ಬೆಳ್ಳಂಬೆಳಗ್ಗೆಯೇ ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯ ಮಹಿಳೆಯರು ಸೀರೆಯುಟ್ಟು ರನ್ ಮಾಡುತ್ತಿದ್ದಾರೆ. ನಾರಿಯರನ್ನ ನೋಡುವುದಕ್ಕೆಂದೇ ರಸ್ತೆಯುದ್ಧಕ್ಕೂ ಪುರುಷರು ನಿಂತಿರುವುದು ಕಂಡುಬಂತು.
ಸಾಗರ್ ಆಸ್ಪತ್ರೆಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ 18ನೇ ವಯಸ್ಸಿನಿಂದ 80ರ ಇಳಿವಯಸ್ಸಿನ ಮಹಿಳೆಯರು ಉತ್ಸಾಹದಿಂದ ಭಾಗಿಯಾದರು. ಹೆಂಡತಿಯರು ಓಡುವುದು ನೋಡಲು ಪಂಚೆಯುಟ್ಟು ಹಿಂದೆಯೇ ಬಂದಿದ್ದ ಗಂಡಂದಿರು. ಪತ್ನಿಯರು ಪಿಟಿ ಉಷಾ ರೀತಿ ಓಡುವುದು ಕಂಡು ಫುಲ್ ಖುಷಿಯಾದರು.