ಬ್ಲೀಚಿಂಗ್ ಬಳಸುವಾಗ ಎಚ್ಚರ ತಪ್ಪಿದ್ರೆ ಜೀವಕ್ಕೇ ಅಪಾಯ..!

First Published Aug 12, 2020, 3:40 PM IST

ನಿವ್ಯಾಗಲಾದರೂ ಮನೆಗೆ ತರುವ ಬ್ಲೀಚಿಂಗ್ ಉತ್ಪನ್ನಗಳಲ್ಲಿ ಬರೆದಿರುವುದನ್ನು ಓದಿದ್ದೀರಾ..? ಇಲ್ಲದಿದ್ದರೆ ಓದಿ ನೋಡಿ. ನೀವು ನಿತ್ಯ ಬಳಸುವ ಟಾಯ್ಲೆಟ್ ಕ್ಲೀನರ್, ಕಲೆ ನಿವಾರಕ ಎಲ್ಲದರಲ್ಲಿಯೂ ಬ್ಲೀಚ್ ಇದೆ. ಇದೆಷ್ಟು ಅಪಯಾಕಾರಿ ಎಂದರೆ ಎಚ್ಚರ ತಪ್ಪಿದ್ರೆ ಸಾವೂ ಸಂಭವಿಸುತ್ತದೆ.

ಬ್ಲೀಚ್ ಅಪಾಯಕಾರಿ ರಾಸಾಯನಿಕ. ಆದರೆ ಬಹಳಷ್ಟು ಜನ ಬ್ಲೀಚ್ ಅಪಾಯಕಾರಿ ಎಂಬ ಅರಿವಿಲ್ಲದೆ ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ಈ ಬಗ್ಗೆ ಸಂಶೋಧಕರೂ ಬ್ಲೀಚ್ ಬಳಸಬೇಡಿ ಎಂದು ಹೇಳುತ್ತಲೇ ಬಂದಿದ್ದಾರೆ.
undefined
ಮಕ್ಕಳಿಗೆ ಬ್ಲೀಚ್ ಹೆಚ್ಚು ಅಪಾಯಕಾರಿ: ಬ್ಲೀಚ್ ಸೇವಿಸಿದರೆ ಅದು ಅತ್ಯಂತ ವಿಷಕಾರಿ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಮಕ್ಕಳು ಬ್ಲೀಚ್ ಮುಟ್ಟಲು ಬಿಡುವುದಿಲ್ಲ. ಆದರೆ ಮಕ್ಕಳು ಅದನ್ನು ಮುಟ್ಟದೆಯೂ ಅಪಾಯ ಬೆನ್ನಟ್ಟಿ ಬರಬಹುದು. ಬ್ಲೀಚ್ ಬಳಸುತ್ತಲೇ ಇರುವ ಮನೆಗಳಲ್ಲಿ ಇದರಿಂದ ಮಕ್ಕಳಿಗೆ ಭಾರೀ ಅಪಾಯ ಇದೆ.
undefined
ಬ್ಲೀಚ್ ಬಳಸಿದ ಮೇಲೆಯೂ ನೆಲದ ಮೇಲೆ ಅದರ ಅಂಶ ಉಳಿದುಕೊಂಡಿರುತ್ತದೆ. ಈ ಸಂದರ್ಭದಲ್ಲಿಯೂ ರಾಸಾಯನಿಕ ಕ್ರಿಯೆ ನಡೆಯುತ್ತಲೇ ಇರುತ್ತದೆ.
undefined
ಬ್ಲೀಚ್ ಬಳಸುವುದರಿಂದ ಅಸ್ತಮಾ, ಅಲರ್ಜಿಯೂ ಉಂಟಾಗುತ್ತದೆ. ಮಕ್ಕಳಿರುವಲ್ಲಿ ಬ್ಲೀಚ್ ಅವಾಯ್ಡ್ ಮಾಡುವ ಮೂಲಕ ಮಕ್ಕಳು ಸುರಕ್ಷಿತರಾಗಿರುವಂತೆ ನೋಡಿಕೊಳ್ಳಬಹುದು.
undefined
ಬ್ಲೀಚ್ ಮನೆಯಲ್ಲಿರುವ ಇತರ ರಾಸಾಯನಿಕ ಜೊತೆ ಸೇರುತ್ತದೆ: ಬ್ಲೀಚ್ ಮಾತ್ರ ಎಷ್ಟು ಅಪಾಯಕಾರಿಯೋ ಬ್ಲೀಚ್ ಬೇರೆ ರಾಸಾಯನಿಕದ ಜೊತೆ ಸೇರಿದರೂ ಅಷ್ಟೇ ಅಪಾಯಕಾರಿ.
