ವಯಸ್ಸಾದಂತೆ, ಅಂಡಾಣುಗಳ ಗುಣಮಟ್ಟವೂ ಕುಸಿಯಲು ಪ್ರಾರಂಭಿಸುತ್ತದೆ, ಇದು ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಂಥ ವೃತ್ತಿಯಲ್ಲಿ ಸರಿಯಾಗಿ ನೆಲೆ ನಿಲ್ಲದೆ ಮಗು ಎಂದು ಹೋದರೆ, ಭವಿಷ್ಯದ ಚಿಂತೆ ಕಾಡುತ್ತದೆ. ಇದೆಲ್ಲ ಯೋಚಿಸಿ, ಮುಂದೆಲ್ಲಾದರೂ ಮಗು ಬೇಕೆನಿಸಿದರೆ ಕೊರಗುವಂತಾಗಬಾರದು ಎಂದು ಈ ಸೆಲೆಬ್ರಿಟಿ ದಿವಾಗಳು ತಮ್ಮ ಅಂಡಾಣುವನ್ನು ಸಂಗ್ರಹಿಸಿಟ್ಟಿದ್ದಾರೆ.