Government scheme: ದಿನಾ ಜಸ್ಟ್‌ 7 ರೂ. ಉಳಿಸಿ, ತಿಂಗಳಿಗೆ 5000 ಪಡೆಯಿರಿ, ಇಲ್ಲಿದೆ ವಿವರ

Published : Oct 20, 2023, 01:04 PM ISTUpdated : Oct 20, 2023, 01:06 PM IST

ಪ್ರತಿದಿನ ಒಂದು ಕಪ್ ಚಹಾಕ್ಕಾಗಿ ವ್ಯಯಿಸುವ ವೆಚ್ಚವನ್ನು ಉಳಿಸಿ ನೀವು ತಿಂಗಳಿಗೆ 5000 ರೂ. ಪಡೆಯಬಹುದು. ಮಾಸಿಕ 5,000 ರೂಪಾಯಿಗಳ ಪಿಂಚಣಿಯನ್ನು ಪಡೆಯುವ ಸರ್ಕಾರದ ಯೋಜನೆಯ ಮಾಹಿತಿ ಇಲ್ಲಿದೆ.

PREV
18
 Government scheme: ದಿನಾ ಜಸ್ಟ್‌ 7 ರೂ. ಉಳಿಸಿ, ತಿಂಗಳಿಗೆ 5000 ಪಡೆಯಿರಿ, ಇಲ್ಲಿದೆ ವಿವರ

ಜೀವನದ ಪ್ರತಿ ಹಂತದಲ್ಲಿಯೂ ಹಣ ತುಂಬಾ ಮುಖ್ಯವಾಗುತ್ತದೆ. ಇದಕ್ಕಾಗಿ ಸೇವಿಂಗ್ಸ್ ಮಾಡುವುದು ತುಂಬಾ ಮುಖ್ಯ. 7 ರೂಪಾಯಿಗಳ ದೈನಂದಿನ ಹೂಡಿಕೆಯು ನಿವೃತ್ತಿಯ ನಂತರ ರೂ 5,000 ಪಿಂಚಣಿ ಪಡೆಯಬಹುದು. ಹೇಗೆ ಎಂದು ತಿಳಿಯಲು ವಿವರಗಳನ್ನು ಪರಿಶೀಲಿಸಿ.

28

ಪ್ರತಿದಿನ ಒಂದು ಕಪ್ ಚಹಾಕ್ಕಾಗಿ ವ್ಯಯಿಸುವ ವೆಚ್ಚವನ್ನು ಉಳಿಸಿ ನೀವು ತಿಂಗಳಿಗೆ 5000 ರೂ. ಪಡೆಯಬಹುದು. ಮಾಸಿಕ 5,000 ರೂಪಾಯಿಗಳ ಪಿಂಚಣಿಯನ್ನು ಪಡೆಯಲು ಸರ್ಕಾರದ ಅಟಲ್ ಪಿಂಚಣಿ ಯೋಜನೆಯು ನೆರವಾಗುತ್ತದೆ. 

38

18ನೇ ವಯಸ್ಸಿನಲ್ಲಿ 7 ರೂ.ವನ್ನು ಉಳಿಸುತ್ತಾ ಬಂದರೆ ದೈನಂದಿನ ಉಳಿತಾಯದೊಂದಿಗೆ, ನೀವು ನಿವೃತ್ತರಾದ ನಂತರ ಪ್ರತಿ ತಿಂಗಳು ಆರಾಮದಾಯಕವಾದ ರೂ 5,000 ಪಿಂಚಣಿಯನ್ನು ಪಡೆಯಬಹುದು.

48

ಅಟಲ್ ಪಿಂಚಣಿ ಯೋಜನೆಯ ಪ್ರಕಾರ, 18ರಿಂದ ಈ ಯೋಜನೆಯನ್ನು ಪ್ರಾರಂಭಿಸಿದರೆ, ಪ್ರತಿ ತಿಂಗಳು ಕನಿಷ್ಠ 210 ರೂಪಾಯಿಗಳನ್ನು ಉಳಿತಾಯ ಮಾಡಬೇಕಾಗುತ್ತದೆ. 60ನೇ ವಯಸ್ಸನ್ನು ತಲುಪಿದಾಗ, ನಿಮ್ಮ ಮಾಸಿಕ ಪಿಂಚಣಿ 5,000 ರೂ. ದೊರಕುತ್ತದೆ.

58

18 ವರ್ಷವಲ್ಲದೆ ಸ್ವಲ್ಪ ಸಮಯದ ನಂತರ ಈ ಯೋಜನೆಯಲ್ಲಿ ಭಾಗಿಯಾಗಲು ಪ್ರಾರಂಭಿಸಿದರೆ, ಅಂದರೆ 25 ವರ್ಷದಲ್ಲಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಮಾಸಿಕ ಹೂಡಿಕೆಯು ರೂ 376ಕ್ಕೆ ಏರುತ್ತದೆ. 

68

30ರಲ್ಲಿ ಆರಂಭಿಸುವುದಾದರೆ 577  ರೂ., 35 ವರ್ಷದವರಾಗಿರುವಾಗ ಮಾಸಿಕ ರೂ 902 ರೂ. ಕಟ್ಟಬೇಕಾಗುತ್ತದೆ. ಯಾವ ವಯಸ್ಸಿನಲ್ಲಿ ಆರಂಭಿಸಿದರೂ 5,000 ಮಾಸಿಕ ಪಿಂಚಣಿ ದೊರಕುತ್ತದೆ.

78

2015-16 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಅಟಲ್ ಪಿಂಚಣಿ ಯೋಜನೆಯು ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾದ ಖಾತರಿಯ ಮಾಸಿಕ ಪಿಂಚಣಿ ಯೋಜನೆಯಾಗಿದೆ.

88

ಹೂಡಿಕೆಯ ವಯಸ್ಸು 18ರಿಂದ 40 ವರ್ಷಗಳ ವರೆಗೆ ಇರುತ್ತದೆ. ಇನ್ಯಾಕೆ ತಡ ನೀವು ಸಹ ಇವತ್ತಿನಿಂದಲೇ ಏಳು ರೂಪಾಯಿ ಉಳಿಸಿ ಉತ್ತಮ ಸೇವಿಂಗ್ಸ್ ಮಾಡಿ.

Read more Photos on
click me!

Recommended Stories