ಒಂದು ಸ್ಟೀಲ್‌ ಚಮಚ ಹೀಗಿಟ್ಟು ನೋಡಿ- ಬಿರು ಬಿಸಿಲಲ್ಲೂ ವಾರಗಟ್ಟಲೆ ಸೊಪ್ಪು ಫ್ರೆಷ್​ ಫ್ರೆಷ್​: ಹಂತ ಹಂತದ ಮಾಹಿತಿ ಇಲ್ಲಿದೆ

Published : Mar 09, 2026, 07:42 PM IST

ಬೇಸಿಗೆಯಲ್ಲಿ ಕೊತ್ತಂಬರಿ, ಪುದೀನಾದಂತಹ ಸೊಪ್ಪುಗಳು ಬೇಗನೆ ಬಾಡಿ ಹೋಗುತ್ತವೆ. ಆದರೆ, ಒಂದು ಸ್ಟೀಲ್ ಚಮಚ ಮತ್ತು ಅಲ್ಯೂಮಿನಿಯಂ ಫಾಯಿಲ್ ಬಳಸಿ ಮಾಡುವ ಒಂದು ಸರಳ ತಂತ್ರದಿಂದ ಸೊಪ್ಪುಗಳನ್ನು ವಾರಗಟ್ಟಲೆ ತಾಜಾವಾಗಿರಿಸಬಹುದು. ಈ ವಿಧಾನವು ಸೊಪ್ಪುಗಳನ್ನು ದೀರ್ಘಕಾಲ ಸಂರಕ್ಷಿಸಲು ಸಹಾಯ ಮಾಡುತ್ತದೆ.

PREV
15
ಬಿರುಬಿಸಿಲು ಆರಂಭ

ಇದೀಗ ಬಿರುಬಿಸಿಲು ಶುರುವಾಗಿದೆ. ಸೊಪ್ಪುಗಳನ್ನು ತಂದಿಟ್ಟರೆ ಕೆಲವೇ ಗಂಟೆಗಳಲ್ಲಿ ಬಾಡಿ ಹೋಗುತ್ತವೆ. ಅಂಗಡಿಗಳಲ್ಲಿ ತಾಜಾ ಸೊಪ್ಪುಗಳು ಸಿಗುವುದೇ ಅಪರೂಪ. ಅಂಥ ಸಂದರ್ಭದಲ್ಲಿ, ತಾಜಾ ಸಿಕ್ಕರೂ ಅದನ್ನು ಫ್ರೆಷ್‌ ಆಗಿ ಇಟ್ಟುಕೊಳ್ಳುವುದೇ ಎಷ್ಟೋ ಸಮಯದಲ್ಲಿ ತಲೆನೋವಾಗುವ ಕೆಲಸವಾಗಿದೆ. ಮನೆಯಲ್ಲಿ ಫ್ರಿಜ್‌ ಇದ್ದರೂ, ಅದನ್ನು ಡಬ್ಬದಲ್ಲಿ ಶೇಖರಿಸಿ ಇಟ್ಟರೂ, ಅಬ್ಬಬ್ಬಾ ಎಂದರೆ ಒಂದೆರಡು ದಿನಗಳಲ್ಲಿ ಹಾಳಾಗಿ ಹೋಗುತ್ತವೆ. ಏನು ಸರ್ಕಸ್‌ ಮಾಡಿದರೂ ಸೊಪ್ಪುಗಳು ತಾಜಾ ಆಗಿರುವುದೇ ಇಲ್ಲ.

25
ಒಂದೊಂದು ಕಾಲದಲ್ಲಿ ಒಂದೊಂದು ಸಮಸ್ಯೆ

ಮಳೆಗಾಲದಲ್ಲಿ ಸೊಪ್ಪುಗಳು ಕೊಳೆತು ಹೋಗುವ ಭಯ, ಚಳಿಗಾಲದಲ್ಲಿ ಒಂದಷ್ಟು ದಿನ ಓಕೆ, ಬೇಸಿಗೆಯಲ್ಲಂತೂ ಕೇಳುವುದೇ ಬೇಡ. ಹೀಗೆ ಸೊಪ್ಪುಗಳನ್ನು ಅದರಲ್ಲಿಯೂ ದಿನನಿತ್ಯ ಉಪಯೋಗಿಸುವ ಕರಿಬೇವು, ಕೊತ್ತಂಬರಿ, ಪುದೀನಾ ಸೊಪ್ಪುಗಳನ್ನು ತಾಜಾ ತಾಜಾ ಇಡುವುದೇ ಸಮಸ್ಯೆ ಆಗುವುದು ಉಂಟು. ನೀವು ಏನೇನೋ ಸರ್ಕಸ್‌ ಮಾಡಿದರೂ ತಾಜಾ ಸೊಪ್ಪು ಪಡೆಯುವುದು ಕಷ್ಟ ಆಗಿದ್ಯಾ.

35
ಸಿಂಪಲ್‌ ಟ್ರಿಕ್ಸ್‌

ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ ಫಾಲೋ ಮಾಡಿ ಮ್ಯಾಜಿಕ್‌ ನೋಡಿ. ಇದು ಒಂದೇ ಒಂದು ಸ್ಟೀಲ್‌ ಚಮಚದ ಕಮಾಲ್‌. ಒಂದು ಸ್ಟೀಲ್‌ ಚಮಚವನ್ನು ಹೀಗಿಟ್ಟರೆ ನೀವು ಈ ಬಿರು ಬಿಸಿಲಿನಲ್ಲಿಯೂ ಸೊಪ್ಪುಗಳನ್ನು ತಾಜಾ ಆಗಿ ಇಟ್ಟುಕೊಳ್ಳಬಹುದಾಗಿದೆ.

45
ಇದಕ್ಕೆ ಬೇಕಿರುವುದು ಏನು?

ನಿಮ್ಮ ಇಷ್ಟದ ಸೊಪ್ಪು, ಒಂದು ಚಮಚ, ಒಂದು ಬೆಳ್ಳಿ ಫಾಯಿಲ್‌ ಹಾಳೆ ಅಷ್ಟೇ.

55
ಮಾಡಬೇಕಿರುವುದು ಏನು?

ಮೊದಲಿಗೆ ಸೊಪ್ಪುಗಳ ಗೊಂಚಲಿನ ಕೆಳಗಿನ ಕಾಂಡಗಳನ್ನು ಕತ್ತರಿಸಿ. ಟಿಶ್ಯೂ ಅಥವಾ ಟವಲ್​ನಿಂದ ಚೆನ್ನಾಗಿ ಒರೆಸಿ. ಎಲೆಗಳನ್ನು ಬೆಳ್ಳಿ ಫಾಯಿಲ್ ಹಾಳೆಯ ಮೇಲೆ ಹರಡಿ ಮತ್ತು ಎಲೆಗಳಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಚಮಚವನ್ನು ಹಾಕಿ. ಹಾಳೆಯನ್ನು ಪಾರ್ಸೆಲ್‌ನಂತೆ ಮಡಚಿ 3-4 ವಾರಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿ. ಇಷ್ಟು ಮಾಡಿ ಮ್ಯಾಜಿಕ್‌ ನೋಡಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories