ಮಹಿಳೆಯರ ಕೈಯಲ್ಲಿ ಏನಿಲ್ಲಾಂದ್ರೂ ಹ್ಯಾಂಡ್‌ಬ್ಯಾಗ್ ಅಂತೂ ಇದ್ದೇ ಇರುತ್ತೆ. ಆದರೆ ಅದೆಷ್ಟೋ ಬಾರಿ ಈ ಬ್ಯಾಗ್ ಅದೆಷ್ಟೇ ದೊಡ್ಡದಿದ್ರೂ ಜಾಗಾನೇ ಇಲ್ಲ ಅಂತನಿಸಿಬಿಡುತ್ತೆ. ಇದಕ್ಕೆ ಸರಿಯಾಗಿ ಬ್ಯಾಗ್ ಅರೇಂಜ್ ಮಾಡದಿರೋದೆ ಕಾರಣ. ಸಿಂಪಲ್ ಆಗಿ ಬ್ಯಾಗ್ ಅರೇಂಜ್ ಮಾಡೋದು ಹೇಗೆ ನಾವ್ ಹೇಳ್ತಿವಿ.
ನಿಯಮಿತವಾಗಿ ಬ್ಯಾಗ್ ಕ್ಲೀನ್ ಮಾಡಿ
ಆಗಾಗ ಬ್ಯಾಗ್‌ನ್ನು ಕ್ಲೀನ್ ಮಾಡಿ ಮತ್ತು ನಿಯಮಿತವಾಗಿ ಜೋಡಿಸುತ್ತಿರಿ. ಬ್ಯಾಗ್‌ನಲ್ಲಿರುವ ಹಳೆಯ ರಸೀದಿಗಳು, ಬಿಲ್‌ಗಳು ಅಥವಾ ಅವಧಿ ಮೀರಿದ ಯಾವುದೇ ಅನಗತ್ಯ ವಸ್ತುಗಳಿದ್ದರೂ ತೆಗೆದುಹಾಕಿ.
26
ಪೌಚ್‌ಗಳನ್ನು ಬಳಸಿ
ಬ್ಯಾಗ್‌ನೊಳಗೆ ವಸ್ತುಗಳನ್ನು ವರ್ಗೀಕರಿಸಲು ಮತ್ತು ಸಂಗ್ರಹಿಸಲು ಪೌಚ್ ಅಥವಾ ಸಣ್ಣ ಚೀಲಗಳನ್ನು ಬಳಸಿಕೊಳ್ಳಿ. ಉದಾಹರಣೆಗೆ, ಕಾಸ್ಮೆಟಿಕ್, ಕಾಯಿನ್ಸ್‌ಗಾಗಿ ಪ್ರತ್ಯೇಕ ಪೌಚ್ ಬಳಸಿ,
36
ಅಗತ್ಯ ವಸ್ತುಗಳಿಗೆ ಆದ್ಯತೆ ನೀಡಿ
ಪದೇ ಪದೇ ಬಳಸುವ ವಸ್ತುಗಳನ್ನು ಗುರುತಿಸಿ ಮತ್ತು ಅವುಗಳನ್ನು ಸುಲಭವಾಗಿ ದೊರಕುವಂಥಾ ಪಾಕೆಟ್‌ಗಳಲ್ಲಿ ಇಡಿ. ಎಲ್ಲೆಂದರಲ್ಲಿ ಬಿಸಾಡಿದರೆ ಅಗತ್ಯವಿದ್ದಾಗ ಯಾವುದೇ ವಸ್ತು ಹುಡುಕಿದಾಗ ಸಿಗುವುದಿಲ್ಲ.
46
ಪಾಕೆಟ್‌ಗಳನ್ನು ಬಳಸಿ
ಚಿಕ್ಕ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ನಿಮ್ಮ ಬ್ಯಾಗ್‌ನಲ್ಲಿ ಝಿಪ್ಪರ್ಡ್ ಪಾಕೆಟ್‌ಗಳು ಅಥವಾ ಕ್ಲಿಯರ್ ಪಾಕೆಟ್‌ಗಳನ್ನು ಬಳಸಿ. ಇದು ಯಾವುದೇ ವಸ್ತು ಕಳೆದುಹೋಗುವುದನ್ನು ಅಥವಾ ಗೊಂದಲಕ್ಕೊಳಗಾಗುವುದನ್ನು ತಡೆಯುತ್ತದೆ.
56
ಬ್ಯಾಗ್ ಆರ್ಗನೈಸರ್‌ನಲ್ಲಿ ಖರೀದಿಸಿ
ನೀವು ಆಗಾಗ ಬ್ಯಾಗ್‌ಗಳನ್ನು ಬದಲಾಯಿಸುತ್ತಿದ್ದರೆ, ಬ್ಯಾಗ್ ಆರ್ಗನೈಸರ್ ಖರೀದಿಸಿ. ಇದು ವಸ್ತುಗಳನ್ನು ಡಿವೈಡ್ ಮಾಡಿ ನೀಟಾಗಿ ಇಡಲು ಸಹಾಯ ಮಾಡುತ್ತದೆ.
66
Handbag
ಬ್ಯಾಗ್ ಎಸೆನ್ಷಿಯಲ್ಸ್: ನಿಮ್ಮ ವ್ಯಾಲೆಟ್, ಕೀಗಳು, ಫೋನ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ನಂತಹ ನಿಮಗೆ ಆಗಾಗ ಅಗತ್ಯವಿರುವ ವಸ್ತುಗಳಿಗೆ ಗೊತ್ತುಪಡಿಸಿದ ಸ್ಥಳವನ್ನು ಹೊಂದಿರಿ.