ಹಲವು ಬಾರಿ ಗ್ರೇವಿ ತಯಾರಿಸುವಾಗ, ನಾವು ಹೆಚ್ಚು ಎಣ್ಣೆಯನ್ನು ಸೇರಿಸುತ್ತೇವೆ. ಹಾಕಿದ ಮೇಲೆ ಮುಂದೆ ಏನು ಮಾಡಬೇಕೆಂದು ನಮಗೆ ತಿಳಿದಿರುವುದಿಲ್ಲ. ಗ್ರೇವಿ ಮೇಲೆ ತೇಲುತ್ತಿರುವ ಎಣ್ಣೆಯಿಂದ ಆಹಾರವು ಎಣ್ಣೆಯುಕ್ತವಾಗಿ (oily food)ಕಾಣುವುದಲ್ಲದೆ, ಅದರ ರುಚಿಯೂ ಬದಲಾಗುತ್ತದೆ. ಅನೇಕ ಜನರು ಎಣ್ಣೆಯುಕ್ತ ಆಹಾರವನ್ನು ತಿನ್ನೋದೆ ಇಲ್ಲ, ಹಾಗಿರುವಾಗ ಆಯ್ಲಿ ಫುಡ್, ಅವರ ಮುಂದೆ ಕಂಡುಬಂದರೆ, ಅದು ಅವರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮಾಡಿದ ಅಡುಗೆಯಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಬಹುದು.
ಬ್ರೆಡ್ ಅಥವಾ ರೋಟಿ ಬಳಸಿ
ಅಡುಗೆಯಲ್ಲಿ ಹೆಚ್ಚುವರಿ ಎಣ್ಣೆ (more oil in food) ಇದ್ದರೆ, ಅದಕ್ಕೆ ತಾಜಾ ಬ್ರೆಡ್ ಅಥವಾ ರೊಟ್ಟಿ ಸೇರಿಸಿ. ಬ್ರೆಡ್ ಅಥವಾ ರೊಟ್ಟಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಕೆಲವು ಸೆಕೆಂಡುಗಳ ನಂತರ ಅದನ್ನು ಹೊರತೆಗೆಯಿರಿ.
ಟಿಶ್ಯೂ ಪೇಪರ್ ಬಳಸಿ ಎಣ್ಣೆ ಕಡಿಮೆ ಮಾಡಿ
ಗ್ರೇವಿ ಮೇಲೆ ತೇಲುತ್ತಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಟಿಶ್ಯೂ ಪೇಪರ್ (tissue paper) ಬಳಸಿ. ಮೇಲೆ ನಿಧಾನವಾಗಿ ಒಂದು ಟಿಶ್ಯೂ ಹಾಕಿ, ಅದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ನಂತರ ಅದನ್ನು ನಿಧಾನವಾಗಿ ಎತ್ತಿಕೊಳ್ಳಿ.
ಐಸ್ ಕ್ಯೂಬ್‌ಗಳನ್ನು ಬಳಸಿ
ಒಂದು ದೊಡ್ಡ ಐಸ್ ಕ್ಯೂಬ್ (ice cube) ಅನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಗ್ರೇವಿಯಲ್ಲಿ ಅದ್ದಿ. ಕೋಲ್ಡ್ ನಿಂದಾಗಿ, ಎಣ್ಣೆ ಗಟ್ಟಿಯಾಗಲು ಪ್ರಾರಂಭವಾಗುತ್ತದೆ ಮತ್ತು ಮಂಜುಗಡ್ಡೆಗೆ ಅಂಟಿಕೊಳ್ಳುತ್ತದೆ. ನೀವು ಅದನ್ನು ಸುಲಭವಾಗಿ ತೆಗೆದುಹಾಕಬಹುದು.
ಅಡುಗೆಯನ್ನ್ನು ಫ್ರಿಡ್ಜ್ ನಲ್ಲಿ ಇಡುವ ಮೂಲಕ ಎಣ್ಣೆಯನ್ನು ಕಡಿಮೆ ಮಾಡಿ
ನಿಮಗೆ ಸಮಯವಿದ್ದರೆ, ಹೆಚ್ಚುವರಿ ಎಣ್ಣೆ ಸೇರಿರುವ ಅಡುಗೆಯನ್ನು ಸ್ವಲ್ಪ ಸಮಯದವರೆಗೆ ಫ್ರಿಜ್‌ನಲ್ಲಿ ಇರಿಸಿ. ಕಡಿಮೆ ತಾಪಮಾನದಿಂದಾಗಿ ಎಣ್ಣೆ ಮೇಲಕ್ಕೆ ಬರುತ್ತದೆ ಮತ್ತು ನಂತರ ನೀವು ಅದನ್ನು ಚಮಚದಿಂದ ತೆಗೆಯಬಹುದು.
ಕಡಲೆ ಹಿಟ್ಟು ಅಥವಾ ಬ್ರೆಡ್ ತುಂಡುಗಳನ್ನು ಸೇರಿಸಿ
ಕರಿ ಅಥವಾ ಗ್ರೇವಿಯಲ್ಲಿ ಹೆಚ್ಚುವರಿ ಎಣ್ಣೆ ಇದ್ದರೆ, ಅದಕ್ಕೆ ಸ್ವಲ್ಪ ಕಡ್ಲೆ ಹಿಟ್ಟು (besan) ಅಥವಾ ಬ್ರೆಡ್ ತುಂಡುಗಳನ್ನು ಸೇರಿಸಿ. ಇದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುವುದಲ್ಲದೆ, ಗ್ರೇವಿಯನ್ನು ದಪ್ಪವಾಗಿಸುತ್ತದೆ
ಬೇಯಿಸಿದ ಆಲೂಗಡ್ಡೆ ಸೇರಿಸಿ
ಗ್ರೇವಿಗೆ ಸ್ವಲ್ಪ ಬೇಯಿಸಿದ ಆಲೂಗಡ್ಡೆಯನ್ನು (boiled potato) ಹಿಸುಕಿ ಸೇರಿಸುವ ಮೂಲಕ ಎಣ್ಣೆಯನ್ನು ಬ್ಯಾಲೆನ್ಸ್ ಮಾಡಬಹುದು. ಅದೇ ರೀತಿ, ಬೇಳೆಗಳ ಉಳಿದ ನೀರನ್ನು ಸಹ ಎಣ್ಣೆಯನ್ನು ಕಡಿಮೆ ಮಾಡಲು ಗ್ರೇವಿಗೆ ಸೇರಿಸಬಹುದು.
ನೆನಪಿಡಿ, ಹೆಚ್ಚುವರಿ ಎಣ್ಣೆ ಆಹಾರವನ್ನು ಹೆವಿಯಾಗಿಸುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ, ಈ ಸುಲಭ ಕ್ರಮಗಳಿಂದ ನೀವು ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ಅಡುಗೆಯನ್ನು ಆರೋಗ್ಯಕರವಾಗಿಸಬಹುದು.