ಭಾರತದಲ್ಲಿ ಮದುವೆಯ ಬಗ್ಗೆ ಮಹಿಳೆಯರ ಆಲೋಚನೆಗಳು ವೇಗವಾಗಿ ಬದಲಾಗುತ್ತಿವೆ. ಹೆಚ್ಚುತ್ತಿರುವ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ಹೆಚ್ಚುತ್ತಿರುವ ಮದುವೆಯ ವಯಸ್ಸು ಮತ್ತು ಸಂಬಂಧಗಳಲ್ಲಿ ಸಮಾನತೆಯ ಬಯಕೆ ಈ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ. ಅಂಕಿಅಂಶಗಳು ಈ ಬಗ್ಗೆ ಏನು ಹೇಳಿವೆ ನೋಡೋಣ.
ಒಂದು ಕಾಲದಲ್ಲಿ ಭಾರತದಲ್ಲಿ ಹುಡುಗಿಯ ಜೀವನವನ್ನು ಓದು, ಉದ್ಯೋಗ ಮತ್ತು ಮದುವೆ ಎಂಬ ನಿಗದಿತ ಕ್ರಮದಲ್ಲೇ ನೋಡಲಾಗುತ್ತಿತ್ತು. ಆದರೆ ಈಗ ಈ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ. ಇಂದು ಅನೇಕ ಮಹಿಳೆಯರು ಮದುವೆಯನ್ನು ಜೀವನದ ಅನಿವಾರ್ಯ ಹಂತವೆಂದು ಪರಿಗಣಿಸುವ ಬದಲು, ತಮ್ಮ ಆಯ್ಕೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಾರೆ. ಕೆಲವರು ವೃತ್ತಿಜೀವನದ ಮೇಲೆ ಗಮನಹರಿಸುತ್ತಿದ್ದಾರೆ, ಕೆಲವರು ಸರಿಯಾದ ಸಂಗಾತಿಗಾಗಿ ಕಾಯುತ್ತಿದ್ದಾರೆ, ಇನ್ನು ಕೆಲವರು ಮದುವೆಯಾಗದೇ ಇದ್ದರೂ ತಮ್ಮ ಜೀವನದಲ್ಲಿ ಸಂತೋಷವಾಗಿದ್ದಾರೆ.
27
ಅವಿವಾಹಿತ ಮಹಿಳೆಯರ ಪ್ರಮಾಣ ಏರಿಕೆ
ಭಾರತದಲ್ಲಿ ಅವಿವಾಹಿತ ಮಹಿಳೆಯರ ಪ್ರಮಾಣ 2011ರಲ್ಲಿ ಶೇ.13.5ರಷ್ಟಿತ್ತು. ಅದು 2021ರಲ್ಲಿ ಶೇ.19.9ಕ್ಕೆ ಏರಿಕೆಯಾಗಿದೆ. ಇದರರ್ಥ ಈ ಎಲ್ಲ ಮಹಿಳೆಯರೂ ಮದುವೆಯಾಗದಿರಲು ನಿರ್ಧರಿಸಿದ್ದಾರೆ ಎಂದಲ್ಲ. ಆದರೆ ಮದುವೆಯ ವಯಸ್ಸು ಮತ್ತು ಮದುವೆಯ ಕುರಿತ ಮಹಿಳೆಯರ ಆದ್ಯತೆಗಳು ಬದಲಾಗುತ್ತಿವೆ.
