ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡೋ ಅಭ್ಯಾಸವನ್ನ ಈಗ್ಲೇ ಬಿಟ್ಟು ಬಿಡಿ..

First Published Nov 6, 2021, 3:08 PM IST

ಚಳಿಗಾಲ ಪ್ರಾರಂಭವಾಗಿದೆ ಮತ್ತು ಪ್ರತಿ ವರ್ಷದಂತೆ ಜನರು ಬಿಸಿ ಸ್ನಾನ ಮಾಡಲು ಪ್ರಾರಂಭಿಸಿದ್ದಾರೆ. ಚಳಿ ಹೆಚ್ಚಾದಂತೆ, ಜನರು ಸ್ನಾನ ಮಾಡಲು ಮತ್ತು ಹೆಚ್ಚು ಬಿಸಿ ನೀರಿನಿಂದ (hot water bath) ತಲೆ ತೊಳೆಯಲು ಪ್ರಾರಂಭಿಸುತ್ತಾರೆ. ಆದರೆ ಬೆಚ್ಚಗಿನ ನೀರಿನಿಂದ ತಲೆಯನ್ನು ತೊಳೆಯುವುದು ಎಂದರೆ  ನಿಮ್ಮ ಕೂದಲನ್ನು ನೀವೇ ಹಾಳು ಮಾಡುತ್ತಿದ್ದೀರಿ ಎಂದರ್ಥ. ಚಳಿಗಾಲದಲ್ಲಿ ಬಿಸಿ ನೀರಿನಿಂದ ಹೇರ್ ವಾಶ್ ಮಾಡುವುದರಿಂದ ಏನೆಲ್ಲಾ ಆಗುತ್ತೆ ಗೊತ್ತಾ??

 ಕೂದಲಿಗೆ ಬೆಚ್ಚಗಿನ ನೀರಿನಿಂದ ಶಾಂಪೂ ಮಾಡಿದರೆ, ಅದು ಕೂದಲನ್ನು ದುರ್ಬಲ (hair damage) ಮತ್ತು ಸುಕ್ಕು ಗಟ್ಟಿಸುತ್ತದೆ. ಇದು ಕೂದಲು ಒಡೆಯುವಿಕೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಮತ್ತೊಂದೆಡೆ, ಬಿಸಿ ನೀರು ಕೂದಲಿನ ಕಿರುಚೀಲಗಳನ್ನು ಅಂದರೆ ಕೂದಲಿನ ಬೇರುಗಳನ್ನು ತೆರೆಯುತ್ತದೆ. ಇದರಿಂದ ಕೂದಲು ತನ್ನ ಬೇರುಗಳಿಂದ ಹೊರಬರಲು ಪ್ರಾರಂಭಿಸುತ್ತದೆ.

ಬಿಸಿ ನೀರಿನ ಸ್ನಾನವನ್ನು ತೆಗೆದುಕೊಳ್ಳುವುದರಿಂದ ನೆತ್ತಿಯು ಒರಟಾಗಬಹುದು. ಇದರ ಪರಿಣಾಮವಾಗಿ ತುರಿಕೆ ಮತ್ತು ತಲೆಹೊಟ್ಟಿನ ಸಮಸ್ಯೆಗಳು (dandruff) ಉಂಟಾಗಬಹುದು. ಏಕೆಂದರೆ, ನೆತ್ತಿಯು ತುಂಬಾ ಒಣಗಿದಾಗ, ಅದರ ಮೇಲಿನ ಪದರವು ಚಲಿಸಲು ಪ್ರಾರಂಭಿಸುತ್ತದೆ. ಇದನ್ನೇ ತಲೆಹೊಟ್ಟು ಸಮಸ್ಯೆ ಎಂದು ಕರೆಯಲಾಗುತ್ತದೆ. ತಲೆಹೊಟ್ಟಿನಿಂದ ತೈಲ ಅಥವಾ ಪೌಷ್ಟಿಕಾಂಶ ನೆತ್ತಿಗೆ ತಲುಪಲು ಅವಕಾಶ ಇರುವುದಿಲ್ಲ.

