ಅನಂತ್‌ ನಾಗ್ ಅವರಿಗೆ ಇಂದಿರಾ ಗಾಂಧಿ ಸ್ಪೂರ್ತಿ ಆಗಿದ್ದೇಗೆ? ಮದುವೆಗೆ ಕಂಡೀಷನ್ ಹಾಕಿದ್ರು ಗಾಯಿತ್ರಿ!

Published : Jun 24, 2025, 04:06 PM IST

ಪದ್ಮಭೂಷಣ ಪುರಸ್ಕೃತ ನಟ ಅನಂತ್ ನಾಗ್ ಅವರು ತಮ್ಮ ವೈಯಕ್ತಿಕ ಜೀವನದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಗಾಯತ್ರಿ ಅವರೊಂದಿಗಿನ ಮದುವೆ, ಅದರ ಸರಳತೆ ಮತ್ತು ಅದರ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ.

PREV
15

ಪದ್ಮಭೂಷಣ ಅನಂತ್‌ ನಾಗ್ ಜೀವನದ ಬಗ್ಗೆ ಅಭಿಮಾನಿಗಳು ತಿಳಿದುಕೊಳ್ಳಲು ಕುತೂಹಲ ಹೊಂದಿರುತ್ತಾರೆ. ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹಿರಿಯ ನಟ ಅನಂತ್‌ ನಾಗ್ ಹಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

25

ಅನಂತ್ ನಾಗ್ ಸಂದರ್ಶನದಲ್ಲಿ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ನಾನು ಗಾಯಿತ್ರಿ ಅವರಿಗೆ ಪ್ರಪೋಸ್ ಮಾಡಿದಾಗ ಕುಟುಂಬಸ್ಥರ ಜೊತೆ ಮಾತನಾಡುವಂತೆ ಹೇಳಿದರು. ಗಾಯಿತ್ರಿ ಅವರ ತಂದೆ ತುಂಬಾ ಒಳ್ಳೆಯವರು. ಮದುವೆ ಪ್ರಸ್ತಾಪ ಮಾಡಿದಾಗ, ನನ್ನ ಮಗಳಿಗಿಂತ 14 ವರ್ಷ ದೊಡ್ಡವರು ಅಲ್ಲವಾ ಎಂದರು. ಅದಕ್ಕೆಲ್ಲಾ ಏನು ಅನ್ನಲಿಲ್ಲ. ನಂತರ ಮದುವೆಗೆ ಒಪ್ಪಿದರು.

35

ಈ ವೇಳೆ ಗಾಯಿತ್ರಿ ಅವರು ಸಹ ಒಂದು ಷರತ್ತು ಹಾಕಿದರು. ಮದುವೆಯಾದ್ಮೇಲೆ ಸಿನಿಮಾ ಮಾಡಲ್ಲ. ಇಬ್ಬರು ಸಿನಿಮಾ ಮಾಡುತ್ತಾ ಹೋದ್ರೆ ಮನೆ ನಡೆಸೋಕೆ ಆಗಲ್ಲ ಎಂದರು. ನಾನು ಭಾರತೀಯ ಪುರುಷ ಆಗಿದ್ದರಿಂದ ಒಪ್ಪಿಕೊಂಡೆ ಎಂದು ಹೇಳಿ ಅನಂತ್‌ ನಾಗ್‌ ಒಪ್ಪಿಕೊಂಡರು.

45

ಈ ವೇಳೆ ನಿರೂಪಕ, ಅಷ್ಟು ದೊಡ್ಡ ಸ್ಟಾರ್ ನಟರಾಗಿದ್ದರೂ ತುಂಬಾನೇ ಸರಳವಾಗಿ ಮದುವೆ ಆಗಿದ್ದೇಕೆ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದ ಅನಂತ್‌ ನಾಗ್, ಇದಕ್ಕೆ ಕಾರಣ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಎಂದರು. ಇಂದಿರಾ ಗಾಂಧಿ ತಮ್ಮಿಬ್ಬರು ಗಂಡು ಮಕ್ಕಳ ಮದುವೆ ಗ್ರ್ಯಾಂಡ್ ಆಗಿ ಮಾಡಬಹುದಿತ್ತು. ಆದ್ರೂ ಅವರು ಸರಳವಾಗಿ ಮಕ್ಕಳ ಮದುವೆ ಮಾಡಿದ್ದರು. ಪ್ರಧಾನಿಗಳ ಸ್ಪೂರ್ತಿಯಿಂದಾಗಿ ನನ್ನ ಮದುವೆಯೂ ಸರಳವಾಗಿ ನಡೆಯಿತು ಎಂಬ ವಿಷಯ ತಿಳಿಸಿದರು.

55

ನನ್ನ ಪ್ರಕಾರ ಮದುವೆ ಅನ್ನೋದು ತುಂಬಾ ವೈಯಕ್ತಿಕ ವಿಷಯ. ಕೆಲವರು ಅದ್ಧೂರಿಯಾಗಿ, ಒಂದಿಷ್ಟು ಮಂದಿ ಸರಳವಾಗಿ ಮದುವೆ ಆಗ್ತಾರೆ. ಹಾಗಂತ ಅದ್ಧೂರಿ ಮದುವೆ ತಪ್ಪೆಂದು ನಾನು ಹೇಳಲ್ಲ. ನಮ್ಮ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಹಾಜರಿದ್ದರು. ಮದುವೆ ನೋಂದಣಿಯಾದ ಬಳಿಕ ಎಲ್ಲರಿಗೂ ಈ ವಿಷಯವನ್ನು ತಿಳಿಸಲಾಯ್ತು ಎಂದು ಅನಂತ್‌ ನಾಗ್ ಸಂದರ್ಶನದಲ್ಲಿ ಹೇಳುತ್ತಾರೆ.

Read more Photos on
click me!

Recommended Stories