37
ಓದು ಮತ್ತು ಆದಾಯ ಹೆಚ್ಚಿಸಿದ ಆಯ್ಕೆಗಳು
ವರದಿಯ ಪ್ರಕಾರ, ಈ ಬದಲಾವಣೆಯಲ್ಲಿ ಮಹಿಳೆಯರ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯ ಪಾತ್ರ ದೊಡ್ಡದಾಗಿದೆ. AISHE 2021-22ರ ಪ್ರಕಾರ, ಉನ್ನತ ಶಿಕ್ಷಣದಲ್ಲಿ 2014-15ರಲ್ಲಿ 1.57 ಕೋಟಿಯಷ್ಟಿದ್ದ ಮಹಿಳೆಯರ ಸಂಖ್ಯೆ, 2021-22ರಲ್ಲಿ 2.07 ಕೋಟಿಗೆ ಏರಿಕೆಯಾಗಿದೆ. ಮಹಿಳೆ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಉದ್ಯೋಗ ಮಾಡಿಕೊಂಡು, ತನ್ನ ಆರ್ಥಿಕ ಅಗತ್ಯಗಳನ್ನು ತಾನೇ ನಿಭಾಯಿಸಲು ಸಾಧ್ಯವಾದಾಗ, ಜೀವನದ ನಿರ್ಧಾರಗಳ ಕುರಿತ ಆಯ್ಕೆಗಳೂ ಹೆಚ್ಚಾಗುತ್ತವೆ. ಇದರರ್ಥ ಉದ್ಯೋಗದಲ್ಲಿರುವ ಮಹಿಳೆಯರು ಮದುವೆಯಾಗಲು ಬಯಸುವುದಿಲ್ಲ ಎಂದೇನೂ ಅಲ್ಲ. ಆದರೆ ಈಗ ಮದುವೆಗೆ ಕುಟುಂಬ ಅಥವಾ ಸಮಾಜದ ಇಚ್ಛೆ ಮಾತ್ರ ಸಾಕಾಗುವುದಿಲ್ಲ. ಮದುವೆಯ ನಂತರ ತನ್ನ ವಿದ್ಯಾಭ್ಯಾಸ, ಉದ್ಯೋಗ ಮತ್ತು ಸ್ವಂತ ಐಡೆಂಟಿಟಿ ಏನಾಗುತ್ತದೆ ಎಂಬುದನ್ನೂ ಮಹಿಳೆ ಪರಿಗಣಿಸುತ್ತಾಳೆ.
ಮದುವೆಯ ಕುರಿತ ಮಹಿಳೆಯರ ಮನೋಭಾವ ಬದಲಾಗಲು ಮನೆಯ ಮತ್ತು ಕುಟುಂಬದ ಜವಾಬ್ದಾರಿಗಳ ಅಸಮಾನ ಹಂಚಿಕೆಯೂ ಒಂದು ಕಾರಣವಾಗಿದೆ. 2019ರ ಸರ್ವೆ ಪ್ರಕಾರ, ಮಹಿಳೆಯರು ತನ್ನ ಕುಟುಂಬಕ್ಕಾಗಿ ವೇತನವಿಲ್ಲದ ಪ್ರತಿದಿನ ಸರಾಸರಿ 299 ನಿಮಿಷ ಕೆಲಸ ಮಾಡಿದ್ದರು. ಪುರುಷರಿಗೆ ಈ ಸಮಯ 97 ನಿಮಿಷಗಳಷ್ಟಿತ್ತು. ಉದ್ಯೋಗ ಮಾಡುವುದರ ಜೊತೆಗೆ ಮನೆಯ ಕೆಲಸ ಮತ್ತು ಕುಟುಂಬದ ಆರೈಕೆಯ ಜವಾಬ್ದಾರಿಯೂ ಮುಖ್ಯವಾಗಿ ಮಹಿಳೆಯದ್ದೇ ಆಗಿದ್ದರೆ, ಆಕೆ ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳುವುದರಲ್ಲಿ ತಪ್ಪೇನು? ಇಂದು ಅನೇಕ ಮಹಿಳೆಯರು ಸಂಬಂಧದಲ್ಲಿ ಕೇವಲ ಪತಿ-ಪತ್ನಿಯ ಸಂಬಂಧವನ್ನಷ್ಟೇ ಅಲ್ಲ, ಸಮಾನತೆಯ ಪಾರ್ಟ್ನರ್ಶಿಪ್ ಕೂಡ ಬಯಸುತ್ತಾರೆ.