undefined
ಬ್ಲೀಚ್ ಅಮೋನಿಯಾ ಜೊತೆ ಸೇರಿದರೆ ಕ್ಲೋರಿನ್ ಗ್ಯಾಸ್ ಉಂಟಾಗುತ್ತದೆ. ಇದು ಶ್ವಾಸ ಕೋಶ ಮತ್ತು, ಶ್ವಾಸನಾಳದಲ್ಲಿಯೂ ತೊಂದರೆ ಉಂಟುಮಾಡುತ್ತದೆ.
undefined
ಇವೆರಡೂ ಸಾಮಾಗ್ರಿ ತಪ್ಪಿ ಒಟ್ಟಾದರೂ ಸಾವು ಸಂಭವಿಸುತ್ತದೆ. ಬ್ಲೀಚ್ ಆಸಿಡ್, ವಿನೇಗರ್ ಜೊತೆ ಸೇರಿಸರೂ ಅಪಾಯ ಖಚಿತ.
undefined
ಕ್ಲೋರಿನ್, ಬ್ಲೀಚ್ ಹಾಗೂ ಅಮೋನಿಯಾದ ಮಿಶ್ರಣ ಬಹಳ ವಿಷಯುಕ್ತ ಅನಿಲವನ್ನು ಸೃಷ್ಟಿಸುತ್ತದೆ. ಬ್ಲೀಚ್ ಉಪ ಉತ್ಪನ್ನಗಳ ಬಳಕೆ ನಿಮ್ಮ ಮನೆಯಲ್ಲಿ ಈ ರಾಸಾಯನಿಕವನ್ನು ಬಳಸುವ ಇನ್ನಿತರ ವಸ್ತುಗಳ ಮೂಲಕವೂ ಅಪಾಯ ತಂದಿಡಬಹುದು.
undefined
ವಿಂಡೋ ಕ್ಲೀನರ್, ಪಾತ್ರೆ ತೊಳೆಯುವ ಡಿಟರ್ಜೆಂಟ್‌ಗಳು, ಡ್ರೈ ಕ್ಲೀನರ್‌ಗಳೂ ಖಣಾತ್ಮಕ ಪರಿಣಾಮ ಬೀರುತ್ತದೆ. ಬ್ಲೀಚ್‌ನಿಂದ ಮನೆ ಶುಚಿಗೊಳಿಸುವಾಗ ಅದು ಬೇರೆ ಉತ್ಪನ್ನಗಳ ಜೊತೆ ಸಂಪರ್ಕಕ್ಕೆ ಬಂದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ.
undefined
ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ: ನೀವು ಕ್ಲೋರಿನ್ ಬ್ಲೀಚ್ ಬಳಸಿದ್ಷಷ್ಟೂ ನಿಮ್ಮ ಆರೋಗ್ಯ ಹಾಗೂ ನಿಮ್ಮ ಕುಟುಂಬದ ಆರೋಗ್ಯ ಅಪಾಯವನ್ನು ಸಮೀಪಿಸುತ್ತದೆ. ಬ್ಲೀಚ್‌ನ ಘಾಟು ನಿಮ್ಮ ಶ್ವಾಸ ಕೋಶ ಹಾಗೂ ಇತರ ಅಂಗವನ್ನು ಬಾಧಿಸಬಹುದು.
undefined
ಬ್ಲೀಚ್ ಘಾಟು ಸೇರಿದಾಗ ಕಣ್ಣು ಮೂಗಿನಲ್ಲಿ ಚಚ್ಚುವಂತದ ಅನುಭವ, ಕೆಮ್ಮು ಕಾಣಿಸಿಕೊಳ್ಳಬಹುದು. ಇನ್ನು ಕ್ಲೋರಿನ್ ಆಧಾರಿತ ಬ್ಲೀಚ್ ನಿಮ್ಮ ಕಣ್ಣು ಮತ್ತು ಚರ್ಮಕ್ಕೂ ಅಪಾಯಕಾರಿ. ಚರ್ಮಕ್ಕೆ ತಾಗಿದರೆ ಉರಿ ಹಾಗೂ ತುರಿಕೆ ಉಂಟಾಗುತ್ತದೆ. ಕಣ್ಣಿಗೆ ಬ್ಲೀಚ್ ಬಿದ್ದರೆ ಇನ್ನಷ್ಟು ಅಪಾಯ. ಕಣ್ಣು ತುಂಬಾ ಉರಿಯುವುದು ಮತ್ತು ನೋವಾಗುತ್ತದೆ. ಇದರಲ್ಲಿ ದೃಷ್ಟಿ ಹೋಗು ಸಾಧ್ಯತೆಯೂ ಇರುತ್ತದೆ.
