ಮಧ್ಯಾಹ್ನದ ನಿದ್ದೆ
ಮೂರು ವರ್ಷದ ಒಳಗಿನ ಮಕ್ಕಳನ್ನ ಮಾತ್ರ ಮಧ್ಯಾಹ್ನ ಮಲಗಿಸ್ಬೇಕು. ಆ ವಯಸ್ಸು ದಾಟಿದ ಮಕ್ಕಳನ್ನ ಮಧ್ಯಾಹ್ನ ಮಲಗಿಸ್ಬೇಕಾಗಿಲ್ಲ. ಒಂದು ವೇಳೆ ಮಲಗಿದ್ರೂ ಅರ್ಧ ಗಂಟೆಗಿಂತ ಹೆಚ್ಚು ಮಲಗಿಸ್ಬಾರ್ದು. ಹಗಲು ಹೆಚ್ಚು ಹೊತ್ತು ಮಲಗಿದ್ರೆ, ರಾತ್ರಿ ನಿದ್ದೆ ಮಾಡೋದು ಕಷ್ಟ ಆಗುತ್ತೆ.
ಮನಸ್ಸಿನ ಶಾಂತಿ
ಮಲಗೋ ಮುಂಚೆ ಮಕ್ಕಳ ಮನಸ್ಸನ್ನ ಶಾಂತವಾಗಿಡೋಕೆ ಪ್ರಯತ್ನಿಸಿ. ಇಷ್ಟದ ಕಥೆ ಹೇಳಿ, ಖುಷಿಯ ಮಾತಾಡಿ ಅಥವಾ ಹಾಡು ಹಾಡಿ ಮಕ್ಕಳ ಮನಸ್ಸನ್ನ ಶಾಂತಗೊಳಿಸಬಹುದು. ಮಗು ಮಲಗಿದ ಮೇಲೆ ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ನಿದ್ದೆ ಮಾಡದಿದ್ರೆ, ಅವ್ರ ಮನಸ್ಸು ಶಾಂತವಾಗಿಲ್ಲ ಅಂತ ಅರ್ಥ.