57
ಕೇವಲ ‘ಹೊಂದಾಣಿಕೆ’ ಮಾಡಿಕೊಂಡು ಬದುಕಲು ಸಿದ್ಧರಿಲ್ಲ
ಇಂದಿನ ಮಹಿಳೆ ಸಂಗಾತಿಯನ್ನು ಆಯ್ಕೆ ಮಾಡುವಾಗ ಭಾವನಾತ್ಮಕ ಬೆಂಬಲ, ಗೌರವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಮಾನತೆಗೂ ಮಹತ್ವ ನೀಡುತ್ತಾಳೆ. 2024ರ ಡೇಟಿಂಗ್ ಪ್ಲಾಟ್‌ಫಾರ್ಮ್‌ನ ಒಂದು ಅಧ್ಯಯನದ ಉಲ್ಲೇಖ ನೀಡಿರುವ ವರದಿಯ ಪ್ರಕಾರ, ಶೇ.64ರಷ್ಟು ಮಹಿಳೆಯರು ತಮ್ಮ ಸಂಗಾತಿಯ ಆಯ್ಕೆಯ ಬಗ್ಗೆ ಹೆಚ್ಚು ಸ್ಪಷ್ಟವಾಗಿದ್ದರು. ಜೊತೆ ಹಿಂದಿನದಕ್ಕಿಂತ ಕಡಿಮೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಾಗಿದ್ದರು. ಈ ಬದಲಾವಣೆ ಸಂಬಂಧಗಳಿಂದ ದೂರವಾಗುವುದನ್ನು ಮಾತ್ರ ಸೂಚಿಸುವುದಿಲ್ಲ; ಬದಲಾಗಿ ಉತ್ತಮ ಸಂಬಂಧದ ನಿರೀಕ್ಷೆಯನ್ನೂ ಸೂಚಿಸುತ್ತದೆ. ವಯಸ್ಸಾಯಿತು ಅಥವಾ ಕುಟುಂಬ ಒತ್ತಡ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಮಾತ್ರ ಮಹಿಳೆಯರು ಈಗ ಮದುವೆಯಾಗಲು ಬಯಸುವುದಿಲ್ಲ.
67
ಮದುವೆಯ ವಯಸ್ಸೂ ಹೆಚ್ಚಾಗಿದೆ
NFHS ಅಂಕಿಅಂಶಗಳನ್ನು ಆಧರಿಸಿದ ಅಧ್ಯಯನದ ಪ್ರಕಾರ, ಮಹಿಳೆಯರ ಮೊದಲ ಮದುವೆಯ ಸರಾಸರಿ ವಯಸ್ಸು 1992-93ರಲ್ಲಿ 16.2 ವರ್ಷಗಳಾಗಿತ್ತು. ಅದು 2019-21ರಲ್ಲಿ 19.2 ವರ್ಷಗಳಿಗೆ ಏರಿಕೆಯಾಗಿದೆ. ಅದೇ ವೇಳೆ, 2020-2024ರಲ್ಲಿ ಮಹಿಳೆಯರಲ್ಲಿ 18 ವರ್ಷಕ್ಕಿಂತ ಮೊದಲು ಮದುವೆಯಾಗಿದ್ದವರ ಪ್ರಮಾಣ ಸುಮಾರು ಶೇ.66ರಿಂದ ಶೇ.23.2ಕ್ಕೆ ಇಳಿಕೆಯಾಗಿದೆ. ಇದರ ನೇರ ಪರಿಣಾಮವಾಗಿ ಮಹಿಳೆಯರಿಗೆ ವಿದ್ಯಾಭ್ಯಾಸ, ಉದ್ಯೋಗ ಮತ್ತು ತಮ್ಮ ಇಷ್ಟ-ಅನಿಷ್ಟಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಮಯ ಸಿಗುತ್ತಿದೆ.
77
ಮದುವೆಯಾಗದಿರುವುದು ಅಂದರೆ ಪ್ರೀತಿಯಿಂದ ದೂರವಾಗುವುದು ಎಂದಲ್ಲ
ಅತ್ಯಂತ ಮುಖ್ಯವಾದ ವಿಷಯವೆಂದರೆ, ಮದುವೆಯಾಗದಿರಲು ತೆಗೆದುಕೊಳ್ಳುವ ನಿರ್ಧಾರವು ಪ್ರೀತಿ ಅಥವಾ ಸಂಗಾತಿಯನ್ನು ನಿರಾಕರಿಸುವುದಲ್ಲ. ಕೆಲವು ಮಹಿಳೆಯರು ದೀರ್ಘಕಾಲದ ಸಂಬಂಧವನ್ನು ಬಯಸುತ್ತಾರೆ, ಕೆಲವರು ಮದುವೆಯನ್ನು ಮುಂ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.