undefined
ನಿಮ್ಮ ಮನೆಯ ಪೆಟ್‌ಗಳಿಗೆ ಬ್ಲೀಚ್ ಅಪಾಯಕಾರಿ: ಜನರು ತಮಗೆ ಹಾಗೂ ಮಕ್ಕಳಿಗೆ ಮುಂಜಾಗೃತೆ ತೆಗೆದುಕೊಂಡರೂ ಬ್ಲೀಚ್‌ನಿಂದ ಸಾಕುಪ್ರಾಣಿಗಳಿಗೆ ತೊಂದರೆಯಾಗವಹುದು. ಬೆಕ್ಕು ನಾಯಿಯಂತ ಪ್ರಾಣಿ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಬೆಕ್ಕ ಹಾಗೂ ನಾಯಿ ತಮ್ಮ ದೇಹವನ್ನೇ ನೆಕ್ಕುವುದರಿಂದ ಅವುಗಳ ಮೈಗಂಟಿಕಂಡ ಬ್ಲೀಚ್ ಹೊಟ್ಟೆ ಸೇರಬಹುದು
undefined
ಬ್ಲೀಚ್ ಪರಿಸರಕ್ಕೂ ಹಾನಿಕಾರಕ: ಹಲವು ಸಲ ಕೈಗಾರಿಕೆಗಳಲ್ಲೂ ಕ್ಲೋರಿನ್ ಹೊರ ಬಿಟ್ಟಾಗ ಅದು ವಾತಾವರಣ ಕಲುಷಿತಗೊಳಿಸುತ್ತದೆ. ಹಲವು ಸಲ ಹರಿಯುವ ನೀರಿಗೂ ಬಿಡಲಾಗುತ್ತದೆ. ಇವೆಲ್ಲವೂ ಅಪಾಯಕಾರಿ. ಮನೆಯಿಂದ ಹೊರ ಬಿಡುವ ಬ್ಲೀಚ್ ನಮ್ಮ ಮನೆಯ ಸುತ್ತ ಮುತ್ತ ಪರಿಸರ, ಸಣ್ಣ ಪುಟ್ಟ ಸೂಕ್ಷಮ ಜೀವಿಗಳನ್ನೂ ನಾಶ ಮಾಡಬಹುದು.
undefined
ಬ್ಲೀಚ್‌ಗೆ ಬದಲಿ ಏನು..? ಅಲ್ಕೊಹಾಲ್‌ನಿಂದ ಪ್ಲಾಸ್ಟಿಕ್ ವಸ್ತುಗಳನ್ನು ಒರಸಿದರೆ ಸ್ವಚ್ಛವಾಗುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ನ್ನು ಹಣ್ಣುಗಳನ್ನು ಶುಚಿಗೊಳಿಸಲು ಬಳಸಬಹುದು. ಬೇಕಿಂಗ್ ಸೋಡಾ, ವೈಟ್ ವಿನೇಗರ್ ಕೂಡಾ ಬ್ಲೀಚ್ ಬದಲಾಗಿ ಬಳಸಬಹುದು. ಸೋಪ್ ಹಾಗೂ ಬಿಸಿನೀರನ್ನೂ ನೀವು ಬಳಸಬಹುದು. ಇವೆರಡೂ ಅಪಾಯವಿಲ್ಲದೆ ಬಳಸಬಹುದಾದ ಸುಲಭ ವಿಧಾನ
undefined
ಲಂಡನ್‌ನ ಮಹಿಳೆಯೊಬ್ಬರು ಕೇವಲ 10 ಸೆಕೆಂಡ್‌ನಲ್ಲೇ ಸಣ್ಣ ಎಡವಟ್ಟಿನಿಂದ ಮಗಳನ್ನು ಹೇಗೆ ಕಳೆದುಕೊಂಡೆ ಎಂಬುದನ್ನು ಮಹಿಖಳೆಯೊಬ್ಬರು ವಿವರಿಸಿದ್ದಾರೆ.
undefined
ಬ್ಲೀಚಿಂಗ್‌ನೊಂದಿಗೆ ಫಿನೇಲ್ ಮಿಕ್ಸ್ ಆದ ಪರಿಣಾಮ ತಕ್ಷಣ ಕೆಮಿಕಲ್ ರಿಯಾಕ್ಷನ್ ಆಗಿ ಹೊಗೆ ಬಂದು ಮಹಿಳೆ ತಮ್ಮ ಮಗಳನ್ನು ಕಳೆದುಕೊಂಡಿದ್ದಾರೆ.
undefined
click me!