ಬಿಸಿ ನೀರಿನ ತಾಪಮಾನವು ಸಾಕಷ್ಟು ಹೆಚ್ಚಾಗಿರುತ್ತದೆ. ಇದು ಚರ್ಮಕ್ಕೆ ಹಾನಿಕಾರಕವಾಗಬಹುದು (damage skin). ಚಳಿಯಲ್ಲಿ  ಇದನ್ನು ಊಹಿಸಲು ಸಾಧ್ಯವಾಗದಿರಬಹುದು, ಆದರೆ ಇದು ಚರ್ಮದ ಕಿರಿಕಿರಿ, ಉರಿಯೂತ, ಕೆಂಪಾಗುವಿಕೆ ಇತ್ಯಾದಿಗಳಿಗೆ ಕಾರಣವಾಗಬಹುದು. ಇದರಿಂದ ಹೆಚ್ಚು ಹೆಚ್ಚು ಕೂದಲು ಉದುರಲು ಆರಂಭವಾಗುತ್ತದೆ. 

ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯುವ ನಾಲ್ಕನೇ ಮತ್ತು ಸಾಮಾನ್ಯ ಅನಾನುಕೂಲವೆಂದರೆ ಅದು ಕೂದಲನ್ನು ಒಣಗಿಸುತ್ತದೆ (dry hair). ಏಕೆಂದರೆ, ಬಿಸಿ ನೀರು ನೆತ್ತಿಯಿಂದ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ ಮತ್ತು ಕೂದಲು ಮತ್ತು ನೆತ್ತಿಯನ್ನು ಒಣಗಿಸುತ್ತದೆ. ಇದರಿಂದ ಕೂದಲು ಉದುರಲು ಆರಂಭವಾಗುತ್ತದೆ. ಹೆಚ್ಚು ಡ್ರೈ ಆದರೆ ಸಮಸ್ಯೆ ಹೆಚ್ಚುತ್ತದೆ. 
 


ಚಳಿಗಾಲದಲ್ಲಿ ಕೂದಲನ್ನು ನೀರಿನಿಂದ ತೊಳೆಯುವುದು ಹೇಗೆ?
ಚಳಿಗಾಲದಲ್ಲಿ ಬಿಸಿ ನೀರಿನಿಂದ ಕೂದಲನ್ನು ತೊಳೆಯದಿದ್ದರೆ ಕೂದಲನ್ನು ತೊಳೆಯುವುದು ಹೇಗೆ ಎಂದು ನೀವು ಈಗ ಯೋಚಿಸುತ್ತಿರಬೇಕು. ಏಕೆಂದರೆ, ಈ ಸಮಯದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ಸುಲಭದ ಕೆಲಸವಲ್ಲ ಮತ್ತು ಇದು ಅನಾರೋಗ್ಯಕ್ಕೀಡು ಮಾಡುತ್ತದೆ.

 ವಾಸ್ತವವಾಗಿ, ಕೂದಲು ತಜ್ಞರು ತಣ್ಣೀರಿನೊಂದಿಗೆ ಕೂದಲನ್ನು ತೊಳೆಯಲು ಶಿಫಾರಸು ಮಾಡುವುದಿಲ್ಲ. ತಜ್ಞರು ಹೇಳುವಂತೆ ನೀವು ನಿಮ್ಮ ಕೂದಲನ್ನು ತೊಳೆಯಲು ಉಗುರುಬೆಚ್ಚಗಿನ (luke warm water)  ಅಥವಾ ಸಾಮಾನ್ಯ ನೀರನ್ನು ಬಳಸಬೇಕು. ತಣ್ಣಗಿನ ನೀರನ್ನು  ಬಳಕೆ ಮಾಡುವುದು ಸಹ ಉತ್ತಮ. ಇದರಿಂದ ಕೂದಲಿನ ಅರೋಗ್ಯ ಕಾಪಾಡಲು ಸಹಾಯವಾಗಿತ್ತದೆ. 

ಇನ್ನು ಕೂದಲಿಗೆ ವಾರದಲ್ಲಿ ಎರಡು ಬಾರಿ ತಲೆಗೆ ಸ್ನಾನ ಮಾಡುವುದು ಉತ್ತಮ. ಹೆಚ್ಚು ಬಾರಿ ಸ್ನಾನ ಮಾಡಿದರೆ ಕೂದಲಿನ ನೈಸರ್ಗಿಕ ಎಣ್ಣೆಯ (natual oil) ಅಂಶ ಸಂಪೂರ್ಣವಾಗಿ ನಷ್ಟವಾಗುತ್ತದೆ. ಇದರಿಂದ ಕೂದಲಿನ ಸಮಸ್ಯೆಗಳು ಹೆಚ್ಚಲಾಗುವ ಸಾಧ್ಯತೆ ಇದೆ. ಆದುದರಿಂದ ಪ್ರತಿದಿನ ತಲೆ ಸ್ನಾನ ಮಾಡುವವರು ಈ ಬಗ್ಗೆ ಗಮನ ಹರಿಸಿದರೆ ಉತ್ತಮ, 

click me!