1. ತಾಯ್ತನ ಸುಂದರ, ಆದರೆ...
ತಾಯ್ತನದ ಜವಾಬ್ದಾರಿಗಳು ಕೆಲವೊಮ್ಮೆ ಆಯಾಸ, ಮಾನಸಿಕ ಉದ್ವೇಗಗಳು ಮತ್ತು ಪ್ರಸವಾನಂತರದ ಖಿನ್ನತೆಗೆ ಕಾರಣವಾಗಬಹುದು ಎಂದು ನೇಹಾ ಧೂಪಿಯಾ ಹೇಳುತ್ತಾರೆ. ಈ ವೇಳೆ ಹೊಸದಾಗಿ ತಾಯಿಯಾದಕ್ಕೆ ತನ್ನನ್ನು ತಾನೇ ಸ್ವ-ಆರೈಕೆ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ನೇಹಾ ಹೇಳುತ್ತಾರೆ. ತಮ್ಮ ಅಗತ್ಯಗಳಿಗೆ ಆದ್ಯತೆ ನೀಡುವ ಮೂಲಕ, ತಾಯಂದಿರು ತಮ್ಮ ಶಕ್ತಿಯನ್ನು ಮರಳಿ ಪಡೆಯಬಹುದು ಮತ್ತು ತಮ್ಮ ಮಕ್ಕಳೊಂದಿಗೆ ಬಲವಾದ ಸಂಬಂಧವನ್ನು ಬೆಳೆಸಿಕೊಳ್ಳಬಹುದು. ಸ್ವ-ಆರೈಕೆ ಸ್ವಾರ್ಥವಲ್ಲ, ಅದು ಅಗತ್ಯ.