Published : Mar 29, 2025, 01:36 PM ISTUpdated : Mar 29, 2025, 01:37 PM IST
ಭಾರತದ ಅತೀ ಸುಂದರ ರಾಣಿಯರ ಬಗ್ಗೆ ತಿಳಿಯಿರಿ. ಅವರ ಸೌಂದರ್ಯ ಮತ್ತು ರಾಜಮನೆತನದ ಜೀವನಶೈಲಿ ಜನರನ್ನು ಆಕರ್ಷಿಸಿದೆ. ಮಹಾರಾಣಿ ಗಾಯತ್ರಿ ದೇವಿಯಿಂದ ಹಿಡಿದು ರಾಜಕುಮಾರಿ ಅದಿತಿ ರಾವ್ ಹೈದರಿವರೆಗೆ, ಈ ಮಹಿಳೆಯರು ಸೌಂದರ್ಯ, ಫ್ಯಾಷನ್, ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಲ್ಲಿ ಆಯ್ದ ರಾಜಕುಮಾರಿಯರ ಬಗ್ಗೆ ವಿವರಣೆ ನೀಡಲಾಗಿದೆ.
ಮಹಾರಾಣಿ ಗಾಯತ್ರಿ ದೇವಿ
ಮಹಾರಾಣಿ ಗಾಯತ್ರಿ ದೇವಿ ಜೈಪುರದ ರಾಣಿಯಾಗಿದ್ದರು. ಅವರು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಜೈಪುರದ ರಾಜಮನೆತನಕ್ಕೆ ಗ್ಲಾಮರ್ ಮತ್ತು ಸ್ವಾತಂತ್ರ್ಯದ ಮನೋಭಾವವನ್ನು ತಂದರು. ಜೈಪುರದ ಮಹಾರಾಜ ಸವಾಯಿ ಮಾನ್ ಸಿಂಗ್ II ರ ಮೂರನೇ ಪತ್ನಿ. ರಾಜಕಾರಣಿ, ಸಮಾಜ ಸೇವಕಿ, ಜೊತೆಗೆ ಫ್ಯಾಷನ್ ಐಕಾನ್ ಆಗಿದ್ದರು.
28
ಬರೋಡದ ಇಂದಿರಾ ರಾಜೇ
ಮಹಾರಾಣಿ ಇಂದಿರಾ ದೇವಿ ಅವರು ತಮ್ಮ ರಾಜವಂಶದ ಮೂಲಕ ಮಾತ್ರವಲ್ಲದೆ ಪಾಶ್ಚಿಮಾತ್ಯ ಶಿಕ್ಷಣವನ್ನು ಅನುಸರಿಸಿದ ಮೊದಲ ಭಾರತೀಯ ರಾಜಕುಮಾರಿಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡರು. ರಾಜಕುಮಾರಿ ಇಂದಿರಾ ರಾಜೇ ರಾಜಮನೆತನದ ನಿಯಮಗಳನ್ನು ಮುರಿದರು. ಅವರು ತಮ್ಮ ಸೌಜನ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಗಾಯತ್ರಿ ದೇವಿಯ ತಾಯಿ ಬರೋಡಾದ ರಾಜಕುಮಾರಿ ಇಂದಿರಾ ರಾಜೆ.
38
ಬರೋಡದ ಸೀತಾ ದೇವಿ:
ಸೀತಾ ದೇವಿ ತಮ್ಮ ಗ್ಲಾಮರಸ್ ಜೀವನಶೈಲಿಗೆ ಹೆಸರುವಾಸಿಯಾಗಿದ್ದರು. ಅವರು ಬರೋಡದ ಮಹಾರಾಜರನ್ನು ಮದುವೆಯಾದರು. "ಭಾರತೀಯ ವಾಲಿಸ್ ಸಿಂಪ್ಸನ್" ಎಂದು ಕರೆಯಲ್ಪಡುವ ಬರೋಡಾದ ಮಹಾರಾಣಿ ಸೀತಾ ದೇವಿ ಸಾಹಿಬ್ .
