ಭಾರತೀಯ ಬಿಲಿಯನೇರ್, ಉದ್ಯಮಿ ಭಾರ್ತಿ ಏರ್‌ಟೆಲ್ ಮಾಲೀಕ ಸುನಿಲ್ ಮಿತ್ತಲ್ ಅವರ ಪುತ್ರಿ ಲಂಡನ್‌ನಲ್ಲಿ ಬೃಹತ್ ಉದ್ಯಮಿ. ಹಲವು ಫ್ಯಾಷನ್ ಬ್ರಾಂಡ್‌ಗಳನ್ನು ಮುನ್ನಡೆಸುತ್ತಿದ್ದಾರೆ. ಲಂಡನ್‌ನಲ್ಲಿ ಯಶಸ್ವೀ ಬಿಸಿನೆಸ್ ವುಮೆನ್ ಎಂದು ಗುರುತಿಸಿಕೊಂಡಿದ್ದಾರೆ.
ಈಶಾ ಭಾರತಿ, ಪಸ್ರಿಚಾ ಲಂಡನ್‌ನಲ್ಲಿ ವಾಸಿಸುವ ಜೀವನಶೈಲಿ ಹೂಡಿಕೆದಾರರಾಗಿದ್ದಾರೆ. 36 ವರ್ಷದ ಅವರು ಭಾರ್ತಿ ಏರ್‌ಟೆಲ್‌ನ ಮಾಲೀಕ, ಭಾರತೀಯ ಬಿಲಿಯನೇರ್ ಉದ್ಯಮಿ ಸುನಿಲ್ ಮಿತ್ತಲ್ ಅವರ ಪುತ್ರಿ. ಫೋರ್ಬ್ಸ್ ಪ್ರಕಾರ ಅಕ್ಟೋಬರ್ 21ರ ಹೊತ್ತಿಗೆ ಮಿತ್ತಲ್ ಅವರ ಆಸ್ತಿ ಮೌಲ್ಯ ಬರೋಬ್ಬರಿ 61,590 ಕೋಟಿ ರೂ. ಆಗಿದೆ.
ಈಶಾ, ಫ್ಯಾಷನ್ ಬ್ರ್ಯಾಂಡ್ ರೋಕ್ಸಂಡಾ ಮತ್ತು ಟೆಕ್ ಬ್ಯೂಟಿ ವ್ಯಾಪಾರ ಬ್ಯೂಟಿಸ್ಟಾಕ್ ಸೇರಿದಂತೆ ಬ್ರ್ಯಾಂಡ್‌ಗಳ ವೈವಿಧ್ಯಮಯ ಮಿಶ್ರಣದಲ್ಲಿ ಹೂಡಿಕೆ ಮಾಡಿದ್ದಾರೆ. ಜಾಗತಿಕ ಬ್ರಾಂಡ್ ಆಗಿ ಯಾವುದು ಹೆಚ್ಚು ಫೇಮಸ್ ಆಗುತ್ತದೆ ಎಂಬ ಬಗ್ಗೆ ಈಶಾ ಚೆನ್ನಾಗಿ ಪರಿಣತಿ ಹೊಂದಿದ್ದಾರೆ.
ಉದ್ಯಮಿಯು ಲಂಡನ್‌ನಲ್ಲಿರುವ ಭಾರತೀಯ ಮೂಲದ ಉದ್ಯಮಿ ಶರಣ್ ಪಸ್ರಿಚಾ ಅವರನ್ನು ವಿವಾಹವಾಗಿದ್ದಾರೆ. ಅವರು ಜೀವನಶೈಲಿ ಆತಿಥ್ಯ ಕಂಪನಿ ಎನ್ನಿಸ್ಮೋರ್ ಅನ್ನು ನಡೆಸುತ್ತಿದ್ದಾರೆ. ಇಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ - ಒಬ್ಬ ಮಗಳು ಮತ್ತು ಮಗ.
ಈಶಾ ಭಾರತಿ ಫೌಂಡೇಶನ್‌ನ ಟ್ರಸ್ಟಿಗಳ ಮಂಡಳಿಯ ಸದಸ್ಯರೂ ಆಗಿದ್ದಾರೆ. ಸ್ಕಾಟ್ಲೆಂಡ್‌ನಲ್ಲಿ ಜನಿಸಿ, ಭಾರತದಲ್ಲಿ ಬೆಳೆದರು. ಈಶಾ ಇಂಗ್ಲೆಂಡ್‌ನ ಚೆಲ್ಟೆನ್‌ಹ್ಯಾಮ್ ಲೇಡೀಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಇಂಗ್ಲೆಂಡ್‌ನ ಬಾತ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ, ಇಟಾಲಿಯನ್ ಮತ್ತು ಫ್ರೆಂಚ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಪ್ಯಾರಿಸ್‌ನಲ್ಲಿ ಲೂಯಿ ವಿಟಾನ್‌ನಲ್ಲಿ ಮಾರಾಟ ಸಹಾಯಕರಾಗಿ ಒಂದು ವರ್ಷ ಕಳೆದರು. ಆಕೆಯ ಪತಿ ಶರಣ್ ಪಾಸ್ರಿಚಾ ಎನ್ನಿಸ್ಮೋರ್‌ನ ಸಂಸ್ಥಾಪಕ ಮತ್ತು CEO ಆಗಿದ್ದು, ಇದು 2015 ರಲ್ಲಿ ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ಗ್ಲೆನೆಗಲ್ಸ್ ಐಷಾರಾಮಿ ಹೋಟೆಲ್ ಅನ್ನು ಸ್ವಾಧೀನಪಡಿಸಿಕೊಂಡಿದೆ.
ಈಶಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಚಿತ್ರಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ. ಈಶಾ ಇನ್‌ಸ್ಟಾಗ್ರಾಮ್‌ನಲ್ಲಿ 27K ಅನುಯಾಯಿಗಳನ್ನು ಹೊಂದಿದ್ದಾರೆ.