Vagina Health Tips : ಹೊಸ ವರ್ಷ 2026ಕ್ಕೆ ಪ್ರವೇಶ ಮಾಡಿದ್ದೇವೆ. ಜಗತ್ತು ಸಾಕಷ್ಟು ಬೆಳೆದಿದೆ. ಆದ್ರೆ ಮಹಿಳೆಯರ ಆರೋಗ್ಯದ ಬಗ್ಗೆ ಈಗ್ಲೂ ಜನ ಕಡಿಮೆ ಮಾತನಾಡ್ತಾರೆ. ಅದ್ರಲ್ಲೂ ವಜೈನಾ ಬಗ್ಗೆ ಬಹಿರಂಗವಾಗಿ ಮಾತನಾಡಲು ನಾಚಿಕೆಪಡುವ ಮಹಿಳೆಯರ ಸಂಖ್ಯೆ ಸಾಕಷ್ಟಿದೆ.
ವಜೈನಾ (vagina) ಬಗ್ಗೆ ಜನರು ಬಹಿರಂಗವಾಗಿ ಮಾತನಾಡದ ಕಾರಣ ಅದ್ರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಜನರಲ್ಲಿದೆ. ವಾಶ್ರೋಬ್ಗಳು, ವೈಪ್ಗಳು, ಲೈಟನಿಂಗ್ ಕ್ರೀಮ್ಗಳು ಮತ್ತು ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುವ ಕಂಪನಿಗಳು ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ. NHS ವೈದ್ಯ ಅಮೀರ್ ಖಾನ್ ಮಹಿಳೆಯರ ಯೋನಿಗೆ ಸಂಬಂಧಿಸಿದಂತೆ ಜನರಲ್ಲಿರುವ ತಪ್ಪು ಕಲ್ಪನೆಗಳ ಬಗ್ಗೆ ತಿಳಿಸಿದ್ದಾರೆ.
26
ವಜೈನಾ ಸ್ವಚ್ಛತೆಗೆ ವಿಶೇಷ ಸೋಪ್
ವಜೈನಾ ಸ್ವಚ್ಛತೆ ಬಹಳ ಮುಖ್ಯ, ಹಾಗಾಗಿ ಅದಕ್ಕೆ ವಿಶೇಷ ಸೋಪ್ ಅಗತ್ಯವಿದೆ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ. ಯೋನಿಯನ್ನು ಸ್ವಚ್ಛವಾಗಿಡುವ ಹೆಸರಲ್ಲಿ ಅನೇಕ ಸೋಪ್, ವೈಪ್ , ಸ್ಪ್ರೇಗಳು ಮಾರ್ಕೆಟ್ ನಲ್ಲಿ ಮಾರಾಟ ಆಗ್ತಿವೆ. ಆದ್ರೆ ವೈದ್ಯರ ಪ್ರಕಾರ, ಯೋನಿ ಸ್ವಚ್ಛತೆಗೆ ಸ್ಪೇಷಲ್ ಸೋಪ್ ಅಗತ್ಯವಿಲ್ಲ. ವಜೈನಾ ತನ್ನನ್ನು ತಾನೇ ಕ್ಲೀನ್ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಬ್ಯಾಕ್ಟೀರಿಯಾ ಮತ್ತು pH ನ ಪರಿಪೂರ್ಣ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಸ್ವಚ್ಛತೆ ಹೆಸರಿನಲ್ಲಿ ನೀವು ಬಳಸುವ ಪರಿಮಳಯುಕ್ತ ಉತ್ಪನ್ನಗಳು ಈ ಸಮತೋಲನವನ್ನು ಅಡ್ಡಿಪಡಿಸಬಹುದು. ಸೋಂಕಿಗೆ ಕಾರಣವಾಗಬಹುದು.
36
ಟ್ಯಾಂಪೂನ್ ಒಳಗೆ ಹೋಗ್ಬಹುದು!
