಡುವ ಮೂಲಕ ಅವರು ತಿಂಗಳಿಗೆ 15,000 ರೂ.ಗಳನ್ನು ಉಳಿಸಿದರು.

ಕ್ರಿಸ್ಸಿ ಪ್ರತಿದಿನ ಹೊರಗೆ ಹೋಗಿ ಕಾಫಿ (Coffee) ಮತ್ತು ಆಹಾರ (Food) ಸೇವಿಸೋದನ್ನು ನಿಲ್ಲಿಸಿದರು, ಇದು ಅವರಿಗೆ 24,000 ರೂಪಾಯಿಗಳನ್ನು ಉಳಿಸಿತು.ಬಳಿಕ ಮನೆಯಲ್ಲಿಯೇ ಆಹಾರ ತಯಾರಿಸಿ ತಿನ್ನೋದಕ್ಕೆ, ಅದನ್ನೇ ಹೋಗುವಲ್ಲೆಲ್ಲಾ ತೆಗೆದುಕೊಂಡು ಹೋಗಲು ನಿರ್ಧರಿಸಿದಳು. ಇವೆಲ್ಲವೂ ಆಕೆಗೆ 50,000 ರೂ. ಉಳಿಸುವಂತೆ ಮಾಡಿದು ಮತ್ತು ಒಂದು ವರ್ಷದಲ್ಲಿ ಆಕೆ 6,35,538 ರೂ.ಗಳನ್ನು ಉಳಿಸಿದರು.
 

ತನ್ನ ಉಳಿತಾಯದ ಬಗ್ಗೆ ಮಾತನಾಡುವ ಕ್ರಿಸ್ಸಿ ಇದು ತನ್ನ ಲೈಫ್ ಸ್ಟೈಲ್ ಮತ್ತು ಉಳಿತಾಯವನ್ನು ಸಾಕಷ್ಟು ಬದಲಾಯಿಸಿದೆ ಎಂದು ಎಸ್ಡಬ್ಲ್ಯೂಎನ್ಎಸ್‌ಗೆ ತಿಳಿಸಿದರು. ಹೀಗೆ ಮಾಡೋದು ಸುಲಭವೆಂದು ತೋರುತ್ತದೆ ಆದರೆ ಜೀವನದ ಸೌಕರ್ಯಗಳನ್ನು ಬಿಟ್ಟು ಕೊಡುವುದು ಸುಲಭವಲ್ಲ. ಅನೇಕ ಬಾರಿ ಆಕೆ ಕೆಟ್ಟದ್ದನ್ನು ಅನುಭವಿಸಿದ್ದು ಇದೆಯಂತೆ, ಆದರೆ ಕ್ರಮೇಣ ಅದೆಲ್ಲದಕ್ಕೂ ಕ್ರಿಸ್ಸಿ ಒಗ್ಗಿ ಹೋದರು.  25 ವರ್ಷದ ಕ್ರಿಸ್ಸಿ, ಉಳಿತಾಯದ ವಿಷಯದಲ್ಲಿ ತನಗೆ ತಾನೇ ಸವಾಲು ಹಾಕುತ್ತಿದ್ದರಂತೆ ಮತ್ತು ಅದು ತನಗೆ ಸಾಕಷ್ಟು ಪ್ರಯೋಜನ ನೀಡಿದೆ ಎನ್ನುತ್ತಾರೆ. 
 

click me!