ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ ಲೇಸ್ ಇನ್ನರ್ ವೇರ್…. ಕಾರಣ ತಿಳಿದ್ರೆ ಅಚ್ಚರಿ ಪಡ್ತೀರಿ…

First Published May 4, 2024, 6:21 PM IST

ಯೋನಿ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅದರ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ಯೋನಿಯನ್ನು ಶುಷ್ಕವಾಗಿ ಮತ್ತು ಸ್ವಚ್ಛವಾಗಿಡುವ ಒಳ ಉಡುಪುಗಳನ್ನು ಆಯ್ಕೆ ಮಾಡುವುದು ಮುಖ್ಯ. ಲೇಸ್ ಒಳ ಉಡುಪುಗಳು ಯೋನಿಯ ಆರೋಗ್ಯಕ್ಕೆ ಹೇಗೆ ಹಾನಿಕಾರಕ ಅನ್ನೋದನ್ನು ತಿಳಿಯೋಣ. 
 

ಯೋನಿ ಆರೋಗ್ಯದ (vaginal health) ಬಗ್ಗೆ ಜಾಗೃತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯೋನಿ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅದರ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ಯೋನಿಯನ್ನು ಶುಷ್ಕವಾಗಿ ಮತ್ತು ಸ್ವಚ್ಛವಾಗಿಡುವ ಒಳ ಉಡುಪುಗಳನ್ನು ಆಯ್ಕೆ ಮಾಡೋದು ತುಂಬಾ ಮುಖ್ಯ. ಆದರೆ, ಈ ಕಾರಣದಿಂದಾಗಿಯೇ, ಲೇಸ್ ಇನ್ನರ್ ವೇರ್ ಅನ್ನು ವರ್ಷಗಳ ಹಿಂದೆ ಕೆಲವು ದೇಶಗಳು ನಿಷೇಧಿಸಿವೆ. 2014 ರಲ್ಲಿ, ಕಜಕಿಸ್ತಾನ್, ರಷ್ಯಾ ಮತ್ತು ಬೆಲಾರಸ್‌ನಲ್ಲಿ ಲೇಸ್ ಒಳ ಉಡುಪುಗಳ ಮಾರಾಟ ಮತ್ತು ಆಮದು ನಿಷೇಧಿಸಲಾಯಿತು. ಯಾಕಂದ್ರೆ ಲೇಸ್ ಅಂಡರ್ ವೇರ್ ವಜೈನಾಕ್ಕೆ ಅಪಾಯಕಾರಿ. ಲೇಸ್ ಒಳ ಉಡುಪುಗಳು ಯೋನಿ ಆರೋಗ್ಯಕ್ಕೆ ಹೇಗೆ ಅಪಾಯಕಾರಿ ಅನ್ನೋದನ್ನು ತಿಳಿಯಿರಿ. 
 

ಪ್ರತಿದಿನ ಲೇಸ್ ಒಳ ಉಡುಪುಗಳನ್ನು ಬಳಸುವುದರಿಂದ ಚರ್ಮದ ಮಡಿಕೆಗಳಲ್ಲಿ ಸೋಂಕು (infection) ಹೆಚ್ಚಾಗುತ್ತದೆ ಅನ್ನೋದನ್ನು ತಜ್ಞರೇ ಹೇಳಿದ್ದಾರೆ. ಅಷ್ಟೇ ಅಲ್ಲ ಇದರಿಂದ ಯೋನಿ ಸೋಂಕಿನ ಅಪಾಯವಿದೆ. ತುರಿಕೆ, ಕಿರಿಕಿರಿ ಮತ್ತು ಊತದ ಸಾಧ್ಯತೆ ಹೆಚ್ಚಾಗುತ್ತೆ. ಯಾವುದೇ ರೀತಿಯ ಅಲರ್ಜಿ ಮತ್ತು ಸೋಂಕು ತಪ್ಪಿಸಲು ಉಸಿರಾಡಲು ಯೋಗ್ಯವಾದ ಬಟ್ಟೆಗಳಿಂದ ಮಾಡಿದ ಒಳ ಉಡುಪುಗಳನ್ನು ಧರಿಸಿ.
 