48
ಕಪೂರ್ಥಲಾದ ರಾಣಿ ಸೀತಾ ದೇವಿ
ಕಪೂರ್ಥಲಾದ ರಾಣಿ ಸೀತಾ ದೇವಿ ಭಾರತದ ಗ್ಲಾಮರಸ್ ರಾಜಮನೆತನದವರಲ್ಲಿ ಒಬ್ಬರು. ಅವರು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರು. ರಾಜಕುಮಾರಿ ಕರಮ್ ಎಂದೂ ಕರೆಯಲ್ಪಡುವ ಸೀತಾ ದೇವಿ, ಇತಿಹಾಸದಲ್ಲಿ ಅತ್ಯಂತ ಆಕರ್ಷಕ ಮಹಿಳೆಯರಲ್ಲಿ ಒಬ್ಬರು.
58
ಹೈದರಾಬಾದ್‌ನ ರಾಜಕುಮಾರಿ ನೀಲೋಫರ್
ನೀಲೋಫರ್ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು. ಅವರು ತಮ್ಮ ದಾನ ಕಾರ್ಯಗಳು ಮತ್ತು ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಸಾಕಷ್ಟು ದಾನ ಕಾರ್ಯಗಳನ್ನು ಮಾಡಿದರು ಮತ್ತು ನರ್ಸ್ ಆಗಿ ತರಬೇತಿ ಪಡೆದರು.
68
ರಾಜಕುಮಾರಿ ದಿಯಾ ಕುಮಾರಿ
ಜೈಪುರದ ದಿವಂಗತ ಮಹಾರಾಜರ ಮಗಳು ದಿಯಾ ಕುಮಾರಿ. ಅವರು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಜೈಪುರದ ಹಿಂದಿನ ಸಾಮ್ರಾಜ್ಯದ ಅಪಾರ ಸಾಂಸ್ಕೃತಿಕ, ಕಲಾತ್ಮಕ ಮತ್ತು ವಾಸ್ತುಶಿಲ್ಪದ ಪರಂಪರೆಯ ಪಾಲಕರಾಗಿ ಮತ್ತು ಸಂಸತ್ತಿನಲ್ಲಿ ಚುನಾಯಿತ ಜನರ ಪ್ರತಿನಿಧಿಯಾಗಿ ಆಧುನಿಕ ಜೀವನ ನಡೆಸುತ್ತಿದ್ದಾರೆ.
78
ರಾಜಕುಮಾರಿ ಮೃಗಾಂಕಾ ಸಿಂಗ್
ರಾಜಕುಮಾರಿ ಮೃಗಾಂಕಾ ಸಿಂಗ್ ಜಮ್ಮು ಮತ್ತು ಕಾಶ್ಮೀರದ ರಾಜಮನೆತನದವರು. ಅವರು ಫ್ಯಾಷನ್‌ಗೆ ಹೆಸರುವಾಸಿಯಾಗಿದ್ದಾರೆ. ರಾಜಕುಮಾರಿ ಒಬ್ಬ ಕಲಾವಿದೆ, ವಾಣಿಜ್ಯೋದ್ಯಮಿ, ತಾಯಿ ಮತ್ತು ಆಭರಣ ಬ್ರ್ಯಾಂಡ್ ಡಯಾಕಲರ್‌ನ ರಾಯಭಾರಿಯೂ ಹೌದು. ಪಂಜಾಬ್ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮೊಮ್ಮಗ ನಿರ್ವಾನ್ಸಿಂಗ್ ರನ್ನು ವಿವಾಹವಾಗಿದ್ದಾರೆ.
88
ರಾಜಕುಮಾರಿ ಅದಿತಿ ರಾವ್ ಹೈದರಿ:
ಅದಿತಿ ರಾವ್ ಹೈದರಿ ಬಾಲಿವುಡ್‌ನ ನಟಿ. ಅವರು ಹೈದರಾಬಾದ್‌ನ ನಿಜಾಮರ ಕುಟುಂಬಕ್ಕೆ ಸೇರಿದವರು. ಅವರು ಸೌಂದರ್ಯಕ್ಕೆ ಫೇಮಸ್. ಅದಿತಿಯ ತಂದೆ ಹೈದರಾಬಾದ್ ರಾಜ್ಯದ ಮಾಜಿ ಪ್ರಧಾನ ಮಂತ್ರಿ ಅಕ್ಬರ್ ಹೈದರಿಯ ಮೊಮ್ಮಗ ಮತ್ತು ಅಸ್ಸಾಂನ ಮಾಜಿ ಗವರ್ನರ್ ಮುಹಮ್ಮದ್ ಸಲೇಹ್ ಅಕ್ಬರ್ ಹೈದರಿಯ ಸೋದರಳಿಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.