ಪಿರಿಯಡ್ಸ್ ಸಮಯದಲ್ಲಿ ಬಳಸುವ ಟ್ಯಾಂಪೂನ್, ವಜೈನಾ ಒಳಗೆ ಹೋಗ್ಬಹುದು ಎನ್ನುವ ಭಯ ಅನೇಕ ಮಹಿಳೆಯರಿಗಿದೆ. ಇದೇ ಕಾರಣಕ್ಕೆ ಅದನ್ನು ಬಳಸಲು ಹೆದರುತ್ತಾರೆ. ಆದ್ರೆ ಟ್ಯಾಂಪೂನ್ ಒಳಗೆ ಸೇರಲು ಸಾಧ್ಯವಿಲ್ಲ. ಗರ್ಭಕಂಠ ಯೋನಿಯ ಮೇಲೆ ಇದೆ. ಅದು ಮುಚ್ಚಿದ ಬಾಗಿಲಿನಂತಿದೆ. ಟ್ಯಾಂಪೂನ್ ಅದನ್ನು ದಾಟಿ ಹೋಗಲು ಸಾಧ್ಯವಿಲ್ಲ. ಕೆಲವೊಮ್ಮೆ ಅದು ಸ್ವಲ್ಪ ಮೇಲಕ್ಕೆ ಹೋಗಬಹುದು, ಆದರೆ ಅದು ಕಳೆದುಹೋಗುವುದಿಲ್ಲ. ವೈದ್ಯರು ಅದನ್ನು ಸುಲಭವಾಗಿ ತೆಗೆಯಬಲ್ಲರು.
ವಜೈನಾ ಡಿಸಾರ್ಜ್ ಬಗ್ಗೆಯೂ ಮಹಿಳೆಯರಲ್ಲಿ ತಪ್ಪು ಕಲ್ಪನೆ ಇದೆ. ವಜೈನಾ ಡಿಸಾರ್ಜ್, ಅನಾರೋಗ್ಯದ ಸಂಕೇತವೆಂದು ಮಹಿಳೆಯರು ಭಾವಿಸ್ತಾರೆ. ಆದ್ರೆ ಪ್ರತಿ ದಿನ ಕೆಲ ಮಹಿಳೆಯರು ಡಿಸಾರ್ಜ್ ಗೆ ಒಳಗಾಗ್ತಾರೆ. ಇದು ಆರೋಗ್ಯ ಹಾಳು ಮಾಡೋದಿಲ್ಲ. ಬಿಳಿ ಡಿಸಾರ್ಜ್ ಸಾಮಾನ್ಯವಾಗಿದೆ. ಆದ್ರೆ ಅತಿಯಾಗಿ ಹೋಗ್ತಿದ್ದರೆ, ವಾಸನೆ ಬದಲಾದರೆ ಇಲ್ಲವೆ ಬಣ್ಣ ಬದಲಾಗಿದ್ದರೆ ನೀವು ವೈದ್ಯರನ್ನು ಭೇಟಿಯಾಗ್ಬಹುದು.
56
ವಜೈನಾದಲ್ಲಿ ವಾಸನೆ
ವಜೈನಾ, ಸುಗಂಧ ದ್ರವ್ಯದಂತೆ ವಾಸನೆ ಹೊಂದಿರಬೇಕೆಂದು ಕೆಲ ಮಹಿಳೆಯರು ಭಾವಿಸಿದ್ದಾರೆ. ವಜೈನಾದಿಂದ ಇಂಥ ವಾಸನೆ ಸಾಧ್ಯವಿಲ್ಲ. ಪ್ರತಿ ವಜೈನಾ ನೈಸರ್ಗಿಕ ವಾಸನೆ ಹೊಂದಿರುತ್ತದೆ. ಈ ವಾಸನೆ ಸಾಮಾನ್ಯದ್ದಾಗಿದೆ. ವಜೈನಾದಿಂದ ವಾಸನೆ ಬರ್ತಿದ್ದರೆ ನೀವು ಕೊಳಕು, ನೈರ್ಮಲ್ಯ ಕಾಪಾಡಿಕೊಂಡಿಲ್ಲ ಎಂದರ್ಥವಲ್ಲ. ಒಂದ್ವೇಳೆ ವಾಸನೆ ಇದ್ದಕ್ಕಿದ್ದಂತೆ ಹೆಚ್ಚಾದರೆ ಅಥವಾ ಬದಲಾದರೆ ಆಗ ನೀವು ವೈದ್ಯರನ್ನು ಭೇಟಿಯಾಗ್ಬಹುದು.
66
ವೈದ್ಯರ ಭರವಸೆ
ಮಹಿಳೆಯರು ವಜೈನಾ ಸ್ವಚ್ಛತೆ ಹೆಸರಿನಲ್ಲಿ ಮಾರಾಟ ಆಗ್ತಿರುವ ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿಲ್ಲ. ಹಾಗೆಯೇ ಡಿಸ್ಜಾರ್ಜ್, ವಾಸನೆ ಸಹಜವಾಗಿದ್ದರೆ ಭಯಪಡಬೇಕಾಗಿಲ್ಲ. ಪಿರಿಯಡ್ಸ್ ಟೈಂನಲ್ಲಿ ಟ್ಯಾಂಪೂನ್ ಕೂಡ ನೀವು ಬಳಸಬಹುದು ಎಂದು ವೈದ್ಯ ಅಮೀರ್ ಖಾನ್ ಹೇಳ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.