ಬೇಸಿಗೆಯಲ್ಲಿ ಲೇಸ್ ಮತ್ತು ಬಿಗಿಯಾದ ಒಳ ಉಡುಪುಗಳನ್ನು (lace or tight innerwear) ಧರಿಸುವುದು ವಿಪರೀತ ಬೆವರಲು ಆರಂಭವಾಗುತ್ತೆ. ಇದು ಯೋನಿಯ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಚರ್ಮದ ಕಿರಿಕಿರಿಗೆ ಕಾರಣವಾಗುವ ಒಳ ಉಡುಪುಗಳನ್ನು ಧರಿಸುವುದನ್ನು ತಪ್ಪಿಸಿ. ಇದರಿಂದ ಬೇರೆ ಏನೆಲ್ಲಾ ಸಮಸ್ಯೆ ಕಾಡುತ್ತದೆ ಅನ್ನೋದನ್ನು ನೋಡೋಣ. 
 

ತೇವಾಂಶ ಮತ್ತು ಬೆವರುವಿಕೆ
ಲೇಸ್ ಮತ್ತು ಉಸಿರಾಡಲಾಗದ ಒಳ ಉಡುಪುಗಳು ಯೋನಿಯಲ್ಲಿ ತೇವಾಂಶವನ್ನು ಲಾಕ್ ಮಾಡುತ್ತವೆ. ಈ ಕಾರಣದಿಂದಾಗಿ, ಸೋಂಕು ಉಂಟಾಗಿ ತುರಿಕೆ ಮತ್ತು ಬೆವರುವ (sweatting)ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ, ಯೋನಿ ಸೋಂಕಿನ ಅಪಾಯ ವೇಗವಾಗಿ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಲಂಕಾರಿಕ ಒಳ ಉಡುಪುಗಳನ್ನು ಬಳಸುವುದನ್ನು ತಪ್ಪಿಸಿ.

ಕಠಿಣ ಬಣ್ಣ ಮತ್ತು ರಾಸಾಯನಿಕದ ಬಳಕೆ
ಸಂಶೋಧನೆ ಪ್ರಕಾರ, ಲೇಸ್ ತಯಾರಿಸಲು ಅನೇಕ ರೀತಿಯ ಬಣ್ಣ ಮತ್ತು ಹಾರ್ಡ್ ಕೆಮಿಕಲ್ಸ್ (Hard Chemicals) ಬಳಸಲಾಗುತ್ತದೆ. ಇದು ಯೋನಿ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆ. ಇದರಲ್ಲಿ ಬಳಸುವ ಬಣ್ಣಗಳು ಮತ್ತು ರಾಸಾಯನಿಕಗಳು ಹಾರ್ಮೋನ್ ಅಸಮತೋಲನ ಮತ್ತು ಕ್ಯಾನ್ಸರ್ ಅಪಾಯವನ್ನುಂಟು ಮಾಡುತ್ತವೆ.

ಉರಿಯೂತ ಮತ್ತು ಸೋಂಕಿನ ಅಪಾಯ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ವರದಿ ಪ್ರಕಾರ, ಲೇಸ್ ಒಳ ಉಡುಪುಗಳನ್ನು ಧರಿಸುವುದರಿಂದ ಯೀಸ್ಟ್ ಸೋಂಕಿನ ಅಪಾಯ ಹೆಚ್ಚಾಗುತ್ತೆ. ತಜ್ಞರ ಪ್ರಕಾರ, ಲೇಸ್ ಒಳ ಉಡುಪುಗಳನ್ನು ಸ್ವಚ್ಛಗೊಳಿಸುವಾಗ ಬ್ಯಾಕ್ಟೀರಿಯಾ (bacteria) ಸಂಪೂರ್ಣವಾಗಿ ಕ್ಲೀನ್ ಆಗೋದಿಲ್ಲ, ಇದು ಯೋನಿಯ ಸುತ್ತಲೂ ದದ್ದುಗಳು ಮತ್ತು ಅಲರ್ಜಿಗಳಿಗೆ ಕಾರಣವಾಗುತ್ತದೆ. ಇದರ ನಿಯಮಿತ ಬಳಕೆಯು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

