ಸರಿಯಾದ ಸಮಯದಲ್ಲಿ ವಾಷಿಂಗ್ ಮಷಿನ್ ಬಳಸಿದರೆ ಹಣವೂ ಉಳಿಯುತ್ತದೆ, ವಿದ್ಯುತ್ ಬಳಕೆಯೂ ಕಡಿಮೆಯಾಗುತ್ತದೆ. ಸಂಜೆ ವೇಳೆಯಲ್ಲಿ ವಿಶೇಷವಾಗಿ ಜನರು ಮನೆಗೆ ಬಂದ ನಂತ್ರ ಎಸಿ, ಫ್ಯಾನ್, ಟಿವಿ, ಅಡುಗೆ ಸಾಧನಗಳು ಸೇರಿದಂತೆ ಅನೇಕ ವಿದ್ಯುತ್ ಉಪಕರಣಗಳನ್ನು ಬಳಸುತ್ತಾರೆ. ಈ ಸಮಯವನ್ನು ಪೀಕ್ ಅವರ್ಸ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿರುವುದರಿಂದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ದರವೂ ಹೆಚ್ಚಿರಬಹುದು.
25
ವಾಷಿಂಗ್ ಮಷಿನ್ ಬಳಸಲು ಉತ್ತಮ ಸಮಯ
ತಜ್ಞರ ಸಲಹೆ ಪ್ರಕಾರ, ನೀವು ಬೆಳಗಿನ ಸಮಯ, ರಾತ್ರಿ ಅಥವಾ ವಾರಾಂತ್ಯದಲ್ಲಿ ಬಟ್ಟೆ ಒಗೆಯುವುದು ಉತ್ತಮ. ಮೊದಲು ನಿಮ್ಮ ಪ್ರದೇಶದಲ್ಲಿ ವಿದ್ಯುತ್ ದರ ಸಮಯಕ್ಕೆ ಅನುಗುಣವಾಗಿ ಬದಲಾಗುತ್ತಾ ಅಂತ ತಿಳಿದುಕೊಳ್ಳಿ. ನಂತ್ರ ಅದಕ್ಕೆ ಅನುಗುಣವಾಗಿ ವಾಷಿಂಗ್ ಮಷಿನ್ ಹಾಕಿ.
35
ತಣ್ಣೀರು ಬಳಸಿದ್ರೆ ಲಾಭ
ಬಟ್ಟೆಗಳನ್ನು ತಣ್ಣೀರಿನಲ್ಲಿ ತೊಳೆಯೋದು ಉತ್ತಮ. ಇದರಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. ಇಂದಿನ ಹೆಚ್ಚಿನ ಡಿಟರ್ಜೆಂಟ್ಗಳು ತಣ್ಣೀರಿನಲ್ಲಿಯೇ ಉತ್ತಮವಾಗಿ ಕೆಲಸ ಮಾಡುತ್ತವೆ.
ವಾಷಿಂಗ್ ಮಷಿನ್ ಸಂಪೂರ್ಣ ತುಂಬಿದ ನಂತ್ರವೇ ವಾಷಿಂಗ್ ಮಷಿನ್ ಆನ್ ಮಾಡಿ. ಎನರ್ಜಿ ಎಫಿಷಿಯಂಟ್ ಮಷಿನ್ ಬಳಸುವುದು ಉತ್ತಮ. ಸಾಧ್ಯವಾದರೆ ಬಟ್ಟೆಗಳನ್ನು ಡ್ರೈಯರ್ನಲ್ಲಿ ಒಣಗಿಸುವ ಬದಲು ಬಿಸಿಲಿನಲ್ಲಿ ಒಣಗಿಸಿ. ಅನಗತ್ಯವಾಗಿ ಹೆಚ್ಚು ಬಾರಿ ಬಟ್ಟೆ ತೊಳೆಯುವುದನ್ನು ತಪ್ಪಿಸಿ.
55
ಇದು ನೆನಪಿರಲಿ
ನೀವು ವಾಷಿಂಗ್ ಮಷಿನ್ ಬಳಸಿದ ನಂತ್ರ ಡ್ರೈಯರ್ ಬಳಸ್ತಿದ್ದರೆ ಎಚ್ಚರವಹಿಸಿ. ಡ್ರೈಯರ್ ನಿಮ್ಮ ವಿದ್ಯುತ್ ಹೆಚ್ಚು ತಿನ್ನುತ್ತೆ. ನೀವು ಬಿಸಿಲಿರುವ ಪ್ರದೇಶದಲ್ಲಿದ್ರೆ ಡ್ರೈಯರ್ ಬದಲು ಮನೆಯ ಹೊರಗೆ ಬಿಸಿಲಿನಲ್ಲಿ ಬಟ್ಟೆ ಒಣಗಿಸಿ. ವಾಷಿಂಗ್ ಮಷಿನ್ ಯಾವ ಸಮಯದಲ್ಲಿ ಬಳಸುತ್ತೇವೆ ಎಂಬುದು ಸಣ್ಣ ವಿಷಯದಂತೆ ಕಾಣಬಹುದು. ಆದರೆ ಸರಿಯಾದ ಸಮಯ ಆಯ್ಕೆ ಮಾಡಿದರೆ ವಿದ್ಯುತ್ ಉಳಿಸ್ಬಹುದು. ಪರಿಸರಕ್ಕೂ ಒಳ್ಳೆಯದು, ನಿಮ್ಮ ಹಣವೂ ಉಳಿಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.