ಸದ್ಗುರು ಜೊತೆ ಡಿಕೆಶಿ ಪುತ್ರಿ ಐಶ್ವರ್ಯಾ, ತಾಳಿ ಹಾಕ್ಕೊಂಡಿಲ್ಲ ಅಂತ ಕಾಲೆಳೆದ ನೆಟ್ಟಿಗರು!

First Published Mar 13, 2024, 3:08 PM IST

ಡಿಕೆ. ಶಿವಕುಮಾರ್ ಪುತ್ರಿ ಹಾಗೂ ಮೋಟಿವೇಶನಲ್ ಸ್ಪೀಕರ್ ಆಗಿರುವ ಐಶ್ವರ್ಯ ಡಿಕೆಎಸ್ ಹೆಗ್ಡೆ ಶಿವರಾತ್ರಿ ಸಂದರ್ಭದಂದು ಇಶಾ ಫೌಂಡೇಶನ್ ಆದಿಯೋಗಿ ಗೆ ತೆರಳಿ ದೈವೀಕತ್ವ ಅನುಭವಿಸಿದ್ದಾರಂತೆ. 
 

ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯಾ ಶಿವಕುಮಾರ್ ಹೆಗ್ಡೆ (Aishwarya Shivakumar) ಶಿವರಾತ್ರಿಯ ಶುಭ ಸಂದರ್ಭದಲ್ಲಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಈಶಾ ಫೌಂಡೇಶನ್ ತೆರಳಿ ಶಿವರಾತ್ರಿ ಜಾಗರಣೆಯಲ್ಲಿ ಭಾಗಿಯಾಗಿದ್ದರು. 
 

ಇಶಾ ಫೌಂಡೇಶನ್ (Isha Foundation) ಆದಿ ಯೋಗಿ ಶಿವ ಮತ್ತು ಸದ್ಗುರು ಜೊತೆಗಿನ ಹಲವು ಫೋಟೊಗಳು ಮತ್ತು ಅಲ್ಲಿನ ಶಿವರಾತ್ರಿ ವೈಭವದ ವಿಡಿಯೋಗಳನ್ನು ಶೇರ್ ಮಾಡಿರುವ ಐಶ್ವರ್ಯಾ, ಕೊನೆಗೆ ಹಿಂದಿ ಹಾಡೊಂದಕ್ಕೆ ಮೈಮರೆತು ಎಲ್ಲರ ಜೊತೆಯಾಗಿ ನೃತ್ಯ ಮಾಡುವ ವಿಡಿಯೋ ಸಹ ಹಂಚಿಕೊಂಡಿದ್ದಾರೆ. 
 

ಈ ಕುರಿತು ಪೋಸ್ಟ್ ಹಾಕಿರುವ ಐಶ್ಚರ್ಯಾ ಮಹಾಶಿವರಾತ್ರಿ ಏಕತೆ, ಶಕ್ತಿ ಮತ್ತು ಜಾಗೃತಿಯ ರಾತ್ರಿ. ಆ ರಾತ್ರಿಯು ರೋಮಾಂಚಕ ನೃತ್ಯಗಳಿಂದ ಹಿಡಿದು ಪ್ರಶಾಂತ ಗ್ರೂಪ್ ಧ್ಯಾನಗಳವರೆಗೆ, ಪ್ರತಿ ಕ್ಷಣವೂ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಎಚ್ಚರವಾಗಿರಿಸುವ ಮತ್ತು ಸಂಪರ್ಕಿಸುವ ಶಕ್ತಿಯನ್ನು ತುಂಬಿತು.
 

ಹಿನ್ನೆಲೆ, ಲಿಂಗ ಅಥವಾ ರಾಷ್ಟ್ರೀಯತೆಯನ್ನು ಲೆಕ್ಕಿಸದೆ, ಜನರೆಲ್ಲರೂ ಒಂದಾಗಿ ಶಿವರಾತ್ರಿಯನ್ನು ಆಚರಿಸಲು ಒಟ್ಟುಗೂಡಿದ್ದೇವೆ. ಇಶಾ ಫೌಂಡೇಶನ್ ನಲ್ಲಿ ಪರಸ್ಪರರನ್ನು ಸಬಲೀಕರಣಗೊಳಿಸುವ ಧೇಯವನ್ನು ಎತ್ತಿ ಹಿಡಿಯಲು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಅಸಂಖ್ಯಾತ ಸ್ವಯಂಸೇವಕರ ಸಮರ್ಪಣೆಗೆ ಸಾಕ್ಷಿಯಾಗಿರುವುದು ನಿಜವಾಗಿಯೂ ಸ್ಪೂರ್ತಿದಾಯಕ ಎಂದು ಐಶ್ವರ್ಯಾ ಹೇಳಿದ್ದಾರೆ.
 

ಈ ಭವ್ಯವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನನಗೆ ಅವಕಾಶ ನೀಡಿದ ಇಶಾ.ಫೌಂಡೇಶನ್ ಗೆ ಮತ್ತು ಅವರ ಆಹ್ವಾನಕ್ಕಾಗಿ ಅಪಾರ ಧನ್ಯವಾದಗಳು ಎಂದು ಹೇಳಿರುವ ಡಿಕೆಶಿ ಪುತ್ರಿ ಸದ್ಗುರು ಜೊತೆ ಕೆಲ ಸಮಯ ಮಾತನಾಡುವ ಅವಕಾಶವನ್ನು ಸಹ ಪಡೆದುಕೊಂಡಿದ್ದರು. 

ಇನ್ನು ಸದ್ಗುರುಗಳ ಶಿವರಾತ್ರಿ ಕಾರ್ಯಕ್ರಮದಲ್ಲಿನ ಐಶ್ವರ್ಯಾ ಫೋಟೋ ನೋಡಿ ಕೆಲವು ಜನರಿಂದ ಟೀಕೆಗಳು ಸಹ ವ್ಯಕ್ತವಾಗಿದೆ. ಶಿವಕುಮಾರ್ ಅವರ ನಂಬಿಕೆ ವಿಚಾರವಾಗಿ, ಮದುವೆಯಾದ್ರೂ ತಾಳಿ ಹಾಕದ ವಿಚಾರವಾಗಿ ಜನರು ಟೀಕಿಸಿ ಕಾಮೆಂಟ್ ಮಾಡಿದ್ದಾರೆ. 

ಇನ್ನು ವೈಯಕ್ತಿಕ ವಿಚಾರ ಹೇಳೋದಾದ್ರೆ ಐಶ್ವರ್ಯಾ ಶಿಕ್ಷಣ (Education) , ಸಬಲೀಕರಣ (Empowerment) ಮತ್ತು ಉದ್ಯಮಶೀಲತೆ ಬಗ್ಗೆ ಮೋಟಿವೇಶನಲ್ ಸ್ಪೀಚ್ (Motivation Speech) ನೀಡುವ ಸ್ಪೀಕರ್ ಆಗಿದ್ದಾರೆ. ಶಾಲೆ, ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡುತ್ತಾ, ಮಹಿಳಾ ಸಬಲೀಕರಣದ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. 

click me!