pH ಬ್ಯಾಲೆನ್ಸ್ ಅಸಮತೋಲನವಾಗುತ್ತೆ
ಹೆಚ್ಚಿನ ಲೇಸ್ ಒಳ ಉಡುಪುಗಳು ಸಿಂಥೆಟಿಕ್ ಬಟ್ಟೆಯದ್ದಾಗಿರುತ್ತೆ, (synthetic innerwear) ಅವು ಚರ್ಮದ ಸಂಪರ್ಕಕ್ಕೆ ಬಂದ ಕೂಡಲೇ ಗುಳ್ಳೆ ಮತ್ತು ಸೋಂಕನ್ನು ಹರಡುತ್ತದೆ. ಈ ಒಳ ಉಡುಪುಗಳು ಸಾಮಾನ್ಯವಾಗಿ ಬಿಗಿಯಾಗಿರುತ್ತವೆ. ಇದು ಯೋನಿಯ ಬಳಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ವೇಗಗೊಳಿಸಲು ಕಾರಣವಾಗುತ್ತದೆ. ಇದು pH ಮಟ್ಟಗಳು ಅಸಮತೋಲನಗೊಳ್ಳಲು ಕಾರಣವಾಗುತ್ತದೆ. ಇದಲ್ಲದೆ, ಯುಟಿಐ ಮತ್ತು ವಜೈನಲ್ ಬರ್ನಿಂಗ್ ಸಹ ಉಂಟಾಗುತ್ತೆ. 

ಹತ್ತಿ ಒಳ ಉಡುಪುಗಳು ಚರ್ಮಕ್ಕೆ ಬೆಸ್ಟ್
ಯೋನಿಯ ಚರ್ಮವು ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಹಾಗಿರೋವಾಗ, ನೈಲಾನ್ ಬಟ್ಟೆಯಿಂದ ಮಾಡಿದ ಲೇಸ್ ಒಳ ಉಡುಪುಗಳು ತೇವಾಂಶವನ್ನು ಹಿಡಿದಿಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು, ಕಾಟನ್ ಬಟ್ಟೆಯ ಒಳಉಡುಪುಗಳು (cotton innerwear) ಬೆಸ್ಟ್

ಲೇಸ್ ಒಳ ಉಡುಪುಗಳನ್ನು ಧರಿಸುವುದರಿಂದ ವಜೈನಾದಲ್ಲಿ ತುರಿಕೆ ಹೆಚ್ಚಾಗುತ್ತದೆ, ಇದು ತುರಿಕೆ ಮತ್ತು ಕಿರಿಕಿರಿಗೆ ಕಾರಣವಾಗುತ್ತದೆ. ದಿನವಿಡೀ ತುರಿಕೆ ಮತ್ತು ಕಿರಿಕಿರಿಯಿಂದ ಪರಿಹಾರ ಪಡೆಯಲು ಹತ್ತಿ ಒಳ ಉಡುಪು ಅಥವಾ ಗಾಳಿ ಆಡುವಂಥ ಬಟ್ಟೆಯನ್ನು ಧರಿಸಿ.

ಸಿಂಥೆಟಿಕ್ ಅಥವಾ ಲೇಸ್ ಒಳ ಉಡುಪುಗಳಿಂದ ತುರಿಕೆ ಮತ್ತು ಕಿರಿಕಿರಿಯನ್ನು ತೆಗೆದು ಹಾಕಲು ವೈದ್ಯರ ಸಲಹೆಯೊಂದಿಗೆ ಆಂಟಿ-ರಾಶ್ ಕ್ರೀಮ್ ಅಥವಾ ಪುಡಿಯನ್ನು ಬಳಸಿ. ಜೊತೆಗೆ, ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

click me!